logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ssc Constable (Gd) Exam 2022: ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕ ಪರೀಕ್ಷೆ, ಒಟ್ಟು 46435 ಹುದ್ದೆಗಳ ಭರ್ತಿ, ತಾತ್ಕಾಲಿಕ ಪಟ್ಟಿ ಪ್ರಕಟ

SSC Constable (GD) Exam 2022: ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕ ಪರೀಕ್ಷೆ, ಒಟ್ಟು 46435 ಹುದ್ದೆಗಳ ಭರ್ತಿ, ತಾತ್ಕಾಲಿಕ ಪಟ್ಟಿ ಪ್ರಕಟ

Praveen Chandra B HT Kannada

Feb 16, 2023 03:56 PM IST

SSC Constable (GD) Exam 2022: ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ

  • ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ (ಜಿಟಿ) ಪರೀಕ್ಷೆ 2022ರ ತಾತ್ಕಾಲಿಕ ವೇಕ್ಸೆನ್ಸಿ ಲಿಸ್ಟ್‌ ಪ್ರಕಟಗೊಂಡಿದೆ. ssc.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಈ ತಾತ್ಕಾಲಿಕ ಹುದ್ದೆಗಳ ಪಟ್ಟಿಯನ್ನು ಪರಿಶೀಲಿಸಬಹುದು.

SSC Constable (GD) Exam 2022: ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ
SSC Constable (GD) Exam 2022: ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ (ssc.nic.in)

ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ (ಜಿಟಿ) ಪರೀಕ್ಷೆ 2022ರ ತಾತ್ಕಾಲಿಕ ವೇಕ್ಸೆನ್ಸಿ ಲಿಸ್ಟ್‌ ಪ್ರಕಟಗೊಂಡಿದೆ. ssc.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಈ ತಾತ್ಕಾಲಿಕ ಹುದ್ದೆಗಳ ಪಟ್ಟಿಯನ್ನು ಪರಿಶೀಲಿಸಬಹುದು. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌),ಎಸ್‌ಎಸ್‌ಎಫ್‌, ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್‌ (ಜಿಡಿ), ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೊ ಎಗ್ಸಾಮಿನೇಷನ್‌ನಲ್ಲಿ ಸಫಾಯಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ರಾಜ್ಯ, ವಿಭಾಗವಾರು ವೇಕೆನ್ಸಿ ಪಟ್ಟಿ ಪ್ರಕಟಿಸಲಾಗಿದೆ. ಎಸ್‌ಎಸ್‌ಸಿ ಅಧಿಸೂಚನೆ ಪ್ರಕಾರ ಒಟ್ಟು 46435 ಹುದ್ದೆಗಳನ್ನು ಈ ನೇಮಕಾತಿ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 46260 ಹುದ್ದೆಗಳನ್ನು ಮತ್ತು ಎರಡನೇ ಹಂತದಲ್ಲಿ 175 ಭರ್ತಿ ಮಾಡಲಾಗುತ್ತದೆ ಎಂದು ಎಸ್‌ಎಸ್‌ಸಿ ತಿಳಿಸಿದೆ.

ಈ ಮೊದಲು ಈ ನೇಮಕಾತಿ ಡ್ರೈವ್‌ ಮೂಲಕ 24369 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿತ್ತು. ಅದರಲ್ಲಿ ಹಂತ ಒಂದರಲ್ಲಿ 24205 ಹುದ್ದೆಗಳನ್ನು ಮತ್ತು ಹಂತ ಎರಡರಲ್ಲಿ 164 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿತ್ತು. ಇದೀಗ ತಾತ್ಕಾಲಿಕ ಹುದ್ದೆಗಳ ಪಟ್ಟಿಯಲ್ಲಿ ಹುದ್ದೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದ್ದು, ಅತ್ಯಧಿಕ ಅಭ್ಯರ್ಥಿಗಳು ಉದ್ಯೋಗ ಪಡೆಯಲಿದ್ದಾರೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್‌ 27ರಂದು ಆರಂಭವಾಗಿತ್ತು. ನವೆಂಬರ್‌ 30ಕ್ಕೆ ಕೊನೆಗೊಂಡಿತ್ತು. ಕಂಪ್ಯೂಟರ್‌ ಆಧರಿತ ನೇಮಕಾತಿ ಪರೀಕ್ಷೆಯನ್ನು 2023ರ ಜನವರಿಯಲ್ಲಿ ನಡೆಸಲಾಗಿತ್ತು. ಕಂಪ್ಯೂಟರ್‌ ಆಧರಿತ ನೇಮಕಾತಿ ಪರೀಕ್ಷೆ, ದೈಹಿಕ ಕಾರ್ಯಕ್ಷಮತೆ ಪರೀಕಷೆ, ದೈಹಿಕ ದಾರ್ಡ್ಯತೆ ಪರೀಕ್ಷೆ (ಪಿಇಟಿ ಮತ್ತು ಪಿಎಸ್‌ಟಿ) ನಡೆಸಲಾಗಿತ್ತು.

ಸಿಬ್ಬಂದಿ ನೇಮಕ ಆಯೋಗದ ಎಂಟಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆದಿನ

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) SSC MTS Exam 2022 ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಾಡಿದ್ದು ಅಂದರೆ, ಫೆಬ್ರವರಿ 17ರಂದು ಕೊನೆಗೊಳಿಸಲಿದೆ. ಇನ್ನೂ ಅರ್ಜಿ ಸಲ್ಲಿಸದೆ ಇರುವಂತಹ ಅಭ್ಯರ್ಥಿಗಳು ವಿಳಂಬ ಮಾಡದೆ ಅರ್ಜಿ ಸಲ್ಲಿಸಬಹುದು. ತಾಂತ್ರಿಕೇತರ ಮಲ್ಟಿ ಟಾಸ್ಕಿಂಗ್‌ ಸಿಬ್ಬಂದಿ, ಹವಾಲ್ದಾರ್‌ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಪರೀಕ್ಷೆ ನಡೆಸುತ್ತದೆ. ಆಸಕ್ತರು ssc.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 19ರ ತನಕ ಅವಕಾಶವಿದೆ. ಚಲನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಲಾಗಿದೆ. ಫೆಬ್ರವರಿ 23-24ರವರೆಗೆ ಅರ್ಜಿ ತಿದ್ದುಪಡಿ ಮಾಡಲು ಅವಕಾಶವಿದೆ. ಕಂಪ್ಯೂಟರ್‌ ಆಧರಿತ ನೇಮಕ ಪರೀಕ್ಷೆಯು ಏಪ್ರಿಲ್‌ನಲ್ಲಿ ನಡೆಯಲಿದೆ. ಹೆಚ್ಚಿನ ವಿವರ ಇಲ್ಲಿದೆ.

ಯುಪಿಎಸ್‌ಸಿ ಮೂಲಕ ನೇಮಕ, 73 ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗವು ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು upsc.gov.in ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ಹುದ್ದೆಗಳ ಸಂಖ್ಯೆ, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು