logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suv ಕಾರು ನೀಡುವಂತೆ ಹೆಚ್ಚಾಯ್ತು ಆಗ್ರಹ; ಸಿರಾಜ್​ರನ್ನು ಅವೆಂಜರ್ಸ್​​ಗೆ ಹೋಲಿಸಿ ಆನಂದ್ ಮಹೀಂದ್ರಾ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾ ಶೇಕ್

SUV ಕಾರು ನೀಡುವಂತೆ ಹೆಚ್ಚಾಯ್ತು ಆಗ್ರಹ; ಸಿರಾಜ್​ರನ್ನು ಅವೆಂಜರ್ಸ್​​ಗೆ ಹೋಲಿಸಿ ಆನಂದ್ ಮಹೀಂದ್ರಾ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾ ಶೇಕ್

Sep 18, 2023 08:09 PM IST

Anand Mahindra-Mohammed Siraj: ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನದ ಹಿನ್ನೆಲೆ ಉದ್ಯಮಿ ಆನಂದ್ ಮಹೀಂದ್ರಾಗೆ ಫ್ಯಾನ್ಸ್​ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಸಿರಾಜ್​ಗೆ ಎಸ್​​ಯುವಿ ಕಾರನ್ನು ಉಡುಗೊರೆ ನೀಡುವಂತೆ ಒತ್ತಾಯಿಸಿದ್ದಾರೆ.

  • Anand Mahindra-Mohammed Siraj: ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನದ ಹಿನ್ನೆಲೆ ಉದ್ಯಮಿ ಆನಂದ್ ಮಹೀಂದ್ರಾಗೆ ಫ್ಯಾನ್ಸ್​ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಸಿರಾಜ್​ಗೆ ಎಸ್​​ಯುವಿ ಕಾರನ್ನು ಉಡುಗೊರೆ ನೀಡುವಂತೆ ಒತ್ತಾಯಿಸಿದ್ದಾರೆ.
ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡವನ್ನು 10 ವಿಕೆಟ್​​ಗಳಿಂದ ಮಣಿಸಿತು. ಇದರೊಂದಿಗೆ ದಾಖಲೆಯ 8ನೇ ಟ್ರೋಫಿಗೆ ಮುತ್ತಿಕ್ಕಿತು ಭಾರತ.
(1 / 13)

2022ರಲ್ಲಿ ಸೂಪರ್​-4 ಹಂತದಲ್ಲಿ ನಿರಾಸೆ ಹೊಂದಿದ್ದ ಭಾರತ ತಂಡ, ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಯಶಸ್ಸು ಕಂಡಿದೆ. ಇದು ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ 2ನೇ ಏಷ್ಯಾಕಪ್ ಪ್ರಶಸ್ತಿ. 2018ರಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಭಾರತ ಗೆದ್ದಿತ್ತು.
(2 / 13)
2022ರಲ್ಲಿ ಸೂಪರ್​-4 ಹಂತದಲ್ಲಿ ನಿರಾಸೆ ಹೊಂದಿದ್ದ ಭಾರತ ತಂಡ, ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಯಶಸ್ಸು ಕಂಡಿದೆ. ಇದು ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ 2ನೇ ಏಷ್ಯಾಕಪ್ ಪ್ರಶಸ್ತಿ. 2018ರಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಭಾರತ ಗೆದ್ದಿತ್ತು.(BCCI)
ಮೊಹಮ್ಮದ್ ಸಿರಾಜ್ ಅವರ ಮೊನಚಾದ ವೇಗದ ದಾಳಿಯಿಂದ ಕಂಗೆಟ್ಟ ಲಂಕಾ, ಎದುರುತ್ತರ ನೀಡಲಾಗದೆ 50 ರನ್​ಗಳಿಗೆ ಸರ್ವಪತನ ಕಂಡಿತು. ಸಿರಾಜ್​ 7 ಓವರ್​​ಗಳಲ್ಲಿ 1 ಮೇಡನ್ ಸಹಿತ 21 ರನ್​ ನೀಡಿ 6 ವಿಕೆಟ್ ಪಡೆದು ಮಿಂಚಿದರು. 
(3 / 13)

ಸಿರಾಜ್​ ಬೆಂಕಿ ಬೌಲಿಂಗ್​​ಗೆ ಇಡೀ ಜಗತ್ತೇ ಫಿದಾ ಆಗಿದೆ. ಮಾಜಿ-ಹಾಲಿ ಕ್ರಿಕೆಟರ್​​ಗಳು ಸಿರಾಜ್​ ಸ್ಪೆಲ್​ಗೆ ಬೆರರಾಗಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆದ ಸಿರಾಜ್​ರನ್ನು ಅಭಿಮಾನಿಗಳು ಎತ್ತಿ ಮೆರೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
(4 / 13)

(5 / 13)

ಅಭಿಮಾನಿಗಳ ಮನವಿಯ ಬೆನ್ನಲ್ಲೇ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಕಾರ್ಯಕ್ಷಮತೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಆ್ಯಕ್ಷನ್​-ಅಡ್ವೆಂಚರ್​ ಗೇಮ್​ ಆದ ಮಾರ್ವೆಲ್ಸ್ ಅವೆಂಜರ್​​ಗೆ ಹೋಲಿಸಿದ್ದಾರೆ.
(6 / 13)

ತನ್ನ ಎಕ್ಸ್​ ಖಾತೆಯ ಮೊದಲ ಪೋಸ್ಟ್​​ನಲ್ಲಿ ನಮ್ಮ ಎದುರಾಳಿಗಳಿಗಾಗಿ ನನ್ನ ಹೃದಯ ಹಿಂದೆಂದೂ ಮರುಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಾವು ಅವರ ಮೇಲೆ ಅಲೌಕಿಕ ಶಕ್ತಿಯನ್ನು ಪ್ರದರ್ಶಿಸಿದಂತೆ ಭಾಸವಾಗುತ್ತಿದೆ. ಮೊಹಮ್ಮದ್​ ಸಿರಾಜ್​​ ನೀವು ನಿಜವಾಗಿಯೂ ಮಾರ್ವೆಲ್ ಅವೆಂಜರ್ ಎಂದು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ.
(7 / 13)

ಆನಂದ್​ ಮಹೀಂದ್ರ ಈ ಪೋಸ್ಟ್​ ಹಾಕಿದ ಬೆನ್ನಲ್ಲೇ ಎಸ್​ಯುವಿ ಕಾರನ್ನು ನೀಡುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಈ ಮನವಿಗೆ ಉತ್ತರಿಸಿದ ಆನಂದ್ ಮಹೀಂದ್ರಾ, ಈಗಾಗಲೇ ಕಾರನ್ನು ಕೊಟ್ಟಿದ್ದೇನೆ. ಅವರಲ್ಲಿದೆ ಎಂದು ಹೇಳಿದ್ದಾರೆ.
(8 / 13)

2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​​-ಗವಾಸ್ಕರ್​​ ಟ್ರೋಫಿ ಗೆದ್ದಿದ್ದ ಭಾರತ ತಂಡದ ಕೆಲವು ಆಟಗಾರರಿಗೆ ಆನಂದ್ ಮಹೀಂದ್ರಾ ಥಾರ್ ಕಾರನ್ನು ಉಡುಗೊರೆ ನೀಡಿದ್ದರು. ಇದು ಐತಿಹಾಸಿಕ ಗೆಲುವು ಆಗಿತ್ತು. ಈ ಕಾರಣದಿಂದ ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಯುವ ಆಟಗಾರರಿಗೆ ಥಾರ್ ಕಾರನ್ನು ಗಿಫ್ಟ್ ನೀಡಿದ್ದರು. ಈ ಕಾರು ಪಡೆದ ಆಟಗಾರರಲ್ಲಿ ಸಿರಾಜ್ ಕೂಡ ಒಬ್ಬರು ಆಗಿದ್ದರು.
(9 / 13)

ಫೈನಲ್​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಅವರಿಗೆ ಸಿಕ್ಕ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯ ಮೊತ್ತ 5 ಸಾವಿರ ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 4 ಲಕ್ಷಕ್ಕೂ (4.15 ಲಕ್ಷ) ಅಧಿಕ ಮೊತ್ತ. ಇಷ್ಟು ಮೊತ್ತವನ್ನು ಮೈದಾನದ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. 
(10 / 13)

ಏಷ್ಯಾಕಪ್​​ ಇತಿಹಾಸದಲ್ಲಿ ಇನ್ನಿಂಗ್ಸ್​​ವೊಂದರಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಸಾಧನೆ ಮಾಡಿದ 2ನೇ ಬೌಲರ್ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಶ್ರೀಲಂಕಾದ ಅಜಂತಾ ಮೆಂಡೀಸ್ 2008ರಲ್ಲಿ ನಡೆದ ಭಾರತದ ಎದುರಿನ ಪಂದ್ಯದಲ್ಲಿ 13 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದೀಗ ಏಷ್ಯಾಕಪ್​​ನ ಇನ್ನಿಂಗ್ಸ್​ವೊಂದರಲ್ಲಿ 6 ವಿಕೆಟ್ ಪಡೆದ ಸಿರಾಜ್ 2ನೇ ಬೌಲರ್​ ಎಂಬ ದಾಖಲೆ ಬರೆದರು.
(11 / 13)

4ನೇ ಓವರ್​ನಲ್ಲಿ ಪಾತುಮ್ ನಿಸ್ಸಂಕಾ, ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಧನಜಂಯ ಡಿ ಸಿಲ್ವಾ ರನ್ನು ಔಟ್ ಮಾಡಿದರು. ಆ ಮೂಲಕ ಒಂದೇ ಓವರ್​​​ನಲ್ಲಿ 4 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿದರು. ಬಳಿಕ ದಸುನ್ ಶನಕ, ಕುಸಾಲ್ ಮೆಂಡೀಸ್​ರನ್ನು ಬಲೆಗೆ ಬೀಳಿಸಿಕೊಂಡರು. ಇದರೊಂದಿಗೆ 6ನೇ ವಿಕೆಟ್​ಗಳ ಸಾಧನೆ ಮಾಡಿದರು. ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
(12 / 13)

ಮೊಹಮ್ಮದ್ ಸಿರಾಜ್​ಗೆ ಆನಂದ್ ಮಹೀಂದ್ರಾ ಅವರು ನೀಡಿದ್ದ ಥಾರ್ ಕಾರು ಇದು. ಈ ಕಾರನ್ನು ಸಿರಾಜ್ ಅವರ ತಾಯಿ ಸ್ವೀಕರಿಸಿದ್ದರು.
(13 / 13)

    ಹಂಚಿಕೊಳ್ಳಲು ಲೇಖನಗಳು