logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯ ಸ್ತಂಭನ, ಪ್ರತಿರೂಪಿ ಸಭೆ ನಡೆಸುತ್ತಿರುವುದಾಗಿ ವರದಿ

Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯ ಸ್ತಂಭನ, ಪ್ರತಿರೂಪಿ ಸಭೆ ನಡೆಸುತ್ತಿರುವುದಾಗಿ ವರದಿ

HT Kannada Desk HT Kannada

Oct 24, 2023 02:59 PM IST

google News

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರಿಗೆ ಭಾನುವಾರ ರಾತ್ರಿ 9ಕ್ಕೆ ಹೃದಯ ಸ್ತಂಭನ ಸಂಭವಿಸಿದ್ದು, ಕೂಡಲೇ ತುರ್ತು ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂಬ ವರದಿ ಇದ್ದರೂ, ಯಾವುದನ್ನೂ ರಷ್ಯಾ ದೃಢೀಕರಿಸಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ (AP)

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ಟೆಲಿಗ್ರಾಮ್ ಚಾನೆಲ್ 'ಜನರಲ್ ಎಸ್‌ವಿಆರ್' ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಜನರಲ್ ಎಸ್‌ವಿಆರ್ ಎಂಬ ಟೆಲಿಗ್ರಾಮ್ ಚಾನೆಲ್ ಅನ್ನು ಕ್ರೆಮ್ಲಿನ್‌ನ ನಿವೃತ್ತ ಉದ್ಯೋಗಿಗಳು ನಡೆಸುತ್ತಿದ್ದಾರೆ ಎಂದು ನಂಬಲಾಗಿದೆ.

ಈ ಚಾನೆಲ್ ವರದಿ ಪ್ರಕಾರ, ವ್ಲಾಡಿಮಿರ್‌ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿದ ಮೇಜಿನ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದರು ಎಂದು ಅವರ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ನೆಲದ ಮೇಲೆ ಬಿದ್ದು ಹೊರಳಾಡಿದ ಪುಟಿನ್ - ಮಿರರ್ ವರದಿ

"ಬಹುಶಃ, ಅಧ್ಯಕ್ಷರು ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಭಕ್ಷ್ಯಗಳನ್ನು ತಗುಲಿದ್ದು ಮಗುಚಿವೆ. ಅದರಿಂದಾಗಿ ಶಬ್ದ ಉಂಟಾಗಿತ್ತು. ಇದೇ ವೇಳೆ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿದ್ದುದು ಕಂಡುಬಂತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದರು ಎಂದು ಮಿರರ್ ವರದಿ ಮಾಡಿದೆ.

ರಷ್ಯಾದ ಅಧ್ಯಕ್ಷರನ್ನು ತಕ್ಷಣವೇ ಅವರ ನಿವಾಸದಲ್ಲಿ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಇರುವ ವಿಶೇಷ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯುವ ಮೊದಲು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು ಎಂದು ವರದಿ ವಿವರಿಸಿದೆ.

"ಸಮಯಕ್ಕೆ ಪ್ರಾಥಮಿಕ ಚಿಕಿತ್ಸಾ ನೆರವು ಒದಗಿಸಲಾಗಿತ್ತು. ಹೀಗಾಗಿ ಅವರ ಹೃದಯ ಮತ್ತೆ ಕೆಲಸ ಮಾಡಲಾರಂಭಿಸಿದೆ. ಪುಟಿನ್ ಚೇತರಿಸಿಕೊಂಡರು" ಎಂದು ಚಾನೆಲ್ ವರದಿ ಮಾಡಿದೆ.

ವ್ಲಾಡಿಮಿರ್ ಪುಟಿನ್ ಆರೋಗ್ಯದ ಕುರಿತು ಖಚಿತ ಮಾಹಿತಿ ಇಲ್ಲ

ಪುಟಿನ್ ಅವರ ಆರೋಗ್ಯವು ಹದಗೆಟ್ಟಿದೆ ಎಂಬ ಹೇಳಿಕೆಗಳನ್ನು ಕ್ರೆಮ್ಲಿನ್ ದೃಢೀಕರಿಸದಿದ್ದರೂ, ವರದಿಗಳು ಅಧ್ಯಕ್ಷರ ಆಂತರಿಕ ವಲಯವನ್ನು ಎಚ್ಚರಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಚಾನೆಲ್ ವರದಿಗಳನ್ನು ದೃಢೀಕರಿಸುವುದು ಸಾಧ್ಯವಾಗಿಲ್ಲ.

ವ್ಲಾಡಿಮಿರ್ ಪುಟಿನ್ ಪ್ರತಿರೂಪ ಸಭೆ ಸಮಾರಂಭದಲ್ಲಿ ಸಕ್ರಿಯ ಎನ್ನುತ್ತಿವೆ ವರದಿಗಳು

“ಇತ್ತೀಚೆಗೆ, ಎಲ್ಲಾ ಅಧಿಕೃತ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಅಧ್ಯಕ್ಷರ ಪ್ರತಿರೂಪಿ ಮೂಲಕ ನಡೆಸಲಾಗಿದೆ. ಸಂಜೆಯ ಘಟನೆಯ ಸುದ್ದಿಯ ನಂತರ, ಪುಟಿನ್ ಅವರ ಹತ್ತಿರವಿರುವ ಹಲವಾರು ಜನರು ದೂರವಾಣಿ ಮೂಲಕ ಪರಸ್ಪರ ಸಂಪರ್ಕಿಸಿದರು ಮತ್ತು ಮುಂಬರುವ ದಿನಗಳಲ್ಲಿ ಅಧ್ಯಕ್ಷರು ಸತ್ತರೆ ಸಂಭವನೀಯ ಕ್ರಮಗಳ ಬಗ್ಗೆ ಸೋಮವಾರ ಸಮಾಲೋಚನೆ ನಡೆಸಲು ಒಪ್ಪಿಕೊಂಡರು”ಎಂದು ಮಿರರ್ ಉಲ್ಲೇಖಿಸಿ ಹೇಳಿದೆ.

ರಷ್ಯಾ - ಉಕ್ರೇನ್‌ ಸಮರ ಶುರುವಾದ ನಂತರ ಪುಟಿನ್ ಆರೋಗ್ಯ ಕ್ಷೀಣದ ವದಂತಿ

ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಅವರ ಆರೋಗ್ಯವು ಹದಗೆಟ್ಟಿರುವ ಹಲವಾರು ವರದಿಗಳಿವೆ - ಅದು ಕ್ಯಾನ್ಸರ್ ಆಗಿರಬಹುದು ಅಥವಾ ಪಾರ್ಕಿನ್ಸನ್ ಕಾಯಿಲೆಯಾಗಿರಬಹುದು. ಆದಾಗ್ಯೂ, ರಷ್ಯಾದ ನಾಯಕ "ಉತ್ತಮ ಆರೋಗ್ಯ" ದಲ್ಲಿದ್ದಾರೆ ಎಂದು ಕ್ರೆಮ್ಲಿನ್ ಪದೇ ಪದೇ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ