logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ 3 ಚಿನ್ನ ಸೇರಿ 15 ಪದಕ; ಅರ್ಧಶತಕ ಬಾರಿಸಿ ಪದಕಗಳ ಪಟ್ಟಿಯಲ್ಲಿ ಮೇಲೇರಿದ ಭಾರತ

ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ 3 ಚಿನ್ನ ಸೇರಿ 15 ಪದಕ; ಅರ್ಧಶತಕ ಬಾರಿಸಿ ಪದಕಗಳ ಪಟ್ಟಿಯಲ್ಲಿ ಮೇಲೇರಿದ ಭಾರತ

Oct 02, 2023 01:09 AM IST

Asian Games 2023: ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ ಭಾರತ ಮೂರು ಚಿನ್ನದ ಗೆದ್ದಿದೆ. ಅಲ್ಲದೆ, ಪದಕ ಪಟ್ಟಿಯಲ್ಲಿ ಅರ್ಧಶತಕ ದಾಟಿದೆ. 

  • Asian Games 2023: ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ ಭಾರತ ಮೂರು ಚಿನ್ನದ ಗೆದ್ದಿದೆ. ಅಲ್ಲದೆ, ಪದಕ ಪಟ್ಟಿಯಲ್ಲಿ ಅರ್ಧಶತಕ ದಾಟಿದೆ. 
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದಾರೆ. 8ನೇ ದಿನದ ಅಂತ್ಯಕ್ಕೆ (ಅಕ್ಟೋಬರ್​ 1ರ ಅಂತ್ಯಕ್ಕೆ) ಭಾರತ 3 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
(1 / 12)
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದಾರೆ. 8ನೇ ದಿನದ ಅಂತ್ಯಕ್ಕೆ (ಅಕ್ಟೋಬರ್​ 1ರ ಅಂತ್ಯಕ್ಕೆ) ಭಾರತ 3 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 8ನೇ ದಿನ ಭಾರತದ ಅಥ್ಲೀಟ್‌ಗಳು ಒಟ್ಟು 15 ಪದಕವನ್ನು ಗೆದ್ದುಕೊಂಡರು. ಅದರಲ್ಲಿ ಪ್ರಮುಖವಾಗಿ ತಜಿಂದರ್‌ಪಾಲ್ ಸಿಂಗ್ ತೂರ್ ಸತತ 2ನೇ ಚಿನ್ನ ಗೆಲ್ಲುವ ಮೂಲಕ ಶಾಟ್‌ಪುಟ್ ಪ್ರಶಸ್ತಿಯನ್ನು ಉಳಿಸಿಕೊಂಡರು. 2018ರ ಏಷ್ಯನ್ ಗೇಮ್ಸ್​​ನಲ್ಲೂ ಚಿನ್ನದ ಪದಕದ ಸಾಧನೆ ಮಾಡಿದ್ದರು.
(2 / 12)
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 8ನೇ ದಿನ ಭಾರತದ ಅಥ್ಲೀಟ್‌ಗಳು ಒಟ್ಟು 15 ಪದಕವನ್ನು ಗೆದ್ದುಕೊಂಡರು. ಅದರಲ್ಲಿ ಪ್ರಮುಖವಾಗಿ ತಜಿಂದರ್‌ಪಾಲ್ ಸಿಂಗ್ ತೂರ್ ಸತತ 2ನೇ ಚಿನ್ನ ಗೆಲ್ಲುವ ಮೂಲಕ ಶಾಟ್‌ಪುಟ್ ಪ್ರಶಸ್ತಿಯನ್ನು ಉಳಿಸಿಕೊಂಡರು. 2018ರ ಏಷ್ಯನ್ ಗೇಮ್ಸ್​​ನಲ್ಲೂ ಚಿನ್ನದ ಪದಕದ ಸಾಧನೆ ಮಾಡಿದ್ದರು.(REUTERS)
ಪುರುಷರ 1000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಪ್ರಾಬಲ್ಯ ಸಾಧಿಸಿದರು. ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಸಾಧನೆ ಮಾಡಿದರು ಸೇಬಲ್. ಅವರು 8:19.50 ಸೆಂಕೆಂಡ್​ಗಳಲ್ಲಿ ಗೆರೆ ದಾಟಿ ಚಿನ್ನವನ್ನು ಸ್ವಂತ ಮಾಡಿಕೊಂಡರು.
(3 / 12)
ಪುರುಷರ 1000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಪ್ರಾಬಲ್ಯ ಸಾಧಿಸಿದರು. ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಸಾಧನೆ ಮಾಡಿದರು ಸೇಬಲ್. ಅವರು 8:19.50 ಸೆಂಕೆಂಡ್​ಗಳಲ್ಲಿ ಗೆರೆ ದಾಟಿ ಚಿನ್ನವನ್ನು ಸ್ವಂತ ಮಾಡಿಕೊಂಡರು.(PTI)
ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಬೆಳ್ಳಿ ಗೆದ್ದರು. ಆದರೆ, ಓಟವು ಕೆಲವು ಪ್ರಮುಖ ವಿವಾದಗಳೊಂದಿಗೆ ಪ್ರಾರಂಭವಾಯಿತು. 
(4 / 12)
ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಬೆಳ್ಳಿ ಗೆದ್ದರು. ಆದರೆ, ಓಟವು ಕೆಲವು ಪ್ರಮುಖ ವಿವಾದಗಳೊಂದಿಗೆ ಪ್ರಾರಂಭವಾಯಿತು. (PTI)
ಚೀನಾದ ಆಟಗಾರ್ತಿ ಮೊದಲಿಗೆ ಓಟ ಆರಂಭಿಸಿ ತಪ್ಪು ಮಾಡಿದ್ದರೂ, ಜ್ಯೋತಿಗೂ ಅನರ್ಹತೆ ಪ್ಯಾಡಲ್ ತೋರಿಸಲಾಯಿತು. ಸುದೀರ್ಘ ಚರ್ಚೆಗಳ ನಂತರ, ಇಬ್ಬರಿಗೂ ಸ್ಪರ್ಧಿಸಲು ಅವಕಾಶ ನೀಡಲಾಯಿತು ಯಾನ್ನಿ ಮೂಲತಃ 2ನೇ ಸ್ಥಾನ ಗಳಿಸಿದ್ದರು. ನಂತರ ಆಕೆಯನ್ನು ಅನರ್ಹಗೊಳಿಸಿ, ಯರ್ರಾಜಿಯ ಪದಕವನ್ನು ಮೇಲ್ದರ್ಜೆಗೇರಿಸಲಾಯಿತು.
(5 / 12)
ಚೀನಾದ ಆಟಗಾರ್ತಿ ಮೊದಲಿಗೆ ಓಟ ಆರಂಭಿಸಿ ತಪ್ಪು ಮಾಡಿದ್ದರೂ, ಜ್ಯೋತಿಗೂ ಅನರ್ಹತೆ ಪ್ಯಾಡಲ್ ತೋರಿಸಲಾಯಿತು. ಸುದೀರ್ಘ ಚರ್ಚೆಗಳ ನಂತರ, ಇಬ್ಬರಿಗೂ ಸ್ಪರ್ಧಿಸಲು ಅವಕಾಶ ನೀಡಲಾಯಿತು ಯಾನ್ನಿ ಮೂಲತಃ 2ನೇ ಸ್ಥಾನ ಗಳಿಸಿದ್ದರು. ನಂತರ ಆಕೆಯನ್ನು ಅನರ್ಹಗೊಳಿಸಿ, ಯರ್ರಾಜಿಯ ಪದಕವನ್ನು ಮೇಲ್ದರ್ಜೆಗೇರಿಸಲಾಯಿತು.(REUTERS)
ಭಾರತದ ಪುರುಷರ ಬ್ಯಾಡ್ಮಿಂಟನ್ 3-2 ರಿಂದ ಚೀನಾ ವಿರುದ್ಧ ಸೋತ ನಂತರ ಬೆಳ್ಳಿ ಗೆದ್ದರು. ಪುರುಷರ ತಂಡ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
(6 / 12)
ಭಾರತದ ಪುರುಷರ ಬ್ಯಾಡ್ಮಿಂಟನ್ 3-2 ರಿಂದ ಚೀನಾ ವಿರುದ್ಧ ಸೋತ ನಂತರ ಬೆಳ್ಳಿ ಗೆದ್ದರು. ಪುರುಷರ ತಂಡ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.(PTI)
ಬೆಳಿಗ್ಗೆ ಭಾರತದ ಪುರುಷರ ಟ್ರ್ಯಾಪ್ ತಂಡ ಪೃಥ್ವಿರಾಜ್ ತೊಂಡೈಮಾನ್, ಜೋರಾವರ್ ಸಿಂಗ್ ಸಂಧು ಮತ್ತು ಕಿನಾನ್ ಡೇರಿಯಸ್ ಚೆನೈ ಚಿನ್ನ ಗೆದ್ದರು.
(7 / 12)
ಬೆಳಿಗ್ಗೆ ಭಾರತದ ಪುರುಷರ ಟ್ರ್ಯಾಪ್ ತಂಡ ಪೃಥ್ವಿರಾಜ್ ತೊಂಡೈಮಾನ್, ಜೋರಾವರ್ ಸಿಂಗ್ ಸಂಧು ಮತ್ತು ಕಿನಾನ್ ಡೇರಿಯಸ್ ಚೆನೈ ಚಿನ್ನ ಗೆದ್ದರು.(AP)
ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಬೆಳ್ಳಿ ಪದಕ ಪಡೆದರು. ಈ ಮೂಲಕ ಏಷ್ಯನ್ ಗೇಮ್ಸ್ ಗಾಲ್ಫ್‌ (Golf) ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅದಿತಿ ಅಶೋಕ್ ಪಾತ್ರರಾಗಿದ್ದಾರೆ. ಅಲ್ಲದೆ, ಶೂಟಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ಪದಕಗಳು ಹರಿದು ಬಂದಿವೆ.
(8 / 12)

ಪದಕ ಪಟ್ಟಿಯಲ್ಲಿ ಚೀನಾ ಮುಂದುವರೆದಿದೆ. 133 ಚಿನ್ನ, 72 ಬೆಳ್ಳಿ, 39 ಕಂಚು ಸೇರಿ ಒಟ್ಟು 244 ಪದಕ ಗೆದ್ದಿದೆ.
(9 / 12)
ಪದಕ ಪಟ್ಟಿಯಲ್ಲಿ ಚೀನಾ ಮುಂದುವರೆದಿದೆ. 133 ಚಿನ್ನ, 72 ಬೆಳ್ಳಿ, 39 ಕಂಚು ಸೇರಿ ಒಟ್ಟು 244 ಪದಕ ಗೆದ್ದಿದೆ.
ರಿಪಬ್ಲಿಕ್ ಆಫ್ ಕೊರಿಯಾ ಎರಡನೇ ಸ್ಥಾನದಲ್ಲಿದೆ. 30 ಚಿನ್ನ 35 ಬೆಳ್ಳಿ, 60 ಕಂಚು ಸೇರಿ 125 ಪದಕಗಳನ್ನು ತನ್ನದಾಗಿಸಿಕೊಂಡಿದೆ.
(10 / 12)
ರಿಪಬ್ಲಿಕ್ ಆಫ್ ಕೊರಿಯಾ ಎರಡನೇ ಸ್ಥಾನದಲ್ಲಿದೆ. 30 ಚಿನ್ನ 35 ಬೆಳ್ಳಿ, 60 ಕಂಚು ಸೇರಿ 125 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಜಪಾನ್​ 112 ಪದಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 29 ಚಿನ್ನ, 41 ಬೆಳ್ಳಿ, 42 ಕಂಚು ಗೆದ್ದಿದೆ.
(11 / 12)
ಜಪಾನ್​ 112 ಪದಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 29 ಚಿನ್ನ, 41 ಬೆಳ್ಳಿ, 42 ಕಂಚು ಗೆದ್ದಿದೆ.
ಅಕ್ಟೋಬರ್​ 1ರ ಭಾನುವಾರದ ಅಂತ್ಯಕ್ಕೆ 13 ಚಿನ್ನ , 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 53 ಪದಕಗಳು ಭಾರತದ ಪಾಲಾಗಿದೆ. ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನೂ ಈ ಕ್ರೀಡಾ ಕೂಟ ಒಂದು ವಾರ ನಡೆಯಲಿದ್ದು, ಅದಕ್ಕೂ ಮೊದಲೇ ಪದಕಗಳಲ್ಲಿ ಅರ್ಧಶತಕ ಬಾರಿಸಿದೆ.
(12 / 12)

    ಹಂಚಿಕೊಳ್ಳಲು ಲೇಖನಗಳು