logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Terror Impact On India: ಭಾರತಕ್ಕೆ ಅಪಾಯಕಾರಿ ಉಗ್ರ ಸಂಘಟನೆ ಯಾವುದು? ಡಿ-ಕಂಪನಿ ಏನು ಮಾಡ್ತಿದೆ?; ಟೆರರಿಸಂ ಇಂಡೆಕ್ಸ್‌ ವರದಿ ಹೇಳುವುದೇನು?

Terror Impact on India: ಭಾರತಕ್ಕೆ ಅಪಾಯಕಾರಿ ಉಗ್ರ ಸಂಘಟನೆ ಯಾವುದು? ಡಿ-ಕಂಪನಿ ಏನು ಮಾಡ್ತಿದೆ?; ಟೆರರಿಸಂ ಇಂಡೆಕ್ಸ್‌ ವರದಿ ಹೇಳುವುದೇನು?

HT Kannada Desk HT Kannada

Mar 17, 2023 11:05 AM IST

google News

ದಾವೂದ್‌ ಇಬ್ರಾಹಿಂ (ಸಾಂದರ್ಭಿಕ ಚಿತ್ರ)

  • Terror Impact on India: ಗ್ಲೋಬಲ್‌ ಟೆರರಿಸಂ ಇಂಡೆಕ್ಸ್‌ನ 10ನೇ ಆವೃತ್ತಿ ಇತ್ತೀಚೆಗೆ ಪ್ರಕಟವಾಗಿದೆ. ಅತಿ ಹೆಚ್ಚು ಉಗ್ರ ಕೃತ್ಯಗಳಿಗೆ ಒಳಗಾಗಿರುವ ಟಾಪ್‌ 25 ರಾಷ್ಟ್ರಗಳ ಪೈಕಿ ಭಾರತವೂ ಒಂದು. ಹಾಗಾದರೆ ಭಾರತಕ್ಕೆ ಯಾರಿಂದ ಹೆಚ್ಚು ಬೆದರಿಕೆ ಇದೆ. ದಾವೂದ್‌ ಇಬ್ರಾಹಿಂನ ಡಿ-ಕಂಪನಿ ಹೇಗಿದೆ? ಎಷ್ಟು ಉಗ್ರ ಸಂಘಟನೆಗಳು ಭಾರತದ ಪಾಲಿಗೆ ಕಂಟಕ? ಇಲ್ಲಿದೆ ಆ ವಿವರ.

ದಾವೂದ್‌ ಇಬ್ರಾಹಿಂ (ಸಾಂದರ್ಭಿಕ ಚಿತ್ರ)
ದಾವೂದ್‌ ಇಬ್ರಾಹಿಂ (ಸಾಂದರ್ಭಿಕ ಚಿತ್ರ) (Live Mint)

ಭಯೋತ್ಪಾದನೆ ಸಂಘಟನೆಗಳ ಬೆದರಿಕೆ ಭಾರತಕ್ಕೆ ಹೊಸದಲ್ಲ. ಆದಾಗ್ಯೂ, ಈ ಬೆದರಿಕೆ ಯಾವ ಪ್ರಮಾಣದಲ್ಲಿದೆ? ಇತ್ತೀಚೆಗೆ ಪ್ರಕಟವಾಗಿರುವ ಗ್ಲೋಬಲ್‌ ಟೆರರಿಸಂ ಇಂಡೆಕ್ಸ್‌ನ 10ನೇ ಆವೃತ್ತಿ ಹೇಳುವುದೇನು? ಈ ವರದಿಯಲ್ಲಿರುವ ಅತಿ ಹೆಚ್ಚು ಉಗ್ರ ಕೃತ್ಯಕ್ಕೆ ಒಳಗಾಗಿರುವ ಟಾಪ್‌ 25 ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬ ಅಂಶ ಗಮನಾರ್ಹ.

ಇದೇ ಕಾರಣಕ್ಕೆ ಹಲವಾರು ಕುತೂಹಲಕಾರಿ ಪ್ರಶ್ನೆಗಳು ಎದುರಾಗುವುದು ಸಹಜ. ಭಾರತಕ್ಕೆ ಯಾರಿಂದ ಹೆಚ್ಚು ಬೆದರಿಕೆ ಇದೆ. ದಾವೂದ್‌ ಇಬ್ರಾಹಿಂ ಮತ್ತು ಆತನ ಡಿ-ಕಂಪನಿಯಿಂದಲೇ? ಎಷ್ಟು ಉಗ್ರ ಸಂಘಟನೆಗಳು ಭಾರತದ ಪಾಲಿಗೆ ಕಂಟಕವಾಗಿವೆ? ಈ ಎಲ್ಲದಕ್ಕೂ ಉತ್ತರ ಒದಗಿಸುವ ಕಿರು ಅವಲೋಕನ ಇಲ್ಲಿದೆ.

ಡಿ-ಕಂಪನಿಯಿಂದ ಭಾರತಕ್ಕೆ ಬೆದರಿಕೆ ಈಗಲೂ ಇದೆಯಾ

ದಾವೂದ್ ಇಬ್ರಾಹಿಂ ಮತ್ತು ಆತನ ಡಿ-ಕಂಪನಿಯು ಈಗಲೂ ಮುಂಬೈನಲ್ಲಿ ಡ್ರಗ್ಸ್, ಶಸ್ತ್ರಾಸ್ತ್ರಗಳು, ಖೋಟಾನೋಟು ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಕ್ರಿಮಿನಲ್ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. ಕ್ರಿಮಿನಲ್ ಸಂಘಟನೆಯು ಅಲ್-ಖೈದಾ ಸೇರಿ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ ಎಂದು ಜಾಗತಿಕ ಭಯೋತ್ಪಾದನಾ ಸೂಚ್ಯಂಕದ 10 ನೇ ಆವೃತ್ತಿ ಉಲ್ಲೇಖಿಸಿದೆ.

ಡಿ-ಕಂಪನಿಯು ಭಯೋತ್ಪಾದಕ ಸಂಘಟನೆಯಾಗಿ ರೂಪಾಂತರವಾಗುವುದಕ್ಕೆ ಅದರ ನಕಲಿ ವ್ಯಾಪಾರ ಪೂರಕವಾಗಿದೆ. ತಲೆಮರೆಸಿಕೊಂಡಿರುವ ಡಾನ್ ದಾವೂದ್ ಇಬ್ರಾಹಿಂ ನೇತೃತ್ವದ ಕ್ರಿಮಿನಲ್ ಸಂಘಟನೆ ಇದಾಗಿದ್ದು, ಈಗ ಮುಂಬೈನಲ್ಲಿ ನಕಲಿ ಸಾಂಸ್ಕೃತಿಕ ಉತ್ಪನ್ನಗಳ ಕಾಳಸಂತೆಯ ಬಹುಭಾಗವನ್ನು ನಿಯಂತ್ರಿಸುತ್ತದೆ. ಇತಿಹಾಸವನ್ನು ಗಮನಿಸಿದರೆ, 1990ರ ದಶಕದ ಆರಂಭದಲ್ಲಿ ಡಿ-ಕಂಪನಿ ಭಾರತೀಯ ಚಲನಚಿತ್ರೋದ್ಯಮದ ಒಳಹೊಕ್ಕಿತು. ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಅಮೂಲ್ಯ ಲೋಹಗಳ ಕಳ್ಳಸಾಗಣೆ, ವೇಶ್ಯಾವಾಟಿಕೆ, ನಕಲಿ ಮತ್ತು ಸುಲಿಗೆಯಿಂದ ಡಿ-ಕಂಪನಿ ತನ್ನ ಲಾಭವನ್ನು ಪಡೆಯುತ್ತದೆ ಎಂಬ ಅಂಶದ ಕಡೆಗೆ ವರದಿ ಗಮನಸೆಳೆದಿದೆ.

ಕಾಶ್ಮೀರದಲ್ಲಿನ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಗುಂಪುಗಳೊಂದಿಗೆ ಶೀಘ್ರವಾಗಿ ಡಿ-ಕಂಪನಿ ಸಂಪರ್ಕ ಸಾಧಿಸಿದೆ. ಮುಂಬೈನ್ಲಲಿ 257 ಜನರ ಸಾವಿಗೆ ಕಾರಣವಾದ 1993ರ ಮುಂಬೈ ಸರಣಿ ಸ್ಪೋಟದಲ್ಲಿ ಡಿ-ಕಂಪನಿ ನೇರವಾಗಿ ಭಾಗಿಯಾಗಿದೆ. 2007ರ ಜನವರಿಯಿಂದೀಚೆಗೆ ಉಗ್ರ ದಾಳಿಗಳ ವಿವರ ಒದಗಿಸುತ್ತಿರುವ ಟೆರರಿಸಂ ಟ್ರ್ಯಾಕರ್‌ ಈ ವಿಚಾರದ ಕಡೆಗೆ ಗಮನಸೆಳದಿದೆ.

ದಾವೂದ್ ಇಬ್ರಾಹಿಂ ಪ್ರಸ್ತುತ ಪಾಕಿಸ್ತಾನದಿಂದ ಹೊರಗಿದ್ದಾನೆ ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಆದಾಗ್ಯೂ ಪ್ರಸ್ತುತ, ಅವರು ತಮ್ಮ ಕುಟುಂಬದೊಂದಿಗೆ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹಲವಾರು ವರದಿಗಳು ಉಲ್ಲೇಖಿಸಿವೆ.

ಭಾರತದಲ್ಲಿರುವ ಅಪಾಯಕಾರಿ ಟೆರರ್‌ ಗ್ರೂಪ್‌ ಯಾವುದು?

ಉಗ್ರಕೃತ್ಯಗಳಿಂದ ಅತಿ ಹೆಚ್ಚು ತೊಂದರೆಗೆ ಒಳಗಾದ ಟಾಪ್‌ 25 ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದೆ. ಈ ಪಟ್ಟಿಯಲ್ಲಿ ಭಾರತ 13ನೇ ಸ್ಥಾನದಲ್ಲಿದೆ. ಆದಾಗ್ಯೂ, ಸಮೀಕ್ಷೆಗೆ ಒಳಗಾದ 120 ರಾಷ್ಟ್ರಗಳ ಪೈಕಿ 56 ರಾಷ್ಟ್ರಗಳು ಯುದ್ಧ ಮತ್ತು ಭಯೋತ್ಪಾದನೆಯನ್ನು ತಮ್ಮ ದೈನಂದಿನ ಸುರಕ್ಷತೆಗೆ ದೊಡ್ಡ ಬೆದರಿಕೆ ಎಂದು ಉಲ್ಲೇಖಿಸಿರುವುದನ್ನು ವರದಿ ಉಲ್ಲೇಖಿಸಿದೆ.

ಕೆಲವು ಗಡಿ ಪ್ರದೇಶಗಳಲ್ಲಿ ಭಾರತವು ಹಲವಾರು ಕೆಳಮಟ್ಟದ ಸಂಘರ್ಷಗಳನ್ನು ಹೊಂದಿದೆ. ಆದರೆ ದೇಶದ ಬಹುಪಾಲು ಜನಸಂಖ್ಯೆಯು ಈ ಪ್ರದೇಶಗಳ ಹೊರಗೆ ವಾಸಿಸುತ್ತಿದೆ. ಭಾರತದ ಜಿಟಿಐ ಸ್ಕೋರ್ 7.175 ಆಗಿದ್ದು, ಅಫ್ಘಾನಿಸ್ತಾನದ 8.822 ಗೆ ಹೋಲಿಸಿದರೆ, ಇದು ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತ ಮತ್ತು ಸುತ್ತಮುತ್ತ ಅಲ್-ಖೈದಾ ಮತ್ತು ಲಷ್ಕರ್-ಎ-ತೈಬಾ ಸಕ್ರಿಯವಾಗಿದೆ. ಅದೇ ರೀತಿ 2022 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) 12 ನೇ ಮಾರಣಾಂತಿಕ ಭಯೋತ್ಪಾದಕ ಗುಂಪು ಎಂಬುದನ್ನು ವರದಿ ತಿಳಿಸಿದೆ.

ದಾಳಿಗಳು ಮತ್ತು ಸಾವುಗಳು ಕ್ರಮವಾಗಿ 75% ಮತ್ತು 58% ರಷ್ಟು ಕುಸಿದಿದ್ದರೂ, ಅಫ್ಘಾನಿಸ್ತಾನವು ಸತತ ನಾಲ್ಕನೇ ವರ್ಷಕ್ಕೆ ಭಯೋತ್ಪಾದನೆಯಿಂದ ಹೆಚ್ಚು ಪ್ರಭಾವಿತವಾಗಿರುವ ದೇಶವಾಗಿ ಉಳಿದಿದೆ. 2022 ರಲ್ಲಿ ಭಯೋತ್ಪಾದನೆಯಿಂದ ಹೆಚ್ಚು ಬಾಧಿತವಾಗಿರುವ 10 ದೇಶಗಳಲ್ಲಿ ಪಾಕಿಸ್ತಾನ ಉಳಿದಿದೆ, ಸಾವುಗಳು ಗಮನಾರ್ಹವಾಗಿ 643 ಕ್ಕೆ ಏರಿದೆ, ಇದು ಹಿಂದಿನ ವರ್ಷಕ್ಕಿಂತ 120% ಹೆಚ್ಚಾಗಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ