logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viagra Tablets With Alcohol: ಡ್ರಿಂಕ್ಸ್‌ ಜತೆಗೆ ವಯಾಗ್ರ ತಗೊಳ್ಬೇಡಿ- ಸೆಕ್ಸ್‌ ಮಾಡೋದು ಬಿಡಿ ಪ್ರಾಣ ಕೂಡ ಉಳಿಯಲ್ಲ ಅಂತಾರೆ ಸಂಶೋಧಕರು

Viagra tablets with alcohol: ಡ್ರಿಂಕ್ಸ್‌ ಜತೆಗೆ ವಯಾಗ್ರ ತಗೊಳ್ಬೇಡಿ- ಸೆಕ್ಸ್‌ ಮಾಡೋದು ಬಿಡಿ ಪ್ರಾಣ ಕೂಡ ಉಳಿಯಲ್ಲ ಅಂತಾರೆ ಸಂಶೋಧಕರು

HT Kannada Desk HT Kannada

Mar 07, 2023 07:20 PM IST

ಸಾಂಕೇತಿಕ ಚಿತ್ರ

  • Viagra tablets with alcohol: ಅಚ್ಚರಿ ಮೂಡಿಸುವಂತಹ ವಿರಳ ಪ್ರಕರಣ ಇದು. ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮದ್ಯಪಾನ ಮಾಡುವಾಗ ಎರಡು ವಯಾಗ್ರ ಮಾತ್ರೆ ಸೇವಿಸಿದ ವ್ಯಕ್ತಿ ಮಾರನೇ ದಿನವೇ ಮೃತಪಟ್ಟ. ಈ ಕುರಿತು ಡಾಕ್ಟರ್ಸ್‌ ಏನು ಹೇಳಿದ್ದಾರೆ? ಇಲ್ಲಿದೆ ವಿವರ. 

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (Live Hindustan)

ನಾಗಪುರದ 41 ವರ್ಷದ ವ್ಯಕ್ತಿ ತನ್ನ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಮದ್ಯಪಾನ ಮಾಡುವಾಗ ಎರಡು ವಯಾಗ್ರ ಗುಳಿಗೆಯನ್ನು ಸೇವಿಸಿದ್ದರು. ಮಾರನೇ ದಿನವೇ ಆತ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಯಾವುದೇ ರೋಗ ಇತಿಹಾಸ ಇಲ್ಲದ ಕಾರಣ, ದಿಢೀರ್‌ ಸಂಭವಿಸಿದ ಮರಣ ವೈದ್ಯಲೋಕದ ಕುತೂಹಲ ಕೆರಳಿಸಿತ್ತು.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಭಾರತೀಯ ಸಂಶೋಧಕರ ಗುಂಪೊಂದು ಈ ಪ್ರಕರಣದ ಅಧ್ಯಯನ ನಡೆಸಿತು. ಈ ಅಧ್ಯಯನ ವರದಿ ಪ್ರಕಾರ, ಆ ವ್ಯಕ್ತಿಯು ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುವ ವಯಾಗ್ರದ ಎರಡು ಗುಳಿಗೆಯನ್ನು ಮದ್ಯದ ಜತೆಗೆ ಸೇವಿಸಿದ್ದ. ಇದು ಆತನ ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಿದುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಮಾರನೇ ದಿನವೇ ಆತ ಮೃತಪಟ್ಟಿದ್ದ.

ನವದೆಹಲಿಯ ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಆರು ಸಂಶೋಧಕರ ಗುಂಪು ಪೀರ್-ರಿವ್ಯೂಡ್ ಜರ್ನಲ್ ಆಫ್ ಫೋರೆನ್ಸಿಕ್ ಮತ್ತು ಲೀಗಲ್ ಮೆಡಿಸಿನ್‌ಗೆ ಸಲ್ಲಿಸಿದ ಕೇಸ್‌ ಸ್ಟಡಿ ರಿಪೋರ್ಟ್‌ನಲ್ಲಿ ಈ ಕುರಿತ ವಿವರಗಳನ್ನು ಬಹಿರಂಗಪಡಿಸಿದೆ. ಸಂಶೋಧಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮ್ಮ ಸಂಶೋಧನಾ ವರದಿಯನ್ನು ಸಲ್ಲಿಸಿದ್ದರು. ಈ ವಾರ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾದ ಅವರ ಕೇಸ್‌ ರಿಪೋರ್ಟ್‌ ಪ್ರಸ್ತುತ ಪ್ರೀ- ಪ್ರೂಫ್ ಹಂತದಲ್ಲಿದೆ, ಅಂದರೆ ಅದನ್ನು ಪ್ರಕಟಣೆಗಾಗಿ ಸ್ವೀಕರಿಸಲಾಗಿದೆ. ಆದರೆ ಜರ್ನಲ್‌ನ ಮುದ್ರಣ ಪ್ರತಿಯಲ್ಲಿ ಪ್ರಕಟಿಸುವ ಮೊದಲು ಕೆಲವು ಮಾರ್ಪಾಡುಗಳು ಆಗುವ ಸಾಧ್ಯತೆ ಇದೆ.

ಕೇಸ್‌ ರಿಪೋರ್ಟ್‌ನಲ್ಲಿರುವ ಪ್ರಕಾರ, 41 ವರ್ಷದ ವ್ಯಕ್ತಿಗೆ ಯಾವುದೇ ಗಮನಾರ್ಹ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಇತಿಹಾಸವಿಲ್ಲ. ಆತ ಸಂಗಾತಿಯೊಂದಿಗೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿ ಆತ ಎರಡು 50 ಮಿಲಿಗ್ರಾಂನ ಸಿಲ್ಡೆನಾಫಿಲ್ ಮಾತ್ರೆಗಳನ್ನು ಸೇವಿಸಿದ್ದ. ಈ ಗುಳಿಗೆಗಳು ವಯಾಗ್ರಾ ಬ್ರಾಂಡ್‌ನಲ್ಲಿ ಲಭ್ಯವಿದೆ. ಮದ್ಯಪಾನದ ಜತೆಗೆ ಇದನ್ನು ಆತ ಸೇವಿಸಿದ್ದ.

ಮಾರನೇ ದಿನ ವ್ಯಕ್ತಿ ಅಸ್ವಸ್ಥತೆಯನ್ನು ಅನುಭವಿಸಿದ್ದ. ಕೂಡಲೇ ಆತನನ್ನು ಹೋಟೆಲ್‌ನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕರೆದೊಯ್ಯುವ ವೇಳೆಗೆ ಆತ ಮೃತಪಟ್ಟಿರುವುದಾಗಿ ಡಾಕ್ಟರ್‌ಗಳು ಘೋಷಿಸಿದ್ದರು. ನಂತರ ನಡೆಸಿದ ವೈದ್ಯಕೀಯ ಪರೀಕ್ಷೆ ಪ್ರಕಾರ, ಮಿದುಳಿನಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ ವ್ಯಕ್ತಿ ಮೃತಪಟ್ಟಿರುವುದಾಗಿ ದೃಢೀಕರಿಸಲಾಗಿತ್ತು. ಶವ ಪರೀಕ್ಷೆ ನಡೆಸಿದಾಗ, ಮಿದುಳಿನಲ್ಲಿ 300 ಗ್ರಾಂ ಹೆಪ್ಪುಗಟ್ಟಿದ ರಕ್ತ ಪತ್ತೆಯಾಗಿತ್ತು. ಅದೇ ರೀತಿ ಹೃದಯದ ಕವಾಟಗಳು ದಪ್ಪವಾಗಿದ್ದವು. ಯಕೃತು ಮತ್ತು ಮೂತ್ರಪಿಂಡಗಳು ಹಾನಿಯಾಗಿರುವುದು ಕಂಡುಬಂದಿತ್ತು.

ಸಿಲ್ಡೆನಾಫಿಲ್ ಮತ್ತು ಆಲ್ಕೋಹಾಲ್ನ ಸಂಯೋಜಿತ ಬಳಕೆಯಿಂದಾಗಿಸೆರೆಬ್ರೊವಾಸ್ಕುಲರ್ ಅಪಘಾತಗಳು (ಮಿದುಳಿಗೆ ರಕ್ತದ ಹರಿವಿನ ತೊಂದರೆ) ಸೇರಿ ಮಾರಕ ತೊಡಕುಗಳು ಉಂಟಾಗುತ್ತವೆ. ಈ ವಿಚಾರದ ಬಗ್ಗೆ ಕೇಸ್‌ ರಿಪೋರ್ಟ್‌ನಲ್ಲಿ ಚರ್ಚಿಸಲಾಗಿದೆ.

ಕೊನೆಯ ಮಾತು: ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ವಯಾಗ್ರ ಬಳಸಬಾರದು. ಇದನ್ನು ಬಳಸುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾದ ಅಗತ್ಯ ಇದೆ ಎಂದು ಕೇಸ್‌ ರಿಪೋರ್ಟ್‌ ಷರಾ ಬರೆದಿದೆ.

ಗಮನಿಸಬಹುದಾದ ಸುದ್ದಿ

ದೇಶ ಹಿತಕ್ಕೆ ಮಾರಕ ಈ ಚೀನೀ ಮೊಬೈಲ್‌ಗಳು; ಡಿಫೆನ್ಸ್ ಇಂಟೆಲಿಜೆನ್ಸ್‌ ಪಟ್ಟಿಯಲ್ಲಿ ಯಾವುದೆಲ್ಲ ಇದೆ?

ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ ರವಾನಿಸಿರುವ ಸಂದೇಶದ ಪ್ರಕಾರ, ಸೇನಾ ಯೋಧರು ಮತ್ತು ಸೇನೆಯಲ್ಲಿ ಕೆಲಸ ಮಾಡುವವರು ಚೀನಾ ನಿರ್ಮಿತ ಮೊಬೈಲ್‌ ಹ್ಯಾಂಡ್‌ಸೆಟ್‌ ಬಳಸಬಾರದು. ಅವುಗಳ ಬಳಕೆ ದೇಶದ ಸುರಕ್ಷಾ ದೃಷ್ಟಿಯಿಂದ ಹಿತವಾದುದಲ್ಲ ಎಂಬ ಸಂದೇಶ ಸೇನಾ ವಲಯದಲ್ಲಿ ರವಾನೆಯಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು