logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pegasus Spyware: ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಎಂಬುದಕ್ಕೆ ಪುರಾವೆ ಇಲ್ಲ - ಸುಪ್ರೀಂ ಕೋರ್ಟ್

Pegasus Spyware: ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಎಂಬುದಕ್ಕೆ ಪುರಾವೆ ಇಲ್ಲ - ಸುಪ್ರೀಂ ಕೋರ್ಟ್

HT Kannada Desk HT Kannada

Aug 25, 2022 01:15 PM IST

google News

ಸುಪ್ರೀಂ ಕೋರ್ಟ್ (ಫೋಟೋ-ಸಂಗ್ರಹ)

  • ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಮೂರ್ತಿ, ಸಮಿತಿಯ ವರದಿಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಹೇಳಿದೆ.

ಸುಪ್ರೀಂ ಕೋರ್ಟ್ (ಫೋಟೋ-ಸಂಗ್ರಹ)
ಸುಪ್ರೀಂ ಕೋರ್ಟ್ (ಫೋಟೋ-ಸಂಗ್ರಹ)

ನವದೆಹಲಿ: Pegasus Spyware: ಪೆಗಾಸಸ್​ ಸ್ಪೈವೇರ್​ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕಳೆದ ವರ್ಷ ದೇಶದ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಸತ್ಯಾಂಶ ತಿಳಿಯಲು ಸುಪ್ರೀಂ ಕೋರ್ಟ್ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿತ್ತು. ಇದೀಗ ಸಮಿತಿಯು ತನ್ನ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಇಂದು(ಆಗಸ್ಟ್ 25, 2022) ಪ್ರಕರಣ ತನಿಖೆಯ ತೀರ್ಪು ನೀಡಿದೆ.

ಇಲ್ಲಿಯವರೆಗೆ 29 ಫೋನ್‌ಗಳನ್ನು ಪರಿಶೀಲಿಸಲಾಗಿದೆ ಮತ್ತು ಐದರಲ್ಲಿ ಒಂದರಲ್ಲಿ ಮಾಲ್‌ವೇರ್ ಇರುವುದು ಕಂಡುಬಂದಿದೆ. ಆದರೆ, ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ವರದಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಹೇಳಿದೆ.

ಏನಿದು ಪೆಗಾಸಸ್ ಸ್ಪೈವೇರ್ ಪ್ರಕರಣ?:

ಇಸ್ರೇಲ್‌ನ NSO ಗ್ರೂಪ್ ರಚಿಸಿದ ಈ ಸ್ಪೈವೇರ್ ಅನ್ನು ಕೆಲವು ದೇಶಗಳು ಬಳಸಿಕೊಂಡಿವೆ. ರಾಜಕೀಯ ನಾಯಕರು, ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು. ಕಳೆದ ವರ್ಷ ಜುಲೈನಲ್ಲಿ, ಕಾರ್ಯಕರ್ತರ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದು

ಆಡಳಿತ ಮತ್ತು ವಿಪಕ್ಷಗಳ ನಡುವಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಸೇರಿದಂತೆ ಹಲವಾರು ರಾಜಕಾರಣಿಗಳು ಸೇರಿದಂತೆ ದೇಶದ ಸುಮಾರು 300 ಮಂದಿಯ ಫೋನ್‌ ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು 'ದಿ ವೈರ್' ವರದಿ ಮಾಡಿತ್ತು.

ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅಲ್ಲದೆ, ಸಂಸತ್ತಿನಲ್ಲೂ ಭಾರಿ ಗದ್ದಲ ಕೋಲಾಹಲಕ್ಕೆ ವೇದಿಕೆ ಕಲ್ಪಿಸಿತ್ತು. ಇದಕ್ಕೆ ಉತ್ತರ ನೀಡಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದ್ದವು. ಆದರೆ, ಈ ಆರೋಪಗಳನ್ನು ಕೇಂದ್ರ ಪದೇ ಪದೇ ನಿರಾಕರಿಸುತ್ತಲೇ ಬಂದಿದೆ. ಈ ಸುದ್ದಿ ನಿಜವಲ್ಲ ಎಂದು ವಾದಿಸುತ್ತಲೇ ಬಂದಿತ್ತು.

ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪೆಗಾಸಸ್ ಬಳಸಲಾಗಿದೆಯೇ? ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ಸ್ವತಂತ್ರ ಸಮಿತಿಯನ್ನು ರಚಿಸಲಾಗಿತ್ತು. ಇದೀಗ ಪೆಗಾಸಸ್​ ಸ್ಪೈವೇರ್​ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂಬುದು ಸಮಿತಿಯ ತನಿಖೆಯಿಂದ ಗೊತ್ತಾಗಿದೆ.

ಪೆಗಾಸಸ್‌ ಎಂಬುದು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್‌ನ ಸ್ಪೈವೇರ್(ಗೂಡಚರ ತಂತ್ರಾಂಶ) ಆಗಿದೆ. ಈ ಪೆಗಾಸಸ್‌ಗೆ ಕ್ಯೂ ಸೂಟ್ ಮತ್ತು ಟ್ರಿಡಿಯೆಂಟ್‌ ಎಂಬ ಹೆಸರುಗಳಿವೆ ಎಂದು ನಂಬಲಾಗಿದೆ. ಈ ಸ್ಪೈವೇರ್‌ ಆಂಡ್ರಾಯ್ಡ್ ಮತ್ತು ಐಒಎಸ್‌ ಸಾಧನಗಳನ್ನು ಆರಾಮಾಗಿ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

ನಾನಾ ರೀತಿಯಲ್ಲಿ ಟಾರ್ಗೆಟೆಡ್ ಮೊಬೈಲ್‌ ಫೋನ್‌ಗಳಿಂದ ಮಾಹಿತಿಯನ್ನು ಕದಿಯಬಲ್ಲದು. ವಾಟ್ಸಾಪ್‌ ಮೇಲಿನ ಸೈಬರ್ ಅಟ್ಯಾಕ್‌ ವೇಳೆ, ವಾಟ್ಸಾಪ್‌ನ VoIP ಸ್ಟಾಕ್‌ನಲ್ಲಿನ ಸುರಕ್ಷಿತೆಯ ದುರ್ಬಲತೆಯನ್ನು ಬಳಸಿಕೊಂಡು ಈ ಸ್ಪೈವೇರ್ ಕನ್ನ ಹಾಕಿತ್ತು. ಸ್ಪೈವೇರ್ ಕೇವಲ ಟಾರ್ಗೆಟೆಡ್ ವಾಟ್ಸಾಪ್‌ಗೆ ವಿಡಿಯೋ ಮತ್ತು ಆಡಿಯೋ ಮೀಸ್ಡ್ ಕಾಲ್ ಮಾಡಿದ್ರೂ ಸಾಕು, ಪೆಗಾಸಸ್ ಟಾರ್ಗೆಟೆಡ್ ಸಾಧನದೊಳಗೆ ಪ್ರವೇಶ

ಪಡೆಯಲು ಸಾಧ್ಯವಾಗಿತ್ತು. ಪೆಗಾಸಸ್ ಫೋನ್‌ ಹ್ಯಾಕಿಂಗ್‌ ಪಟ್ಟಿಯಲ್ಲಿ 300ಕ್ಕೂ ಹೆಚ್ಚು ಭಾರತೀಯರಿದ್ದಾರೆ ಎಂದು ವೈರ್ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿತ್ತು. ಇದು ದೇಶದಲ್ಲಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿದ ಬೆನ್ನಲ್ಲೇ ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಮಾಜಿ ಸಿಇಸಿ ಅಶೋಕ್ ಲವಾಸಾ ಸೇರಿದ್ದಾರೆ. ಅವರ ಫೋನ್ ಸಂಖ್ಯೆಗಳು ಹ್ಯಾಕಿಂಗ್ ಆಗಿರುವ ಪಟ್ಟಿಯಲ್ಲಿವೆ ಎಂದು ವೈರ್ ಸುದ್ದಿ ಸಂಸ್ಥೆ ಮತ್ತೊಂದು ವರದಿಯಲ್ಲಿ ಬಹಿರಂಗಪಡಿಸಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ