logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಶ್ಚಿಮಾತ್ಯರಿಗೆ ಇತರರನ್ನು ಟೀಕಿಸುವ ಕೆಟ್ಟ ಚಾಳಿಯಿದೆ, ರಾಹುಲ್‌ ಗಾಂಧಿ ಅನರ್ಹತೆ ಕುರಿತು ಅಮೆರಿಕ, ಜರ್ಮನಿ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಪಾಶ್ಚಿಮಾತ್ಯರಿಗೆ ಇತರರನ್ನು ಟೀಕಿಸುವ ಕೆಟ್ಟ ಚಾಳಿಯಿದೆ, ರಾಹುಲ್‌ ಗಾಂಧಿ ಅನರ್ಹತೆ ಕುರಿತು ಅಮೆರಿಕ, ಜರ್ಮನಿ ಹೇಳಿಕೆಗೆ ಜೈಶಂಕರ್‌ ತಿರುಗೇಟು

HT Kannada Desk HT Kannada

Apr 02, 2023 10:06 PM IST

google News

ಪಾಶ್ಚಿಮಾತ್ಯರಿಗೆ ಇತರರನ್ನು ಟೀಕಿಸುವ ಕೆಟ್ಟ ಚಾಳಿಯಿದೆ, ಜೈಶಂಕರ್‌ ತಿರುಗೇಟು

  • "ಇತರ ದೇಶಗಳ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಮಗೆ ದೇವರು ಹಕ್ಕು ನೀಡಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳು ಭಾವಿಸಿವೆ" ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದಾರೆ.

ಪಾಶ್ಚಿಮಾತ್ಯರಿಗೆ ಇತರರನ್ನು ಟೀಕಿಸುವ ಕೆಟ್ಟ ಚಾಳಿಯಿದೆ, ಜೈಶಂಕರ್‌ ತಿರುಗೇಟು
ಪಾಶ್ಚಿಮಾತ್ಯರಿಗೆ ಇತರರನ್ನು ಟೀಕಿಸುವ ಕೆಟ್ಟ ಚಾಳಿಯಿದೆ, ಜೈಶಂಕರ್‌ ತಿರುಗೇಟು

ಬೆಂಗಳೂರು: ರಾಹುಲ್‌ ಗಾಂಧಿ ಅನರ್ಹತೆ ಕುರಿತು ಇತ್ತೀಚೆಗೆ ಜರ್ಮನಿ ಮತ್ತು ಅಮೆರಿಕದ ಹೇಳಿಕೆಗೆ ಪ್ರತಿಯಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಇಂದು ಟೀಕಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಇತರರ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸುವ ಕೆಟ್ಟ ಚಾಳಿ ಹೊಂದಿವೆ ಎಂದು ಅವರು ಹೇಳಿದ್ದಾರೆ.

"ಇತರ ದೇಶಗಳ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಮಗೆ ದೇವರು ಹಕ್ಕು ನೀಡಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳು ಭಾವಿಸಿವೆ" ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದಾರೆ.

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಭಾನುವಾರ ಬೆಳಗ್ಗೆ 500 ಕ್ಕೂ ಹೆಚ್ಚು ಯುವ ಮತದಾರರು, ಪಾರ್ಕ್‌ನಲ್ಲಿ ವಾಯು ವಿಹಾರ  ಮಾಡುವವರು ಮತ್ತು ಸಂದರ್ಶಕರೊಂದಿಗೆ "ಮೀಟ್ ಅಂಡ್ ಗ್ರೀಟ್' ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರ ಜತೆ ಸಂವಾದ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹತೆಗೊಳಿಸಿದ ಬಗ್ಗೆ ಜರ್ಮನಿ ಮತ್ತು ಅಮೆರಿಕದ ಹೇಳಿಕೆಗಳ ಕುರಿತು ಪ್ರಶ್ನೆಗೆ ಮೇಲಿನಂತೆ ಜೈಶಂಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಜೈಶಂಕರ್‌ ಹೇಳಿದ ಮೊದಲ ಸತ್ಯ

"ನಾನು ನಿಮಗೆ ಸತ್ಯವಾದ ಉತ್ತರವನ್ನು ನೀಡುತ್ತೇನೆ. ಇದಕ್ಕೆ ಎರಡು ಕಾರಣಗಳಿವೆ. ಏಕೆಂದರೆ ಪಾಶ್ಚಿಮಾತ್ಯರು ಇತರರ ಬಗ್ಗೆ ಕಾಮೆಂಟ್ ಮಾಡುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಅದು ದೇವರು ನೀಡಿದ ಹಕ್ಕು ಎಂದು ಅವರು ಭಾವಿಸುತ್ತಾರೆ. ನಾವು ಅನುಭವಿಗಳು, ನಮಗೆ ಕಾಮೆಂಟ್‌ ಮಾಡುವ ಹಕ್ಕು ಇದೆ ಎಂದು ಅವರು ಭಾವಿಸುತ್ತಾರೆ. ಅವರು ಇದನ್ನು ಮಾಡುವುದನ್ನು ಮುಂದುವರೆಸಿದರೆ, ಇತರ ಜನರು ಸಹ ಕಾಮೆಂಟ್ ಮಾಡಲು ಪ್ರಾರಂಭಿಸುತ್ತಾರೆ. ಅದನ್ನು ಅವರು ಇಷ್ಟಪಡುವುದಿಲ್ಲ. ಅವರು ಅನುಭವದಿಂದ ಪಾಠ ಕಲಿಯಬೇಕಾಗುತ್ತದೆ. ಅದು ಸಂಭವಿಸುವುದನ್ನು ನಾನು ಎದಿರು ನೋಡುವೆ" ಎಂದು ಜೈಶಂಕರ್‌ ಹೇಳಿದ್ದಾರೆ.

ಜೈಶಂಕರ್‌ ಹೇಳಿದ ಎರಡನೇ ಸತ್ಯ

"ಸತ್ಯದ ಎರಡನೇ ಭಾಗ, ನಮ್ಮ ವಾದಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನೀವು ಜನರನ್ನು ಆಹ್ವಾನಿಸುತ್ತಿದ್ದೀರಿ. ಬಳಿಕ ಹೆಚ್ಚೆಚ್ಚು ಜನರು ಕಾಮೆಂಟ್‌ ಮಾಡುವಂತೆ ಪ್ರಚೋದಿಸುತ್ತಾರೆ. ಸಮಸ್ಯೆಗಳಿವೆ ಎಂದು ಜಗತ್ತಿಗೆ ಆಹ್ವಾನ ನೀಡುವುದನ್ನು ಮೊದಲು ನಿಲ್ಲಿಸಬೇಕಿದೆ. ಈ ಸಮಸ್ಯೆಯ ಒಂದು ಭಾಗ ಹೊರಗೆ ಇದೆ, ಇನ್ನೊಂದು ಭಾಗ ಒಳಗಿದೆ. ಇವೆರಡನ್ನೂ ಸರಿಪಡಿಸುವ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತವಾಗಿ ನೀಡುವ ಕೊಡುಗೆಯನ್ನು ಜೈಶಂಕರ್‌ ಟೀಕಿಸಿದ್ದಾರೆ. "ಈ ಬಿಟ್ಟಿಯಾಗಿ ನೀಡುವ ಕೆಲವು ಯುಜಮಾನರು ದೆಹಲಿಯಲ್ಲಿದ್ದಾರೆ. ಅವರಿಗೆ ಸಂಪನ್ಮೂಲ ಸಂಗ್ರಹಿಸುವ ಜವಾಬ್ದಾರಿ ಇಲ್ಲ. ಇದೇ ಕಾರಣಕ್ಕೆ ಅವರು ಬಿಟ್ಟಿಯಾಗಿ ನೀಡಲು ಮುಂದಾಗುತ್ತಾರೆ. ಈ ರೀತಿ ಮಾಡಿದರೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಉಚಿತವಾಗಿ ನೀಡಬೇಕಿದ್ದರೆ ಎಲ್ಲಾದರೂ ಯಾರಾದರೂ ಅದಕ್ಕೆ ಪಾವತಿಸಬೇಕಿರುತ್ತದೆ. ಉಚಿತವಾಗಿ ನೀಡುವುದು ಬೇಗ ಜನಪ್ರಿಯರಾಗಲು ಇರುವ ಮಾರ್ಗವಾಗಿದೆ. ಇದು ಬೇಜವಾಬ್ದಾರಿಯ ಮಾರ್ಗವೂ ಹೌದು" ಎಂದು ಅವರು ಟೀಕಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ