logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kundapura Kannada Habba: ವಿಶ್ವ ಕುಂದಾಪ್ರ ಕನ್ನಡ ದಿನ; ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮ; ಗಮನ ಸೆಳೆದ ಗಂಜಿ ಊಟ

Kundapura Kannada Habba: ವಿಶ್ವ ಕುಂದಾಪ್ರ ಕನ್ನಡ ದಿನ; ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮ; ಗಮನ ಸೆಳೆದ ಗಂಜಿ ಊಟ

Jul 18, 2023 07:28 PM IST

Matina Habba Programme: ಪ್ರತಿ ವರ್ಷ ಆಷಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ಜನರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸುತ್ತಾರೆ. ಈ ಬಾರಿ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ʼಮಾತಿನ ಹಬ್ಬʼ ಕಾರ್ಯಕ್ರಮ ಆಯೋಜಿಸಿತ್ತು.

  • Matina Habba Programme: ಪ್ರತಿ ವರ್ಷ ಆಷಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ಜನರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸುತ್ತಾರೆ. ಈ ಬಾರಿ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ʼಮಾತಿನ ಹಬ್ಬʼ ಕಾರ್ಯಕ್ರಮ ಆಯೋಜಿಸಿತ್ತು.
ಉದ್ಯೋಗ, ವ್ಯವಹಾರ ನಿಮಿತ್ತ ಕುಂದಾಪುರದಿಂದ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡ ಹಲವರು ಸೇರಿ ಟೀಮ್ ಕುಂದಾಪುರಿಯನ್ಸ್ ಎಂಬ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಈ ತಂಡ ತಮ್ಮ ಭಾಷೆ, ಬದುಕಿನ ಮೇಲಿನ ಒಲವನ್ನು ತೋರುವ ಉದ್ದೇಶದಿಂದ ಜುಲೈ 16 ರಂದು ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಗ್ರೌಂಡ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಮಾತಿನ ಹಬ್ಬವನ್ನಾಗಿ ಆಚರಿಸಿತ್ತು, ಅಲ್ಲದೆ ಈ ಕಾರ್ಯಕ್ರಮಕ್ಕೆ ಕುಂದಾಪುರದ ಹಲವು ಗಣ್ಯರನ್ನು ಆಹ್ವಾನಿಸಿತ್ತು. ಈ ಮಾತಿನ ಹಬ್ಬದಲ್ಲಿ ಕುಂದಾಪುರದ ಗೌಜಿ ಘಮ್ಮತ್ತು ಜೋರಾಗಿತ್ತು.
(1 / 6)

ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ಟೀಮ್ ಕುಂದಾಪುರಿಯನ್ಸ್ ತಂಡ, ಈಗ ಕುಂದಾಪುರದ ಹಬ್ಬದ ಆಚರಣೆಯ ಮೂಲಕ ಊರಿನ ಪ್ರೇಮವನ್ನು ಮೆರೆದಿದೆ. 
(2 / 6)

ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾತನಾಡಿ ಕುಂದಾಪುರ ಭಾಷೆಯ ಸೊಗಡನ್ನು ಹಂಚಿಕೊಂಡರು. 
(3 / 6)

ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ನೀಡಲಾಯಿತು. 
(4 / 6)

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ, ಬರಿಗಾರಿನ ಸಂತ ಎಂದು ಕರೆಸಿಕೊಳ್ಳುವ ಗುರುರಾಜ್‌ ಗಂಟಿಹೊಳೆ ಭಾಗವಹಿಸಿದ್ದು ವಿಶೇಷವಾಗಿತ್ತು. ಕುಂದಾಪುರ ಶೈಲಿಯ ಗಂಜಿ-ಉಪ್ಪಿನೊಡಿ ಊಟ ಬಂದವರ ಹೊಟ್ಟೆ ತಣಿಸಿತು. 
(5 / 6)

ಕಾರ್ಯಕ್ರಮದಲ್ಲಿ ದೀಪಕ್ ಶೆಟ್ಟಿ, ನಟ ಕವೀಶ್ ಶೆಟ್ಟಿ, ಶೇಫ್ ಟಾಕ್ ಚೇರ್ ಮ್ಯಾನ್ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಹಲವರು ಭಾಗವಹಿಸಿದ್ದರು. 
(6 / 6)

    ಹಂಚಿಕೊಳ್ಳಲು ಲೇಖನಗಳು