logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahindra Xev 9e: ಇದು ಎಕ್ಸ್‌ಯುವಿ ಅಲ್ಲ, ಮಹೀಂದ್ರ ಎಕ್ಸ್‌ಇವಿ; ವಿಲಾಸಿ ವಿದ್ಯುತ್‌ ಕಾರು ಸೂಪರ್‌ ಇದೆ ನೋಡಿ - ಚಿತ್ರಮಾಹಿತಿ

Mahindra XEV 9e: ಇದು ಎಕ್ಸ್‌ಯುವಿ ಅಲ್ಲ, ಮಹೀಂದ್ರ ಎಕ್ಸ್‌ಇವಿ; ವಿಲಾಸಿ ವಿದ್ಯುತ್‌ ಕಾರು ಸೂಪರ್‌ ಇದೆ ನೋಡಿ - ಚಿತ್ರಮಾಹಿತಿ

Nov 27, 2024 01:41 PM IST

Mahindra XEV 9e: ಮಹೀಂದ್ರಾ ಕಂಪನಿಯು ಎಕ್ಸ್ ಇವಿ 9ಇ ಎಂಬ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಿದೆ. ಇದರಲ್ಲಿ ಭಾರತದ ಎಕ್ಸ್‌ಶೋರೂಂ ದರ 21.9 ಲಕ್ಷ ರೂಪಾಯಿ ಆಗಿದೆ. ಈ ಹೊಸ ಕಾರಿನ ಚಿತ್ರಗಳನ್ನು ನೋಡುತ್ತ ಹೆಚ್ಚಿನ ಮಾಹಿತಿ ಪಡೆಯೋಣ.

  • Mahindra XEV 9e: ಮಹೀಂದ್ರಾ ಕಂಪನಿಯು ಎಕ್ಸ್ ಇವಿ 9ಇ ಎಂಬ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಿದೆ. ಇದರಲ್ಲಿ ಭಾರತದ ಎಕ್ಸ್‌ಶೋರೂಂ ದರ 21.9 ಲಕ್ಷ ರೂಪಾಯಿ ಆಗಿದೆ. ಈ ಹೊಸ ಕಾರಿನ ಚಿತ್ರಗಳನ್ನು ನೋಡುತ್ತ ಹೆಚ್ಚಿನ ಮಾಹಿತಿ ಪಡೆಯೋಣ.
ಮಹೀಂದ್ರ ಕಂಪನಿಯು ಹೊಸ  ಎಕ್ಸ್ ಇವಿ 9ಇ ಎಸ್‌ಯುವಿ ಪರಿಚಯಿಸಿದೆ. ಇದರ ಎಕ್ಸ್‌ ಶೋರೂಂ ದರ 21.9 ಲಕ್ಷ ರೂಪಾಯಿ. ಈ ಎಸ್‌ಯುವಿಯನ್ನು  ಐಎನ್ ಜಿಎಲ್‌ಒ  ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದನ್ನು ಕಂಪನಿಯು ಬಾರ್ನ್‌ ಎಲೆಕ್ಟ್ರಿಕ್‌ ಬ್ರಾಂಡ್‌ನಡಿ ನಿರ್ಮಿಸಲಾಗಿದೆ.
(1 / 6)

ನೂತನ ಮಹೀಂದ್ರ ಎಕ್ಸ್‌ಇವಿ 9ಇಯು 4789 ಎಂಎಂ ಉದ್ದವಿದೆ.  207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬಾಡಿಯ ಒಳಗೆ ಬ್ಯಾಟರಿಯನ್ನು ಜೋಡಿಸಲಾಗಿದೆ. ಇದು ನೆಲದಿಂದ 222 ಮಿಮೀ ಎತ್ತರದಲ್ಲಿದೆ.
(2 / 6)

ಎಕ್ಸ್ಇವಿ 9ಇ ಅನ್ನು ಐಷಾರಾಮಿ ಎಲೆಕ್ಟ್ರಿಕ್‌ ಕಾರಾಗಿ ವಿನ್ಯಾಸಗೊಳಿಸಲಾಗಿದೆ. ಇದು 7 ಏರ್ ಬ್ಯಾಗ್ ಗಳು ಮತ್ತು 3 ಪಾಯಿಂಟ್ ಎಮರ್ಜೆನ್ಸಿ ಲಾಕಿಂಗ್ ರಿಟ್ರಾಕ್ಟರ್ ಹೊಂದಿದೆ. 
(3 / 6)

ಕಾರಿನ ಹಿಂಭಾಗದಲ್ಲಿ ಆಕರ್ಷಕ ಟೇಲ್‌ ಲ್ಯಾಂಪ್‌ ಇದೆ. ಗ್ಲೋಸ್ ಬ್ಲ್ಯಾಕ್ ಪ್ಯಾನೆಲ್‌ಗಳು ಕಾರಿನ ಕೆಳಭಾಗದಲ್ಲಿದೆ. ಒಟ್ಟಾರೆ ಕಾರು ಆಕರ್ಷಕವಾಗಿದ್ದು, ಗಮನ ಸೆಳೆಯುತ್ತದೆ. 
(4 / 6)

ಕಾರಿನ ಮುಂಭಾಗದ ಬಾಗಿಲುಗಳು ಎಕ್ಸ್‌ಯುವಿ 700ನಲ್ಲಿ  ಇರುವಂತೆ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಹಿಂಭಾಗದ ಡೋರ್‌ ಹ್ಯಾಂಡಲ್‌ ಅನ್ನು ಕ್ವಾರ್ಟರ್‌ ಗ್ಲಾಸ್‌ ಬಳಿ ಎತ್ತರದಲ್ಲಿ ಇರಿಸಲಾಗಿದೆ. ಎಲ್ಲಾ ಚಕ್ರಗಳಿಗೂ ಡಿಸ್ಕ್‌ ಬ್ರೇಕ್‌ಗಳಿವೆ. 
(5 / 6)

ಮಹೀಂದ್ರ ಎಸ್‌ಯುವಿಯು 5-ಸ್ಪೋಕ್ ಸ್ಟೈಲಿಶ್ 19-ಇಂಚಿನ ಅಲಾಯ್‌ ವೀಲ್‌ ಹೊಂದಿದೆ. ಇದನ್ನು 20 ಇಂಚಿನ ತನಕ ಅಪ್‌ಗ್ರೇಡ್‌ ಮಾಡಬಹುದು. ಎಲ್ಲಾ ಚಕ್ರಗಳಿಗೂ ಡಿಸ್ಕ್‌ಬ್ರೇಕ್‌ ಜೋಡಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ಖರ್ಚಿಲ್ಲದೆ ವಿದ್ಯುತ್‌ ಚಾರ್ಜ್‌ನಿಂದ ಓಡಿಸುವ ಕಾರು ಬಯಸುವವರಿಗೆ ಇದು ಖಂಡಿತಾ ಐಷಾರಾಮಿ ಫೀಚರ್‌ಗಳೊಂದಿಗೆ ಹೊಸ ಅನುಭವ ನೀಡಬಹುದು. 
(6 / 6)

    ಹಂಚಿಕೊಳ್ಳಲು ಲೇಖನಗಳು