logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Best Video Games Of 2022: ವಿಡಿಯೋ ಗೇಮ್‌ ಪ್ರಿಯರಿಗೆ 5 ಅತ್ಯುತ್ತಮ ಗೇಮ್‌ಗಳ ಪರಿಚಯ ಇಲ್ಲಿದೆ, ಆಡಿ ಆಟ ಆಡಿ!

BEST video games of 2022: ವಿಡಿಯೋ ಗೇಮ್‌ ಪ್ರಿಯರಿಗೆ 5 ಅತ್ಯುತ್ತಮ ಗೇಮ್‌ಗಳ ಪರಿಚಯ ಇಲ್ಲಿದೆ, ಆಡಿ ಆಟ ಆಡಿ!

Dec 19, 2022 01:49 PM IST

ಕಂಪ್ಯೂಟರ್‌ನಲ್ಲಿ, ಮೊಬೈಲ್‌ನಲ್ಲಿ, ಗೇಮಿಂಗ್‌ ಕನ್ಸೋಲ್‌ನಲ್ಲಿ ಆಡಲು ಈ ವರ್ಷ ಹಲವು ಅದ್ಭುತ, ಅನನ್ಯ, ಅತ್ಯಾಕರ್ಷಕ ವಿಡಿಯೋ ಗೇಮ್‌ಗಳು ಬಿಡುಗಡೆಯಾಗಿವೆ. ಈ ವರ್ಷದ ಅತ್ಯುತ್ತಮವೆನಿಸುವ ಐದು ಗೇಮ್‌ಗಳ ಪರಿಚಯ ಇಲ್ಲಿದೆ. ಗಾಡ್‌ ಆಫ್‌ ವಾರ್‌ ರಂಗ್ನಾರ್‌ಓಕೆ, ಸ್ಟ್ರೇ, ಕಾಲ್‌ ಆಪ್‌ ಡ್ಯೂಟಿ, ಮಾಡರ್ನ್‌ ವಾರ್ಫೇರ್‌, ಎಲ್ಡೆನ್‌ ರಿಂಗ್‌ ಇತ್ಯಾದಿ ಗೇಮ್ಸ್‌ಗಳಲ್ಲಿ ನಿಮಗೆ ಯಾವುದು ಇಷ್ಟ?

ಕಂಪ್ಯೂಟರ್‌ನಲ್ಲಿ, ಮೊಬೈಲ್‌ನಲ್ಲಿ, ಗೇಮಿಂಗ್‌ ಕನ್ಸೋಲ್‌ನಲ್ಲಿ ಆಡಲು ಈ ವರ್ಷ ಹಲವು ಅದ್ಭುತ, ಅನನ್ಯ, ಅತ್ಯಾಕರ್ಷಕ ವಿಡಿಯೋ ಗೇಮ್‌ಗಳು ಬಿಡುಗಡೆಯಾಗಿವೆ. ಈ ವರ್ಷದ ಅತ್ಯುತ್ತಮವೆನಿಸುವ ಐದು ಗೇಮ್‌ಗಳ ಪರಿಚಯ ಇಲ್ಲಿದೆ. ಗಾಡ್‌ ಆಫ್‌ ವಾರ್‌ ರಂಗ್ನಾರ್‌ಓಕೆ, ಸ್ಟ್ರೇ, ಕಾಲ್‌ ಆಪ್‌ ಡ್ಯೂಟಿ, ಮಾಡರ್ನ್‌ ವಾರ್ಫೇರ್‌, ಎಲ್ಡೆನ್‌ ರಿಂಗ್‌ ಇತ್ಯಾದಿ ಗೇಮ್ಸ್‌ಗಳಲ್ಲಿ ನಿಮಗೆ ಯಾವುದು ಇಷ್ಟ?
God of War Ragnarok: 2018ರ ಗೇಮ್‌ನ ಮುಂದುವರೆದ ಆವೃತ್ತಿಯಾಗಿ ಗಾಡ್‌ ಆಫ್‌ ವಾರ್‌ ರಗ್ನಾರ್‌ಓಕೆ ಎಂಬ ಗೇಮ್ಸ್‌ ಬಂದಿತ್ತು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. ಕ್ರಾಟೋಸ್‌ ಮತ್ತು ಅಟ್ರೆಸ್‌ಗಳನ್ನು ಫಾಲೋ ಮಾಡುವ ಮೂಲಕ ಅಸರ್ಗಾಡಿಯನ್‌ ಪಡೆಯ ಕುರಿತು ತಿಳಿದುಕೊಳ್ಳಿ.
(1 / 5)
God of War Ragnarok: 2018ರ ಗೇಮ್‌ನ ಮುಂದುವರೆದ ಆವೃತ್ತಿಯಾಗಿ ಗಾಡ್‌ ಆಫ್‌ ವಾರ್‌ ರಗ್ನಾರ್‌ಓಕೆ ಎಂಬ ಗೇಮ್ಸ್‌ ಬಂದಿತ್ತು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. ಕ್ರಾಟೋಸ್‌ ಮತ್ತು ಅಟ್ರೆಸ್‌ಗಳನ್ನು ಫಾಲೋ ಮಾಡುವ ಮೂಲಕ ಅಸರ್ಗಾಡಿಯನ್‌ ಪಡೆಯ ಕುರಿತು ತಿಳಿದುಕೊಳ್ಳಿ.(PlayStation)
Stray : ಇದು ಕ್ಯಾಟ್‌ ಗೇಮ್‌ ಎಂದೇ ಜನಪ್ರಿಯ. ಇದು ಬೆಕ್ಕಿನ ಸಾಹಸಿ ಗೇಮ್‌ ಆಗಿದೆ. ಸೈಬರ್‌ಸಿಟಿಯಲ್ಲಿ ಈ ಬೆಕ್ಕಿನ ಜತೆ ಆಡುವ ಖುಷಿಯೇ ಬೇರೆ. ಈ ನಗರದಿಂದ ಹೊರಕ್ಕೆ ಬರಲು ಬೆಕ್ಕಿನ ಪ್ರಯತ್ನಕ್ಕೆ ನೀವು ನೆರವಾಗಬಹುದು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. 
(2 / 5)
Stray : ಇದು ಕ್ಯಾಟ್‌ ಗೇಮ್‌ ಎಂದೇ ಜನಪ್ರಿಯ. ಇದು ಬೆಕ್ಕಿನ ಸಾಹಸಿ ಗೇಮ್‌ ಆಗಿದೆ. ಸೈಬರ್‌ಸಿಟಿಯಲ್ಲಿ ಈ ಬೆಕ್ಕಿನ ಜತೆ ಆಡುವ ಖುಷಿಯೇ ಬೇರೆ. ಈ ನಗರದಿಂದ ಹೊರಕ್ಕೆ ಬರಲು ಬೆಕ್ಕಿನ ಪ್ರಯತ್ನಕ್ಕೆ ನೀವು ನೆರವಾಗಬಹುದು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. (PlayStation)
Elden Ring - ಫ್ರಮ್‌ಸಾಫ್ಟ್‌ವೇರ್‌ನ ನೂತನ ಗೇಮ್‌ ಇದಾಗಿದ್ದು, ರಾಣಿ ಮಾರಿಕಾಳ ರಾಜ್ಯದಲ್ಲಿ ನೀವು ರಾಕ್ಷಸರ ಸಾಮ್ರಾಜ್ಯದಲ್ಲಿ ಹೋರಾಟ ಮಾಡಬೇಕು. ಇಲ್ಲಿ ನೀವು ಗ್ರೀಟ್‌ ರೂನಿಸ್‌ ಸಂಗ್ರಹಿಸಿ ಎಲ್ಡೆನ್‌ ದೇವರಾಗಬೇಕು.  ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4, ಎಕ್ಸ್‌ಬಾಕ್ಸ್‌ ಸೀರಿಸ್‌ ಎಕ್ಸ್‌ ಮತ್ತು ಸೀರಿಸ್‌ ಎಸ್‌, ಎಕ್ಸ್‌ಬಾಕ್ಸ್‌ ಒನ್‌, ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ಈ ಗೇಮ್‌ ಲಭ್ಯವಿದೆ. 
(3 / 5)
Elden Ring - ಫ್ರಮ್‌ಸಾಫ್ಟ್‌ವೇರ್‌ನ ನೂತನ ಗೇಮ್‌ ಇದಾಗಿದ್ದು, ರಾಣಿ ಮಾರಿಕಾಳ ರಾಜ್ಯದಲ್ಲಿ ನೀವು ರಾಕ್ಷಸರ ಸಾಮ್ರಾಜ್ಯದಲ್ಲಿ ಹೋರಾಟ ಮಾಡಬೇಕು. ಇಲ್ಲಿ ನೀವು ಗ್ರೀಟ್‌ ರೂನಿಸ್‌ ಸಂಗ್ರಹಿಸಿ ಎಲ್ಡೆನ್‌ ದೇವರಾಗಬೇಕು.  ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4, ಎಕ್ಸ್‌ಬಾಕ್ಸ್‌ ಸೀರಿಸ್‌ ಎಕ್ಸ್‌ ಮತ್ತು ಸೀರಿಸ್‌ ಎಸ್‌, ಎಕ್ಸ್‌ಬಾಕ್ಸ್‌ ಒನ್‌, ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ಈ ಗೇಮ್‌ ಲಭ್ಯವಿದೆ. (PlayStation)
Horizon Forbidden West - ಜಗತ್ತನ್ನು ಕಾಪಾಡಲು ಅಲಾಯ್‌ ಮರಳಿದ್ದಾನೆ. ಪಶ್ಚಿಮದ ನಿಶಿದ್ಧ ಭೂಮಿಯಲ್ಲಿ ಹೋರಾಟ ನಡೆಸಲು ಬಯಸುವವರು ಈ ಗೇಮ್‌ನೊಂದಿಗೆ ಸಾಹಸಿ ಕ್ಷಣಗಳನ್ನು ಕಳೆಯಬಹುದು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. 
(4 / 5)
Horizon Forbidden West - ಜಗತ್ತನ್ನು ಕಾಪಾಡಲು ಅಲಾಯ್‌ ಮರಳಿದ್ದಾನೆ. ಪಶ್ಚಿಮದ ನಿಶಿದ್ಧ ಭೂಮಿಯಲ್ಲಿ ಹೋರಾಟ ನಡೆಸಲು ಬಯಸುವವರು ಈ ಗೇಮ್‌ನೊಂದಿಗೆ ಸಾಹಸಿ ಕ್ಷಣಗಳನ್ನು ಕಳೆಯಬಹುದು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. (PlayStation)
Call of Duty: Modern Warfare II – ಎಫ್‌ಪಿಎಸ್‌ ಸಾಗಾದ ಅತ್ಯುತ್ತಮ ಗೇಮ್‌ಗಳಲ್ಲಿ ಇದು ಒಂದಾಗಿದೆ. ಈ ಗೇಮ್‌ನಲ್ಲಿ ಹೆಸರು ಮಾತ್ರ 2009 ಆವೃತ್ತಿಯದ್ದು. ಇದರ ಫೀಚರ್‌ಗಳೆಲ್ಲ ಹೊಸತು. ಪ್ಲೇಸ್ಟೇಷನ್‌ 5, ಎಕ್ಸ್‌ಬಾಕ್ಸ್‌ ಸೀರಿಸ್‌ ಎಕ್ಸ್‌ ಮತ್ತು ಸೀರಿಸ್‌ ಎಸ್‌, ಎಕ್ಸ್‌ಬಾಕ್ಸ್‌ ಒನ್‌, ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ಈ ಗೇಮ್‌ ಲಭ್ಯವಿದೆ. 
(5 / 5)
Call of Duty: Modern Warfare II – ಎಫ್‌ಪಿಎಸ್‌ ಸಾಗಾದ ಅತ್ಯುತ್ತಮ ಗೇಮ್‌ಗಳಲ್ಲಿ ಇದು ಒಂದಾಗಿದೆ. ಈ ಗೇಮ್‌ನಲ್ಲಿ ಹೆಸರು ಮಾತ್ರ 2009 ಆವೃತ್ತಿಯದ್ದು. ಇದರ ಫೀಚರ್‌ಗಳೆಲ್ಲ ಹೊಸತು. ಪ್ಲೇಸ್ಟೇಷನ್‌ 5, ಎಕ್ಸ್‌ಬಾಕ್ಸ್‌ ಸೀರಿಸ್‌ ಎಕ್ಸ್‌ ಮತ್ತು ಸೀರಿಸ್‌ ಎಸ್‌, ಎಕ್ಸ್‌ಬಾಕ್ಸ್‌ ಒನ್‌, ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ಈ ಗೇಮ್‌ ಲಭ್ಯವಿದೆ. (Activision Blizzard)

    ಹಂಚಿಕೊಳ್ಳಲು ಲೇಖನಗಳು