Realme Narzo Launch: 1 ಟಿಬಿ ಸ್ಟೋರೇಜ್ ಬೆಂಬಲದ ರಿಯಲ್‌ಮಿ ನಾರ್ಜೊ 60 ಸರಣಿ ಫೋನ್‌ಗಳು ಜುಲೈ 7ರಂದು ಲಾಂಚ್, ಇಲ್ಲಿದೆ ವಿವರ
Jul 02, 2023 05:00 PM IST
Realme Narzo Launch: 1 ಟಿಬಿ ಸ್ಟೋರೇಜ್ ಬೆಂಬಲದ ರಿಯಲ್‌ಮಿ ನಾರ್ಜೊ 60 ಸರಣಿ ಫೋನ್‌ಗಳು ಜುಲೈ 7ರಂದು ಲಾಂಚ್, ಇಲ್ಲಿದೆ ವಿವರ
- ರಿಯಲ್‌ಮಿ ಸ್ಮಾರ್ಟ್‌ಪ್ರಿಯರಿಗೆ ಖುಷಿಯ ಸುದ್ದಿ, ರಿಯಲ್ ಮಿ ನಾರ್ಜೊ 60 ಸೀರಿಸ್ (Realme Narzo 60 series) ಸ್ಮಾರ್ಟ್‌ಫೋನ್‌ಗಳು ಕೆಲವೇ ದಿನದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ. ಇದೇ ಜುಲೈ 6ರಂದು Realme Narzo 60 Pro 5G ಮತ್ತು Realme Narzo 60 5G ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ.
ಬೆಂಗಳೂರು: ರಿಯಲ್‌ಮಿ ಸ್ಮಾರ್ಟ್‌ಪ್ರಿಯರಿಗೆ ಖುಷಿಯ ಸುದ್ದಿ, ರಿಯಲ್ ಮಿ ನಾರ್ಜೊ 60 ಸೀರಿಸ್ (Realme Narzo 60 series) ಸ್ಮಾರ್ಟ್‌ಫೋನ್‌ಗಳು ಕೆಲವೇ ದಿನದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ. ಇದೇ ಜುಲೈ 6ರಂದು Realme Narzo 60 Pro 5G ಮತ್ತು Realme Narzo 60 5G ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ. ಈ ಸ್ಮಾರ್ಟ್‌ಫೋನ್‌ಗಳು ಅಮೇಜಾನ್‌ನಲ್ಲಿ ಲಭ್ಯವಿದೆ.
ನೂತನ ಫೋನ್‌ಗಳು ಕರ್ವಡ್ ಡಿಸ್‌ಪ್ಲೇ ಹೊಂದಿರಲಿದೆ. ಇದರಲ್ಲಿ 1ಟಿಬಿಯವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ 100 ಮೆಗಾ ಫಿಕ್ಸೆಲ್ ಹಿಂಬದಿ ಕ್ಯಾಮೆರಾ ಸೆಟಪ್ ಇರಲಿದೆ. ಈಗಾಗಲೇ ರಿಯಲ್ ಮಿ 11 5ಜಿಯಲ್ಲಿರುವ ವಿನ್ಯಾಸ ಇದರಲ್ಲಿಯೂ ಮುಂದುವರೆಯಲಿದೆ.
ಭಾರತದಲ್ಲಿ ಜುಲೈ 6ರಂದು ರಾತ್ರಿ 12 ಗಂಟೆಗೆ ನೂತನ ರಿಯಲ್ ಮಿ ನಾರ್ಜೊ 60 ಸೀರಿಸ್ ಫೋನ್‌ಗಳು ಲಾಂಚ್ ಆಗಲಿವೆ ಎಂದು ಕಂಪನಿ ಖಚಿತಪಡಿಸಿದೆ.
ಈ ಸ್ಮಾರ್ಟ್‌ಫೊನ್ ಅನ್ನು ರಿಯಲ್ ಮೀ ಕಂಪನಿಯ ಭಾರತದ ವೆಬ್‌ಸೈಟ್ ಮತ್ತು ಅಮೆಜಾನ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಲಾಂಚಿಂಗ್ ಕಾರ್ಯಕ್ರಮವು ಜುಲೈ 6ರಂದು ನಡೆಯಲಿದ್ದು, ಆಸಕ್ತರು ಈಗಲೇ ಆ ವೆಬ್‌ಸೈಟ್‌ಗಳಿಗೆ ಹೋಗಿ ಕಾರ್ಯಕ್ರಮದ ಮಾಹಿತಿ ಪಡೆಯಲು ನೋಟಿಫಿಕೇಷನ್ ಕ್ಲಿಕ್ ಮಾಡಬಹುದು.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವೆಲ್ಲ ಫೀಚರ್‌ಗಳು ಇರಲಿವೆ? ದರ ಎಷ್ಟಿರಲಿದೆ? ಇತ್ಯಾದಿ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಈಗಾಗಲೇ ರಿಯಲ್ ಮಿ ನಾರ್ಜೊ 60 ಸೀರಿಸ್ ಫೋನ್‌ಗಳ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ವಿಡಿಯೋದಲ್ಲಿ ನೂತನ ಫೋನ್‌ಗಳು ಬಾಗಿದ ಬದಿಗಳನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರ್ವಡ್ ಡಿಸೈನ್ ಬಯಸುವವರಿಗೆ ಇದು ಇಷ್ಟವಾಗಬಹುದು. ನೂತನ ಫೋನ್‌ನಲ್ಲಿ ಎರಡೂವರೆ ಲಕ್ಷದಷ್ಟು ಫೋಟೋ ಸಂಗ್ರಹಿಸುವ ಸಾಮರ್ಥ್ಯ ದೊರಕಲಿದೆ. ಅಂದರೆ, ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ಒಂದು ಟಿಬಿಯವರೆಗೆ ಸ್ಟೋರೇಜ್ ಸ್ಥಳಾವಕಾಶ ಪಡೆದುಕೊಳ್ಳಬುದು.
ಇತ್ತೀಚೆಗೆ ರಿಯಲ್‌ಮಿ ನಾರ್ಜೊ 60 5ಜಿ ಸ್ಮಾರ್ಟ್‌ಫೋನ್ ಗೀಕ್‌ಬೆಂಚ್ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6020 ಎಸ್‌ಒಸಿ ಮತ್ತು 6 ಜಿಬಿ ರಾಮ್ ಇತ್ತು. ಅದರಲ್ಲಿ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇತ್ತು. ನೂತನ ರಿಯಲ್ ಮೀ ಸರಣಿಯ ಫೋನ್‌ನಲ್ಲಿ ಏನೆಲ್ಲ ವಿಶೇಷಗಳಿವೆ ಎಂದು ಕೆಲವು ದಿನಗಳಲ್ಲಿ ತಿಳಿದುಬರಲಿದೆ.