logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sco Summit: ಕೆಲವು ದೇಶಗಳು ಉಗ್ರರ ಸ್ವರ್ಗಗಳಾಗಿವೆ ಎಂದ ಭಾರತದ ಪ್ರಧಾನಿ ಮೋದಿ; ಸುಮ್ಮನೆ ಆಲಿಸುತ್ತಿದ್ದರು ಪಾಕ್‌ ಪ್ರಧಾನಿ

SCO Summit: ಕೆಲವು ದೇಶಗಳು ಉಗ್ರರ ಸ್ವರ್ಗಗಳಾಗಿವೆ ಎಂದ ಭಾರತದ ಪ್ರಧಾನಿ ಮೋದಿ; ಸುಮ್ಮನೆ ಆಲಿಸುತ್ತಿದ್ದರು ಪಾಕ್‌ ಪ್ರಧಾನಿ

Umesh Kumar S HT Kannada

Jan 09, 2024 08:00 PM IST

google News

ಶಾಂಘೈ ಸಹಕಾರ ಸಂಘಟನೆಯ ವರ್ಚುವಲ್‌ ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು., ಪಾಕಿಸ್ತಾನದ ಪ್ರದಾನಿ ಈ ವೇಳೆ ಆ ಮಾತುಗಳನ್ನು ಆಲಿಸಿದರು.

  • SCO Summit: ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಗಳ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದೇಶಗಳನ್ನು ಟೀಕಿಸಲು ಶಾಂಘೈ ಸಹಕಾರ ಸಂಘಟನೆ ಹಿಂಜರಿಯಬಾರದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶದ ಹೆಸರು ಉಲ್ಲೇಖಿಸದೇ ಹೇಳಿದರು. ಈ ಮಾತುಗಳನ್ನು ಪಾಕಿಸ್ತಾನ ಪ್ರಧಾನಿ ಮೌನವಾಗಿ ಆಲಿಸಿದರು.

ಶಾಂಘೈ ಸಹಕಾರ ಸಂಘಟನೆಯ ವರ್ಚುವಲ್‌ ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು., ಪಾಕಿಸ್ತಾನದ ಪ್ರದಾನಿ ಈ ವೇಳೆ ಆ ಮಾತುಗಳನ್ನು ಆಲಿಸಿದರು.
ಶಾಂಘೈ ಸಹಕಾರ ಸಂಘಟನೆಯ ವರ್ಚುವಲ್‌ ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು., ಪಾಕಿಸ್ತಾನದ ಪ್ರದಾನಿ ಈ ವೇಳೆ ಆ ಮಾತುಗಳನ್ನು ಆಲಿಸಿದರು.

ನವದೆಹಲಿ: ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆ (cross-border terrorism)ಯನ್ನು ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ (safe haven to terrorists)ವನ್ನು ನೀಡುತ್ತವೆ. ಶಾಂಘೈ ಸಹಕಾರ ಸಂಘಟನೆ (Shanghai Cooperation Organisation)ಯ ದೇಶಗಳು ಇದನ್ನು ಖಂಡಿಸಬೇಕು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಒತ್ತಾಯಿಸಿದರು.

"ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗುತ್ತದೆ...ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಗಳ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದೇಶಗಳನ್ನು ಟೀಕಿಸಲು ಎಸ್‌ಸಿಒ (ಶಾಂಘೈ ಸಹಕಾರ ಸಂಘಟನೆ) ಹಿಂಜರಿಯಬಾರದು. ಎಸ್‌ಸಿಒ ದೇಶಗಳು ಇದನ್ನು ಖಂಡಿಸಬೇಕು. ಭಯೋತ್ಪಾದನೆಯಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು'' ಎಂದು ಭಾರತ ಆಯೋಜಿಸಿದ್ದ ಎಸ್‌ಸಿಒ ಶೃಂಗಸಭೆಯಲ್ಲಿ ಮೋದಿ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೇ ಹೇಳಿದರು.

ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ವರ್ಚುವಲ್ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಉಪಸ್ಥಿತರಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಆಲಿಸಿದರು.

"ನಾವು ಎಸ್‌ಸಿಒ ಅನ್ನು ವಿಸ್ತೃತ ನೆರೆಹೊರೆಯಾಗಿ ನೋಡುತ್ತಿಲ್ಲ, ಬದಲಿಗೆ ವಿಸ್ತೃತ ಕುಟುಂಬವಾಗಿ ನೋಡುತ್ತೇವೆ. ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಪರಿಸರ ಸಂರಕ್ಷಣೆ ಎಸ್‌ಸಿಒಗೆ ನಮ್ಮ ದೃಷ್ಟಿಯ ಆಧಾರ ಸ್ತಂಭಗಳಾಗಿವೆ" ಎಂದು ಮೋದಿ ಹೇಳಿದರು.

ಎಸ್‌ಸಿಒ ನಾಯಕರು ಇರಾನ್ ಅನ್ನು ಸೇರಿಸುವ ಮೂಲಕ ಮತ್ತು ಬೆಲಾರಸ್‌ಗೆ ಸದಸ್ಯತ್ವದ ಮಾರ್ಗವನ್ನು ತೆರೆಯುವ ಮೂಲಕ ಯುರೇಷಿಯನ್ ಗುಂಪಿನ ಪ್ರಭಾವವನ್ನು ವಿಸ್ತರಿಸಲು ಆನ್‌ಲೈನ್ ಶೃಂಗಸಭೆಯನ್ನು ನಡೆಸಿದರು.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಇದು ಜೂನ್ ಅಂತ್ಯದಲ್ಲಿ ವ್ಯಾಗ್ನರ್ ಗುಂಪಿನಿಂದ ಅಲ್ಪಾವಧಿಯ ದಂಗೆಯ ನಂತರ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಪುಟಿನ್ ಅವರ ಮೊದಲ ಭಾಗವಹಿಸುವಿಕೆಯಾಗಿದೆ.

ಅಫ್ಘಾನಿಸ್ತಾನದ ಪರಿಸ್ಥಿತಿ ನಮ್ಮ ಮೇಲೆ ನೇರ ಪರಿಣಾಮ ಬೀರಿದೆ: ಪ್ರಧಾನಿ ಮೋದಿ

"ಅಫ್ಘಾನಿಸ್ತಾನದ ಪರಿಸ್ಥಿತಿಯು ನಮ್ಮೆಲ್ಲರ (ದೇಶಗಳ) ಭದ್ರತೆಯ ಮೇಲೆ ನೇರ ಪರಿಣಾಮ ಬೀರಿದೆ. ಅಫ್ಘಾನಿಸ್ತಾನದ ಬಗ್ಗೆ ಭಾರತದ ಕಾಳಜಿ ಮತ್ತು ನಿರೀಕ್ಷೆಗಳು ಹೆಚ್ಚಿನ ಎಸ್‌ಸಿಒ ಸದಸ್ಯ ರಾಷ್ಟ್ರಗಳಂತೆಯೇ ಇವೆ. ನಾವು ಜನರ ಕಲ್ಯಾಣಕ್ಕಾಗಿ ಒಗ್ಗಟ್ಟಿನ ಪ್ರಯತ್ನಗಳನ್ನು ಮಾಡಬೇಕಾಗಿದೆ. ಆಫ್ಘಾನಿಸ್ತಾನದ... ಅಫ್ಘಾನಿಸ್ತಾನದ ಭೂಮಿಯನ್ನು ನೆರೆಯ ರಾಷ್ಟ್ರಗಳಲ್ಲಿ ಅಶಾಂತಿ ಹರಡಲು ಅಥವಾ ಉಗ್ರಗಾಮಿ ಸಿದ್ಧಾಂತಗಳನ್ನು ಉತ್ತೇಜಿಸಲು ಬಳಸದಿರುವುದು ಮುಖ್ಯವಾಗಿದೆ ಎಂದು ಮೋದಿ ಶೃಂಗಸಭೆಯಲ್ಲಿ ಹೇಳಿದರು.

ಚೀನಾ ಮತ್ತು ರಷ್ಯಾ ಸೇರಿ 2001ರಲ್ಲಿ ಎಸ್‌ಸಿಒ ರಚಿಸಿದವು. ಹಿಂದಿನ ಸೋವಿಯತ್ ಮಧ್ಯ ಏಷ್ಯಾದ ರಾಷ್ಟ್ರಗಳು ಸದಸ್ಯರಾಗಿ ಸೇರಿದವು. ಅದಾಗಿ ಭಾರತ ಮತ್ತು ಪಾಕಿಸ್ತಾನದಿಂದ ಸೇರಿಕೊಂಡವು. ಎಂಟು ಸದಸ್ಯರ ಎಸ್‌ಸಿಒ ಯುರೇಷಿಯಾದಲ್ಲಿ ಪಾಶ್ಚಿಮಾತ್ಯ ಪ್ರಭಾವವನ್ನು ಎದುರಿಸಲು ಪ್ರಯತ್ನಿಸುವ ರಾಜಕೀಯ ಮತ್ತು ಭದ್ರತಾ ಗುಂಪಿನಂತೆ ಕಾರ್ಯನಿರ್ವಹಿಸುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ