logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Boat Capsize: ಟುನೀಶಿಯಾ ಕರಾವಳಿಯಲ್ಲಿ ಭೀಕರ ದುರಂತ; ದೋಣಿ ಮುಳುಗಿ ಕನಿಷ್ಠ 32 ಮಂದಿ ಸಾವು, ಹಲವರ ರಕ್ಷಣೆ

Boat Capsize: ಟುನೀಶಿಯಾ ಕರಾವಳಿಯಲ್ಲಿ ಭೀಕರ ದುರಂತ; ದೋಣಿ ಮುಳುಗಿ ಕನಿಷ್ಠ 32 ಮಂದಿ ಸಾವು, ಹಲವರ ರಕ್ಷಣೆ

Raghavendra M Y HT Kannada

Apr 15, 2023 06:18 AM IST

google News

ಟುನೀಶಿಯಾದಲ್ಲಿ ದೋಣಿ ಮುಳುಗಿದ ಪ್ರಕರಣದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

  • ನಿಯಂತ್ರಣ ತಪ್ಪಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 25 ಮಂದಿ ಮೃತಪಟ್ಟಿರುವ ದುರಂತ ಟುನೀಶಿಯಾ ದೇಶದ ಕರಾವಳಿಯಲ್ಲಿ ನಡೆದಿದೆ.

ಟುನೀಶಿಯಾದಲ್ಲಿ ದೋಣಿ ಮುಳುಗಿದ ಪ್ರಕರಣದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಟುನೀಶಿಯಾದಲ್ಲಿ ದೋಣಿ ಮುಳುಗಿದ ಪ್ರಕರಣದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಟುನೀಶಿಯಾ: ವಲಸಿಗರನ್ನು (Migrants) ಸಾಗಿಸುತ್ತಿದ್ದ ದೋಣಿ (Boat) ನಿಯಂತ್ರಣ ತಪ್ಪಿ ಮುಳುಗಿದ ಪರಿಣಾಮ ಕನಿಷ್ಠ 32 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಟುನೀಶಿಯಾ (Tunisia) ದೇಶದ ಕರಾವಳಿಯಲ್ಲಿ ನಡೆದಿದೆ.

ಯುರೋಪ್‌ಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಈ ಘೋರ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು, ಘಟನೆಯಲ್ಲಿ ಇನ್ನೂ 15 ಮಂದಿ ನಾಪತ್ತೆಯಾಗಿದ್ದಾರೆ. 72 ಜನರನ್ನು ಟುನೀಶಿಯಾ ಅಧಿಕಾರಿಗಳು ರಕ್ಷಿಸಿದ್ದಾರೆ. ಪೂರ್ವ-ಮಧ್ಯ ಟುನೀಶಿಯಾದ ಬಂದರು ಸ್ಫ್ಯಾಕ್ಸ್( Sfax coastal) ಕರಾವಳಿಯಲ್ಲಿ ದೋಣಿ ನಿಯಂತ್ರಣ ತಪ್ಪಿ ಮುಳುಗಿದೆ.

ದೋಣಿಯಡಿ ಸಿಲುಕಿದ್ದ 15 ಮಂದಿಯ ಮೃತದೇಹಗಳನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಗುರುವಾರ ಹೊರತೆಗೆದಿದ್ದಾರೆ. ದುರಂತದಲ್ಲಿ ಮೃತಪಟ್ಟಿರುವವರು ಹಾಗೂ ಈಗಾಗಲೇ ರಕ್ಷಣೆ ಮಾಡಲಾಗಿರುವ ಬಹುತೇಕ ಸಬ್ ಸಹಾರನ್ ಆಫ್ರಿಕಾದವರು ಎಂದು ಸ್ಫ್ಯಾಕ್ಸ್ ಪ್ರಾಸಿಕ್ಯೂಟರ್ ಫೌಜಿ ಮಸ್ಮೌಡಿ ಮಾಹಿತಿ ನೀಡಿದ್ದಾರೆ.

ಮೆಡಿಟರೇನಿಯನ್ ಸಮುದ್ರವು ವಿಶ್ವದ ಅತ್ಯಂತ ಅಪಾಯಕಾರಿ ವಲಸೆ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗದ ಮೂಲಕವೇ ಕಳ್ಳಸಾಗಣೆದಾರರು ವಲಸಿಗರನ್ನು ಸಣ್ಣ ದೋಣಿಗಳಲ್ಲಿ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಿಸುತ್ತಾರೆ. ದೋಣಿಗಳಲ್ಲಿ ಜನರು ತುಂಬಿ ತುಳುಕುವುದರಿಂದ ಆಗಾಗ ಇಂತಹ ದುರಂತಗಳು ಸಂಭವಿಸುತ್ತಲೇ ಇವೆ.

ಇದರಿಂದ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೂರು ವಾರಗಳ ಹಿಂದೆ, ದೋಣಿ ಸಮುದ್ರದಲ್ಲಿ ಮುಳುಗಿದಾಗ 29 ವಲಸಿಗರು ಸಾವನ್ನಪ್ಪಿದರು ಮತ್ತು 67 ಮಂದಿ ನಾಪತ್ತೆಯಾಗಿದ್ದರು. ಇದರಲ್ಲಿ ಕೆಲವರನ್ನು ಅಧಿಕಾರಿಗಳು ರಕ್ಷಿಸಿದ್ದರು. ಇವರೆಲ್ಲರೂ ಕೂಡ ಆಫ್ರಿಕಾದಿಂದ ಬಂದವರೇ ಆಗಿದ್ದರು.

ಇಟಲಿಯ ಅಯೋನಿಯನ್ ಕರಾವಳಿಯಲ್ಲೂ ದೋಣಿ ದುರಂತ

ವಲಸೆಗಾರರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದ ಪರಿಣಾಮ 59ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದ ಘಟನೆ ಇಟಲಿಯ ಅಯೋನಿಯನ್ ಕರಾವಳಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣ ಮಾಡಿದ್ದರು.

ಭಾರಿ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿಯ ಮಧ್ಯಭಾಗ ತುಂಡಾಗಿ ಎರಡು ಭಾಗವಾಗಿದ್ದೇ ಘೋರ ದುರಂತಕ್ಕೆ ಕಾರಣವಾಗಿತ್ತು. ಕೋಸ್ಟ್ ಗಾರ್ಡ್ ಸಿಬ್ಬಂದಿಯೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿ ಹಲವರನ್ನು ರಕ್ಷಣೆ ಮಾಡಿದ್ದರು.

ದುರಂತಕ್ಕೀಡಾದ ದೋಣಿಯಲ್ಲಿದ್ದ ನಿರಾಶ್ರಿತರು ಟರ್ಕಿ ಮತ್ತು ಈಜಿಪ್ಟ್‌ನಿಂದ ಬಂದಿದ್ದಾರೆ ಅಂತ ಹೇಳಲಾಗಿತ್ತು. ಕ್ಯಾಲಬ್ರಿಯಾದ ಕರಾವಳಿ ಪಟ್ಟಣವಾದ ಕ್ರೋಟೋನ್ ಬಳಿ ದುರಂತ ಸಂಭವಿಸಿತ್ತು. ಕೋಸ್ಟ್ ಗಾರ್ಡ್, ಗಡಿ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಸೇರಿದ ಹಡಗುಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಇಟಲಿಯ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ವಲಸಿಗರ ರಕ್ಷಣೆಗಾಗಿ ವಿವಾದಾತ್ಮಕವಾದ ಹೊಸ ಕಾನೂನನ್ನು ಮಂಡಿಸಿತ್ತು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ