logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮರ್ಸಿಡಿಸ್‌ ಇಕ್ಯುಎಸ್‌ ವಿಮರ್ಶೆ: 800 ಕಿಮಿಗೂ ಹೆಚ್ಚು ಮೈಲೇಜ್‌, ಪರಿಸರಸ್ನೇಹಿ ಎಸ್‌ಯುವಿಯ 12 ಚಿತ್ರಗಳನ್ನು ನೋಡುತ್ತ ರಿವ್ಯೂ ಓದಿ

ಮರ್ಸಿಡಿಸ್‌ ಇಕ್ಯುಎಸ್‌ ವಿಮರ್ಶೆ: 800 ಕಿಮಿಗೂ ಹೆಚ್ಚು ಮೈಲೇಜ್‌, ಪರಿಸರಸ್ನೇಹಿ ಎಸ್‌ಯುವಿಯ 12 ಚಿತ್ರಗಳನ್ನು ನೋಡುತ್ತ ರಿವ್ಯೂ ಓದಿ

Sep 24, 2024 03:01 PM IST

Mercedes EQS SUV Review: ನಿಮ್ಮಲ್ಲಿ ಸಾಕಷ್ಟು (ಹಲವು ಕೋಟಿ) ಹಣ ಮತ್ತು ಪರಿಸರದ ಕುರಿತು ಕಾಳಜಿ ಇದ್ದರೆ ಮರ್ಸಿಡಿಸ್‌ ಬೆಂಜ್‌ ಇಕ್ಯುಎಸ್‌ ಎಂಬ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಮರ್ಸಿಡಿಸ್‌ ಇಕ್ಯುಎಸ್‌ ಖರೀದಿಸಬಹುದು. ಅಂದಹಾಗೆ, ಈ ಎಸ್‌ಯುವಿ ಹೇಗಿದೆ? ಈ ವಿಮರ್ಶೆ ಓದಿ.

  • Mercedes EQS SUV Review: ನಿಮ್ಮಲ್ಲಿ ಸಾಕಷ್ಟು (ಹಲವು ಕೋಟಿ) ಹಣ ಮತ್ತು ಪರಿಸರದ ಕುರಿತು ಕಾಳಜಿ ಇದ್ದರೆ ಮರ್ಸಿಡಿಸ್‌ ಬೆಂಜ್‌ ಇಕ್ಯುಎಸ್‌ ಎಂಬ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಮರ್ಸಿಡಿಸ್‌ ಇಕ್ಯುಎಸ್‌ ಖರೀದಿಸಬಹುದು. ಅಂದಹಾಗೆ, ಈ ಎಸ್‌ಯುವಿ ಹೇಗಿದೆ? ಈ ವಿಮರ್ಶೆ ಓದಿ.
ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್ ಯುವಿಗೆ ಕಠಿಣ ಪ್ರಶ್ನೆಗಳು ಎದುರಾಗಿದ್ದವು. ಪರಿಸರ ಸ್ನೇಹಿ ಕಾರಿನ ಕ್ಯಾಬಿನ್‌ನ ಲಗ್ಷುರಿ ಹೆಚ್ಚಿಸುವುದು ಹೇಗೆ? ಆತ್ಮವಿಶ್ವಾಸದಿಂದ ಚಾಲನೆ ನೀಡುವಂತಹ ಪವರ್‌ ನೀಡುವುದು ಹೇಗೆ? ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದನ್ನು ನಿಲ್ಲಿಸುವುದು ಹೇಗೆ? ಇದಕ್ಕಾಗಿಯೇ ಮರ್ಸಿಡಿಸ್‌ ಬೆಂಝ್‌ ಕಂಪನಿಯು ಎಲೆಕ್ಟ್ರಿಕ್‌ ಮೋಟಾರ್‌ನ ಮರ್ಸಿಡಿಸ್ ಬೆಂಝ್ ಇಕ್ಯೂಎಸ್  ಪರಿಚಯಿಸಿದೆ. 
(1 / 12)

ಮರ್ಸಿಡಿಸ್ ಬೆಂಝ್ ಕಂಪನಿಯು  ಆಲ್-ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಇಕ್ಯೂಎಸ್ ಎಸ್‌ಯುವಿಯನ್ನು ಭಾರತದಲ್ಲಿ ಸ್ಥಳೀಯವಾಗಿ ಜೋಡಿಸುತ್ತಿದೆ. ಅಮೆರಿಕದ ಹೊರಗೆ ಕಂಪನಿಗೆ ಭಾರತವು ಏಕೈಕ ಪ್ರಮುಖ ಮಾರುಕಟ್ಟೆಯಾಗಿದೆ. 
(2 / 12)

ಈ ಕಾರಿನಲ್ಲಿ ಜಿಎಲ್‌ಎಸ್‌ನ ಬೃಹತ್‌ ರಸ್ತೆ ಉಪಸ್ಥಿತಿಯನ್ನು ನಿರೀಕ್ಷಿಸಬೇಡಿ.  ಎಇಕ್ಯುಎಸ್‌ ಎಸ್‌ಯುವಿಯು ಸ್ವಲ್ಪ ಸಣ್ಣಗಾತ್ರ ಹೊಂದಿದೆ. ಆದರೆ, ಏರೋಡೈನಾಮಿಕ್ಸ್‌ ಹೆಚ್ಚಾಗಿದೆ. ಆಕರ್ಷಕವಾಗಿ ಕಾಣಿಸುವ ಸುಂದರ ಮುಖವನ್ನು ಹೊಂದಿದೆ. ಹುಡ್‌ ಮೇಲಿನ ಬಾಹ್ಯಾರೇಖೆಗಳು ಈ ಎಸ್‌ಯುವಿಯ ಆಕರ್ಷಣೆ ಹೆಚ್ಚಿಸಿದೆ. 
(3 / 12)

ಇಕ್ಯೂಎಸ್ ಎಸ್‌ಯುವಿಯ ಸೈಡ್‌ ವಿನ್ಯಾಸ ಕೂಡ ಉತ್ತಮವಾಗಿದೆ. ವಾಹನದ ಹಿಂಭಾಗದ ಭಾಗದಲ್ಲಿರುವ ಚಾರ್ಜಿಂಗ್ ಫ್ಲಾಪ್  ಆಕರ್ಷಕವಾಗಿದೆ.
(4 / 12)

ಮರ್ಸಿಡಿಸ್ ಇಕ್ಯೂಎಸ್ ಎಸ್ ಯುವಿಯು ಟ್ರಿ-ಸ್ಟಾರ್ ಲೋಗೋ, ಇಕ್ಯೂಎಸ್ 580 ಲೆಟರಿಂಗ್ ಮತ್ತು 4ಮ್ಯಾಟಿಕ್ ಬ್ಯಾಡ್ಜ್ ನೊಂದಿಗೆ ಕ್ಲೀನ್ ರಿಯರ್ ಪ್ರೊಫೈಲ್ ಅನ್ನು ಪಡೆಯುತ್ತದೆ.
(5 / 12)

ಇಂಟೀರಿಯರ್‌ ಹೇಗಿದೆ ನೋಡೋಣ. ಕ್ಯಾಬಿನ್ ಒಳಗೆ  ಸ್ಥಳಾವಕಾಶ ಉತ್ತಮವಿದೆ.  ಮರ್ಸಿಡಿಸ್ ಇಕ್ಯೂಎಸ್ ಎಸ್‌ಯುವಿಯೊಳಗಿನ ಡ್ಯಾಶ್ ಬೋರ್ಡ್ ವಿನ್ಯಾಸ ಆಕರ್ಷಕ. ಟ್ರಿಪಲ್-ಸ್ಕ್ರೀನ್ ಘಟಕವು  ಕೊಂಚ ಹೆವಿ ಆದಂತೆ ಇದೆ. ಕ್ಯಾಬಿನ್‌ನೊಳಗೆ ಫಿಟ್‌ ಆಂಡ್‌ ಫಿನಿಶ್‌ ಅತ್ಯುತ್ತಮವಾಗಿದ್ದು, ಕಾರನ್ನು ತುಂಬಾ ಪ್ರೀಮಿಯಂ ಆಗಿಸಿದೆ.
(6 / 12)

ಎಲ್ಲಾದರೂ ಈ ಎಸ್‌ಯುವಿಯನ್ನು ಖರೀದಿಸಿದರೆ ಮಧ್ಯದಲ್ಲಿರುವ ಆಸನಗಳಲ್ಲಿ ಹೆಚ್ಚು ಸಮಯ ಕಳೆಯುವ ಸಾಧ್ಯತೆ ಇದೆ. ಇಲ್ಲಿ ಮರ್ಸಿಡಿಸ್‌ ಬೆಂಝ್‌ ತನ್ನ ಹೆಚ್ಚಿನ ಗಮನ ನೀಡಿದೆ. ಎರಡು 11.6-ಇಂಚಿನ ಮನರಂಜನಾ ಪರದೆಗಳು ಮತ್ತು ಸೆಂಟ್ರಲ್‌ ಆರ್ಮ್‌ ರೆಸ್ಟ್‌ಗಳಿವೆ. ಏಳು ಇಂಚಿನ ಟ್ಯಾಬ್ಲೆಟ್‌ ಇಲ್ಲಿನ ಪ್ರಮುಖ ಆಕರ್ಷಣೆ. 5-ಸ್ಪೀಕರ್ ಬರ್ಮಸ್ಟರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್ ರೂಫ್, ಆಂಬಿಯೆಂಟ್‌ ಲೈಟಿಂಗ್‌ ಮುಂತಾದವುಗಳು ಇರುವ ಕಾರಣ ಕಾರಿನ ಮಧ್ಯಭಾಗದ ಆಸನದಲ್ಲಿ ಕುಳಿತುಕೊಳ್ಳಲು ನೀವು ಗಮನ ನೀಡಬಹುದು. ಮುಂಭಾಗದ ಎರಡು ಆಸನಗಳಲ್ಲಿ ಮಸಾಜ್‌ ಫೀಚರ್‌ ಇದೆ. ಆದರೆ, ಎರಡನೇ ಸಾಲಿನ ಆಸನಗಳಲ್ಲಿ ಈ ಫೀಚರ್‌ ಇಲ್ಲ. 
(7 / 12)

ಇಕ್ಯೂಎಸ್ ಎಸ್‌ಯುವಿಯೊಳಗಿನ ಕೊನೆಯ ಸಾಲಿನ ಸೀಟುಗಳು  ಕ್ಯಾಬಿನ್‌ನ ಇತರೆ ಸ್ಥಳಗಳಿಗೆ ಹೋಲಿಸಿದ್ರೆ ಡಲ್‌ ಆಗಿದೆ. ಸ್ಥಳ ಮತ್ತು ಆರಾಮದ ಕೊರತೆ ಇಲ್ಲಿದೆ. ಇಲ್ಲಿಗೆ ಪ್ರವೇಶಿಸುವುದು ಮತ್ತು ಹೊರಕ್ಕೆ ಹೋಗುವುದೂ ತ್ರಾಸದಾಯಕವಾಗಿದೆ.
(8 / 12)

ಸ್ಟೋರೇಜ್‌ ಸ್ಥಳಾವಕಾಶ ಉತ್ತಮವಾಗಿದೆ. ಮೂರನೇ ಸಾಲಿನ ಆಸನಗಳನ್ನು ಸರಿಸಿದರೆ ಇನ್ನಷ್ಟು ಸ್ಥಳಾವಕಾಶ ದೊರಕಲಿದೆ. 
(9 / 12)

ಮರ್ಸಿಡಿಸ್ ಇಕ್ಯೂಎಸ್‌ನಲ್ಲಿ 122 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಇದ್ದು, ಇದು 800 ಕಿಲೋಮೀಟರ್ ಗಿಂತ ಹೆಚ್ಚು ವ್ಯಾಪ್ತಿಯನ್ನು ತಲುಪಲು ಅನುವು ಮಾಡಿಕೊಡುತ್ತದೆ. ಇದನ್ನು ಒಳ್ಳೆಯ ಮೈಲೇಜ್‌ ಕಾರು ಎನ್ನಲು ಅಡ್ಡಿಯಿಲ್ಲ.  
(10 / 12)

858 ಎನ್ಎಂ ಟಾರ್ಕ್ ಹೊಂದಿರುವ ಇಕ್ಯೂಎಸ್ ಎಸ್‌ಯುವಿ ಅಗಾಧ ಸಾಮರ್ಥ್ಯ ಹೊಂದಿದೆ. ಯಾವ ಡ್ರೈವ್ ಮೋಡ್‌ನಲ್ಲಿ ಪ್ರಯಾಣಿಸಿದರೂ ಪವರ್‌ಫುಲ್‌ ಎನಿಸುತ್ತದೆ. ಹೆಚ್ಚಿನ ವೇಗದ ಪ್ರಯಾಣದಲ್ಲೂ ಸ್ಥಿರತೆ ದೊರಕುತ್ತದೆ.
(11 / 12)

ಮುಂಭಾಗ ಮತ್ತು ಹಿಂಭಾಗದ ಚಕ್ರಗಳು ವಿರುದ್ಧ ದಿಕ್ಕಿನಲ್ಲಿ ತಿರುಗುವುದನ್ನು ಗಮನಿಸಿ.  ಇದು ರಿಯರ್ ವೀಲ್ ಸ್ಟೀರಿಂಗ್ ಸಿಸ್ಟಮ್  ಹೊಂದಿದೆ. ಯಾವುದೇ ರೀತಿಯ ತಿರುವುಗಳಲ್ಲಿಯೂ ಇದರಲ್ಲಿ ಸರಾಗವಾಗಿ ಪ್ರಯಾಣಿಸಬಹುದು. ಕೆಟ್ಟ ರಸ್ತೆಯಲ್ಲೂ ಉತ್ತಮವಾಗಿ ಪ್ರಯಾಣಿಸಬಹುದಾಗಿದೆ. 
(12 / 12)

    ಹಂಚಿಕೊಳ್ಳಲು ಲೇಖನಗಳು