logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhruva Sarja Birthday:ಬಹದ್ದೂರ್‌ ಹುಡುಗನ ಅದ್ದೂರಿ ಹುಟ್ಟುಹಬ್ಬ..ಮಗಳೊಂದಿಗೆ ಮೊದಲ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಆಕ್ಷನ್‌ ಪ್ರಿನ್ಸ್‌

Dhruva Sarja Birthday:ಬಹದ್ದೂರ್‌ ಹುಡುಗನ ಅದ್ದೂರಿ ಹುಟ್ಟುಹಬ್ಬ..ಮಗಳೊಂದಿಗೆ ಮೊದಲ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಆಕ್ಷನ್‌ ಪ್ರಿನ್ಸ್‌

Oct 06, 2022 07:01 AM IST

ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಧ್ರುವ ಸರ್ಜಾ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಮಗಳೊಂದಿಗೆ ಧ್ರುವ ಸರ್ಜಾ ಈ ಬಾರಿ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

  • ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಧ್ರುವ ಸರ್ಜಾ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಮಗಳೊಂದಿಗೆ ಧ್ರುವ ಸರ್ಜಾ ಈ ಬಾರಿ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 
ಧ್ರುವ ಸರ್ಜಾ ಕಳೆದ 2 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ
(1 / 10)
ಧ್ರುವ ಸರ್ಜಾ ಕಳೆದ 2 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ(PC: DHRUVA SARJA👑 FANS)
ವಿಜಯ್‌ ಕುಮಾರ್‌ ಹಾಗೂ ಅಮ್ಮಾಜಿ ದಂಪತಿಯ ಎರಡನೇ ಪುತ್ರ ಧ್ರುವ ಸರ್ಜಾ ಹುಟ್ಟಿದ್ದು 6 ಅಕ್ಟೋಬರ್‌ 1988
(2 / 10)

ಧ್ರುವ ಸರ್ಜಾ ಕುಟುಂಬದಲ್ಲಿ ತಾತ ಶಕ್ತಿಪ್ರಸಾದ್‌, ಸೋದರ ಮಾವ ಅರ್ಜುನ್‌ ಸರ್ಜಾ, ಅಣ್ಣ ಚಿರಂಜೀವಿ ಸರ್ಜಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 
(3 / 10)

 ಚಿತ್ರರಂಗದ ಹಿನ್ನೆಲೆ ಇದ್ದರೂ ಧ್ರುವ ಮಾತ್ರ ಯಾರ ಹೆಸರನ್ನೂ ಬಳಸಿಕೊಳ್ಳದೆ ಕಷ್ಟಪಟ್ಟು ಮುಂದೆ ಬಂದವರು
(4 / 10)

ಸಿನಿಮಾಗಳಲ್ಲಿ ನಟಿಸುವ ಮುನ್ನ ಧ್ರುವ ಸರ್ಜಾ ನಾಟಕ, ಶಾರ್ಟ್‌ ಫಿಲ್ಮ್‌ ಹಾಗೂ ಕೆಲವೊಂದು ಆಲ್ಬಂ ಹಾಡುಗಳಲ್ಲಿ ನಟಿಸಿದ್ದಾರೆ. ಚಂದನ್‌ ಶೆಟ್ಟಿ ಅವರ ಒಂದು ಆಲ್ಬಂ ಹಾಡಿನಲ್ಲೂ ಧ್ರುವ ಸರ್ಜಾ ನಟಿಸಿರುವುದು ಹಲವು ಜನರಿಗೆ ಗೊತ್ತಿಲ್ಲ..
(5 / 10)

2012 ರಲ್ಲಿ ತೆರೆ ಕಂಡ ಅದ್ದೂರಿ ಚಿತ್ರದ ಮೂಲಕ ಧ್ರುವ ಸರ್ಜಾ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರವನ್ನು ಎ.ಪಿ. ಅರ್ಜುನ್‌ ನಿರ್ದೇಶಿಸಿದ್ದರು. 
(6 / 10)

ಬಹದ್ದೂರ್‌, ಭರ್ಜರಿ, ಪ್ರೇಮ ಬರಹ (ಅತಿಥಿ ಪಾತ್ರ) ಪೊಗರು ಸಿನಿಮಾಗಳಲ್ಲಿ ಧ್ರುವ ಸರ್ಜಾ ನಟಿಸಿದ್ದಾರೆ. 
(7 / 10)

ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇರಣಾ ಶಂಕರ್‌ ಅವರನ್ನು ಧ್ರುವ ಸರ್ಜಾ 25 ನವೆಂಬರ್‌ 2019 ರಂದು ಮದುವೆಯಾದರು.
(8 / 10)

ಸದ್ಯಕ್ಕೆ ಆಕ್ಷನ್‌ ಪ್ರಿನ್ಸ್‌ ಅಭಿನಯದ ಮಾರ್ಟಿನ್‌ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ಶೀಘ್ರವೇ ಚಿತ್ರ ತೆರೆ ಕಾಣಲಿದೆ. 
(9 / 10)

ಬುಧವಾರ ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಧ್ರುವ ಹುಟ್ಟುಹಬ್ಬಕ್ಕೆ ಶುಭ ಕೋರಿದ ಮಾರ್ಟಿನ್‌ ಚಿತ್ರತಂಡ. ಮಾರ್ಟಿನ್‌ ಸಿನಿಮಾವನ್ನು ಉದಯ್‌ ಕೆ ಮೆಹ್ತಾ ನಿರ್ಮಿಸಿದ್ದು ಎ.ಪಿ. ಅರ್ಜುನ್‌ ನಿರ್ದೇಶಿಸಿದ್ದಾರೆ. ಈ ಚಿತ್ರ ಕನ್ನಡ, ತೆಲಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು