World Bicycle Day: ಆರೋಗ್ಯಕ್ಕೂ ಪರಿಸರಕ್ಕೂ ಸ್ನೇಹಿತ ಸೈಕಲ್; ವಿಶ್ವ ಬೈಸಿಕಲ್ ದಿನದ ಇತಿಹಾಸ, ಆಚರಣೆಯ ಕುರಿತ ಒಂದು ನೋಟ
Jun 03, 2023 06:15 AM IST
ಇಂದು ವಿಶ್ವ ಬೈಸಿಕಲ್ ದಿನ
- World Bicycle Day 2023: ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಮಾನವನ ಆರೋಗ್ಯ ಹಾಗೂ ಪರಿಸರ ಕಾಪಾಡುವಲ್ಲಿ ಸೈಕಲ್‌ನ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶ ಈ ದಿನದ ಆಚರಣೆಯ ಹಿಂದಿದೆ. ಈ ದಿನದ ಇತಿಹಾಸ, ಆಚರಣೆಯ ಕುರಿತ ಇನ್ನಷ್ಟು ವಿವರ ಇಲ್ಲಿದೆ.
ಮನುಷ್ಯನ ಸುಸ್ಥಿರ ಜೀವನಶೈಲಿಯಲ್ಲಿ ಸೈಕಲ್‌ನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ಸ್ಕೈಕ್ಲಿಂಗ್ ಮಾಡುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಬೈಸಿಕಲ್‌ನ ವಿಶಿಷ್ಟತೆಯನ್ನು ಗುರುತಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಏಪ್ರಿಲ್ 2018ರಲ್ಲಿ ವಿಶ್ವ ಬೈಸಿಕಲ್ ದಿನವನ್ನು ಫೋಷಿಸಿತು.
ಬೈಸಿಕಲ್‌ನ ವಿಶೇಷ, ಬಹುಮುಖ ಮತ್ತು ಸುಸ್ಥಿರ ಅಂಶಗಳು ಹಾಗೂ ಸಮಾಜ ಹಾಗೂ ಪರಿಸರ ಮೇಲೆ ಸೈಕಲ್‌ನ ಸಕಾರಾತ್ಮಕ ಪರಿಣಾಮವನ್ನು ಗುರುತಿಸುವುದು ಈ ದಿನದ ಉದ್ದೇಶ.
ಬೈಸಿಕಲ್ ಸರಳ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಪರಿಸ್ನೇಹಿ ಸಾರಿಗೆಯಾಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬೈಸಿಕಲ್‌ಗಳು ದೈಹಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತವೆ. ಇದು ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಸುಧಾರಿಸುತ್ತದೆ. ಪ್ರತಿದಿನ ಸ್ಲೈಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.
ಜೂನ್ 3
ಪ್ರತಿವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ
2018, ಏಪ್ರಿಲ್ ತಿಂಗಳಿನಿಂದ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಬೈಸಿಕಲ್ ಅನ್ನು ಆಚರಿಸಲು ಜೂನ್ 3 ಅನ್ನು ಅಧಿಕೃತ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.
ತುರ್ಕಮೆನಿಸ್ತಾನ ದೇಶವು ವಿಶ್ವ ಬೈಸಿಕಲ್ ದಿನದ ಆಚರಣೆಯ ಕುರಿತು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿತು. ಇದು ಈ ದಿನದ ಆಚರಣೆಯ ನೇತೃತ್ವ ವಹಿಸಿತ್ತು. ಹಲವು ದೇಶಗಳ ಬೆಂಬಲದೊಂದಿಗೆ ಈ ದೇಶವು ಬೈಸಿಕಲ್ ಪಾತ್ರವನ್ನು ಅಂಗೀಕರಿಸುವ ಮತ್ತು ಉತ್ತೇಜಿಸುವ ಕಲ್ಪನೆಯನ್ನು ಪ್ರಸ್ತಾಪಿಸಿತು.
ವಿಶ್ವ ಬೈಸಿಕಲ್ ದಿನದ ಘೋಷಣೆಯು ಬೈಸಿಕಲ್‌ನ ಬಹುಮುಖ ಅಂಶ ಮತ್ತು ಸಮಾಜದ ವಿವಿಧ ಅಂಶಗಳ ಮೇಲೆ ಸೈಕಲ್‌ನ ಧನಾತ್ಮಕ ಪ್ರಭಾವವನ್ನು ಗುರುತಿಸುವುದಕ್ಕೆ ಸಾಕ್ಷಿಯಾಗಿದೆ.
ಹವಾಮಾನ ಬದಲಾವಣೆ, ವಾಯು ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ಜಡ ಜೀವನಶೈಲಿಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸಾರಿಗೆ ವಿಧಾನವಾಗಿ ಸೈಕ್ಲಿಂಗ್ ಅನ್ನು ಉತ್ತೇಜಿಸುವ ಅಗತ್ಯವನ್ನು ಈ ದಿನವು ಒತ್ತಿ ಹೇಳುತ್ತದೆ.
ಮಹತ್ವ
ವಿಶ್ವ ಬೈಸಿಕಲ್ ದಿನವು ಸೈಕ್ಲಿಂಗ್‌ನ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ಜಡ ಜೀವನಶೈಲಿ ಸೇರಿದಂತೆ ವಿವಿಧ ಸಾಮಾಜಿಕ ಸವಾಲುಗಳಿಗೆ ಪರಿಹಾರವಾಗಿ ಸೈಕ್ಲಿಂಗ್ ಅನ್ನು ಉತ್ತೇಜಿಸಲು ಮತ್ತು ಅಳವಡಿಸಿಕೊಳ್ಳಲು ಇದು ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಗಳನ್ನು ಪ್ರೋತ್ಸಾಹಿಸುತ್ತದೆ.
ಆಚರಣೆ
ಈ ದಿನದಂದು, ಬೈಸಿಕಲ್‌ನ ಪ್ರಾಮುಖ್ಯತೆಯನ್ನು ಆಚರಿಸಲು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಕಮ್ಯುನಿಟಿ ಬೈಕ್ ರೈಡಿಂಗ್, ಸೈಕ್ಲಿಂಗ್ ಸ್ಪರ್ಧೆಗಳು, ಸೈಕಲ್ ನಿರ್ವಹಣೆಯ ಕುರಿತು ಕಾರ್ಯಾಗಾರಗಳು, ಪ್ರದರ್ಶನಗಳನ್ನು ನಡೆಸಲಾಗುತ್ತದೆ.
ವಿಶ್ವ ಬೈಸಿಕಲ್ ದಿನವು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಜಗತ್ತನ್ನು ರಚಿಸಲು ಬೈಸಿಕಲ್‌ನ ಪಾತ್ರವನ್ನು ಇದು ನೆನಪಿಸುತ್ತದೆ.
ವಿಭಾಗ