logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023ರಲ್ಲಿ ಗಾಯದಿಂದ ಹೊರಬಿದ್ದವರು 2024ರ ಐಪಿಎಲ್​ಗೆ ಫಿಟ್; ಮರಳಲಿದ್ದಾರೆ ಭಾರತದ ಈ 8 ಸ್ಟಾರ್ ಆಟಗಾರರು

2023ರಲ್ಲಿ ಗಾಯದಿಂದ ಹೊರಬಿದ್ದವರು 2024ರ ಐಪಿಎಲ್​ಗೆ ಫಿಟ್; ಮರಳಲಿದ್ದಾರೆ ಭಾರತದ ಈ 8 ಸ್ಟಾರ್ ಆಟಗಾರರು

Jan 05, 2024 09:48 AM IST

IPL 2024: ಗಾಯದ ಕಾರಣದಿಂದ 2023ರ ಐಪಿಎಲ್​ಗೆ ಅಲಭ್ಯರಾಗಿದ್ದ ಭಾರತದ ಈ ಸ್ಟಾರ್​​ ಆಟಗಾರರು 17ನೇ ಆವೃತ್ತಿಗೆ ಮರಳಲು ಸಜ್ಜಾಗಿದ್ದಾರೆ. ಆ ಆಟಗಾರರ ಪಟ್ಟಿ ಇಲ್ಲಿದೆ.

  • IPL 2024: ಗಾಯದ ಕಾರಣದಿಂದ 2023ರ ಐಪಿಎಲ್​ಗೆ ಅಲಭ್ಯರಾಗಿದ್ದ ಭಾರತದ ಈ ಸ್ಟಾರ್​​ ಆಟಗಾರರು 17ನೇ ಆವೃತ್ತಿಗೆ ಮರಳಲು ಸಜ್ಜಾಗಿದ್ದಾರೆ. ಆ ಆಟಗಾರರ ಪಟ್ಟಿ ಇಲ್ಲಿದೆ.
2023ರ ಐಪಿಎಲ್​ನಲ್ಲಿ ಭಾರತದ ಕೆಲವು ಸ್ಟಾರ್​ ಆಟಗಾರರ ಆಟ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಗಾಯದ ಸಮಸ್ಯೆ ಕಾರಣ ಶ್ರೀಮಂತ ಲೀಗ್​​ನಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಅವೆರೆಲ್ಲಾ ಗಾಯದಿಂದ ಫಿಟ್​ ಆಗಲಿರುವ ಮತ್ತು ಆಗಿರುವ ಭಾರತದ 8 ಆಟಗಾರರ ಪಟ್ಟಿ ಇಲ್ಲಿದೆ.
(1 / 9)

ರಿಷಭ್ ಪಂತ್: 2022ರ ಡಿಸೆಂಬರ್​ 30ರಂದು ನಡೆದ ಭೀಕರ ಕಾರು ಅಪಘಾತದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್​ ಸೇವೆ ದೂರವಾಗಿದ್ದಾರೆ ಪಂತ್. ಇದೀಗ ಐಪಿಎಲ್ 2024ರಲ್ಲಿ ಕ್ರಿಕೆಟ್‌ಗೆ ಮರಳುತ್ತಾರೆ ಎಂದು ವರದಿಗಳಿವೆ. ಅವರು ತಂಡಕ್ಕೆ ಮರಳಿದರೆ, ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸುವ ಸಾಧ್ಯತೆ ಇದೆ.
(2 / 9)

ಜಸ್ಪ್ರೀತ್ ಬುಮ್ರಾ: 2023ರ ಐಪಿಎಲ್​ನಲ್ಲಿ ವೇಗಿ ಬುಮ್ರಾ ಸೇವೆಯನ್ನು ಮುಂಬೈ ಇಂಡಿಯನ್ಸ್ ಕಳೆದುಕೊಂಡಿತ್ತು. ಇದೀಗ ಫುಲ್ ಫಿಟ್ ಆಗಿದ್ದಾರೆ. ಈಗಾಗಲೇ ಭಾರತದ ತಂಡದ ಪರ ಬೆಂಕಿ ಫಾರ್ಮ್​​ನಲ್ಲಿದ್ದು, ಮುಂಬೈಗೆ ಆನೆ ಬಲ ಬಂದಂತಾಗಿದೆ. ಏಷ್ಯಾಕಪ್​, ವಿಶ್ವಕಪ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, ವಿಕೆಟ್ ಬೇಟೆಯಾಡಿದ್ದಾರೆ.
(3 / 9)

ಶ್ರೇಯಸ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಬೆನ್ನುನೋವಿನ ಕಾರಣ 2023 ಐಪಿಎಲ್​ ಅನ್ನು ತಪ್ಪಿಸಿಕೊಂಡಿದ್ದರು. ಇದೀಗ ಪುನರಾಗಮನ ಮಾಡಲು ಬಯಸಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಪರ ರನ್ ಕೊಳ್ಳೆ ಹೊಡೆದಿದ್ದಾರೆ. ನಾಯಕನಾಗಿ ಕೆಕೆಆರ್​ಗೆ ಚೊಚ್ಚಲ ಟ್ರೋಫಿ ಗೆದ್ದುಕೊಡಲು ಯೋಜನೆ ರೂಪಿಸಿದ್ದಾರೆ.
(4 / 9)

ರಜತ್ ಪಟಿದಾರ್: ಇದೀಗ ಭಾರತೀಯ ಕ್ರಿಕೆಟ್‌ನಲ್ಲಿ ಉಜ್ವಲ ನಿರೀಕ್ಷೆಯಲ್ಲಿರುವ ರಜತ್ ಪಾಟಿದಾರ್, ಕಳೆದ ಋತುವಿನಲ್ಲಿ ಹಿಮ್ಮಡಿ ಗಾಯದ ಕಾರಣದಿಂದ ಹೊರಗುಳಿದ್ದರು. ಈಗ ಫಿಟ್​ ಆಗಿದ್ದು ಆರ್​ಸಿಬಿ ಪರ ಐಪಿಎಲ್​ 2024ರಲ್ಲಿ ಮರಳಲು ರೆಡಿಯಾಗಿದ್ದಾರೆ.
(5 / 9)

ವಾಷಿಂಗ್ಟನ್ ಸುಂದರ್: ಮಂಡಿರಜ್ಜು ಗಾಯದಿಂದಾಗಿ ಕಳೆದ ಆವೃತ್ತಿ ಕಳೆದುಕೊಂಡಿದ್ದ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​, ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.
(6 / 9)

ಪ್ರಸಿದ್ಧ್ ಕೃಷ್ಣ: ಗಾಯದ ಕಾರಣ ಐಪಿಎಲ್​ 2023 ಅನ್ನು ತಪ್ಪಿಸಿಕೊಂಡಿದ್ದರು. ಆದರೆ, ರಾಜಸ್ಥಾನ್ ರಾಯಲ್ಸ್‌ ತಂಡದ ಪರ ನಗದು ಸಮೃದ್ಧ ಲೀಗ್‌ನ 2024 ರ ಸೀಸನ್‌ಗೆ ಹಿಂತಿರುಗಲಿದ್ದಾರೆ.
(7 / 9)

ಕಮಲೇಶ್ ನಾಗರಕೋಟಿ: ಬೆನ್ನಿನ ಒತ್ತಡದ ಮುರಿತದಿಂದ ಐಪಿಎಲ್​ 2023ರ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಅವರೀಗ ಐಪಿಎಲ್​ 2024ಕ್ಕೆ ಮರಳಲು ಸಜ್ಜಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ.
(8 / 9)

ರಾಜ್​ ಅಂಗದ್ ಬಾವಾ: ಭುಜದ ಗಾಯದಿಂದಾಗಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಗುಳಿದಿದ್ದರು. ರಾಜ್ ಅಂಗದ್ ಬಾವಾ ಪಂಜಾಬ್​ ಕಿಂಗ್ಸ್​ ಪರ ಕೇವಲ 2 ಪಂದ್ಯಗಳನ್ನು ಆಡಿದ್ದಾರೆ.
(9 / 9)

    ಹಂಚಿಕೊಳ್ಳಲು ಲೇಖನಗಳು