logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಂಧ್ರ ಪ್ರದೇಶದಲ್ಲಿ ಮಿಚಾಂಗ್ ಚಂಡಮಾರುತ ದುರ್ಬಲದ ಮುನ್ಸೂಚನೆ; ತಿರುಪತಿಯಲ್ಲಿ ಭಾರಿ ಮಳೆಗೆ ಜನ ತತ್ತರ

ಆಂಧ್ರ ಪ್ರದೇಶದಲ್ಲಿ ಮಿಚಾಂಗ್ ಚಂಡಮಾರುತ ದುರ್ಬಲದ ಮುನ್ಸೂಚನೆ; ತಿರುಪತಿಯಲ್ಲಿ ಭಾರಿ ಮಳೆಗೆ ಜನ ತತ್ತರ

Dec 05, 2023 06:11 PM IST

ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದಲ್ಲಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಿರುಪತಿಯಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಇದರ ಫೋಟೊಸ್ ಇಲ್ಲಿದೆ.

ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದಲ್ಲಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಿರುಪತಿಯಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಇದರ ಫೋಟೊಸ್ ಇಲ್ಲಿದೆ.
ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರಿಸಿದ್ದು, ತಿರುಪತಿಯಲ್ಲಿ ಬಾರಿ ಮಳೆಯಾಗಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ
(1 / 5)
ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರಿಸಿದ್ದು, ತಿರುಪತಿಯಲ್ಲಿ ಬಾರಿ ಮಳೆಯಾಗಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ(PTI)
ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಇಂತಹ ರಸ್ತೆಗಳಲ್ಲೇ ಬೈಕ್ ಸವಾರನೊಬ್ಬ ಸಾಗುವ ಮೂಲಕ ಹುಚ್ಚು ಸಾಹಸ ಮಾಡಿದ್ದಾನೆ.
(2 / 5)
ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಇಂತಹ ರಸ್ತೆಗಳಲ್ಲೇ ಬೈಕ್ ಸವಾರನೊಬ್ಬ ಸಾಗುವ ಮೂಲಕ ಹುಚ್ಚು ಸಾಹಸ ಮಾಡಿದ್ದಾನೆ.(PTI)
ಮಿಂಚಾಗ್ ಚಂಡಮಾರುತದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಆಂಧ್ರ ಸರ್ಕಾರ ಕೂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಲ್ಗೊಂಡ ಜಿಲ್ಲೆಯಲ್ಲಿರುವ ನಾಗಾರ್ಜುನ ಡ್ಯಾಂನ ಒಳ ಹರಿವು ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಡ್ಯಾಂ ಬಳಿಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 
(3 / 5)
ಮಿಂಚಾಗ್ ಚಂಡಮಾರುತದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಆಂಧ್ರ ಸರ್ಕಾರ ಕೂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಲ್ಗೊಂಡ ಜಿಲ್ಲೆಯಲ್ಲಿರುವ ನಾಗಾರ್ಜುನ ಡ್ಯಾಂನ ಒಳ ಹರಿವು ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಡ್ಯಾಂ ಬಳಿಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. (PTI)
ಭಾರಿ ಮಳೆಯಿಂದ ತಿರುಪತಿ ಸಮೀಪದ ಕೆಲವು ಕೆರೆಗಳು ತುಂಬಿ ಹರಿಯುತ್ತಿದ್ದವು. ಕೆರೆಗಳು ತುಂಬಿ ಹಿನ್ನೆಲೆಯಲ್ಲಿ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದರೂ ವಾಹನ ಸವಾರರು ಅದೇ ರಸ್ತೆಗಳು ಸಾಗುವ ಮೂಲಕ ಹುಚ್ಚು ಸಾಹಸ ಮಾಡಿದ್ದು ಕಂಡು ಬಂದಿತು. 
(4 / 5)
ಭಾರಿ ಮಳೆಯಿಂದ ತಿರುಪತಿ ಸಮೀಪದ ಕೆಲವು ಕೆರೆಗಳು ತುಂಬಿ ಹರಿಯುತ್ತಿದ್ದವು. ಕೆರೆಗಳು ತುಂಬಿ ಹಿನ್ನೆಲೆಯಲ್ಲಿ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದರೂ ವಾಹನ ಸವಾರರು ಅದೇ ರಸ್ತೆಗಳು ಸಾಗುವ ಮೂಲಕ ಹುಚ್ಚು ಸಾಹಸ ಮಾಡಿದ್ದು ಕಂಡು ಬಂದಿತು. (PTI)
ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳ ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಯಿತು. ಆಂಧ್ರಪ್ರದೇಶಕ್ಕೆ ಇಂದು (ಡಿಸೆಂಬರ್ 5, ಮಂಗಳವಾರ) ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಇತ್ತು. ಮುಂದಿನ ಕೆಲ ಗಂಟೆಗಳಲ್ಲಿ ಮಿಚಾಂಗ್ ಸೈಕ್ಲೋನ್ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
(5 / 5)
ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳ ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಯಿತು. ಆಂಧ್ರಪ್ರದೇಶಕ್ಕೆ ಇಂದು (ಡಿಸೆಂಬರ್ 5, ಮಂಗಳವಾರ) ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಇತ್ತು. ಮುಂದಿನ ಕೆಲ ಗಂಟೆಗಳಲ್ಲಿ ಮಿಚಾಂಗ್ ಸೈಕ್ಲೋನ್ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.(PTI)

    ಹಂಚಿಕೊಳ್ಳಲು ಲೇಖನಗಳು