logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Us News: ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ, ಶಿಕ್ಷಕಿಯರ ಬಂಧನ, ಬಾಲಕನಿಂದ ಗರ್ಭಿಣಿಯಾದ ಶಿಕ್ಷಕಿ

US News: ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ, ಶಿಕ್ಷಕಿಯರ ಬಂಧನ, ಬಾಲಕನಿಂದ ಗರ್ಭಿಣಿಯಾದ ಶಿಕ್ಷಕಿ

HT Kannada Desk HT Kannada

Apr 16, 2023 08:07 PM IST

US News: ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ, ಶಿಕ್ಷಕಿಯರ ಬಂಧನ

  • ಕಳೆದ ಕೆಲವು ದಿನಗಳಲ್ಲಿ ಇಂತಹ ಕನಿಷ್ಠ ಆರು ಪ್ರಕರಣಗಳು ದಾಖಲಾಗಿವೆ ಎಂದು ಅಮೆರಿಕದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

US News: ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ, ಶಿಕ್ಷಕಿಯರ ಬಂಧನ
US News: ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ, ಶಿಕ್ಷಕಿಯರ ಬಂಧನ (Twitter )

ನ್ಯೂಯಾರ್ಕ್‌: ಅಮೆರಿಕದಲ್ಲಿ ಕಳೆದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಜತೆ ಲೈಂಗಿಕ ಸಂಬಂಧ ಹೊಂದಿದ ಆರೋಪದಡಿ ಹಲವು ಶಿಕ್ಷಕಿಯರನ್ನು ಬಂಧಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಅಮೆರಿಕದಲ್ಲಿ ಈ ಸಂಬಂಧ ಆರು ಶಿಕ್ಷಕಿಯರನ್ನು ಬಂಧಿಸಲಾಗಿತ್ತು. ಶಿಕ್ಷಕಿಯರ ಜತೆಗೆ ಕೆಂಟುಕಿ ಸಿಬ್ಬಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೆಂಟುಕಿ ಮಹಿಳಾ ಸಿಬ್ಬಂದಿಯು 16 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಹದಿಹರೆಯದ ತರುಣರ ಜತೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ ನಂತರ 38 ವರ್ಷದ ಎಲ್ಲೆನ್ ಶೆಲ್ ಅವರನ್ನು ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ವರದಿಯೊಂದು ತಿಳಿಸಿದೆ.

ಆರೋಪಿಯು ಡ್ಯಾನ್‌ವಿಲ್ಲೆಯಲ್ಲಿರುವ ವುಡ್‌ಲಾನ್ ಎಲಿಮೆಂಟರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಡಬ್ಲ್ಯುಟಿಕೆಆರ್‌ ವರದಿ ಮಾಡಿದೆ. ಅದಕ್ಕೂ ಮೊದಲು, ಅವರು ಗ್ಯಾರಾರ್ಡ್ ಕೌಂಟಿಯ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಕೆಲಸ ಮಾಡಿದರು.

ಕಳೆದ ಕೆಲವು ದಿನಗಳಲ್ಲಿ ಇಂತಹ ಕನಿಷ್ಠ ಆರು ಪ್ರಕರಣಗಳು ದಾಖಲಾಗಿವೆ ಎಂದು ಅಮೆರಿಕದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಬ್ರ್ಯಾಂಟ್ ಹೈಸ್ಕೂಲ್‌ನ 32 ವರ್ಷದ ಶಿಕ್ಷಕಿ ಹೀದರ್ ಹೇರ್, ವಿದ್ಯಾರ್ಥಿಯೊಂದಿಗೆ ಲೈಂಗಿಕ ದೌರ್ಜನ್ಯದ ಆರೋಪಗಳು ವರದಿಯಾದ ನಂತರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅರ್ಕಾನ್ಸಾಸ್ ಟೈಮ್ಸ್ ವರದಿ ಮಾಡಿದೆ. ಮೊದಲ ಹಂತದಲ್ಲಿ ಆಕೆಯ ಮೇಲೆ ಆರೋಪ ಸಾಬೀತಾದ ಬಳಿಕ ಮೂರುವರೆ ಗಂಟೆ ಜೈಲಿನಲ್ಲಿರಿಸಲಾಯಿತು. 15,000 ಡಾಲರ್‌ ಬಾಂಡ್‌ ಪಡೆದು ಆಕೆಯನ್ನು ಬಿಡುಗಡೆ ಮಾಡಲಾಯಿತು.

ಮತ್ತೊಬ್ಬ ಶಿಕ್ಷಕಿ 26 ವರ್ಷದ ಎಮಿಲಿ ಹ್ಯಾನ್‌ಕಾಕ್ ಅವರನ್ನು ಗುರುವಾರ ಬಂಧಿಸಲಾಯಿತು. ಆಕೆಯು ಬಾಲಕರ ಜತೆಗೆ ಲೈಂಗಿಕ ಚಟುವಟಿಕೆ ನಡೆಸಿದ ಕುರಿತು ಆರೋಪ ಸಾಬೀತಾಗಿದೆ. ಈ ಕುರಿತು ಸುಳಿವು ದೊರಕಿದ ತಕ್ಷಣ ಬಂಧಿಸಲಾಗಿದೆ. ಈಕೆ ತನ್ನ ವಿದ್ಯಾರ್ಥಿಗೆ ಸಂದೇಶ ಕಳುಹಿಸುತ್ತ ಸೆಳೆದು ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಕೊಕೊ ನ್ಯೂಸ್‌ ವರದಿ ಮಾಡಿದೆ.

ಅಲೆಕ್ಸಾಂಡ್ರಿಯಾ ವೆರಾ ಅವರು ಅಲ್ಡೈನ್ ಐಎಸ್‌ಡಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದರು. ಅವರು ಬೇಸಿಗೆ ಶಾಲೆಯಲ್ಲಿ ಭೇಟಿಯಾದ 13 ವರ್ಷದ ಮಾಜಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದರು. ಇದರಿಂದ ಆಕೆ ಗರ್ಭಿಣಿಯಾಗಿದ್ದರು ಎಂದು ಎಬಿಸಿ 13 ವೆಬ್‌ಸೈಟ್‌ ವರದಿಯಲ್ಲಿ ಹೇಳಲಾಗಿದೆ.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

ಉತ್ತರ ಪ್ರದೇಶದ ಮುಜಾಫರ್‌ ನಗರದ ವಿಶೇಷ ನ್ಯಾಯಾಲಯವು ಸುಮಾರು ಏಳು ವರ್ಷಗಳ ಹಿಂದೆ ಎಂಟು ವರ್ಷದ ದಲಿತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನಿಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಆರೋಪಿಗೆ ಕೋರ್ಟ್‌ ಜೀವಾವಧಿ ಶಿಕ್ಷೆಯೊಂದಿಗೆ 30,000 ರೂಪಾಯಿ ದಂಡ ವಿಧಿಸಿದೆ. ಈ ಸುದ್ದಿ ಓದಿ.

    ಹಂಚಿಕೊಳ್ಳಲು ಲೇಖನಗಳು