logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tata Nano Solar: 30 ರೂಪಾಯಿ ಖರ್ಚು ಮಾಡಿದ್ರೆ 100 ಕಿ.ಮೀ. ಓಡುತ್ತೆ ಈ ಕಾರು; ಗಂಟೆಗೆ 80 ಕಿ.ಮೀ. ಇದರ ವೇಗ!

Tata Nano Solar: 30 ರೂಪಾಯಿ ಖರ್ಚು ಮಾಡಿದ್ರೆ 100 ಕಿ.ಮೀ. ಓಡುತ್ತೆ ಈ ಕಾರು; ಗಂಟೆಗೆ 80 ಕಿ.ಮೀ. ಇದರ ವೇಗ!

HT Kannada Desk HT Kannada

Mar 20, 2023 08:41 PM IST

google News

ಸೋಲಾರ್‌ ಪವರಲ್ಲಿ ಓಡುತ್ತೆ ಈ ಟಾಟಾ ನ್ಯಾನೋ ಕಾರು

  • Tata Nano Solar: ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಸೋಲಾರ್‌ ಕಾರ್‌ ಆಗಿ ಪರಿವರ್ತಿಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಸಿಕ್ಕ ಫಲ ಕಂಡು ಸುತ್ತಮುತ್ತಲಿನವರು ದಂಗಾಗಿ ಹೋಗಿದ್ದಾರೆ. ಟಾಟಾ ನ್ಯಾನೋ ಕಾರು ಹೊಂದಿರುವವರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ!

ಸೋಲಾರ್‌ ಪವರಲ್ಲಿ ಓಡುತ್ತೆ ಈ ಟಾಟಾ ನ್ಯಾನೋ ಕಾರು
ಸೋಲಾರ್‌ ಪವರಲ್ಲಿ ಓಡುತ್ತೆ ಈ ಟಾಟಾ ನ್ಯಾನೋ ಕಾರು (Live Hindustan)

ದೇಶದಲ್ಲಿ, ʻಒಂದು ಇಲೆಕ್ಟ್ರಿಕ್‌ ಕಾರು ಖರೀದಿಸಬೇಕುʼ ಎಂದು ಕನಸು ಕಾಣುವ ಕಾಲಘಟ್ಟ ಇದು. ಆದರೆ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಸೋಲಾರ್‌ ಕಾರ್‌ ಆಗಿ ಪರಿವರ್ತಿಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಸಿಕ್ಕ ಫಲ ಕಂಡು ಸುತ್ತಮುತ್ತಲಿನವರು ದಂಗಾಗಿ ಹೋಗಿದ್ದಾರೆ. ಟಾಟಾ ನ್ಯಾನೋ ಕಾರು ಹೊಂದಿರುವವರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ!

ಅವರು ತಮ್ಮ ಹಳೆಯ ಟಾಟಾ ನ್ಯಾನೋ ಕಾರನ್ನು ಪರಿವರ್ತಿಸಿದ ರೀತಿ ಬಗ್ಗೆ ತಿಳಿದರೆ ನೀವು ಆಶ್ಚರ್ಯಪಡುವುದು ಗ್ಯಾರೆಂಟಿ. ಈ ಕಾರು ರೂಫ್ ಟಾಪ್ ಸೋಲಾರ್ ಪ್ಯಾನೆಲ್‌ನ ಶಕ್ತಿಯಿಂದಲೇ ಚಲಿಸುತ್ತದೆ. ಇದಕ್ಕೆ ಈಗ ಎಂಜಿನ್ ಕೂಡ ಇಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಉದ್ಯಮಿ ಮನೋಜಿತ್ ಮಂಡಲ್ ಅವರು ತಮ್ಮ ಸೌರಶಕ್ತಿ ಚಾಲಿತ ಟಾಟಾ ನ್ಯಾನೋವನ್ನು ಬಂಕುರಾ ಬೀದಿಗಳಲ್ಲಿ ಓಡಿಸುತ್ತಾರೆ. ಈ ಸೋಲಾರ್ ವಾಹನವನ್ನು ಸುಮಾರು 30 ರೂಪಾಯಿಗೆ 100 ಕಿಲೋಮೀಟರ್ ಓಡಿಸಬಹುದು. ಇದಕ್ಕೆ ಪೆಟ್ರೋಲ್‌ ಬೇಕಾಗಿಲ್ಲ ಎಂದು ಅವರು ಹೇಳಿರುವುದಾಗಿ ವರದಿ ವಿವರಿಸಿದೆ. ಎಂಜಿನ್ ಇಲ್ಲದ ಕಾರಣ ಕಾರು ಸಂಪೂರ್ಣ ನಿಶ್ಯಬ್ದವಾಗಿದೆ. ನ್ಯಾನೋ ಸೋಲಾರ್ ವಾಹನವು ಗಂಟೆಗೆ 80 ಕಿ.ಮೀ. ವೇಗವನ್ನು ಹೊಂದಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಅವರ ಈ ಕ್ಲೇಮುಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಇಂಧನ ಮತ್ತು ಹಣ ಉಳಿತಾಯ

ಸೌರಶಕ್ತಿ ಚಾಲಿತ ವಾಹನ ಹೊಸ ಪರಿಕಲ್ಪನೆಯಲ್ಲ. ಪ್ರಪಂಚದಾದ್ಯಂತದ ಅನೇಕ ಕಾರು ತಯಾರಕರು ಸೌರ ಫಲಕಗಳನ್ನು ಹೊಂದಿರುವ ವಾಹನಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಚಾರ್ಜ್ ಮಾಡಲು ದುಬಾರಿ ಲಿಥಿಯಂ ಅಯಾನ್ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಆದಾಗ್ಯೂ, ಇದು ಇಂಧನ ಮತ್ತು ಶಕ್ತಿಯನ್ನು ಉಳಿಸುವ ಮಾರ್ಪಡಿಸಿದ ನ್ಯಾನೊತಂತ್ರಜ್ಞಾನದ ಉತ್ತಮ ಮಾದರಿಯಾಗಿದೆ.

ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರೆಯಲಿಲ್ಲ ಮತ್ತು ಸರ್ಕಾರವು ಸೂಕ್ತ ನೆರವು ನೀಡಲಿಲ್ಲ. ಸೃಜನಶೀಲತೆಗಾಗಿ ಟಾಟಾ ನ್ಯಾನೋ ಕಾರಿನ ಮೇಲೆ ಈ ಪ್ರಯೋಗ ಮಾಡಲು ನಿರ್ಧರಿಸಿದೆ. ಪೆಟ್ರೋಲ್‌ ಎಂಜಿನ್‌ ತೆಗೆದುಹಾಕಿ ಸೌರಫಲಕ ಅಳವಡಿಸಿ ಟಾಟಾ ನ್ಯಾನೋ ಕಾರನ್ನು ಸಂಪೂರ್ಣ ಸೌರವಾಹನವನ್ನಾಗಿ ಪರಿವರ್ತಿಸಿದೆ ಎಂದು ಮನೋಜಿತ್‌ ವಿವರಿಸಿದ್ದಾಗಿ ವರದಿ ಹೇಳಿದೆ.

ಟಾಟಾ ನ್ಯಾನೋ ಬೆಲೆ ಮತ್ತು ಫೀಚರ್ಸ್‌

ಟಾಟಾ ಮೋಟಾರ್ಸ್‌ ನ್ಯಾನೋ ಕಾರನ್ನು 2008ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತು. ಸ‍ಣ್ಣ ಗಾತ್ರದ ಹ್ಯಾಚ್‌ಬ್ಯಾಕ್‌ ಇದಾಗಿದ್ದು, ದೇಶದ ಅತಿ ಅಗ್ಗದ ಕಾರು ಎಂದು ಜನಪ್ರಿಯತೆ ಗಳಿಸಿತ್ತು. ಇದರ ಎಕ್ಸ್‌ ಷೋ ರೂಂ ದರ 1 ಲಕ್ಷ ರೂಪಾಯಿ ಆಸುಪಾಸಿನಲ್ಲಿತ್ತು. 38 ಹಾರ್ಸ್‌ಪವರ್‌ನ 624 ಸಿಸಿ ಡುಯೆಲ್‌ ಸಿಲಿಂಡರ್‌ ಎಂಜಿನ್‌ ಈ ಕಾರಿನದ್ದು. ನಾಲ್ಕು ಸೀಟುಗಳ ಆಸನ ಸಾಮರ್ಥ್ಯದ ಈ ಕಾರು ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ ಜತೆಗಷ್ಟೆ ಲಭ್ಯವಿತ್ತು. ಕಠಿಣ ಮಾಲಿನ್ಯ ನಿಯಂತ್ರಣ ಮಾನದಂಡಗಳ ಅನುಷ್ಠಾನದ ಕಾರಣ ಭಾರತದ ಈ ಅತಿಸಣ್ಣ ಕಾರುಗಳ ಉತ್ಪಾದನೆಯನ್ನು 2018ರಲ್ಲಿ ಟಾಟಾ ನಿಲ್ಲಿಸಿತು.

ಗಮನಿಸಬಹುದಾದ ಸುದ್ದಿ

ಪಾಟ್ನಾ ಜಂಕ್ಷನ್‌ ರೈಲ್ವೆ ನಿಲ್ದಾಣದ ಟಿವಿ ಸ್ಕ್ರೀನಲ್ಲಿ ಪೋರ್ನ್‌ ಕ್ಲಿಪ್‌ ಪ್ರಸಾರ!

Porn on TV screens at Patna station: ಬಿಹಾರದ ಪಾಟ್ನಾ ಜಂಕ್ಷನ್‌ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 10ರಲ್ಲಿ ರೈಲಿಗಾಗಿ ಕಾಯುತ್ತಿದ್ದ ಜನರಿಗೆ ಭಾನುವಾರ ಬೆಳಗ್ಗೆ 9.30ಕ್ಕೆ ಶಾಕ್‌. ಹೊಸದಾಗಿ ಅಳವಡಿಸಿದ್ದ ಟಿವಿ ಪರದೆಯಲ್ಲಿ ಜಾಹೀರಾತಿನ ಬದಲು ಪೋರ್ನ್‌ ಕ್ಲಿಪ್‌ ಪ್ರಸಾರವಾಗಿದ್ದು ಇದಕ್ಕೆ ಕಾರಣ. ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ 10ನೇ ನಂಬರ್‌ ಪ್ಲಾಟ್‌ಫಾರಂನಲ್ಲಿ ಟಿವಿ ಸ್ಕ್ರೀನ್‌ ಸ್ಥಾಪಿಸಿದ ಮಾರನೇ ದಿನವೇ ಪೋರ್ನ್‌ ಕ್ಲಿಪ್‌ ಪ್ರಸಾರವಾಗಿದೆ. ಮೂರು ನಿಮಿಷ ಇದು ಪ್ರಸಾರವಾಗಿದ್ದು, ಭಾರತೀಯ ರೈಲ್ವೆಯು ಈ ಟಿವಿ ಸ್ಕ್ರೀನ್‌ ಸ್ಥಾಪಿಸಿದ ಜಾಹೀರಾತು ಏಜೆನ್ಸಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ