logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Us Election 2024: ಅಮೆರಿಕಾ ಚುನಾವಣೆಯಲ್ಲಿ ಈ ಬಾರಿ ಮುಖ್ಯ ವಿಷಯವಾಗಿದ್ದು ಏನು: ಪ್ರಜಾಪ್ರಭುತ್ವ, ಗರ್ಭಪಾತ, ಪ್ರಮುಖ 10 ಅಂಶಗಳು

US Election 2024: ಅಮೆರಿಕಾ ಚುನಾವಣೆಯಲ್ಲಿ ಈ ಬಾರಿ ಮುಖ್ಯ ವಿಷಯವಾಗಿದ್ದು ಏನು: ಪ್ರಜಾಪ್ರಭುತ್ವ, ಗರ್ಭಪಾತ, ಪ್ರಮುಖ 10 ಅಂಶಗಳು

Umesha Bhatta P H HT Kannada

Nov 06, 2024 04:44 PM IST

google News

ಅಮೆರಿಕಾದಲ್ಲಿ ನಡೆದ ಚುನಾವಣೆ ವೇಳೆ ಈ ಬಾರಿ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾಗಿವೆ.

    • US Election Issues: ಭಾರತದಂತೆಯೇ ಅಮೆರಿಕಾದಲ್ಲಿಯೂ ಚುನಾವಣೆ ವೇಳೆ ಹಲವಾರು ವಿಷಯಗಳು ಮಹತ್ವವನ್ನು ಪಡೆಯುತ್ತವೆ. ಭಾರತದಲ್ಲಿ ವಂಶ ಪಾರಂಪರ್ಯ ರಾಜಕಾರಣ, ಧರ್ಮ ರಾಜಕಾರಣ, ಜಾತಿ ರಾಜಕೀಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಜತೆಗೆ ಪ್ರಣಾಳಿಕೆ ಆಧರಿತ ವಿಷಯಗಳ ಮೇಲೆ ಹೆಚ್ಚು ಚರ್ಚೆಯಾಗುತ್ತವೆ. ಅಮೆರಿಕಾದಲ್ಲೂ ಇದೇ ರೀತಿಯಲ್ಲಿ ಹಲವು ವಿಷಯಗಳು ಚರ್ಚೆಯಾಗಿವೆ.
ಅಮೆರಿಕಾದಲ್ಲಿ ನಡೆದ ಚುನಾವಣೆ ವೇಳೆ ಈ ಬಾರಿ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾಗಿವೆ.
ಅಮೆರಿಕಾದಲ್ಲಿ ನಡೆದ ಚುನಾವಣೆ ವೇಳೆ ಈ ಬಾರಿ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾಗಿವೆ.
  1. ಅಮೆರಿಕಾದಲ್ಲಿ ಈ ಬಾರಿ ಹೆಚ್ಚು ಚರ್ಚೆಯಾಗಿದ್ದು ಪ್ರಜಾಪ್ರಭುತ್ವದ ಬಗ್ಗೆಯೇ. ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಎರಡು ನೂರು ವರ್ಷಕ್ಕೂ ಮಿಗಿಲಾದ ಇತಿಹಾಸ ಇರುವ ಅಮೆರಿಕ ಜಗತ್ತಿನ ಪ್ರಮುಖ ದೇಶಗಳಲ್ಲಿ ಒಂದು. ಅಲ್ಲಿನ ವ್ಯವಸ್ಥೆಯೂ ಪ್ರಜಾಪ್ರಭುತ್ವದ ಅಡಿಯಲ್ಲಿಯೇ ನಡೆದುಕೊಂಡು ಬಂದಿದೆ. ಅಮೆರಿಕಾದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲೂ ಚುನಾವಣೆ ಪ್ರಚಾರದ ವೇಳೆ ಹೆಚ್ಚು ಚರ್ಚೆಗೆ ಬಂದವು
  2. ಅಮೆರಿಕಾದಲ್ಲಿ ಈ ಬಾರಿ ಪ್ರಜಾಪ್ರಭುತ್ವದ ಬಗ್ಗೆಯೇ ಹೆಚ್ಚಿನ ಗಮನ ಸೆಳೆದ ಚರ್ಚೆಗಳು ಆಗಿವೆ. ಅದರಲ್ಲೂ 10 ಜನರಲ್ಲಿ ಆರು ಮಂದಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ತಮ್ಮ ನಂಬರ್ ಒನ್ ಸಮಸ್ಯೆ ಎಂದು ಪರಿಗಣಿಸಿ ಮಹತ್ವವನ್ನು ನೀಡಿದ್ದಾರೆ.
  3. ಅಮೆರಿಕಾದಲ್ಲಿ ಹೆಚ್ಚು ಗಮನ ಸೆಳೆದಿದ್ದು ಗರ್ಭಪಾತದ ವಿಷಯ. ಹೆಣ್ಣು ಮಕ್ಕಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗರ್ಭಪಾತದಂತಹ ಚಟುವಟಿಕೆಗಳು ಹೆಣ್ಣು ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತಿವೆ ಎನ್ನುವ ಚರ್ಚೆಗಳೂ ನಡೆದವು. ಗರ್ಭಪಾತದ ವಿಚಾರದಲ್ಲಿ ಕಟ್ಟು ನಿಟ್ಟಿನ ಕಾನೂನು ಬರಬೇಕು. ಹೆಣ್ಣು ಮಕ್ಕಳಿಗೆ ಇನ್ನಷ್ಟು ಅವಕಾಶಗಳು ಸಿಗಬೇಕು ಎನ್ನುವ ಒತ್ತಾಯಗಳು ಕೇಳಿ ಬಂದವು. ಹತ್ತರಲ್ಲಿ ಮೂವರಾದರೂ ಈ ವಿಚಾರ ಪ್ರಸ್ತಾಪಿಸಿದ್ದಾರೆ.
  4. ಅಮೆರಿಕಾದಂತಹ ಮುಂದುವರಿದ ದೇಶದಲ್ಲಿ ಈವರೆಗೂ ಹೆಣ್ಣುಮಕ್ಕಳಿಗೆ ಅಧಿಕಾರ ದೊರೆತಿದ್ದರೂ ಅಧ್ಯಕ್ಷ ಸ್ಥಾನದಂತಹ ಉನ್ನತ ಹುದ್ದೆ ಈವರೆಗೂ ದೊರೆತಿಲ್ಲ. ಹಿಂದೆ ಸ್ಪರ್ಧೆ ಮಾಡಿದವರೂ ಗೆದ್ದಿಲ್ಲ. ಈ ಬಾರಿಯೂ ಮತ್ತೊಬ್ಬ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುರಿಂದ ಅವಕಾಶ ಏಕೆ ನೀಡಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.
  5. ಅಮೆರಿಕಾದ ಆರ್ಥಿಕ ಪರಿಸ್ಥಿತಿಯ ಕುರಿತಾಗಿಯೂ ಕೆಲವು ಭಾಗಗಳಲ್ಲಿ ಚರ್ಚೆಗೆ ಬಂದವು. ಅಮೆರಿಕಾದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನ ನೀಡುವುದು ಆದ್ಯತೆಯಾಗಬೇಕು ಎನ್ನುವ ಅಭಿಪ್ರಾಯವನ್ನಯ ಹಲವರು ವ್ಯಕ್ತಪಡಿಸಿದರು. ಹತ್ತರಲ್ಲಿ ಒಬ್ಬರಿಗಾದರೂ ಅಮೆರಿಕಾದ ಆರ್ಥಿಕತೆಯು ಆದ್ಯತೆಯ ವಿಷಯವಾಗಿದ್ದು ಕಂಡು ಬಂದಿತು.
  6. ಅಮೆರಿಕಾದಲ್ಲಿ ಭಾರತೀಯ ಮೂಲದ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಮೆರಿಕಾದಲ್ಲಿಯೇ ಬದುಕು ಕಟ್ಟಿಕೊಂಡಿರುವ ಭಾರತೀಯ ಮೂಲದವರ ಹಿತ ರಕ್ಷಣೆಯ ಕುರಿತಾಗಿಯೂ ಚರ್ಚೆಗಳಾದವು. ನಮ್ಮ ಹಿತ ಕಾಪಾಡುವವರು ಅಧ್ಯಕ್ಷರಾಗಬೇಕು ಎನ್ನುವ ಅಭಿಪ್ರಾಯಗಳು ಗಟ್ಟಿಯಾಗಿಯೇ ಕೇಳಿ ಬಂದವು.
  7. ಜಗತ್ತಿನ ಹಲವು ದೇಶಗಳಲ್ಲಿ ಯುದ್ದದ ಸ್ಥಿತಿ ಈಗಲೂ ಇದೆ. ಹಲವಾರು ದೇಶಗಳ ನಡುವೆ ಸಂಘರ್ಷಗಳೂ ಇವೆ. ಇಂತಹ ಸನ್ನಿವೇಶಲ್ಲಿ ಹಿರಿಯಣ್ಣಂತೆಯೇ ಇರುವ ಅಮೆರಿಕಾದ ವಿದೇಶಾಂಗ ನೀತಿಯೂ ಇನ್ನಷ್ಟು ಗಟ್ಟಿಯಾಗಬೇಕು. ಬಲಪಡಿಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂಬ ಸಲಹೆಗಳೂ ವ್ಯಕ್ತವಾದವು.
  8. ಜಗತ್ತನ್ನು ಈಗ ಕಾಡುತ್ತಿರುವುದಲ್ಲಿ ಹವಾಮಾನ ಬದಲಾವಣೆಯೂ ಪ್ರಮುಖವಾದದ್ದೇ. ಇದು ಅಮೆರಿಕಾವನ್ನೂ ಬಿಟ್ಟಿಲ್ಲ. ಹವಾಮಾನ ವೈಪರಿತ್ಯಗಳಿಂದ ಆಹಾರ ಉತ್ಪಾದನೆ, ಬದುಕಿನ ಮೇಲೂ ಪರಿಣಾಮವಾಗುತ್ತಿರುವುದರಿಂದ ಇದನ್ನೂ ಪ್ರಮುಖ ಆದ್ಯತೆಯಾಗಿ ಪರಿಗಣಿಸಬೇಕು ಎಂಬ ಚರ್ಚೆಗಳಾದವು.
  9. ಅಮೆರಿಕಾದಲ್ಲೂ ಅಪರಾಧದ ಪ್ರಮಾಣ ಕಡಿಮೆಯೇನಿಲ್ಲ. ಸಂಘಟಿತ ಹಾಗೂ ಹಿಂಸಾತ್ಮಕ ಅಪರಾಧಗಳು ಹೆಚ್ಚುತ್ತಿರುವುದು ಅಮೆರಿಕಾದಂತಹ ದೇಶಕ್ಕೆ ಕಪ್ಪು ಚುಕ್ಕೆಯಾಗುತ್ತಿವೆ. ಇದನ್ನು ತಗ್ಗಿಸುವ ಕ್ರಮಗಳೂ ತುರ್ತಾಗಿ ಆಗಬೇಕು ಎಂಬ ಸಲಹೆಗಳನ್ನು ಚುನಾವಣೆ ವೇಳೆ ಅಮೆರಿಕಾ ಮತದಾರರು ವ್ಯಕ್ತಪಡಿಸಿದ್ದಾರೆ.
  10. ಅಮೆರಿಕದಲ್ಲಿ ಜನಾಂಗೀಯ ಭಿನ್ನಾಭಿಪ್ರಾಯಗಳು ಈಗಲೂ ಇವೆ. ಬಿಳಿಯರು ಹಾಗೂ ಕರಿಯರ ನಡುವೆ ಇರುವ ಸೂಕ್ಷ್ಮ ವಿಚಾರಗಳ ಕುರಿತು ಚುನಾವಣೆ ಬಂದಾಗ ಚರ್ಚೆಗಳು ಆಗುತ್ತವೆ. ಈ ಬಾರಿಯೂ ಇದು ಕೂಡ ಅಲ್ಲಲ್ಲಿ ಚರ್ಚೆಗೆ ಬಂದಿದ್ದೂ ಇದೆ.

     

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ