ರಿಯಲ್‌ಮಿ ಜಿಟಿ 6ಟಿ ಭಾರತದ ಮಾರುಕಟ್ಟೆಗೆ, 24999 ರೂಪಾಯಿಗೆ ಸ್ನ್ಯಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಸ್ಮಾರ್ಟ್‌ಫೋನ್
May 24, 2024 03:57 PM IST
ರಿಯಲ್‌ಮಿ ಜಿಟಿ 6ಟಿ ಭಾರತದ ಮಾರುಕಟ್ಟೆಗೆ ಬಂದಿದ್ದು 24999 ರೂಪಾಯಿಗೆ ಸ್ನ್ಯಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಸ್ಮಾರ್ಟ್‌ಫೋನ್ ಲಭ್ಯವಿದೆ.
ರಿಯಲ್‌ಮಿ ಜಿಟಿ 6ಟಿ ಫೋನ್ ಭಾರತದ ಮಾರುಕಟ್ಟೆಗೆ ಬಂದಿದ್ದು, 24999 ರೂಪಾಯಿಗೆ ಸ್ನ್ಯಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಸ್ಮಾರ್ಟ್‌ಫೋನ್ ಭಾರತದ ಗ್ರಾಹಕರಿಗೆ ಈಗ ಲಭ್ಯವಿದೆ. ಇದರ ಫೀಚರ್ಸ್ ಮತ್ತು ಇತರೆ ವಿವರ ಇಲ್ಲಿದೆ.
ಭಾರತದ ಮಾರುಕಟ್ಟೆಗೆ ರಿಯಲ್‌ಮಿ ತನ್ನ ಹೊಸ ಜಿಟಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈಗ 24999 ರೂಪಾಯಿಗೆ ರಿಯಲ್‌ಮಿ ಜಿಟಿ 6ಟಿ ಸ್ನ್ಯಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಸ್ಮಾರ್ಟ್‌ಫೋನ್ ಲಭ್ಯವಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ವಾಲ್‌ಕಂ ಸ್ನ್ಯಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಜಿಪ್‌ಸೆಟ್‌ನ ಮೊದಲ ಫೋನ್ ರಿಯಲ್‌ಮಿ ಜಿಟಿ 6ಟಿ ಎಂದು ರಿಯಲ್‌ಮಿ ಹೇಳಿಕೊಂಡಿದೆ.
ಸುಮಾರು 2 ವರ್ಷಗಳ ನಂತರ, ರಿಯಲ್‌ಮಿ ತನ್ನ ಗೇಮಿಂಗ್-ಕೇಂದ್ರಿತ ಜಿಟಿ ಸರಣಿಯನ್ನು ರಿಯಲ್ ಮಿ ಜಿಟಿ 6ಟಿ ಬಿಡುಗಡೆಯೊಂದಿಗೆ ಭಾರತಕ್ಕೆ ಮರಳಿ ತಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 7 + ಜೆನ್ 3 ಚಿಪ್‌ಸೆಟ್‌ನೊಂದಿಗೆ ಬಂದಿದ್ದು, ಇದರ ಬೆಲೆ ಮಾದರಿಗೆ ಅನುಗುಣವಾಗಿ 24999 ರೂಪಾಯಿಯಿಂದ 39,999 ರೂಪಾಯಿ ತನಕ ಇದೆ.
ರಿಯಲ್ ಮಿ ಜಿಟಿ 6ಟಿ ಬೆಲೆ
ರಿಯಲ್ ಮಿ ಜಿಟಿ 6ಟಿ 8ಜಿಬಿ RAM/128 ಜಿಬಿ ಸ್ಟೋರೇಜ್ ವೇರಿಯಂಟ್‌ಗೆ 30,999 ರೂ., 8ಜಿಬಿ RAM/256ಜಿಬಿ ಸ್ಟೋರೇಜ್ ವೇರಿಯಂಟ್ ಗೆ 32,999 ರೂ., 12ಜಿಬಿ RAM/256ಜಿಬಿ ಸ್ಟೋರೇಜ್ ವೇರಿಯಂಟ್ ಗೆ 35,999 ರೂ., 12ಜಿಬಿ RAM/512ಜಿಬಿ ಸ್ಟೋರೇಜ್ ವೇರಿಯಂಟ್ ಗೆ 39,999 ರೂ.
ಆದಾಗ್ಯೂ, ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಮಾಡಿದ ಪಾವತಿಗಳಿಗೆ ರಿಯಲ್‌ಮಿ 4,000 ರೂಪಾಯಿಯ ತತ್‌ಕ್ಷಣದ ರಿಯಾಯಿತಿಯನ್ನು ನೀಡುತ್ತದೆ. ಈ ಸಾಧನಗಳ ಮೇಲೆ 2,000 ರೂಪಾಯಿ ತನಕದ ಹೆಚ್ಚುವರಿ ವಿನಿಮಯ ಕೊಡುಗೆಯೂ ಇದ್ದು, ಜಿಟಿ 6 ಟಿ ಸರಣಿಯ ಪರಿಣಾಮಕಾರಿ ಬೆಲೆ ಅಥವಾ ಖರೀದಿ ಬೆಲೆಯನ್ನು 6,000 ರೂಪಾಯಿ ಕಡಿಮೆ ಮಾಡುತ್ತದೆ.
ರಿಯಲ್ ಮಿ ಜಿಟಿ 6ಟಿ ಸರಣಿಯ ಖರೀದಿ ಬೆಲೆ ಹೀಗಿದೆ
8 ಜಿಬಿ RAM / 128 ಜಿಬಿ ಸ್ಟೋರೇಜ್: 24,999 ರೂ
8 ಜಿಬಿ RAM/ 256 ಜಿಬಿ ಸ್ಟೋರೇಜ್: 26,999 ರೂ
12 ಜಿಬಿ RAM/ 256 ಜಿಬಿ ಸ್ಟೋರೇಜ್: 29,999 ರೂ
12 ಜಿಬಿ RAM / 512 ಜಿಬಿ ಸ್ಟೋರೇಜ್: 33,999 ರೂ
ಹೊಸ ರಿಯಲ್ ಮಿ ಫೋನ್ ಎರಡು ಬಣ್ಣಗಳಲ್ಲಿ ಅಂದರೆ ಫ್ಲೂಯಿಡ್ ಸಿಲ್ವರ್ ಮತ್ತು ರಝೋರ್ ಗ್ರೀನ್ ಬಣ್ಣಗಳಲ್ಲಿ ಅಮೆಜಾನ್ ತಾಣದಲ್ಲಿ ಲಭ್ಯವಿರುತ್ತದೆ. ಮೇ 29 ರಿಂದ Realme.com ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲೂ ಸಿಗಲಿದೆ.
ರಿಯಲ್ ಮಿ ಜಿಟಿ 6ಟಿ ಫೀಚರ್‌ಗಳು
ರಿಯಲ್ ಮಿ ಜಿಟಿ 6ಟಿ 6.78 ಇಂಚಿನ ಎಲ್‌ಟಿಪಿಒ ಕರ್ವ್ಡ್ ಅಮೋಲೆಡ್ ಪ್ಯಾನಲ್ ಹೊಂದಿದ್ದು, 2,789 x 1,264 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಇತ್ತೀಚಿನ ರಿಯಲ್ ಮಿ ಫೋನ್ 2500Hz ತ್ವರಿತ ಟಚ್ ಸ್ಯಾಂಪ್ಲಿಂಗ್ ದರ, 2160Hz PWM ಡಿಮ್ಮಿಂಗ್ ಮತ್ತು 6000 ನಿಟ್ಸ್ ಪೀಕ್ ಬ್ರೈಟ್ ನೆಸ್ (ಹೈ ಬ್ರೈಟ್ ನೆಸ್ ಮೋಡ್ ನಲ್ಲಿ 1600 ನಿಟ್ಸ್ ಮತ್ತು 1000 ನಿಟ್ಸ್ ಮ್ಯಾನುವಲ್ ಗರಿಷ್ಠ ಪ್ರಕಾಶ) ನೊಂದಿಗೆ ಬರುತ್ತದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಮತ್ತು ಧೂಳು ಮತ್ತು ನೀರಿಗೆ ಬಿದ್ದರೂ ಏನೂ ಆಗದ ಪ್ರತಿರೋಧಕ್ಕಾಗಿ ಐಪಿ 65 ರೇಟಿಂಗ್ ಹೊಂದಿದೆ.
ಫೋನ್ 4 ಎನ್ಎಂ ಪ್ರಕ್ರಿಯೆಯ ಆಧಾರದ ಮೇಲೆ ಕ್ವಾಲ್‌ಕಾಮ್‌ನ ಇತ್ತೀಚಿನ ಸ್ನ್ಯಾಪ್‌ಡ್ರ್ಯಾಗನ್ 7 ಪ್ಲಸ್ ಜೆನ್ 3 ಚಿಪ್‌ಸೆಟ್fನಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲ ಗ್ರಾಫಿಕ್ಸ್ ಅವಶ್ಯಕತೆಗಳನ್ನು ನಿರ್ವಹಿಸಲು ಅಡ್ರೆನೊ 732 ಜಿಪಿಯುನೊಂದಿಗೆ ಜೋಡಿಸಲ್ಪಟ್ಟಿದೆ. ಜಿಟಿ 6ಟಿ 12 ಜಿಬಿ LPDDR5X ಮೆಮೊರಿ ಮತ್ತು 512 ಜಿಬಿ ಯುಎಫ್ಎಸ್ 4.0 ಸ್ಟೋರೇಜ್ ಕೂಡ ಇದರಲ್ಲಿದೆ.
ರಿಯಲ್‌ಮಿ ಜಿಟಿ 6ಟಿ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಇದ್ದು, ಇದರಲ್ಲಿ 50 ಎಂಪಿ ಸೋನಿ ಎಲ್ವೈಟಿ 600 ಪ್ರೈಮರಿ ಸೆನ್ಸರ್ ಮತ್ತು 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ಗಳಿವೆ. ಸೆಲ್ಫಿ ಮತ್ತು ವೀಡಿಯೊ ಕರೆ ಅಗತ್ಯಗಳನ್ನು ನಿರ್ವಹಿಸಲು 32 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಸಹ ಇದೆ.
ಈ ಸ್ಮಾರ್ಟ್‌ಫೋನ್ 5,500 ಎಂಎಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ಬಾಕ್ಸ್‌ನಲ್ಲಿ ಸೇರಿಸಲಾದ 120 ವ್ಯಾಟ್ ಸೂಪರ್ ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. ಇತ್ತೀಚಿನ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ ರಿಯಲ್ ಮಿ ಯುಐ 5.0 ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ರಿಯಲ್ ಮಿ ಈ ಸಾಧನದೊಂದಿಗೆ 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು ಹೆಚ್ಚುವರಿ ವರ್ಷದ ಭದ್ರತಾ ಅಪ್ಡೇಟ್ಸ್ ಒದಗಿಸುವ ಭರವಸೆ ನೀಡುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.