logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್ಡರ್ ಮಾಡಿದ್ದ 1399 ರೂ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ 35000 ದಂಡ; ನಿಮಗೂ ಮೋಸ ಆಗಿದ್ರೆ ಹೀಗೆ ಮಾಡಿ

ಆರ್ಡರ್ ಮಾಡಿದ್ದ 1399 ರೂ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ 35000 ದಂಡ; ನಿಮಗೂ ಮೋಸ ಆಗಿದ್ರೆ ಹೀಗೆ ಮಾಡಿ

Sep 23, 2024 01:55 PM IST

Bengaluru News: ಗ್ರಾಹಕನೊಬ್ಬ 1,399 ರೂಪಾಯಿ ಮೌಲ್ಯದ ಟ್ರಕ್ಕಿಂಗ್ ಟ್ರೌಸರ್ ಅನ್ನು ಡೆಕಾಥ್ಲಾನ್​ನಲ್ಲಿ ಆರ್ಡರ್​​ ಮಾಡಿದ್ದನ್ನು ತಲುಪಿಸಲು ವಿಫಲವಾದ ಡೆಕಾಥ್ಲಾನ್​ಗೆ ಕರ್ನಾಟಕದ ಗ್ರಾಹಕ ನ್ಯಾಯಾಲಯವು 35,000 ರೂಪಾಯಿ ದಂಡ ವಿಧಿಸಿದೆ.

  • Bengaluru News: ಗ್ರಾಹಕನೊಬ್ಬ 1,399 ರೂಪಾಯಿ ಮೌಲ್ಯದ ಟ್ರಕ್ಕಿಂಗ್ ಟ್ರೌಸರ್ ಅನ್ನು ಡೆಕಾಥ್ಲಾನ್​ನಲ್ಲಿ ಆರ್ಡರ್​​ ಮಾಡಿದ್ದನ್ನು ತಲುಪಿಸಲು ವಿಫಲವಾದ ಡೆಕಾಥ್ಲಾನ್​ಗೆ ಕರ್ನಾಟಕದ ಗ್ರಾಹಕ ನ್ಯಾಯಾಲಯವು 35,000 ರೂಪಾಯಿ ದಂಡ ವಿಧಿಸಿದೆ.
ಆರ್ಡರ್​ ಮಾಡಿದ್ದ ಉತ್ಪನ್ನವನ್ನು ತಲುಪಿಸಲು ವಿಫಲವಾದ ಕ್ರೀಡಾ ಸಾಧನಗಳ ಮಾರಾಟಗಾರ ಡೆಕಾಥ್ಲಾನ್​ಗೆ, ಕರ್ನಾಟಕ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಕೇವಲ 1399 ಮೌಲ್ಯದ ವಸ್ತುವಿಗೆ 25 ಪಟ್ಟು ದಂಡ ವಿಧಿಸಿ ಆದೇಶ ಹೊರಡಿಸಿದೆ.
(1 / 9)

ಗ್ರಾಹಕನೊಬ್ಬ 1,399 ರೂಪಾಯಿ ಮೌಲ್ಯದ ಟ್ರಕ್ಕಿಂಗ್ ಟ್ರೌಸರ್ ಅನ್ನು ಡೆಕಾಥ್ಲಾನ್​ನಲ್ಲಿ ಆರ್ಡರ್​​ ಮಾಡಿದ್ದರು. ಆದರೆ ಅದನ್ನು ತಲುಪಿಸಲು ವಿಫಲವಾದ ಡೆಕಾಥ್ಲಾನ್​ಗೆ ಕರ್ನಾಟಕದ ಗ್ರಾಹಕ ನ್ಯಾಯಾಲಯವು 35,000 ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.
(2 / 9)

ಮಂಗಳೂರಿನ 23 ವರ್ಷದ ಮೋಹಿತ್ ಎಂಬವರು ಕಳೆದ ವರ್ಷ ಡಿಸೆಂಬರ್ 22ರಂದು ಡೆಕಾಥ್ಲಾನ್​​ನಲ್ಲಿ ಫೋರ್ಕ್ಲಾಜ್ ಟ್ರೆಕ್ಕಿಂಗ್ ಟ್ರೌಸರ್ ಎಂಟಿ-500 ಅನ್ನು ಆರ್ಡರ್​ ಮಾಡಿದ್ದರು. ಆದರೆ ತಲುಪಿಸದ ಕಾರಣ ದಕ್ಷಿಣ ಕನ್ನಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಕೊಟ್ಟಿದ್ದರು.
(3 / 9)

ಮೋಹಿತ್ ಅವರು ಡೆಕಾಥ್ಲಾನ್ ಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದರು. ನೀವು ಕೇಳಿದ ಪ್ರಾಡೆಕ್ಟ್​ ಬೆಂಗಳೂರಿನ ಇಟಿಎ ಮಾಲ್​ನಲ್ಲಿರುವ ಡೆಕಾಥ್ಲಾನ್ ಮಳಿಗೆಯಲ್ಲಿ ಮಾತ್ರ ಲಭ್ಯವಿದೆ ಎಂದು ಪ್ರತಿನಿಧಿಗಳು, ಮೋಹಿತ್​ಗೆ ತಿಳಿಸಿದ್ದರು. ಆನ್​ಲೈನ್​ನಲ್ಲಿ ಪಾವತಿಸಿದರೆ, ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು.
(4 / 9)

ಆದರೆ, ಮೋಹಿತ್​ ಆನ್​ಲೈನ್​​ನಲ್ಲಿ ಪಾವತಿಸಿದ್ದರೂ ಪ್ರಾಡಕ್ಟ್​ ಅನ್ನು ಕಳುಹಿಸಿರಲಿಲ್ಲ. ಇಟಿಎ ಮಾಲ್​​ನಲ್ಲಿರುವ ಡೆಕಾಥ್ಲಾನ್​ ಮಳಿಗೆಯನ್ನು ಸಂಪರ್ಕಿಸಿದಾಗ ಆ ಉತ್ಪನ್ನ ನಮ್ಮಲ್ಲಿ ಇಲ್ಲ ಎಂದು ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದರು. ಹೀಗಾಗಿ ಫೆಬ್ರವರಿ 6ರಂದು ಮೋಹಿತ್​, ಇಟಿಎ ಮಾಲ್​ನಲ್ಲಿರುವ ಅಂಗಡಿಗೆ ಭೇಟಿ ನೀಡಿ ಪ್ರಶ್ನಿಸಿದ್ದರು. ಈ ವೇಳೆ ಹಣವನ್ನು ಮರಳಿಸುವುದಾಗಿ ತಿಳಿಸಿದ್ದರು.
(5 / 9)

ಇದರ ನಡುವೆಯೂ ಫೆಬ್ರವರಿ 10 ಮತ್ತು 13 ರಂದು ಫಾಲೋಅಪ್ ಮಾಡಿದರೂ ಹಣವನ್ನು ಮರಳಿಸಿರುವುದಿಲ್ಲ. ನಂತರ ಮೋಹಿತ್​ ಏಪ್ರಿಲ್ 9ರಂದು ಲೀಗಲ್ ನೋಟಿಸ್ ಕಳುಹಿಸಿದ್ರು. ಆದರೆ ಇಟಿಎ ಮಾಲ್​ನಲ್ಲಿರುವ ಮಳಿಗೆ ಮುಚ್ಚಲಾಗಿದೆ ಎಂಬ ಉತ್ತರ ಪಡೆದರು. ಹೀಗಾಗಿ, ಗ್ರಾಹಕ ನ್ಯಾಯಾಲಯಕ್ಕೆ ದೂರು ಕೊಟ್ಟರು.
(6 / 9)

ನ್ಯಾಯಾಲಯವೂ ಡೆಕಾಥ್ಲಾನ್​ಗೆ ನೋಟಿಸ್ ಕಳುಹಿಸಿತ್ತು. ಆದರೂ ಡೆಕಾಥ್ಲಾನ್, ಕೋರ್ಟ್ ಮುಂದೆ ಹಾಜರಾಗಲಿಲ್ಲ. ಹೀಗಾಗಿ, ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಸೋಮಶೇಖರಪ್ಪ ಹಂದಿಗೋಳ ಅವರು 36399 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಆ ಮೊತ್ತವನ್ನು ಮೋಹಿತ್​ಗೆ ತಲುಪಿಸುವಂತೆ ಸೂಚಿಸಿದ್ದಾರೆ.
(7 / 9)

ಮೋಹಿತ್‌ ಆರ್ಡರ್​ ಮಾಡಿದ್ದ ಪ್ರಾಡಕ್ಟ್ ಬೆಲೆ 1,399 ರೂಪಾಯಿ ಜೊತೆಗೆ ಸೇವಾ ಕೊರತೆಗೆ 25,000 ರೂಪಾಯಿ (ಉತ್ತನ್ನ ತಲುಪಿಸಲು ವಿಫಲವಾದರೆ) ಮತ್ತು ವ್ಯಾಜ್ಯ ವೆಚ್ಚಕ್ಕೆ 10,000 ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ. ಒಟ್ಟು 36399 ರರೂಪಾಯಿ ದಂಡ ವಿಧಿಸಿದೆ.
(8 / 9)

ನೀವು ಖರೀದಿಸಿದ ಯಾವುದೇ ವಸ್ತುವಿಗೆ ಹೆಚ್ಚುವರಿ ಶುಲ್ಕ ವಿಧಿಸಿದ್ದರೆ ಪಡೆದಿದ್ದರೆ, ಮೋಸ ಮಾಡಿದ್ದರೆ, ಜಿಎಸ್​ಟಿಯಲ್ಲಿ ಮೋಸ ಮಾಡಿದ್ದರೆ, ದೋಷಯುಕ್ತ ಉತ್ಪನ್ನವನ್ನು ನಿಮಗೆ ಮಾರಾಟ ಮಾಡಲಾಗಿದೆಯೇ? ಗುಣಮಟ್ಟ, ಶುದ್ಧತೆ, ಸಾಮರ್ಥ್ಯ.. ಹೀಗೆ ಯಾವುದೇ ವಿಚಾರದಲ್ಲಿ ಮೋಸ ಹೋಗಿದ್ದರೆ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು. ಅದಕ್ಕೆಂದೇ ವಿವಿಧ ಕಾಯ್ದೆಗಳಿವೆ. ಆದರೆ ನೀವು ಮೋಸ ಹೋಗಿದ್ದೀರಿ ಎಂದಾದರೆ ಅದಕ್ಕೆ ತಕ್ಕ ದಾಖಲೆಗಳು ನಿಮ್ಮ ಬಳಿ ಇದ್ದರೆ ಖಂಡಿತ ನ್ಯಾಯ ನಿಮ್ಮದಾಗುತ್ತದೆ. 
(9 / 9)

    ಹಂಚಿಕೊಳ್ಳಲು ಲೇಖನಗಳು