1099 ರೂಪಾಯಿಯ ರಿಲಯೆನ್ಸ್ ಜಿಯೋ ಫೋನ್ ಬಿಡುಗಡೆ; ಜಿಯೋಭಾರತ್ ವಿ3, ವಿ4 ಫೋನ್‌ಗಳ ಫೀಚರ್ಸ್, ಖರೀದಿ ವಿವರ ಇಲ್ಲಿದೆ ನೋಡಿ
Oct 15, 2024 07:12 PM IST
1099 ರೂಪಾಯಿಯ ರಿಲಯೆನ್ಸ್ ಜಿಯೋ ಫೋನ್ ಬಿಡುಗಡೆ
ರಿಲಯೆನ್ಸ್ ಜಿಯೋ ಕಂಪನಿಯು JioBharat V3 ಮತ್ತು V4 ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ದರ 1,099 ರೂಪಾಯಿ ಆಗಿದೆ. ಭಾರತದ ಲಕ್ಷಾಂತರ 2ಜಿ ಬಳಕೆದಾರರಿಗೆ 4ಜಿ ಕನೆಕ್ಟಿವಿಟಿ ಇರುವ ಕಡಿಮೆ ದರದ ಫೋನ್ ಪಡೆಯಲು ನೆರವಾಗಲಿದೆ.
ಬೆಂಗಳೂರು: ರಿಲಯೆನ್ಸ್ ಕಂಪನಿಯು ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋಭಾರತ್ ವಿ3 ಮತ್ತು ವಿ4 ಮಾದರಿಗಳನ್ನು ಅನಾವರಣಗೊಳಿಸಿದೆ. 1,099 ದರದ ಈ ಫೀಚರ್ ಫೋನ್‌ಗಳು ಈಗ ದೇಶದಲ್ಲಿ 2ಜಿ ಮೊಬೈಲ್ ನೆಟ್‌ವರ್ಕ್ ಅವಲಂಬಿಸಿರುವ ಲಕ್ಷಾಂತರ ಬಳಕೆದಾರರಿಗೆ ಕಡಿಮೆ ದರದಲ್ಲಿ 4ಜಿ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದೆ.
ಹೀಗಿದೆ ನೋಡಿ ಹೊಸ ಫೋನ್‌ಗಳ ವಿನ್ಯಾಸ
ಜಿಯೋ ಭಾರತ್ ವಿ3 ಮತ್ತು ಜಿಯೋಭಾರತ್ ವಿ4 ವಿನ್ಯಾಸ ಹೇಗಿದೆ ನೋಡೋಣ. ಇವೆರಡಲ್ಲಿ ಜಿಯೋ ವಿ3ಯು ಸೌಂದರ್ಯ ಮತ್ತು ಉಪಯುಕ್ತತೆ ಎರಡಕ್ಕೂ ಆದ್ಯತೆ ನೀಡಿದೆ. ಮೂಲಭೂತ ಅಂಶಗಳನ್ನು ಪೂರೈಸುವುದರ ಜತೆಗೆ ಕೊಂಚ ಸ್ಟೈಲಿಸ್ ಫೋನ್ ಬಯಸುವವರ ಜೀವನಶೈಲಿಗೂ ಹೊಂದಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನೊಂದೆಡೆ ಜಿಯೋಭಾರತ್ ವಿ4 ಸರಳ ವಿನ್ಯಾಸಕ್ಕೆ ಆದ್ಯತೆ ನೀಡುವ ಫೋನ್. ಗ್ರಾಹಕರಿಗೆ ಹೊರೆಯಾಗದಂತೆ ಪ್ರೀಮಿಯಂ ಅನುಭವವನ್ನು ಪಡೆಯುತ್ತದೆ.
ಎರಡು ಫೋನ್‌ಗಳಲ್ಲಿ ಸಾಕಷ್ಟು ಜಿಯೋ ಡಿಜಿಟಲ್ ಸೇವೆಗಳು ಇವೆ. ಜಿಯೋಟಿವಿ 455 ಲೈವ್ ಟಿವಿ ಚಾನೆಲ್ ಕೂಡ ಬಳಸಬಹುದು. ತಮ್ಮ ನೆಚ್ಚಿನ ಕಾರ್ಯಕ್ರಮಗಳು, ಸುದ್ದಿ, ಕ್ರೀಡೆಗಳನ್ನು ಪಡೆಯಬಹುದು. ಜಿಯೋ ಸಿನಿಮಾವನ್ನೂ ಕೂಡ ಈ ಪುಟ್ಟ ಫೋನ್‌ನಲ್ಲಿ ನೋಡಬಹುದು. ಫೀಚರ್ ಫೋನ್‌ನಲ್ಲೂ ಬಳಕೆದಾರರಿಗೆ ಮನರಂಜನೆ ದೊರಕಲಿದೆ. ಉಳಿದಂತೆ, ಜಿಯೋ ಪ್ಲೇ, ಯುಪಿಐ ಬಳಕೆಯನ್ನೂ ಇದರಲ್ಲಿ ಮಾಡಬಹುದು. ಜಿಯೋ ಚಾಟ್ ಮೂಲಕ ಅನಿಯಮಿತ ಸಂದೇಶವನ್ನೂ ಕಳುಹಿಸಬಹುದು. ಫೋಟೋಗಳನ್ನು ಹಂಚಿಕೊಳ್ಳಬಹುದು. ಗ್ರೂಪ್ ಚಾಟ್ ಮಾಡಬಹುದು.
ಜಿಯೋಭಾರತ್ ವಿ3 ಮತ್ತು ವಿ4 1000 ಎಂಎಎಚ್ ಬ್ಯಾಟರಿ ಹೊಂದಿದೆ. ಒಂದು ದಿನ ಪೂರ್ತಿ ಚಾರ್ಜ್ ಬರುತ್ತದೆ. ಬಳಕೆದಾರರು ಮೆಮೊರಿ ಕಾರ್ಡ್ ಬಳಕೆ ಮಾಡಿ ಸ್ಟೋರೇಜ್ ಸಾಮರ್ಥ್ಯವನ್ನು 128 ಜಿಬಿವರೆಗೆ ವಿಸ್ತರಿಸಬಹುದು. ಈ ಮೂಲಕ ಫೋಟೋಗಳು, ವೀಡಿಯೊಗಳು ಮತ್ತು ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು. 23 ಭಾರತೀಯ ಭಾಷೆಗಳನ್ನು ಬೆಂಬಲಿಸುವ
ಜಿಯೋ ಭಾರತ್ ರಿಚಾರ್ಜ್ ಕೂಡ ಕಡಿಮೆ ಇದೆ. ಮಾಸಿಕ 123 ರೂಪಾಯಿ ರಿಚಾರ್ಜ್ ಯೋಜನೆ ಮೂಲಕ ಬಳಕೆದಾರರು ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡಬಹುದು. 14 ಜಿಬಿ ಡೇಟಾ ಕೂಡ ದೊರಕುತ್ತದೆ. ಮಾರುಕಟ್ಟೆಯಲ್ಲಿರುವ ಇತರೆ ದುಬಾರಿ ಪ್ಲ್ಯಾನ್‌ಗಳಿಗೆ ಹೋಲಿಸಿದರೆ ಇದು ಕಡಿಮೆ ದರದ ಪ್ಲ್ಯಾನ್ ಆಗಿದೆ. ಶೀಘ್ರದಲ್ಲಿ ಜಿಯೋ ಮಾರ್ಟ್ ಮ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಿಯೋ ಭಾರತ್ ವಿ3 ಮತ್ತು ವಿ4 ಫೋನ್‌ಗಳು ಲಭ್ಯವಿರಲಿದೆ.