ಹಸಿರು ತೋರಣ, ಊರ ದಿಬ್ಬಣ, ಯಕ್ಷಗಾನ ನರ್ತನ, ಸನ್ಮಾನ ಸಂಭ್ರಮ; ಬೆಂಗಳೂರಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನದ ಸಚಿತ್ರ ವರದಿ
Aug 18, 2024 12:24 AM IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼದ ಸಂಭ್ರಮ ಕಳೆಗಟ್ಟಿತ್ತು. ಇಲ್ಲಿನ ವೈಟ್ ಪೆಟಲ್ಸ್ ಆವರಣದಲ್ಲಿ ಎಲ್ಲಿ ನೋಡಿದರೂ ಕರಾವಳಿಯ ಸಂಸ್ಕೃತಿ ಅನಾವರಣವಾಗಿತ್ತು. ಜೊತೆಗೆ ಕುಂದಗನ್ನಡದ ಕಂಪು ಹರಡಿತ್ತು. ದಿಬ್ಬಣದಿಂದ ಯಕ್ಷಗಾನ ಜೋಡಾಟದವರೆಗೆ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನ ಹೀಗಿತ್ತು.
- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼದ ಸಂಭ್ರಮ ಕಳೆಗಟ್ಟಿತ್ತು. ಇಲ್ಲಿನ ವೈಟ್ ಪೆಟಲ್ಸ್ ಆವರಣದಲ್ಲಿ ಎಲ್ಲಿ ನೋಡಿದರೂ ಕರಾವಳಿಯ ಸಂಸ್ಕೃತಿ ಅನಾವರಣವಾಗಿತ್ತು. ಜೊತೆಗೆ ಕುಂದಗನ್ನಡದ ಕಂಪು ಹರಡಿತ್ತು. ದಿಬ್ಬಣದಿಂದ ಯಕ್ಷಗಾನ ಜೋಡಾಟದವರೆಗೆ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನ ಹೀಗಿತ್ತು.