logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Valet Robots: ಚೀನಾದಲ್ಲಿ ಸಿಕ್ಕ ಸಿಕ್ಕಲ್ಲಿ ವಾಹನ ಪಾರ್ಕ್‌ ಮಾಡಿದ್ರೆ ಎತ್ಕೊಂಡು ಹೋಗೋದಕ್ಕೆ ವ್ಯಾಲೆಟ್ ರೊಬೋಟ್ ಬರ್ತಾವೆ

Valet Robots: ಚೀನಾದಲ್ಲಿ ಸಿಕ್ಕ ಸಿಕ್ಕಲ್ಲಿ ವಾಹನ ಪಾರ್ಕ್‌ ಮಾಡಿದ್ರೆ ಎತ್ಕೊಂಡು ಹೋಗೋದಕ್ಕೆ ವ್ಯಾಲೆಟ್ ರೊಬೋಟ್ ಬರ್ತಾವೆ

HT Kannada Desk HT Kannada

Nov 08, 2023 05:11 PM IST

google News

ವ್ಯಾಲೆಟ್ ರೊಬೋಟ್ ಕಾರನ್ನು ಸಾಗಿಸುವ ವಿಡಿಯೋದ ಸ್ಕ್ರೀನ್ ಶಾಟ್ ಇಮೇಜ್

  • ಸಿಕ್ಕ ಸಿಕ್ಕಲ್ಲಿ ವಾಹನ ಪಾರ್ಕ್ ಮಾಡಿ ಹೋಗುವ ಅಭ್ಯಾಸ ಹಲವರದ್ದು. ಸಂಚಾರ ಪೊಲೀಸರಿಗೆ ಇದು ದೊಡ್ಡ ತಲೆನೋವು. ಸಂಚಾರ ದಟ್ಟಣೆ ನಿರ್ವಹಣೆಗೆ ಇದು ಸವಾಲು ಕೂಡ ಹೌದು. ದಂಡ ವಿಧಿಸುವುದು, ಚಕ್ರಕ್ಕೆ ಕ್ಲ್ಯಾಂಪ್ ಸಿಕ್ಕಿಸುವುದು ಸಂಚಾರ ದಟ್ಟಣೆ ಸುಗಮಗೊಳಿಸಲು ನೆರವಾಗುವುದಿಲ್ಲ. ಪರಿಹಾರ ಏನು ಅಂದ್ರೆ, ವ್ಯಾಲೆಟ್ ರೊಬೋಟ್ ಅಂತಿದ್ದಾರೆ ಚೀನಾ ಪೊಲೀಸರು.

ವ್ಯಾಲೆಟ್ ರೊಬೋಟ್ ಕಾರನ್ನು ಸಾಗಿಸುವ ವಿಡಿಯೋದ ಸ್ಕ್ರೀನ್ ಶಾಟ್ ಇಮೇಜ್
ವ್ಯಾಲೆಟ್ ರೊಬೋಟ್ ಕಾರನ್ನು ಸಾಗಿಸುವ ವಿಡಿಯೋದ ಸ್ಕ್ರೀನ್ ಶಾಟ್ ಇಮೇಜ್ (@gunsnrosesgirl3)

ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ನೋ ಪಾರ್ಕಿಂಗ್‌ನಲ್ಲಿ ವಾಹನ ಪಾರ್ಕ್ ಮಾಡಿದ್ರೆ ಸಂಚಾರ ಪೊಲೀಸರು ದಂಡ ವಿಧಿಸುವುದು ಸಾಮಾನ್ಯ. ಅದೇ ರೀತಿ ವಾಹನಗಳ ಚಕ್ರಕ್ಕೆ ಕ್ಲ್ಯಾಂಪ್ ತಗುಲಿಸಿ ಹೋಗುವುದು ಕೂಡ ವಾಡಿಕೆ.

ಆದರೆ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಈಡೇರುವುದೇ? ಹೀಗೆ ಮಾಡುವುದರಿಂದ ಆ ವಾಹನವನ್ನು ಅಲ್ಲಿಂದ ನಿಜವಾದ ಪಾರ್ಕಿಂಗ್ ಪ್ಲೇಸ್‌ನಲ್ಲಿ ಪಾರ್ಕ್ ಮಾಡಿದಂತೆ ಆಗುವುದೇ? ಖಚಿತವಾಗಿಯೂ ಇಲ್ಲ.

ಅಷ್ಟೇ ಅಲ್ಲ, ಸಂಚಾರ ದಟ್ಟಣೆ ಇರುವಂತಹ ಪ್ರದೇಶದಲ್ಲಿ ನಿಲ್ಲಿಸಿದ ವಾಹನವನ್ನು ಪಾರ್ಕಿಂಗ್ ಸ್ಪೇಸ್‌ಗೆ ಎಳೆದೊಯ್ಯಲು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಇದಕ್ಕೇನು ಪರಿಹಾರ? ಚೀನಾದ ಸಂಚಾರ ಪೊಲೀಸರು ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ವ್ಯಾಲೆಟ್ ರೊಬೋಟ್‌ಗಳು ಈ ವಿಚಾರದಲ್ಲಿ ನೆರವಿಗೆ ಬರುತ್ತಿವೆ.

ವಾಹನ ಪಾರ್ಕಿಂಗ್‌ಗೆ ವ್ಯಾಲೆಟ್ ರೊಬೋಟ್‌ ನೆರವು

ಚೀನಾದ ಅನೇಕ ನಗರಗಳಲ್ಲಿ ಪೊಲೀಸರು ಚಪ್ಪಟೆಯಾಗಿರುವ ವ್ಹೀಲ್ ಬೇಸ್‌ ಅನ್ನು ಬಳಸಲಾರಂಭಿಸಿದ್ದಾರೆ. ಇದು ರಿಮೋಟ್‌ ಕಂಟ್ರೋಲ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ವ್ಯಾಲೆಟ್ ರೊಬೋಟ್ ಅಥವಾ ರೊಬೋಟ್ ವ್ಯಾಲೆಟ್ ಎನ್ನುತ್ತಾರೆ.

ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ ವಾಹನದ ಅಡಿಗೆ ಈ ವ್ಯಾಲೆಟ್ ರೊಬೋಟ್ ಚಲಿಸುತ್ತದೆ. ಬಳಿಕ ಆ ವಾಹನದ ಚಕದ್ರ ಮತ್ತು ಅಡಿಭಾಗಕ್ಕೆ ಅಂಟಿಕೊಂಡು ವಾಹನವನ್ನು ಮೇಲೆತ್ತುತ್ತದೆ. ಆ ನಂತರ ಆ ವಾಹನವನ್ನು ಪಾರ್ಕಿಂಗ್ ಪ್ಲೇಸ್‌ನಲ್ಲಿ ನಿಲ್ಲಿಸಲು ನೆರವಾಗುತ್ತದೆ.

ಸಾಂಪ್ರದಾಯಿಕ ವಾಹನ ಟೋವಿಂಗ್‌ಗಿಂತ ಇದು ಹೆಚ್ಚು ಪ್ರಯೋಜನಕಾರಿ

ಪ್ರತಿ ಏರಿಯಾದಲ್ಲಿ ಪಾರ್ಕಿಂಗ್ ಸ್ಪೇಸ್ ಇರುವಂತಹ ಮಹಾನಗರಗಳಲ್ಲಿ ವ್ಯಾಲೆಟ್ ರೊಬೋಟ್ ಹೆಚ್ಚು ಪ್ರಯೋಜನಕಾರಿ. ಇಲ್ಲಿ ಸಾಂಪ್ರದಾಯಿಕ ವಾಹನ ಟೋವಿಂಗ್ ನಡೆಸುವ ಬದಲು ವ್ಯಾಲೆಟ್ ರೊಬೋಟ್ ಬಳಕೆ ಚಾಲ್ತಿಗೆ ಬರತೊಡಗಿದೆ.

ಈ ರೀತಿ ಮಾಡುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಿದಂತೆಯೂ ಆಗುತ್ತದೆ. ಅಲ್ಲದೆ, ವಾಹನ ಟೋವಿಂಗ್ ಮಾಡುವಾಗ ಆಗುವಂತಹ ಡ್ಯಾಮೇಜ್ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಾಯೋಗಿಕವಾಗಿ ಈ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಕ್ರಮವಾಗಿ ನಿಲುಗಡೆ ಮಾಡಿದ ವಾಹನಗಳನ್ನು ತೆಗೆದುಹಾಕಲು ಮತ್ತು ಅವುಗಳನ್ನು ಗೊತ್ತುಪಡಿಸಿದ ಪಾರ್ಕಿಂಗ್ ವಲಯಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಆದರೆ ಇದು ಕೇವಲ ಮರು ನಿಲುಗಡೆಗೆ ಮಾತ್ರವಲ್ಲ, ತಪ್ಪಾದ ಸ್ಥಳದಲ್ಲಿ ವಾಹನ ನಿಲ್ಲಿಸಿದ ಚಾಲಕರಿಗೆ ದಂಡವನ್ನು ವಿಧಿಸಲಾಗುತ್ತದೆ ಮತ್ತು ಅವರ ವಾಹನಗಳನ್ನು ಎಲ್ಲಿ ಸ್ಥಳಾಂತರಿಸಲಾಗಿದೆಯೋ ಅಲ್ಲಿ ಪಾರ್ಕಿಂಗ್ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ