ಜಗತ್ತನ್ನು ಬಲಿಕೊಟ್ಟರೂ ಅಮೆರಿಕ, ತನ್ನ ಹೂಡಿಕೆ ವೃದ್ಧಿ ಮುಖ್ಯ ಎನ್ನುವ ಮಹಾನ್ ಸ್ವಾರ್ಥಿ ಡೊನಾಲ್ಡ್ ಟ್ರಂಪ್: ರಂಗಸ್ವಾಮಿ ಮೂಕನಹಳ್ಳಿ ಬರಹ
Nov 06, 2024 04:45 PM IST
ಡೊನಾಲ್ಡ್ ಟ್ರಂಪ್
- ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಫಲಿತಾಂಶ ಹೊರ ಬಿದಿದ್ದು, ಡೋನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟ್ರಂಪ್ ಗೆದ್ದಿದ್ದಕ್ಕೆ ಭಾರತದಲ್ಲೂ ಕೆಲವರು ಸಂಭ್ರಮಿಸುತ್ತಿದ್ದಾರೆ. ಟ್ರಂಪ್ ಎನ್ನುವ ಮಹಾಸ್ವಾರ್ಥಿ ಗೆಲುವು ಸಾಧಿಸಿರುವುದರಿಂದ ನಮಗೇನು ದಕ್ಕುತ್ತದೆ ಎಂದು ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ.
ಡೋನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ಟ್ರಂಪ್ ಗೆದಿದ್ದು ಅಮೆರಿಕದಲ್ಲಾದರೂ ಭಾರತದಲ್ಲಿ ಕೆಲವು ಆತನ ಗೆಲುವನ್ನ ಸಂಭ್ರಮಿಸುತ್ತಿದ್ದಾರೆ.
ಆದರೆ ಜಗತ್ತನ್ನು ಬಲಿಕೊಟ್ಟರೂ ಅಮೆರಿಕ, ತನ್ನ ಹೂಡಿಕೆ ವೃದ್ಧಿ ಮುಖ್ಯ ಎನ್ನುವ ಮಹಾನ್ ಸ್ವಾರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ನಾವೇಕೆ ಸಂಭ್ರಮಿಸಬೇಕು ಎಂದು ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್ ಬರಹದಲ್ಲಿ ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್, ಟ್ರಂಪ್ ಯಾರೇ ಗೆದ್ದರೂ ಭಾರತದಲ್ಲಿ ಯಾವುದೇ ರೀತಿ ಬದಲಾವಣೆಯಾಗುವುದಿಲ್ಲ, ಆದರೂ ಟ್ರಂಪ್ ಗೆಲುವಿಗೆ ಸಂಭ್ರಮಿಸುತ್ತಿರುವ ಭಾರತೀಯರ ಮನಸ್ಥಿತಿಯ ಬಗ್ಗೆ ರಂಗಸ್ವಾಮಿ ಅವರ ಬರಹದಲ್ಲಿ ನೀವೂ ಓದಿ.
ರಂಗಸ್ವಾಮಿ ಮೂಕನಹಳ್ಳಿ ಬರಹ
ನನಗೆ ನಮ್ಮ ಜನರ ಭಾವುಕತೆ ಕಂಡು ಏನು ಹೇಳುವುದು ಗೊತ್ತಾಗುತ್ತಿಲ್ಲ. ಕಮಲಕ್ಕ ಗೆದ್ದಿದ್ದರೆ, ಅಮೆರಿಕ ದೇಶ ಕಂಡ ಪ್ರಥಮ ಮಹಿಳಾ ಅಧ್ಯಕ್ಷೆ ಭಾರತ ಮೂಲದವರು ಎಂದು ಒಂದಷ್ಟು ಜನ ತುಳಸಿ ಹಬ್ಬಕ್ಕೆ ತೆಗೆದಿರಿಸಿದ್ದ ಪಟಾಕಿ ಇವತ್ತು ಹೊಡೆದು ಒಂದು ವರ್ಗದ ಜನರ ಹೊಟ್ಟೆ ಉರಿಸುತ್ತಿದ್ದರು.
ಈಗ ನೋಡಿ ಟ್ರಂಪ್ ಗೆದ್ದಿದ್ದಾರೆ! ಆತನ ಶರ್ಟ್ ಕೇಸರಿ ಬಣ್ಣಕ್ಕೆ ತಿರುಗಿಸಿ ಒಂದಷ್ಟು ಜನ ಇನ್ನೊಂದು ವರ್ಗದ ಜನರ ಹೊಟ್ಟೆ ಉರಿಸುತ್ತಿದ್ದಾರೆ.
ನಗಬೇಕೋ ,ಅಳಬೇಕೊ ತಿಳಿಯುತ್ತಿಲ್ಲ. ಕಮಲಕ್ಕ ನಾನು ಭಾರತದ ಮೂಲದವಳು ಎಂದು ಒಪ್ಪಿಕೊಳ್ಳಲು ಸಿದ್ದವಿಲ್ಲ! ಟ್ರಂಪ್ ಅಮೆರಿಕ ಫಸ್ಟ್ ಎನ್ನುವ ತೀವ್ರ ರಾಷ್ಟೀಯವಾದಿ, ಜಗತ್ತನ್ನು ಬಲಿ ಕೊಟ್ಟಾದರೂ ಅಮೆರಿಕ ಮತ್ತು ಆತನ ಹೂಡಿಕೆ ವೃದ್ಧಿ ಮಾಡಿಕೊಳ್ಳುವ ಮಹಾನ್ ಸ್ವಾರ್ಥಿ.
ಅಲ್ಲಿ ಯಾರೇ ಗೆದ್ದರೂ ನಮ್ಮ ಬವಣೆ ತಪ್ಪುವುದಿಲ್ಲ. ಅತ್ತ ದರಿ, ಇತ್ತ ಪುಲಿ ಹೀಗಿದ್ದೂ ಭಾರತದಲ್ಲಿ ಮಾತ್ರ ಸಂಭ್ರಮ ತಪ್ಪಿದ್ದಲ್ಲ!
ಕಳೆದ ಒಂದು ಗಂಟೆ ಹಿಂದೆ ರಂಗಸ್ವಾಮಿ ಈ ಪೋಸ್ಟ್ ಹಾಕಿದ್ದು, ಈಗಾಗಲೇ 60ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮುರಳಿ ಶಾಸ್ತ್ರಿ ಎನ್ನುವವರು ರಂಗಸ್ವಾಮಿ ಅವರ ಬರಹಕ್ಕೆ ಕಾಮೆಂಟ್ ಹಾಕಿದ್ದು ‘ ಇದೆ ಮಾತು ಹೇಳಿದ್ರೆ..ಟ್ರಂಪ್ ಗೆದ್ದರೂ ನಮಗೇನು ಕಿರೀಟ ಕೊಡಲ್ಲ .ಅವರ ದೇಶಕ್ಕೆ ಅವರು ಒಳಿತು ಮಾಡೋಕೆ ನೋಡೋದು..ಅವರು ಉಗ್ರ ರಾಷ್ಟ್ರೀಯವಾದಿ ಅದಂತೂ ಸತ್ಯ ಜೊತೆಗೆ ವ್ಯವಹಾರಸ್ಥರು.. ನಮ್ಮ ಜನ ಅದ್ಯಾಕೆ ಇದಕ್ಕೆಲ್ಲಾ ಓವರ್ ರಿಯಾಕ್ಟ್ ಮಾಡ್ತಾರೆ ನನಗೂ ಒಮ್ಮೊಮ್ಮೆ ನಗು ತರಿಸುತ್ತೆ‘ ಎಂದಿದ್ದಾರೆ.