logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡುಮ್ಮಸರ್‌ ಕಲಿಯುಗದ ಕರ್ಣ, ಜೂನಿಯರ್‌ ಅಂಬರೀಶಣ್ಣ, ಸಾಹಸಸಿಂಹ ವಿಷ್ಣುವರ್ಧನ; ಗೆಳೆಯನ ಆನಂದ್‌ ಇಷ್ಟೊಂದು ಹೊಗಳಿದ್ಯಾಕೆ? - ಅಮೃತಧಾರೆ ಸೀರಿಯಲ್

ಡುಮ್ಮಸರ್‌ ಕಲಿಯುಗದ ಕರ್ಣ, ಜೂನಿಯರ್‌ ಅಂಬರೀಶಣ್ಣ, ಸಾಹಸಸಿಂಹ ವಿಷ್ಣುವರ್ಧನ; ಗೆಳೆಯನ ಆನಂದ್‌ ಇಷ್ಟೊಂದು ಹೊಗಳಿದ್ಯಾಕೆ? - ಅಮೃತಧಾರೆ ಸೀರಿಯಲ್

Nov 10, 2024 03:38 PM IST

ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಆನಂದ್‌ ತನ್ನ ಆಪ್ತಮಿತ್ರ ಗೌತಮ್‌ ಗುಣಗಾನ ಮಾಡಿದ್ದಾನೆ. ಒಂದು ಸಜ್ಜಪ್ಪ ನೀಡಿದ್ದಕ್ಕೆ ಚಿನ್ನದ ಕಡಗ ಕೊಟ್ಟ ಗೌತಮ್‌ ಬಗ್ಗೆ ಸುಧಾಳಿಗೆ ಅಚ್ಚರಿಯಾಗಿದೆ. ಈ ಸಂದರ್ಭದಲ್ಲಿ ಗೆಳೆಯನ ಗುಣಗಾನ ಮಾಡಿದ್ದಾನೆ.

  • ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಆನಂದ್‌ ತನ್ನ ಆಪ್ತಮಿತ್ರ ಗೌತಮ್‌ ಗುಣಗಾನ ಮಾಡಿದ್ದಾನೆ. ಒಂದು ಸಜ್ಜಪ್ಪ ನೀಡಿದ್ದಕ್ಕೆ ಚಿನ್ನದ ಕಡಗ ಕೊಟ್ಟ ಗೌತಮ್‌ ಬಗ್ಗೆ ಸುಧಾಳಿಗೆ ಅಚ್ಚರಿಯಾಗಿದೆ. ಈ ಸಂದರ್ಭದಲ್ಲಿ ಗೆಳೆಯನ ಗುಣಗಾನ ಮಾಡಿದ್ದಾನೆ.
ಅಮೃತಧಾರೆ ಧಾರಾವಾಹಿಯ ಇಂದಿನ (ಭಾನುವಾರ ನವೆಂಬರ್‌ 10) ಸಂಚಿಕೆಯಲ್ಲಿ ಜೈದೇವ್‌ ತನ್ನ ಪತ್ನಿಗೆ ಸೀರೆ ಕೊಡಿಸಿದ್ದಾನೆ. ಇನ್ನೊಂದೆಡೆ ಸುಧಾ ಮತ್ತು ಆನಂದ್‌ ಮಾತುಕತೆ ಮಾತ್ರ ಪ್ರಮುಖ ಹೈಲೈಟ್‌ ಆಗಿದೆ. ಸುಧಾ ನೀಡಿದ ಸಜ್ಜಪ್ಪ ತಿಂದು ಖುಷಿಯಾಗಿ ಗೌತಮ್‌ ಚಿನ್ನದ ಕಡಗವನ್ನೇ ಆನಂದ್‌ ಮೂಲಕ ಕಳುಹಿಸಿಕೊಟ್ಟಿದ್ದಾನೆ. ಆದರೆ, ಈ ರೀತಿ ಗಿಫ್ಟ್‌ ನೀಡಿದ್ದು ತನ್ನ ತಂಗಿಗೆ ಎಂಬ ವಿಚಾರ ಆತನಿಗೆ ಗೊತ್ತಿಲ್ಲ. 
(1 / 7)

ಸಜ್ಜಪ್ಪ ನೀಡಿದ್ದಕ್ಕೆ ಚಿನ್ನದ ಬಳೆ ಯಾರಾದರೂ ಕೊಡ್ತಾರ ಎಂದು ಸುಧ ಅಚ್ಚರಿಯಿಂದ ಕೇಳಿದ್ದಾಳೆ. ಅದಕ್ಕೆ ಆನಂದ್‌ ನನ್ನ ಗೆಳೆಯ ಅಂದರೆ ಹಾಗೆಯೇ ಆತ ಕಲಿಯುಗದ ಕರ್ಣ, ಕಲಿಯುಗದ ಕರ್ಣ ಅಂದರೆ ಅಂಬರೀಶಣ್ಣ, ನನ್ನ ಗೆಳೆಯ ಜೂನಿಯರ್‌ ಅಂಬರೀಶಣ್ಣ ಎಂದು ಹೊಗಳಿದ್ದಾನೆ. 
(2 / 7)

"ನನ್ನ ಗೆಳೆಯ ನೋಡಲು ದಢೂತಿ ವ್ಯಕ್ತಿ. ಆದರೆ, ಆತನ ಮನಸ್ಸು ಮಾತ್ರ ಮಗು ಥರ" ಎಂದು ಆನಂದ್‌ ಹೊಗಳುತ್ತಾರೆ. "ಅವನು ಯುಜಮಾನ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ರೀತಿ, ಸೇಮ್‌ ಅದೇ ರೀತಿ ಇದ್ದಾನೆ" ಎಂದು ಆಪ್ತಮಿತ್ರನ ಗುಣಗಾನ ಮಾಡುತ್ತಾರೆ ಆನಂದ್‌. 
(3 / 7)

"ಇವನು ಅಂಬರೀಶ್‌  ಹೌದು, ಸಾಹಸ ಸಿಂಹ ವಿಷ್ಣುವರ್ಧನ್‌ ಕೂಡ ಹೌದು, ಇಬ್ಬರ ಮಿಶ್ರ ಇವನು" ಎಂದು ಹೇಳುತ್ತಾರೆ. "ಅವನು ದೊಡ್ಡ ಗಿಫ್ಟ್‌. ಅದಕ್ಕೆ ಅವನು ಎಲ್ಲರಿಗೂ ಗಿಫ್ಟ್‌ ನೀಡುತ್ತಾ ಇರುತ್ತಾನೆ" ಎಂದು ಹೊಗಳುತ್ತಾರೆ. 
(4 / 7)

"ಅವರು ತುಂಬಾ ಒಳ್ಳೆ ಅಂಕಲ್‌, ನಮಗೂ ಚಾಕೋಲೇಟ್‌ ಎಲ್ಲಾ ಕೊಡ್ತಾ ಇರ್ತಾರೆ" ಎಂದು ಆನಂದ್‌ ಮಕ್ಕಳು ಕೂಡ ಗೌತಮ್‌ ಗುಣಗಾನ ಮಾಡುತ್ತಾರೆ. "ನಮ್ಮಪ್ಪ ಇದ್ದಾರೆ, ಏನಾದರೂ ಕೇಳಿದ್ರೆ ನಿನ್ನಮ್ಮನನ್ನು ಕೇಳು ಅಂತಾರೆ" ಎಂದು ಮಕ್ಕಳು ಆನಂದ್‌ಗೆ ಟಾಂಗ್‌ ನೀಡುತ್ತಾರೆ. 
(5 / 7)

ಇನ್ನೊಂದೆಡೆ ಭೂಮಿಕಾ ಒಂದಿಷ್ಟು ಉಡುಗೊರೆಗಳನ್ನು, ಅವಶ್ಯ ವಸ್ತುಗಳನ್ನು ರೆಡಿ ಮಾಡಿ ಗೌತಮ್‌ಗೆ ನೀಡುತ್ತಾರೆ. ಇದನ್ನು ನಿನ್ನೆ ಸಹಾಯ ಮಾಡಿದವರಿಗೆ ನೀಡಿ ಎನ್ನುತ್ತಾಳೆ. ಖುಷಿಯಿಂದ ಅದಕ್ಕೆ ಗೌತಮ್‌ ಒಪ್ಪುತ್ತಾರೆ. ಆದರೆ, ಅವಳು ಅದನ್ನು ತೆಗೆದುಕೊಳ್ಳದೆ ಇದ್ದರೆ ಏನು ಮಾಡೋದು ಅನ್ನುತ್ತಾರೆ. 
(6 / 7)

"ಹಬ್ಬದ ಪ್ರಯುಕ್ತ ಗಿಫ್ಟ್‌ ನೀಡ್ತಾ ಇದ್ದೇವೆ. ಇದು ನಮ್ಮ ಮನೆಯ ಸಂಪ್ರದಾಯ ಅನ್ನಿ" ಎಂದು ಭೂಮಿಕಾ ಐಡಿಯಾ ನೀಡುತ್ತಾರೆ. ಈ ರೀತಿ ಉಡುಗೊರೆ ಹಿಡಿದುಕೊಂಡು ಸುಧಾಳ ಮನೆಗೆ ಹೋಗುವ ಗೌತಮ್‌ಗೆ ಅಲ್ಲಿ ತನ್ನ ತಾಯಿಯನ್ನು ನೋಡುವ ಸೌಭಾಗ್ಯ ದೊರಕುವ ಸಾಧ್ಯತೆ ಇದೆ. ಗೌತಮ್‌ ಆ ಮನೆಗೆ ಹೋಗುವಾ ಅಲ್ಲಿ ಗೌತಮ್‌ ಅವರ ತಾಯಿ "ಗುಂಡು ಗುಂಡು" ಎಂದು ತನ್ನ ಮಗನನ್ನು ಕನವರಿಸುತ್ತಾ ಇದ್ದಾರೆ. ಗೌತಮ್‌ ಮತ್ತು ತಾಯಿಯ ಭೇಟಿ ಆಗುತ್ತಾ ಎಂದು ಕಾದು ನೋಡಬೇಕಿದೆ.  
(7 / 7)

    ಹಂಚಿಕೊಳ್ಳಲು ಲೇಖನಗಳು