logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Narendra Modi: ಬ್ರಿಸ್ಬೇನ್‌ನಲ್ಲಿ ಶೀಘ್ರದಲ್ಲೇ ಭಾರತೀಯ ದೂತಾವಾಸ ಆರಂಭ; ಸಿಡ್ನಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಪ್ರಮುಖ ಅಂಶಗಳು

PM Narendra Modi: ಬ್ರಿಸ್ಬೇನ್‌ನಲ್ಲಿ ಶೀಘ್ರದಲ್ಲೇ ಭಾರತೀಯ ದೂತಾವಾಸ ಆರಂಭ; ಸಿಡ್ನಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಪ್ರಮುಖ ಅಂಶಗಳು

HT Kannada Desk HT Kannada

May 23, 2023 04:22 PM IST

ಮಂಗಳವಾರ ಸಿಡ್ನಿಯಲ್ಲಿ ನಡೆದ ವಿಶೇಷ ಕಮ್ಯೂನಿಟಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕಂಡಿದ್ದು ಹೀಗೆ.

  • ಆಸ್ಟ್ರೇಲಿಯಾ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಸಿಡ್ನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು ಹಾಗೂ ಅಲ್ಲಿನ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮಂಗಳವಾರ ಸಿಡ್ನಿಯಲ್ಲಿ ನಡೆದ ವಿಶೇಷ ಕಮ್ಯೂನಿಟಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕಂಡಿದ್ದು ಹೀಗೆ.
ಮಂಗಳವಾರ ಸಿಡ್ನಿಯಲ್ಲಿ ನಡೆದ ವಿಶೇಷ ಕಮ್ಯೂನಿಟಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕಂಡಿದ್ದು ಹೀಗೆ.

ಸಿಡ್ನಿ: ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ (ಮೇ 23) ಸಿಡ್ನಿಯಲ್ಲಿ ನಡೆದ ವಿಶೇಷ ಸಮುದಾಯ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿ ಮಾತನಾಡಿದ್ದಾರೆ. ನಮೋ ಅವರ ಸಹವರ್ತಿ, ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಥ್ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಗಿದೆ.

ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಅಂಶಗಳು ಹೀಗಿವೆ

  1. ಈ ವೇದಿಕೆಯಲ್ಲಿ ನಾನು ಕೊನೆಯ ಬಾರಿಗೆ ಯಾರನ್ನಾದರೂ ನೋಡಿದ್ದರೆ ಅದು ಬ್ರೂಸ್ ಸ್ಪ್ರಿಂಗ್‌ಸ್ಟೀನ್. ಇವರಿಗೆ ದಿ ಬಾಸ್ ಎಂಬ ಅಡ್ಡ ಹೆಸರು ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಂತಹ ಸ್ವಾಗತ ಅವರಿಗೆ ಸಿಗಲಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕೊಂಡಾಡಿದ್ದಾರೆ. ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಆಸ್ಟ್ರೇಲಿಯಾ ಸಂಗೀತ ಕಾರ್ಯಕ್ರಮ ನೀಡುವ ಕಲಾವಿದ.
  2. ಸಮುದಾಯ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾನು 2014ರಲ್ಲಿ ಇಲ್ಲಿಗೆ ಬಂದಿದ್ದೆ. ನೀವು ಭಾರತದ ಪ್ರಧಾನಿಗಾಗಿ 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹೀಗಾಗಿ ಸಿಡ್ನಿಯಲ್ಲಿ ಮತ್ತೊಮ್ಮೆ ಇದ್ದೇನೆ ಎಂದಿದ್ದಾರೆ.
  3. ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು. ಆದರೆ ಈಗ ಯೋಗ ಕೂಡ ನಮ್ಮವನ್ನು ಸಂಪರ್ಕಿಸುತ್ತದೆ. ಕ್ರಿಕೆಟ್‌ನಿಂದ ನಾನು ದೀರ್ಘಕಾಲದ ಸಂಪರ್ಕವನ್ನು ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಸಿನಿಮಾಗಳು ಕೂಡ ನಮ್ಮ ಸಂಪರ್ಕಿಸುತ್ತಿವೆ. ನಾನು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸಬಹುದು. ಆದರೆ ಮಾಸ್ಟರ್‌ಚೆಫ್‌ ನಮ್ಮ ಸಂಪರ್ಕದ ಕೊಂಡಿ ಎಂದು ಹೇಳಿದ್ದಾರೆ.
  4. ಹ್ಯಾರಿಸ್ ಪಾರ್ಕ್‌ನಲ್ಲಿರುವ ಜೈಪುರ ಸ್ವೀಟ್ಸ್‌ನಿಂದ ಚಟ್ಕಾಜ್‌ ಚಾಟ್ ಮತ್ತು ಜಿಲೇಬಿ ತುಂಬಾ ರುಚಿಕರವಾಗಿದೆ ಎಂದಿರುವ ಪ್ರಧಾನಿ ಮೋದಿ, ನೀವೆಲ್ಲರೂ ನನ್ನ ಸ್ನೇಹಿತ ಅಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರನ್ನು ಆ ಸ್ಥಳಕ್ಕೆ ಕರೆದೊಯ್ಯಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
  5. ಭಾರತ-ಆಸ್ಟ್ರೇಲಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಂದ ಮಾತ್ರ ಪರಸ್ಪರ ನಂಬಿಕೆ ಮತ್ತು ಗೌರವಗಳು ಬೆಳೆಯಲಿಲ್ಲ. ನಿಜವಾದ ಕಾರಣ, ನಿಜವಾದ ಶಕ್ತಿ ಆಸ್ಟ್ರೇಲಿಯಾದಲ್ಲಿ ವಾಸಿಸುವ ನೀವೆಲ್ಲರೂ ಭಾರತೀಯರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬ್ರಿಸ್ಬೇನ್‌ನಲ್ಲಿ ಭಾರತೀಯ ದೂತವಾಸ ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಅಂತೂ ಹೇಳಿದ್ದಾರೆ.
  6. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಪ್ರಕಾಶಮಾನವಾದ ತಾಣವೆಂದು ಪರಿಗಣಿಸುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತ ಪರಿಣಾಮಕಾರಿಯಾಗಿದೆ ಎಂದು ವಿಶ್ವ ಬ್ಯಾಂಕ್ ನಂಬಿದೆ. ಹಲವಾರು ದೇಶಗಳು ಇಂದು ಆರ್ಥಿಕತೆ ವ್ಯವಸ್ಥೆಯಲ್ಲಿ ತೊಂದರೆಯಲ್ಲಿವೆ. ಮತ್ತೊಂದೆಡೆ ಭಾರತದ ಬ್ಯಾಂಕ್‌ಗಳ ಬಲವನ್ನು ಎಲ್ಲೆಡೆ ಪ್ರಶಂಸಿಲಾಗುತ್ತಿದೆ ಎಂದು ತಿಳಿಸಿದ್ದಾರೆ.
  7. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಬ್ರಿಸ್ಪೇನ್ ಮತ್ತು ಕ್ಯಾನ್‌ಬೆರಾದಿಂದ ವಿಶೇಷ ಬಸ್‌ಗಳನ್ನು ಆಯೋಜಿಸಿದ್ದರು. ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ಸಿಡ್ನಿಯಲ್ಲಿ ಭಾರತೀಯ ಸಮುದಾಯದ ವಿಶೇಷ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ.
  8. ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಬುಧವಾರ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
  9. ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ 2026ರ ಜನಗಣತಿ ಪ್ರಕಾರ, ಆಸ್ಟ್ರೇಲಿಯಾದಲ್ಲಿ 6,19,164 ಜನರು ತಾವು ಜನಾಂಗೀಯ ಭಾರತೀಯ ಮೂಲದವರು ಎಂದು ಘೋಷಿಸಿದ್ದಾರೆ. ಇದು ಆಸ್ಟ್ರೇಲಿಯಾ ಜನಸಂಖ್ಯೆಯ ಶೇ.2.8 ರಷ್ಟು ಒಳಗೊಂಡಿದೆ. ಆ ಪೈಕಿ 5,92,000 ಜನ ಭಾರತದಲ್ಲಿ ಜನಿಸಿದ್ದಾರೆ.
  10. ಪ್ರಧಾನಿ ಪ್ರಧಾನಿ ಮೋದಿ ಅವರ ಕೊನೆಯ ಭಾರಿಗೆ 2014ರಲ್ಲಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕಾಂತಾರ ಹಾಡಿನ ನೃತ್ಯ: ತಂಡದಲ್ಲಿ ಮಂಗಳೂರಿನ ಯುವತಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು