logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tallest Shiva Statue In World: ರಾಜಸ್ಥಾನದಲ್ಲಿ ನಾಳೆ ಜಗತ್ತಿನ ಬೃಹತ್‌ ಶಿವ ಪ್ರತಿಮೆ ಅನಾವರಣ, ವಿಶ್ವಾಸ್‌ ಸ್ವರೂಪಂನ ಭವ್ಯ ರೂಪವನ್ನೊಮ್

Tallest Shiva statue in world: ರಾಜಸ್ಥಾನದಲ್ಲಿ ನಾಳೆ ಜಗತ್ತಿನ ಬೃಹತ್‌ ಶಿವ ಪ್ರತಿಮೆ ಅನಾವರಣ, ವಿಶ್ವಾಸ್‌ ಸ್ವರೂಪಂನ ಭವ್ಯ ರೂಪವನ್ನೊಮ್

Praveen Chandra B HT Kannada

Oct 29, 2022 09:42 AM IST

google News

Tallest Shiva statue in world: ರಾಜಸ್ಥಾನದಲ್ಲಿ ನಾಳೆ ಜಗತ್ತಿನ ಬೃಹತ್‌ ಶಿವ ಪ್ರತಿಮೆ ಅನಾವರಣ, ವಿಶ್ವಾಸ್‌ ಸ್ವರೂಪಂನ ಭವ್ಯ ರೂಪವನ್ನೊಮ್ಮೆ ನೋಡಿ

    • ರಾಜಸ್ಥಾನದ ರಾಜ್‌ ಸಮಂದ್‌ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ "ವಿಶ್ವಾಸ್‌ ಸ್ವರೂಪಂ" ಎಂಬ 369 ಅಡಿ ಎತ್ತರದ ಭವ್ಯ ಶಿವನ ಪ್ರತಿಮೆಯು ನಾಳೆ ಉದ್ಘಾಟನೆಗೊಳ್ಳಲಿದ್ದು, "ಜಗತ್ತಿನಲ್ಲೇ ಅತ್ಯಧಿಕ ಎತ್ತರದ ಪ್ರತಿಮೆʼʼ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
Tallest Shiva statue in world: ರಾಜಸ್ಥಾನದಲ್ಲಿ ನಾಳೆ  ಜಗತ್ತಿನ ಬೃಹತ್‌ ಶಿವ ಪ್ರತಿಮೆ ಅನಾವರಣ, ವಿಶ್ವಾಸ್‌ ಸ್ವರೂಪಂನ ಭವ್ಯ ರೂಪವನ್ನೊಮ್ಮೆ ನೋಡಿ
Tallest Shiva statue in world: ರಾಜಸ್ಥಾನದಲ್ಲಿ ನಾಳೆ ಜಗತ್ತಿನ ಬೃಹತ್‌ ಶಿವ ಪ್ರತಿಮೆ ಅನಾವರಣ, ವಿಶ್ವಾಸ್‌ ಸ್ವರೂಪಂನ ಭವ್ಯ ರೂಪವನ್ನೊಮ್ಮೆ ನೋಡಿ

ಉದಯಪುರ: ರಾಜಸ್ಥಾನದರಾಜ್‌ ಸಮಂದ್‌ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ "ವಿಶ್ವಾಸ್‌ ಸ್ವರೂಪಂ" ಎಂಬ 369 ಅಡಿ ಎತ್ತರದ ಭವ್ಯ ಶಿವನ ಪ್ರತಿಮೆಯು ನಾಳೆ ಉದ್ಘಾಟನೆಗೊಳ್ಳಲಿದ್ದು, "ಜಗತ್ತಿನಲ್ಲೇ ಅತ್ಯಧಿಕ ಎತ್ತರದ ಪ್ರತಿಮೆʼʼ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ವಿಶ್ವದ ಅತಿಎತ್ತರದ ಶಿವನ ಪ್ರತಿಮೆ ಎಂದು ಹೇಳಲಾದ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ವಿಧಾನ ಸಭಾ ಸ್ಪೀಕರ್‌ ಸಿ.ಪಿ. ಜೋಷಿ ಮತ್ತು ಇತರರ ಸಮ್ಮುಖದಲ್ಲಿ ಧರ್ಮ ಗ್ರಂಥ ಬೋಧಕ ಮೊರಾರಿ ಬಾಪು ಉದ್ಘಾಟಿಸಲಿದ್ದಾರೆ.

ಉದಯಪುರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಈ ಪ್ರತಿಮೆಯನ್ನು ತತ್‌ ಪದಾಂ ಸಂಸ್ಥಾನಂ ನಿರ್ಮಾಣ ಮಾಡಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಹತ್ತು ವರ್ಷಗಳಿಗಿಂತಲೂ ಅಧಿಕ ಸಮಯ ತೆಗೆದುಕೊಳ್ಳಲಾಗಿದೆ.

ಪ್ರತಿಮೆ ಉದ್ಘಾಟಿಸಿದ ಬಳಿಕ ಅಕ್ಟೋಬರ್‌ 29ರಿಂದ ನವೆಂಬರ್‌ 6ರವರೆಗೆ ಈ ಪ್ರಯುಕ್ತ ಸರಣಿ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾನಂ ಟ್ರಸ್ಟಿ ಮತ್ತು ಮಿರಾಜ್‌ ಗ್ರೂಪ್‌ ಚೇರ್ಮನ್‌ ಮದಲ್‌ ಪಾಲಿವಾಲ್‌ ಹೇಳಿದ್ದಾರೆ.

ಈ ಜಿಲ್ಲೆಯಲ್ಲಿ ನಿರ್ಮಿಸಿರುವ ಶಿವನ ಬೃಹತ್‌ ಪ್ರತಿಮೆಯು ಜಿಲ್ಲೆಗೆ ಹೊಸ ಪ್ರವಾಸಿ ಆಕರ್ಷಣೆ ತರಲಿದೆ ಎಂದು ಪಾಲಿವಾಲ್‌ ಹೇಳಿದ್ದಾರೆ.

ಶಿವನು ಧ್ಯಾನಭಂಗಿಯಲ್ಲಿರುವ ಶಿವನ ಪ್ರತಿಮೆ ಇದಾಗಿದೆ. ಈ ಶಿವನ ಪ್ರತಿಮೆಯು 20 ಕಿ.ಮೀ. ದೂರದವರೆಗೆ ಕಾಣಿಸುತ್ತದೆ.

ಈ ಶಿವನ ಪ್ರತಿಮೆಗೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಿರುವುದರಿಂ ರಾತ್ರಿ ಹೊತ್ತಿನಲ್ಲೂ ಕಾಣಿಸಲಿದೆ ಎಂದು ಕಾರ್ಯಕ್ರಮದ ವಕ್ತಾರರಾದ ಜೈಪ್ರಕಾಶ್‌ ಮಾಲಿ ಹೇಳಿದ್ದಾರೆ.

ಕರ್ನಾಟಕದಲ್ಲಿಯೂ ಶಿವನ ಬೃಹತ್‌ ಪ್ರತಿಮೆ

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್‌ ವತಿಯಿಂದ 112 ಅಡಿ ಎತ್ತರರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲುವ ನಿರೀಕ್ಷೆಯಿದೆ. ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಷನ್‌ನ ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿದ್ದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವಂತೆ ಶಿವನ ಪ್ರತಿಮೆಯನ್ನು ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಅದಿಯೋಗಿ ಶಿವನ ಪ್ರತಿಮೆ ದಿವ್ಯ ಮುಖ ರೂಪ ಅಂತಿಮ ಹಂತ ತಲುಪಿದ್ದು ಮುಂದಿನ ಜನವರಿ ಸಂಕ್ರಾಂತಿ ಸಮಯದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಸುಮಾರು 110 ಎಕರೆ ವಿಶಾಲವಾದ ಪ್ರದೇಶದಲ್ಲಿ ಇಶಾ ಯೋಗ ಕೇಂದ್ರ ತಲೆ ಎತ್ತುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 9 ಕಿಲೋಮೀಟರ್ ದೂರದಲ್ಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ