logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  World Cup 2023: ಏಕದಿನ ವಿಶ್ವಕಪ್ ಟ್ರೋಫಿಯೊಂದಿಗೆ ನಟಿ ಮೀನಾ; ಪುಟ್ನಂಜ ನಟಿಗೆ ಅಪರೂಪದ ಗೌರವ

World Cup 2023: ಏಕದಿನ ವಿಶ್ವಕಪ್ ಟ್ರೋಫಿಯೊಂದಿಗೆ ನಟಿ ಮೀನಾ; ಪುಟ್ನಂಜ ನಟಿಗೆ ಅಪರೂಪದ ಗೌರವ

Aug 26, 2023 03:49 PM IST

ODI World Cup 2023: ದಕ್ಷಿಣ ಭಾರತದ ಖ್ಯಾತ ಹಾಗೂ ಹಿರಿಯ ನಟಿ ಮೀನಾ, ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಈ ವಿಶೇಷ ಗೌರವ ಪಡೆದ ಖುಷಿಯನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ODI World Cup 2023: ದಕ್ಷಿಣ ಭಾರತದ ಖ್ಯಾತ ಹಾಗೂ ಹಿರಿಯ ನಟಿ ಮೀನಾ, ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಈ ವಿಶೇಷ ಗೌರವ ಪಡೆದ ಖುಷಿಯನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರೇಮನಗರಿ ಪ್ಯಾರಿಸ್‌ನ ಜಗತ್‌ಪ್ರಸಿದ್ಧ ಐಫೆಲ್ ಟವರ್‌ ಮುಂದೆ ವಿಶ್ವಕಪ್‌ ಟ್ರೋಫಿ ಜೊತೆಗೆ ಫೋಟೋಗೆ ಪೋಸ್ ನೀಡಿರುವ ಅವರು, ಆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
(1 / 8)

"ಕ್ರಿಕೆಟ್ ವಿಶ್ವಕಪ್ 2023ರ ಟ್ರೋಫಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ ಭಾರತದ ಮೊದಲ ನಟಿ ಎಂಬುದು ನಿಜಕ್ಕೂ ದೊಡ್ಡ ಗೌರವ" ಎಂದು ಪುಟ್ನಂಜ ನಟಿ ಮೀನಾ ಹೇಳಿಕೊಂಡಿದ್ದಾರೆ.
(2 / 8)

ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟಿ, ಕನ್ನಡದಲ್ಲೂ ಹಲವಾರಿ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿರಿಯ ನಟಿಯು ಇದೀಗ ಐಸಿಸಿಯ ಗೌರವಕ್ಕೂ ಪಾತ್ರರಾಗಿದ್ದಾರೆ.
(3 / 8)

ಕನ್ನಡದ ಜನಪ್ರಿಯ ಹಾಗೂ ಎವರ್‌ಗ್ರೀನ್‌ ಸಿನಿಮಾಗಳಾದ ಪುಟ್ನಂಜ, ಮೈ ಆಟೋಗ್ರಾಫ್‌, ಮಹಾಸಾದ್ವಿ ಮಲ್ಲಮ್ಮ, ಗೌಡ್ರು, ಸ್ವಾತಿ ಮುತ್ತು, ಸಿಂಹಾದ್ರಿಯ ಸಿಂಹ, ಶ್ರೀ ಮಂಜುನಾಥ ಮೊದಲಾದ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ.
(4 / 8)

ಡಾ. ವಿಷ್ಣುವರ್ಧನ್‌, ಅಂಬರೀಶ್‌, ರವಿಚಂದ್ರನ್‌, ಸುದೀಪ್‌ ಮೊದಲಾದ ನಟರೊಂದಿಗೆ ಮೀನಾ ತೆರೆ ಹಂಚಿಕೊಂಡಿದ್ದಾರೆ.
(5 / 8)

ಈ ವರ್ಷದ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಂದು ಆರಂಭವಾಗಲಿದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
(6 / 8)

ಪಂದ್ಯಾವಳಿಯು ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
(7 / 8)

ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ವಿಶ್ವಕಪ್‌ಗಾಗಿ ಪರಸ್ಪರ ಸೆಣಸಲಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳು ಭಾರತಕ್ಕೆ ಬರಲಿವೆ.
(8 / 8)

    ಹಂಚಿಕೊಳ್ಳಲು ಲೇಖನಗಳು