logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Groundnut Festival: ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಘಮಲು ಆಗಲೇ ಶುರು; ಬಸವನಗುಡಿಯಲ್ಲಿ ಜಾತ್ರೆಯ ನೋಟ ಬಲು ಜೋರು

Bangalore Groundnut Festival: ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಘಮಲು ಆಗಲೇ ಶುರು; ಬಸವನಗುಡಿಯಲ್ಲಿ ಜಾತ್ರೆಯ ನೋಟ ಬಲು ಜೋರು

Nov 24, 2024 05:17 PM IST

Bangalore Basavanagudi Ground Nut Festival: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ದೊಡ್ಡಬಸವಣ್ಣ ಹಾಗೂ ದೊಡ್ಡ ಗಣಪತಿ ಜಾತ್ರೆ ಸೋಮವಾರದಿಂದ ಎರಡು ದಿನ ನಡೆಯಲಿವೆ. ಭಾನುವಾರವೂ ಹಬ್ಬದ ವಾತಾವರಣ, ಕಡಲೆಕಾಯಿ ಮಾರಾಟ ಅಲ್ಲಿ ಕಂಡು ಬಂದಿತು. ಇದರ ಚಿತ್ರಣ ಇಲ್ಲಿದೆ. 

  • Bangalore Basavanagudi Ground Nut Festival: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ದೊಡ್ಡಬಸವಣ್ಣ ಹಾಗೂ ದೊಡ್ಡ ಗಣಪತಿ ಜಾತ್ರೆ ಸೋಮವಾರದಿಂದ ಎರಡು ದಿನ ನಡೆಯಲಿವೆ. ಭಾನುವಾರವೂ ಹಬ್ಬದ ವಾತಾವರಣ, ಕಡಲೆಕಾಯಿ ಮಾರಾಟ ಅಲ್ಲಿ ಕಂಡು ಬಂದಿತು. ಇದರ ಚಿತ್ರಣ ಇಲ್ಲಿದೆ. 
ಬೆಂಗಳೂರಿನ ಬಸವನಗುಡಿಯಲ್ಲಿ ಜಾತ್ರೆಗೆ ಅಣಿಯಾಗಿರುವ ದೊಡ್ಡ ಗಣಪತಿ ದೇಗುಲದ ಹೋರಾವರಣದ ನೋಟ. 
(1 / 10)
ಬೆಂಗಳೂರಿನ ಬಸವನಗುಡಿಯಲ್ಲಿ ಜಾತ್ರೆಗೆ ಅಣಿಯಾಗಿರುವ ದೊಡ್ಡ ಗಣಪತಿ ದೇಗುಲದ ಹೋರಾವರಣದ ನೋಟ. (Varun Rao)
ಪ್ರತಿವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ಬೆಂಗಳೂರು ಮಾತ್ರವಲ್ಲದೇ ಹಲವೆಡೆ ನಡೆಯುತ್ತದೆ. ಈ ಬಾರಿ ನವೆಂಬರ್‌ 25ರಂದು ಕಾರ್ತೀಕ ಮಾಸದ ಸೋಮವಾರವಾಗಿರುವುದರಿಂದ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಡಲೆಕಾಯಿ ಪರಿಷೆ ಶುರುವಾಗಲಿದೆ. ಆದರೆ ಹಿಂದಿನ ದಿನಗಳು ಭಾನುವಾರ, ಶನಿವಾರವಾಗಿರುವುದರಿಂದ ಬಸವನಗುಡಿ ಬೀದಿಗಳಲ್ಲಿ ನವೆಂಬರ್‌ 23ರಿಂದಲೇ ಹಬ್ಬದ ಸಡಗರ ಶುರುವಾಗಿದೆ.
(2 / 10)

ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಇದನ್ನು ನೋಡಲು ಬೆಂಗಳೂರು ನಗರ, ಗ್ರಾಮೀಣ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಜನ ಬರುತ್ತಾರೆ. ಈ ಬಾರಿಯೂ ಬಸವನಗುಡಿಯಲ್ಲಿ ಭಾರೀ ಸಿದ್ದತೆಗಳೇ ಆಗಿವೆ. 
(3 / 10)

ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡೆಲೆಕಾಯಿ ಪರಿಷೆಯನ್ನು ಪರಿಚಯಿಸುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿನೂತನ ಚಟುವಟಿಕೆಗಳನ್ನು ಕೈಗೊಳ್ಳಲು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಭಾನುವಾರವೂ ಹಲವರು ಆಗಮಿಸಿ ಶೇಂಗಾ ಖರೀದಿಸಿದ್ದು ಕಂಡು ಬಂದಿತು.
(4 / 10)

ದೊಡ್ಡಗಣಪ ಹಾಗೂ ದೊಡ್ಡ ಬಸವನ ಸನ್ನಿಧಾನದಲ್ಲಿ ನಡೆಯುವ ಐತಿಹಾಸಿಕ ಜಾತ್ರೆ. ಪ್ರತೀ ವರ್ಷಕ್ಕಿಂತಲೂ ಈ ಬಾರಿ ತುಂಬಾ ಮಿಗಿಲು ಎಂಬಂತೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಸವನಗುಡಿ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕಡಲೆಕಾಯಿ ಜಮಾವಣೆಗೊಂಡಿದೆ. 
(5 / 10)

ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಿಂದ ಬಸವನಗುಡಿ ಪರಿಷೆಗೆಂದೇ ಈಗಷ್ಟೇ ಬಂದಿರುವ ಕಡಲೆಕಾಯಿಯನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಕಡಲೆಕಾಯಿ ರುಚಿಯೇ ಬೇರೆ. ಅದೂ ಜಾತ್ರೆಯಲ್ಲಿ -ಸುತ್ತು ಹಾಕಿ ಕಡಲೆಕಾಯಿ ಖರೀದಿಸುವ ಸಂಭ್ರಮಕ್ಕೆ ಎಣೆಯೇ ಇಲ್ಲ.
(6 / 10)

ಹಿರಿಯರು, ಮಕ್ಕಳು, ಯುವಕರೂ ಬಸವನಗುಡಿ ಕಡಲೆಕಾಯಿ ಪರಿಷೆಗೆ ಆಗಮಿಸಿ ಕಡಲೆಕಾಯಿ ಘಮಲು, ರುಚಿ ಸವಿದು ಹೋಗುತ್ತಾರೆ. ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್‌ ಬಳಸದಂತೆ ಈ ಬಾರಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ.
(7 / 10)

ಶತಮಾನಗಳ ಇತಿಹಾಸ ಇರುವ ಬೆಂಗಳೂರು ಬಸವನಗುಡಿ ದೊಡ್ಡ ಬಸವಣ್ಣ ಜಾತ್ರೆ ಎಂದರೆ ಅಲ್ಲಿ ಏನೆಲ್ಲಾ ಇರುತ್ತದೆ ಎನ್ನುವುದನ್ನು ಇದು ಹೇಳಲಿದೆ.
(8 / 10)

ಜಾತ್ರೆ ಎಂದರೆ ಆಯಿತು. ಅಲ್ಲಿ ಖರೀದಿಸಲು ಏನುಂಟು ಏನಿಲ್ಲ. ಎಲ್ಲಾ ರೀತಿಯ ಆಟದ ಸಾಮಾನು. ಬಲೂನುಗಳ ಲೋಕವೇ ತೆರೆದುಕೊಳ್ಳುತ್ತದೆ.
(9 / 10)

ಅದರಲ್ಲೂ ಬಸವನಗುಡಿ ಜಾತ್ರೆಯ ಬೆಳಕಿನ ವೈಭವ ಹಾಗೂ ಅದರೊಂದಿಗೆ ಬಣ್ಣ ಬಣ್ಣದ ಬಲೂನುಗಳ ಲೋಕವೂ ಸೃಷ್ಟಿಯಾಗಿದೆ. ಭಾನುವಾರ ಸಂಜೆಗೆ ಜಾತ್ರೆಗೆ ಹಲವರು ಲಗ್ಗೆ ಇಟ್ಟಿದ್ದಾರೆ.
(10 / 10)

    ಹಂಚಿಕೊಳ್ಳಲು ಲೇಖನಗಳು