logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಕೂಟರ್‌ ಸವಾರಿಯಲ್ಲಿ ಕಾಲು ನೆಲಕ್ಕೆ ಎಟಕುತ್ತಿಲ್ವ? ಹಗುರ, ಕಡಿಮೆ ಎತ್ತರದ ಸೀಟುಗಳ ಈ ಸ್ಕೂಟಿಗಳನ್ನ ಟ್ರೈ ಮಾಡಿನೋಡಿ

ಸ್ಕೂಟರ್‌ ಸವಾರಿಯಲ್ಲಿ ಕಾಲು ನೆಲಕ್ಕೆ ಎಟಕುತ್ತಿಲ್ವ? ಹಗುರ, ಕಡಿಮೆ ಎತ್ತರದ ಸೀಟುಗಳ ಈ ಸ್ಕೂಟಿಗಳನ್ನ ಟ್ರೈ ಮಾಡಿನೋಡಿ

Oct 03, 2024 06:01 PM IST

ಸ್ಕೂಟರ್‌ ಖರೀದಿಸುವ ಸಮಯದಲ್ಲಿ ಹೈಟ್‌ ಇರುವವರು ದೊಡ್ಡ ಸ್ಕೂಟರ್‌ ಖರೀದಿಸಲು ಬಯಸುತ್ತಾರೆ. ಕುಳ್ಳಗೆ ಇರುವವರು ಕಡಿಮೆ ಎತ್ತರದ ಸೀಟುಗಳನ್ನು ಹೊಂದಿರುವ ಸ್ಕೂಟರ್‌ ಬಯಸುತ್ತಾರೆ. 5 ಅಡಿಗಿಂತ ಕಡಿಮೆ ಎತ್ತರದವರಿಗೆ ಮತ್ತು ಐದು ಅಡಿ ಆಸುಪಾಸಿನಲ್ಲಿ ಎತ್ತರ ಇರುವವರಿಗೆ ಸೂಕ್ತವಾದ ಸ್ಕೂಟರ್‌ಗಳ ವಿವರ ಇಲ್ಲಿದೆ.

  • ಸ್ಕೂಟರ್‌ ಖರೀದಿಸುವ ಸಮಯದಲ್ಲಿ ಹೈಟ್‌ ಇರುವವರು ದೊಡ್ಡ ಸ್ಕೂಟರ್‌ ಖರೀದಿಸಲು ಬಯಸುತ್ತಾರೆ. ಕುಳ್ಳಗೆ ಇರುವವರು ಕಡಿಮೆ ಎತ್ತರದ ಸೀಟುಗಳನ್ನು ಹೊಂದಿರುವ ಸ್ಕೂಟರ್‌ ಬಯಸುತ್ತಾರೆ. 5 ಅಡಿಗಿಂತ ಕಡಿಮೆ ಎತ್ತರದವರಿಗೆ ಮತ್ತು ಐದು ಅಡಿ ಆಸುಪಾಸಿನಲ್ಲಿ ಎತ್ತರ ಇರುವವರಿಗೆ ಸೂಕ್ತವಾದ ಸ್ಕೂಟರ್‌ಗಳ ವಿವರ ಇಲ್ಲಿದೆ.
ಸ್ಕೂಟರ್‌ನಲ್ಲಿ ಕುಳಿತಾಗ ಕಾಲು ನೆಲಕ್ಕೆ ಸರಿಯಾಗಿ ತಾಗಿದರೆ ಆರಾಮವಾಗಿ ಚಾಲನೆ ಮಾಡಬಹುದು. ಕಾಲು ಎಟುಕದೆ ಇದ್ದರೆ ಸಡನ್‌ ನೆಲಕ್ಕೆ ಕಾರು ಊರುವಾಗ ಗಾಡಿ ಪಲ್ಟಿ ಹೊಡೆಯುವ ಅಪಾಯವಿದೆ. ಕಡಿಮೆ ಎತ್ತರದವರು ಕಡಿಮೆ ಎತ್ತರದ ಸೀಟುಗಳ ಸ್ಕೂಟರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳು ಇವೆ. 
(1 / 8)

ಟಿವಿಎಸ್‌ ಸ್ಕೂಟಿ ಝೆಸ್ಟ್‌: 2014ರಲ್ಲಿ ಬಿಡುಗಡೆಯಾದ ಬಳಿಕ ಈ ಸ್ಕೂಟರ್‌ನಲ್ಲಿ ಏನೂ ಬದಲಾವಣೆಯಾಗಿಲ್ಲ. ಆದರೆ, ಈಗಲೂ ಕುಳ್ಳಗೆ ಇರುವವರು ಝೆಸ್ಟ್‌ ಇಷ್ಟಪಡುತ್ತಾರೆ. 110 ಸಿಸಿಯ ಈ ಸ್ಕೂಟರ್‌ 760 ಮಿ.ಮೀ. ಸೀಟು ಎತ್ತರ ಹೊಂದಿದೆ.
(2 / 8)

ಬಜಾಜ್‌ ಚೇತಕ್‌: ಇದು ಕೂಡ 760 ಮಿ.ಮೀ. ಸೀಟ್‌ ಹೈಟ್‌ ಹೊಂದಿದೆ. ಇದು ಎಲೆಕ್ಟ್ರಿಕ್‌ ಸ್ಕೂಟರ್‌. ಇದರ ಬೆಂಗಳೂರು ಎಕ್ಸ್‌ ಶೋರೂಂ ದರ 1.15 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
(3 / 8)

ಟಿವಿಎಸ್‌ ಜುಪಿಟರ್‌: ಇದು 765 ಮಿ.ಮೀ. ಎತ್ತರ ಇದೆ. ಇದು ಆಕ್ಟಿವಾದ ಕಾಂಪಿಟೀಟರ್‌. ಒಮ್ಮೆ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿ ಸೀಟಿನಲ್ಲಿ ಕುಳಿತು ನೋಡಿ. ಹೆವಿ ಅನಿಸಿದರೆ ಇನ್ನೂ ಚಿಕ್ಕ ಮತ್ತು ಹಗುರ ಸ್ಕೂಟರ್‌ ಪರಿಗಣಿಸಿ. ಇದು ಅತ್ಯುತ್ತಮ ಫೀಚರ್‌, ರೈಡಿಂಗ್‌ ಗುಣಮಟ್ಟವಿರುವ ಸ್ಕೂಟರಾಗಿದೆ.
(4 / 8)

ಹೋಂಡಾ ಡಿಯೋ 110: 765 ಮಿ.ಮೀ. ಸೀಟು ಎತ್ತರವಿರುವ ಹೋಂಡಾ ಡಿಯೋ ದೇಶದ ತರುಣ ತರುಣಿಯರಿಗೆ ಅಚ್ಚುಮೆಚ್ಚು. ಇದರ ಬ್ಯೂಟಿಫುಲ್‌ ಡಿಸೈನ್‌ ಸಾಕಷ್ಟು ಜನರನ್ನು ಸೆಳೆದಿದೆ.
(5 / 8)

ಟಿವಿಎಸ್‌ ಸ್ಕೂಟಿ ಪೆಪ್‌ ಪ್ಲಸ್‌:  ಹೊಸದಾಗಿ ಸ್ಕೂಟರ್‌ ಕಲಿತು ಒಂದಿಷ್ಟು ಚಾಲನೆ ಭಯ ಇರುವವರು ಸ್ಕೂಟಿ ಪೆಪ್‌ ಮೂಲಕ ಸ್ಕೂಟಿ ಸವಾರಿ ಆರಂಭಿಸಬಹುದು. ಇದು ಹಗುರ, ಚಿಕ್ಕ ಸ್ಕೂಟರ್‌. ಇದರ ಸೀಟ್‌ ಹೈಟ್‌ ಕೂಡ 760 ಮಿ.ಮೀ. ಇದೆ. ಐದು ಅಡಿ ಆಸುಪಾಸಿನವರಿಗೆ ಇದು ಬೆಸ್ಟ್‌ ಸ್ಕೂಟರಾಗಿದೆ. 
(6 / 8)

ಹೀರೋ ಪ್ಲೆಷರ್‌ ಪ್ಲಸ್‌: ಹೆಚ್ಚು ಎತ್ತರವಿಲ್ಲದವರಿಗೆ ಈ ಸ್ಕೂಟರ್‌ ಕೂಡ ಸೂಕ್ತವಾಗಬಲ್ಲದು. 765 ಮಿ.ಮೀ.  ಎತ್ತರದ ಸೀಟು ಹೊಂದಿರುವ ಈ ಸ್ಕೂಟರ್‌ನೊಮ್ಮೆ ಟೆಸ್ಟ್‌ ರೈಡ್‌ ಮಾಡಿ ನೋಡಿ. ಇದು ಕೂಡ ನೋಡಲು ಅಂದವಾಗಿದೆ.
(7 / 8)

(8 / 8)

    ಹಂಚಿಕೊಳ್ಳಲು ಲೇಖನಗಳು