logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದರರ ಗಮನಕ್ಕೆ; ಮುಂದಿನ ತಿಂಗಳಿಂದ ಸರ್ಚಾರ್ಜ್‌, ಹಣಕಾಸು ಶುಲ್ಕ ಏರಿಕೆ

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದರರ ಗಮನಕ್ಕೆ; ಮುಂದಿನ ತಿಂಗಳಿಂದ ಸರ್ಚಾರ್ಜ್‌, ಹಣಕಾಸು ಶುಲ್ಕ ಏರಿಕೆ

Oct 08, 2024 08:00 PM IST

ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನ ಅಂಗ ಸಂಸ್ಥೆಯಾಗಿರುವ ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರಿಗೆ ಮುಂದಿನ ತಿಂಗಳಿಂದ ಕೆಲವು ಸೇವಾ ಶುಲ್ಕವನ್ನು ಹೆಚ್ಚಿಸಲಿದೆ. ಅದರ ವಿವರ ಇಲ್ಲಿದೆ.

ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನ ಅಂಗ ಸಂಸ್ಥೆಯಾಗಿರುವ ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರಿಗೆ ಮುಂದಿನ ತಿಂಗಳಿಂದ ಕೆಲವು ಸೇವಾ ಶುಲ್ಕವನ್ನು ಹೆಚ್ಚಿಸಲಿದೆ. ಅದರ ವಿವರ ಇಲ್ಲಿದೆ.
ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರ ಕ್ರೆಡಿಟ್ ಕಾರ್ಡ್‌ ಶುಲ್ಕ ರಚನೆಯನ್ನು ಪರಿಷ್ಕರಿಸಿದ್ದು, ಅದು ಮುಂದಿನ ತಿಂಗಳು ಅಂದರೆ 2024ರ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಯುಟಿಲಿಟಿ ಬಿಲ್‌ ಪಾವತಿಗೆ ಶುಲ್ಕ ಮತ್ತು ಹಣಕಾಸು ಸೇವೆಗಳಿಗೆ ಶುಲ್ಕವೂ ಒಳಗೊಂಡಿದೆ.
(1 / 7)
ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರ ಕ್ರೆಡಿಟ್ ಕಾರ್ಡ್‌ ಶುಲ್ಕ ರಚನೆಯನ್ನು ಪರಿಷ್ಕರಿಸಿದ್ದು, ಅದು ಮುಂದಿನ ತಿಂಗಳು ಅಂದರೆ 2024ರ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಯುಟಿಲಿಟಿ ಬಿಲ್‌ ಪಾವತಿಗೆ ಶುಲ್ಕ ಮತ್ತು ಹಣಕಾಸು ಸೇವೆಗಳಿಗೆ ಶುಲ್ಕವೂ ಒಳಗೊಂಡಿದೆ.(sbi card)
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಮುಂದಿನ ತಿಂಗಳು ಕರೆಂಟ್ ಬಿಲ್‌, ನೀರಿನ ಬಿಲ್‌, ಗ್ಯಾಸ್‌ ಸಿಲಿಂಡರ್ ಸೇರಿ ಯುಟಿಲಿಟಿ ಬಿಲ್ ಪಾವತಿಗೆ ಎಂದು ಕ್ರೆಡಿಟ್ ಕಾರ್ಡ್ ಮೂಲಕ 50,000 ರೂಪಾಯಿಗಿಂತ ಹೆಚ್ಚು ಖರ್ಚು ಮಾಡಿದರೆ ಅದಕ್ಕೆ ಶೇಕಡ 1 ಸರ್‌ಚಾರ್ಜ್‌ ಬೀಳಲಿದೆ.  
(2 / 7)
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಮುಂದಿನ ತಿಂಗಳು ಕರೆಂಟ್ ಬಿಲ್‌, ನೀರಿನ ಬಿಲ್‌, ಗ್ಯಾಸ್‌ ಸಿಲಿಂಡರ್ ಸೇರಿ ಯುಟಿಲಿಟಿ ಬಿಲ್ ಪಾವತಿಗೆ ಎಂದು ಕ್ರೆಡಿಟ್ ಕಾರ್ಡ್ ಮೂಲಕ 50,000 ರೂಪಾಯಿಗಿಂತ ಹೆಚ್ಚು ಖರ್ಚು ಮಾಡಿದರೆ ಅದಕ್ಕೆ ಶೇಕಡ 1 ಸರ್‌ಚಾರ್ಜ್‌ ಬೀಳಲಿದೆ.  (sbi card)
ಬಿಲ್ಲಿಂಗ್ ಸೈಕಲ್‌ನಲ್ಲಿ ಯುಟಿಲಿಟಿ ಬಿಲ್ ಪಾವತಿ ಮೊತ್ತ 50,000 ರೂಪಾಯಿ ಒಳಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಸರ್‌ಚಾರ್ಜ್‌ ಬೀಳುವುದಿಲ್ಲ. 
(3 / 7)
ಬಿಲ್ಲಿಂಗ್ ಸೈಕಲ್‌ನಲ್ಲಿ ಯುಟಿಲಿಟಿ ಬಿಲ್ ಪಾವತಿ ಮೊತ್ತ 50,000 ರೂಪಾಯಿ ಒಳಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಸರ್‌ಚಾರ್ಜ್‌ ಬೀಳುವುದಿಲ್ಲ. (sbi card)
ಎಸ್‌ಬಿಐ ಕಾರ್ಡ್‌ ತನ್ನ ಅನ್‌ಸೆಕ್ಯೂರ್ಡ್‌ ಕ್ರೆಡಿಟ್ ಕಾರ್ಡ್ಸ್‌ನ ಫೈನಾನ್ಸ್ ಚಾರ್ಜಸ್‌ ಅನ್ನು ಪರಿಷ್ಕರಿಸಿದೆ. ಇದು ಕೂಡ ನವೆಂಬರ್ 1ರಂದು ಜಾರಿಗೆ ಬರಲಿದೆ. ಶೌರ್ಯ/ಡಿಫೆನ್ಸ್ ಕಾರ್ಡ್‌ ಹೊರತು ಪಡಿಸಿದ ಎಲ್ಲ ಅನ್‌ಸೆಕ್ಯೂರ್ಡ್‌ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್‌ಗೆ ತಿಂಗಳ ಫೈನಾನ್ಸ್ ಚಾರ್ಜಸ್ ಶೇಕಡ 3.75 ಹೆಚ್ಚಾಗಲಿದೆ.  
(4 / 7)
ಎಸ್‌ಬಿಐ ಕಾರ್ಡ್‌ ತನ್ನ ಅನ್‌ಸೆಕ್ಯೂರ್ಡ್‌ ಕ್ರೆಡಿಟ್ ಕಾರ್ಡ್ಸ್‌ನ ಫೈನಾನ್ಸ್ ಚಾರ್ಜಸ್‌ ಅನ್ನು ಪರಿಷ್ಕರಿಸಿದೆ. ಇದು ಕೂಡ ನವೆಂಬರ್ 1ರಂದು ಜಾರಿಗೆ ಬರಲಿದೆ. ಶೌರ್ಯ/ಡಿಫೆನ್ಸ್ ಕಾರ್ಡ್‌ ಹೊರತು ಪಡಿಸಿದ ಎಲ್ಲ ಅನ್‌ಸೆಕ್ಯೂರ್ಡ್‌ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್‌ಗೆ ತಿಂಗಳ ಫೈನಾನ್ಸ್ ಚಾರ್ಜಸ್ ಶೇಕಡ 3.75 ಹೆಚ್ಚಾಗಲಿದೆ.  (sbi card)
ಅನ್‌ಸೆಕ್ಯೂರ್ಡ್‌ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್‌ಗೆ ಕೊಲಾಟರಲ್‌ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಅವಶ್ಯಕತೆ ಇಲ್ಲ. ಆದರೆ ಈಗ ವಿಧಿಸುವ ಶುಲ್ಕ ಕೆಲವರಿಗೆ ಹೊರೆ ಎನಿಸಬಹುದು. 
(5 / 7)
ಅನ್‌ಸೆಕ್ಯೂರ್ಡ್‌ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್‌ಗೆ ಕೊಲಾಟರಲ್‌ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಅವಶ್ಯಕತೆ ಇಲ್ಲ. ಆದರೆ ಈಗ ವಿಧಿಸುವ ಶುಲ್ಕ ಕೆಲವರಿಗೆ ಹೊರೆ ಎನಿಸಬಹುದು. (sbi card)
ನಿಖರವಾಗಿ ಹೇಳಬೇಕು ಎಂದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಶುಲ್ಕವನ್ನು ಡಿಸೆಂಬರ್‌ ತಿಂಗಳಿಂದ ಭರಿಸಬೇಕಾಗುತ್ತದೆ.   
(6 / 7)
ನಿಖರವಾಗಿ ಹೇಳಬೇಕು ಎಂದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಶುಲ್ಕವನ್ನು ಡಿಸೆಂಬರ್‌ ತಿಂಗಳಿಂದ ಭರಿಸಬೇಕಾಗುತ್ತದೆ.   (sbi card)
ಇದಕ್ಕೂ ಮೊದಲು 2024ರ ಸೆಪ್ಟೆಂಬರ್‌ನಲ್ಲಿ ಎಸ್‌ಬಿಐ ಕಾರ್ಡ್‌ ತನ್ನ ನ್ಯೂ ಕ್ಲಬ್ ವಿಸ್ತಾರ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ಲಬ್ ವಿಸ್ತಾರ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪ್ರೈಮ್‌ ನಿಲ್ಲಿಸುತ್ತಿರುವುದಾಗಿ ಪ್ರಕಟಿಸಿತ್ತು. ಇದರಂತೆ ಸೆಪ್ಟೆಂಬರ್ 28ರಿಂದ ಈ ಕ್ರೆಡಿಟ್ ಕಾರ್ಡ್‌ಗಳ ವಿತರಣೆಯನ್ನು ಅದು ನಿಲ್ಲಿಸಿದೆ. 
(7 / 7)
ಇದಕ್ಕೂ ಮೊದಲು 2024ರ ಸೆಪ್ಟೆಂಬರ್‌ನಲ್ಲಿ ಎಸ್‌ಬಿಐ ಕಾರ್ಡ್‌ ತನ್ನ ನ್ಯೂ ಕ್ಲಬ್ ವಿಸ್ತಾರ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ಲಬ್ ವಿಸ್ತಾರ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪ್ರೈಮ್‌ ನಿಲ್ಲಿಸುತ್ತಿರುವುದಾಗಿ ಪ್ರಕಟಿಸಿತ್ತು. ಇದರಂತೆ ಸೆಪ್ಟೆಂಬರ್ 28ರಿಂದ ಈ ಕ್ರೆಡಿಟ್ ಕಾರ್ಡ್‌ಗಳ ವಿತರಣೆಯನ್ನು ಅದು ನಿಲ್ಲಿಸಿದೆ. (sbi card)

    ಹಂಚಿಕೊಳ್ಳಲು ಲೇಖನಗಳು