logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bharat Jodo Yatra: ತರಕಾರಿ ಅಂಗಡಿಯವರಿಂದ ʻವಸೂಲಿʼ ವಿಡಿಯೋ ವೈರಲ್‌, ಇಲ್ಲಿವೆ ಕೆಲವು ಫೋಟೋಸ್‌

Bharat Jodo Yatra: ತರಕಾರಿ ಅಂಗಡಿಯವರಿಂದ ʻವಸೂಲಿʼ ವಿಡಿಯೋ ವೈರಲ್‌, ಇಲ್ಲಿವೆ ಕೆಲವು ಫೋಟೋಸ್‌

Sep 16, 2022 01:22 PM IST

ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುವಾಗ ತರಕಾರಿ ಅಂಗಡಿಯವರೊಬ್ಬರು ಕಡಿಮೆ ಹಣ ಕೊಟ್ಟರೆಂದು ಆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೊಲ್ಲಂನಿಂದ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

  • ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುವಾಗ ತರಕಾರಿ ಅಂಗಡಿಯವರೊಬ್ಬರು ಕಡಿಮೆ ಹಣ ಕೊಟ್ಟರೆಂದು ಆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೊಲ್ಲಂನಿಂದ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 
ಭಾರತ್‌ ಜೋಡೋ ಯಾತ್ರೆಗೆ 2000 ರೂಪಾಯಿ ದೇಣಿಗೆ ಪಡೆದು ನೀಡಿರುವ ರಸೀದಿ ಇದು. 
(1 / 6)
ಭಾರತ್‌ ಜೋಡೋ ಯಾತ್ರೆಗೆ 2000 ರೂಪಾಯಿ ದೇಣಿಗೆ ಪಡೆದು ನೀಡಿರುವ ರಸೀದಿ ಇದು. (Twitter)
ಕಾಂಗ್ರೆಸ್ ಕಾರ್ಯಕರ್ತರ ಗುಂಪು ಅಂಗಡಿಗೆ ಬಂದು 'ಭಾರತ್ ಜೋಡೋ ಯಾತ್ರೆ'ಗೆ ದೇಣಿಗೆ ಕೇಳಿತು. ನಾನು 500 ರೂಪಾಯಿ ಕೊಟ್ಟೆ ಆದರೆ 2000 ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟರು. ತೂಕದ ಯಂತ್ರಗಳನ್ನು ಹಾಳು ಮಾಡಿ ತರಕಾರಿ ಎಸೆದರು ಎಂದು ಅಂಗಡಿ ಮಾಲೀಕ ಎಸ್ ಫವಾಜ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. 
(2 / 6)
ಕಾಂಗ್ರೆಸ್ ಕಾರ್ಯಕರ್ತರ ಗುಂಪು ಅಂಗಡಿಗೆ ಬಂದು 'ಭಾರತ್ ಜೋಡೋ ಯಾತ್ರೆ'ಗೆ ದೇಣಿಗೆ ಕೇಳಿತು. ನಾನು 500 ರೂಪಾಯಿ ಕೊಟ್ಟೆ ಆದರೆ 2000 ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟರು. ತೂಕದ ಯಂತ್ರಗಳನ್ನು ಹಾಳು ಮಾಡಿ ತರಕಾರಿ ಎಸೆದರು ಎಂದು ಅಂಗಡಿ ಮಾಲೀಕ ಎಸ್ ಫವಾಜ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. (ANI)
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ'ಗೆ ನಿಧಿ ಸಂಗ್ರಹ ಅಭಿಯಾನಕ್ಕೆ ಕೊಡುಗೆ ನೀಡಲು ನಿರಾಕರಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತರಕಾರಿ ಅಂಗಡಿ ಮಾಲೀಕರು ಥಳಿಸಿದ್ದಾರೆ. ಈ ಘಟನೆ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಕ್ಷದ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. 
(3 / 6)
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ'ಗೆ ನಿಧಿ ಸಂಗ್ರಹ ಅಭಿಯಾನಕ್ಕೆ ಕೊಡುಗೆ ನೀಡಲು ನಿರಾಕರಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತರಕಾರಿ ಅಂಗಡಿ ಮಾಲೀಕರು ಥಳಿಸಿದ್ದಾರೆ. ಈ ಘಟನೆ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಕ್ಷದ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. (ANI)
ಅಂಗಡಿಯಲ್ಲಿದ್ದ ತರಕಾರಿಗಳನ್ನು ಎಸೆದು ಗೊಂದಲ ಸೃಷ್ಟಿಸಿದ್ದಾರೆ. ಪಕ್ಷದ ಕಾರ್ಯಕರ್ತರು 2000 ರೂ.ಗೆ ಬೇಡಿಕೆಯಿಟ್ಟರು. ಆದರೆ ಮಾಲೀಕರು ಕೇವಲ 500 ರೂಪಾಯಿ ಮಾತ್ರ ಕೊಟ್ಟಿದ್ದರು. 2000 ರೂಪಾಯಿ ಕೊಡದೆ ಇಲ್ಲಿಂದ ಯಾರೂ ಜೀವಂತವಾಗಿ ಹೋಗುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರು ಅಂಗಡಿಯವರಿಗೆ ಬೆದರಿಕೆ ಹಾಕಿದ್ದಾಗಿ ವರದಿಯಾಗಿದೆ. 
(4 / 6)
ಅಂಗಡಿಯಲ್ಲಿದ್ದ ತರಕಾರಿಗಳನ್ನು ಎಸೆದು ಗೊಂದಲ ಸೃಷ್ಟಿಸಿದ್ದಾರೆ. ಪಕ್ಷದ ಕಾರ್ಯಕರ್ತರು 2000 ರೂ.ಗೆ ಬೇಡಿಕೆಯಿಟ್ಟರು. ಆದರೆ ಮಾಲೀಕರು ಕೇವಲ 500 ರೂಪಾಯಿ ಮಾತ್ರ ಕೊಟ್ಟಿದ್ದರು. 2000 ರೂಪಾಯಿ ಕೊಡದೆ ಇಲ್ಲಿಂದ ಯಾರೂ ಜೀವಂತವಾಗಿ ಹೋಗುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರು ಅಂಗಡಿಯವರಿಗೆ ಬೆದರಿಕೆ ಹಾಕಿದ್ದಾಗಿ ವರದಿಯಾಗಿದೆ. (ANI)
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ ಸೇರಿ ಐವರ ತಂಡ ಈ ರೀತಿ ಬೆದರಿಕೆ ಹಾಕಿರುವಂಥದ್ದು. ಅಂಗಡಿ ಮಾಲೀಕ ಎಸ್ ಫವಾಜ್ ಕುನ್ನಿಕೋಡು ಪೊಲೀಸರಿಗೆ ದೂರು ನೀಡಿದ್ದಾರೆ.
(5 / 6)
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ ಸೇರಿ ಐವರ ತಂಡ ಈ ರೀತಿ ಬೆದರಿಕೆ ಹಾಕಿರುವಂಥದ್ದು. ಅಂಗಡಿ ಮಾಲೀಕ ಎಸ್ ಫವಾಜ್ ಕುನ್ನಿಕೋಡು ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿರುವ ಫೋಟೋಗಳು ವೈರಲ್‌ ವಿಡಿಯೋದಿಂದ ಗ್ರ್ಯಾಬ್‌ ಮಾಡಿದ ಫೋಟೋಗಳಾಗಿದ್ದು, ಅವುಗಳನ್ನು ಎಎನ್‌ಐ ಶೇರ್‌ ಮಾಡಿದೆ. 
(6 / 6)
ಇಲ್ಲಿರುವ ಫೋಟೋಗಳು ವೈರಲ್‌ ವಿಡಿಯೋದಿಂದ ಗ್ರ್ಯಾಬ್‌ ಮಾಡಿದ ಫೋಟೋಗಳಾಗಿದ್ದು, ಅವುಗಳನ್ನು ಎಎನ್‌ಐ ಶೇರ್‌ ಮಾಡಿದೆ. (ANI )

    ಹಂಚಿಕೊಳ್ಳಲು ಲೇಖನಗಳು