logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಉತ್ತರ ಪ್ರದೇಶ ಫಲಿತಾಂಶ; 80 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಮಿತ್ರ ಪಕ್ಷಕ್ಕೆ36, ಎಸ್‌ಪಿ ಇಂಡಿಯಾ ಮೈತ್ರಿಗೆ 43, ವಿವರ ಇಲ್ಲಿದೆ.

ಉತ್ತರ ಪ್ರದೇಶ ಫಲಿತಾಂಶ; 80 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಮಿತ್ರ ಪಕ್ಷಕ್ಕೆ36, ಎಸ್‌ಪಿ ಇಂಡಿಯಾ ಮೈತ್ರಿಗೆ 43, ವಿವರ ಇಲ್ಲಿದೆ.

Umesh Kumar S HT Kannada

Jun 05, 2024 10:58 AM IST

google News

ಉತ್ತರ ಪ್ರದೇಶ ಫಲಿತಾಂಶ; 80 ಲೋಕಸಭಾ ಸ್ಥಾನಗಳ ಪೈಕಿ ಎಸ್‌ಪಿ ಇಂಡಿಯಾ ಮೈತ್ರಿಗೆ 43 ಸ್ಥಾನಗಳಲ್ಲಿ, ಬಿಜೆಪಿ ಮಿತ್ರ ಪಕ್ಷಕ್ಕೆ 36 ಗೆಲುವು ಸಿಕ್ಕಿದೆ.

  • ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಯಾವ ಪಕ್ಷ, ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ ಎಂಬ ಕುತೂಹಲ ಸಹಜ. ಉತ್ತರ ಪ್ರದೇಶ ಫಲಿತಾಂಶ ಪ್ರಕಾರ ಈ ವರೆಗೆ 80 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಮಿತ್ರ ಪಕ್ಷಕ್ಕೆ 36, ಎಸ್‌ಪಿ ಇಂಡಿಯಾ ಮೈತ್ರಿಗೆ 43. ವಿವರ ಇಲ್ಲಿದೆ.

ಉತ್ತರ ಪ್ರದೇಶ ಫಲಿತಾಂಶ; 80 ಲೋಕಸಭಾ ಸ್ಥಾನಗಳ ಪೈಕಿ ಎಸ್‌ಪಿ ಇಂಡಿಯಾ ಮೈತ್ರಿಗೆ 43 ಸ್ಥಾನಗಳಲ್ಲಿ, ಬಿಜೆಪಿ ಮಿತ್ರ ಪಕ್ಷಕ್ಕೆ 36 ಗೆಲುವು ಸಿಕ್ಕಿದೆ.
ಉತ್ತರ ಪ್ರದೇಶ ಫಲಿತಾಂಶ; 80 ಲೋಕಸಭಾ ಸ್ಥಾನಗಳ ಪೈಕಿ ಎಸ್‌ಪಿ ಇಂಡಿಯಾ ಮೈತ್ರಿಗೆ 43 ಸ್ಥಾನಗಳಲ್ಲಿ, ಬಿಜೆಪಿ ಮಿತ್ರ ಪಕ್ಷಕ್ಕೆ 36 ಗೆಲುವು ಸಿಕ್ಕಿದೆ.

ಲಖನೌ: ಲೋಕಸಭಾ ಚುನಾವಣೆ ಎಂದು ಬಂದಾಗ ಪಕ್ಷಗಳು ಹೆಚ್ಚು ಸ್ಥಾನಗಳಿರುವ ರಾಜ್ಯಗಳ ಕಡೆಗೆ ಗಮನಕೇಂದ್ರೀಕರಿಸುವುದು ವಾಡಿಕೆ. ಅತಿದೊಡ್ಡ ರಾಜ್ಯವೆನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳಿವೆ. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 36 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸಮಾಜವಾದಿ ಪಾರ್ಟಿ- ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ 43 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಆ ಮೂಲಕ ಬಿಜೆಪಿಗೆ ಭರ್ಜರಿ ತಿರುಗೇಟು ನೀಡಿದೆ.

ಉತ್ತರ ಪ್ರದೇಶದಲ್ಲಿ ಈ ಸಲದ ಲೋಕಸಭಾ ಚುನಾವಣೆಗೆ ಆರು ಹಂತಗಳಲ್ಲಿ (ಏಪ್ರಿಲ್ 19, ಏಪ್ರಿಲ್ 26, ಮೇ 7, ಮೆ 13, ಮೇ 20, ಮೇ 25, ಜೂನ್ 1) ಮತದಾನ ನಡೆಯಿತು. 80 ಕ್ಷೇತ್ರಗಳ ಪೈಕಿ ಬಿಜೆಪಿ ಈ ಬಾರಿ 74 ಸ್ಥಾನಗಳಲ್ಲಿ ಮಿತ್ರ ಪಕ್ಷಗಳಾದ ನಿಷಾದ್ 1, ಅಪ್ನಾ ದಳ (ಸೋನೇಲಾಲ್‌) 2, ರಾಷ್ಟ್ರೀಯ ಲೋಕ ದಳ 2, ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ 1 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

ಇಂಡಿಯಾ (Indian National Developmental Inclusive Alliance) ಗುಂಪಿನ ಪಕ್ಷಗಳ ಪೈಕಿ ಸಮಾಜವಾದಿ ಪಾರ್ಟಿ (ಎಸ್‌ಪಿ) ಹೆಚ್ಚು ಸ್ಥಾನಗಳಲ್ಲಿ ಅಂದರೆ 62 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ಪಕ್ಷ 17, ಟಿಎಂಸಿ 1 ಸ್ಥಾನದಲ್ಲಿ ಸ್ಪರ್ಧಿಸಿವೆ.

ಈ ಎರಡು ಮೈತ್ರಿಗಳಲ್ಲದೇ ಇಲ್ಲಿ ಬಿಚಡಾ ದಲಿತ್ ಮುಸ್ಲಿಂ ಅಲಯನ್ಸ್ (Bichda Dalit Muslman Alliance) ಮೂರನೇ ಮೈತ್ರಿಯೊಂದು ರೂಪುಗೊಂಡಿದೆ. ಇದರಲ್ಲಿ ಅಪ್ನಾ ದಳ್ (ಕಾಮೇರವಾಡಿ) 14 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ಇದಲ್ಲದೆ ಉತ್ತರ ಪ್ರದೇಶವನ್ನು ಹಿಂದೊಮ್ಮೆ ಆಳಿದ್ದ ಬಹುಜನ ಸಮಾಜ ಪಕ್ಷ 79 ಸ್ಥಾನಗಳಲ್ಲಿ, ಆಜಾದ್ ಸಮಾಜ್ ಪಾರ್ಟಿ (ಕಾನ್ಶೀರಾಂ ) 8 ಸ್ಥಾನಗಳಲ್ಲಿ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ 5 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ಲೋಕಸಭಾ ಚುನಾವಣೆ 2024; ಉತ್ತರ ಪ್ರದೇಶದಲ್ಲಿ ಚುನಾವಣಾ ವಿಷಯಗಳಾಗಿದ್ದ ಅಂಶಗಳಿವು

ಕಳೆದ ಲೋಕಸಭಾ ಚುನಾವಣೆಗೂ ಈಗಿನ ಚುನಾವಣೆಗೂ ನಡುವೆ ರಾಜಕೀಯ ಸಮೀಕರಣಗಳ ಚಿತ್ರಣ ಬದಲಾಗಿದೆ. ಯುಪಿಎ ಮೈತ್ರಿ ಇಂಡಿಯಾ ಗುಂಪಾಗಿ ಬದಲಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎಗೆ ಇನ್ನೂ ಕೆಲವು ಸಣ್ಣಪುಟ್ಟ ಪಾರ್ಟಿಗಳು ಸೇರಿಕೊಂಡವು. ಇವೆಲ್ಲದರ ನಡುವೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಅಭಿಯಾನದಲ್ಲಿ ಗಮನಸೆಳೆದ ಪ್ರಚಾರದ ಅಂಶಗಳಿವು.

ಬಿಜೆಪಿ ನೇತೃತ್ವದ ಎನ್‌ಡಿಎ ನಡೆಸಿ ಪ್ರಚಾರ ಅಭಿಯಾನವು ಧರ್ಮ, ರಾಷ್ಟ್ರೀಯತೆ, ಆಡಳಿತ ಮತ್ತು ತಳಮಟ್ಟದಲ್ಲಿಉತ್ತಮವಾದ ಸಂಘಟನಾತ್ಮಕ ಜಾಲದೊಂದಿಗೆ ಹೆಣೆದುಕೊಂಡಿತ್ತು.

ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 31 ರಂದು, "ನೀವು ಇಲ್ಲಿಯವರೆಗೆ ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರ ನೋಡಿದ್ದೀರಿ. "ಈ ಚುನಾವಣೆಯು ಕೇವಲ ಸರ್ಕಾರವನ್ನು ಆಯ್ಕೆ ಮಾಡಲು ಅಲ್ಲ, ಆದರೆ 'ವಿಕಸಿತ ಭಾರತ' ರಚಿಸುವುದಕ್ಕಾಗಿ ಇರುವಂಥದ್ದು" ಎಂದು ಹೇಳುತ್ತ ಉತ್ತರ ಪ್ರದೇಶದ ಮೀರತ್‌ನಿಂದ ಬಿಜೆಪಿಯ ಪ್ರಚಾರವನ್ನು ಪ್ರಾರಂಭಿಸಿದರು. ಚುನಾವಣಾ ಪ್ರಚಾರ ಮುಂದುವರೆದಂತೆ ಬಿಜೆಪಿಯು ‘ಮೋದಿ ವರ್ಸಸ್ ಯಾರು? ಎಂಬ ನಿರೂಪಣೆಯನ್ನು ಅತ್ಯಂತ ತಂತ್ರಪೂರ್ವಕವಾಗಿ ಮತದಾರರ ಮುಂದಿರಿಸಿತು. ಗೆಲ್ಲಿಸುವುದಾದರೆ ಮೋದಿಯನ್ನೇ ಎಂಬ ಉತ್ತರವನ್ನೂ ಮತದಾರರ ಮನಸ್ಸಿನಲ್ಲಿ ಅಚ್ಚೊತ್ತುವುದಕ್ಕೆ ಪ್ರಯತ್ನಿಸಿತು. ಮೋದಿ ಕಿ ಗ್ಯಾರೆಂಟಿ ಪ್ರಣಾಳಿಕೆ, ಅಬ್ ಕೀ ಬಾರ್ 400 ಪಾರ್‌ ಘೋಷಣೆ ಕೂಡ ಗಮನಸೆಳೆಯಿತು.

ಮತ್ತೊಂದೆಡೆ, ವಿರೋಧ ಪಕ್ಷವು ಛಿದ್ರವಾಗಿದ್ದರೂ, ಮೈತ್ರಿ ಒಕ್ಕೂಟವಾಗಿ ಧ್ವನಿಯನ್ನು ಹೊಂದಿದೆ. ದೇಶದ ಆರ್ಥಿಕ ಆತಂಕ, ಅಧಿಕಾರ-ವಿರೋಧಿ ಮತ್ತು ಸುದೀರ್ಘ ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಬುನಾದಿ ಕುಸಿತದ ಬಗ್ಗೆ ಕಾಳಜಿ ಮುಂತಾದ ಆದ್ಯತೆ ವಿಷಯಗಳ ಮೇಲೆ ತನ್ನ ಪ್ರಚಾರವನ್ನು ಕೇಂದ್ರೀಕರಿಸಿತು. ಜಾತಿ ಗಣತಿ ವಿಚಾರವು ಪ್ರಚಾರಕ್ಕೆ ಬಲತುಂಬಿತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪ್ರಮುಖ ಸಮ್ಮಿಶ್ರ ಪಾಲುದಾರರಾಗಿ ಉಳಿದಿವೆ.

ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ “ಸಂವಿಧಾನ ಉಳಿಸಲು ಇಂಡಿಯಾ ಬ್ಲಾಕ್‌ಗೆ ಮತ ಚಲಾಯಿಸಿ” ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇಲ್ಲಿ ಸಂವಿಧಾನದ ಸಣ್ಣ ಪ್ರತಿಯನ್ನು ಹಿಡಿದೇ ಪ್ರಚಾರ ಮಾಡಿದರು.

ಉತ್ತರ ಪ್ರದೇಶದ ಹೈಪ್ರೊಫೈಲ್ ಕ್ಷೇತ್ರಗಳಿವು

ವಾರಾಣಸಿ - ಪ್ರಧಾನಿ ನರೇಂದ್ರ ಮೋದಿ

ಲಖನೌ- ರಾಜನಾಥ ಸಿಂಗ್‌

ಅಮೇಥಿ - ಸ್ಮೃತಿ ಇರಾನಿ

ರಾಯ್‌ ಬರೇಲಿ- ರಾಹುಲ್ ಗಾಂಧಿ

ಕನ್ನೌಜ್ - ಅಖಿಲೇಶ್ ಯಾದವ್

ಮೈನ್‌ಪುರಿ - ಡಿಂಪಲ್ ಯಾದವ್

ಚಂದೌಲಿ- ಮಹೇಂದ್ರನಾಥ್ ಪಾಂಡೆ

ಮಿರ್ಜಾಪುರ- ಅನುಪ್ರಿಯಾ ಪಟೇಲ್‌

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ, ಮತ ಎಣಿಕೆ ವಿಚಾರ

ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ 81 ಮತ ಎಣಿಕೆ ಕೇಂದ್ರಗಳಲ್ಲಿ ಇಂದು (ಜೂನ್ 4 ) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಉತ್ತರ ಪ್ರದೇಶದಲ್ಲಿ 56.92 ರಷ್ಟು ಮತದಾನವಾಗಿದ್ದು, ಇದು 2019 ರ ಮತದಾನಕ್ಕಿಂತ ಎರಡು ಶೇಕಡಾ ಕಡಿಮೆ. ರಾಜ್ಯದ 75 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ 81 ಮತ ಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ತಿಳಿಸಿದ್ದಾರೆ.

ಒಟ್ಟು 851 ಅಭ್ಯರ್ಥಿಗಳಿದ್ದು, ಈ ಪೈಕಿ 771 ಪುರುಷರು ಮತ್ತು 80 ಮಹಿಳೆಯರು . ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಘೋಸಿ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ 28 ಮತ್ತು ಕೈಸರ್‌ಗಂಜ್‌ನಲ್ಲಿ ಕನಿಷ್ಠ ನಾಲ್ವರು ಅಭ್ಯರ್ಥಿಗಳಿದ್ದಾರೆ.

2019ರಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 78 ಮತ್ತು ಅಪ್ನಾ ದಳ್ (ಸೋನೇಲಾಲ್‌ ) 2 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಪೈಕಿ ಬಿಜೆಪಿ 62 ಮತ್ತು ಅಪ್ನಾ ದಳ (ಸೋನೇಲಾಲ್ ) 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಇನ್ನೊಂದಡೆ, ಮಹಾಗಟಬಂಧನ್ ರಚಿಸಿಕೊಂಡ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 38, ಸಮಾಜವಾದಿ ಪಾರ್ಟಿ 37, ರಾಷ್ಟ್ರೀಯ ಲೋಕದಳ 3 ಸೇರಿ 78 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಬಿಎಸ್‌ಪಿ 10, ಎಸ್‌ಪಿ 5 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. ಇನ್ನು ಕಾಂಗ್ರೆಸ್ ಮತ್ತು ಜನ್ ಅಧಿಕಾರ್ ಪಾರ್ಟಿ ಮಾತ್ರ ಇದ್ದ ಯುಪಿಎನಲ್ಲಿ ಕಾಂಗ್ರೆಸ್‌ 67, ಜನ್ ಅಧಿಕಾರ್ ಪಾರ್ಟಿ 3 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 1 ಸ್ಥಾನದಲ್ಲಷ್ಟೆ ಗೆಲುವು ಕಂಡಿತ್ತು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ