logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm In Tripura: ಹಸ್ತಕ್ಕೆ ಮತ, ದೇಶಕ್ಕೆ....ತ್ರಿಪುರಾದಲ್ಲಿ ಪ್ರತಿಪಕ್ಷಗಳ ಜನ್ಮ ಜಾಲಾಡಿದ ಪ್ರಧಾನಿ ಮೋದಿ..!

PM in Tripura: ಹಸ್ತಕ್ಕೆ ಮತ, ದೇಶಕ್ಕೆ....ತ್ರಿಪುರಾದಲ್ಲಿ ಪ್ರತಿಪಕ್ಷಗಳ ಜನ್ಮ ಜಾಲಾಡಿದ ಪ್ರಧಾನಿ ಮೋದಿ..!

Feb 11, 2023 03:17 PM IST

ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತ್ರಿಪುರಾ ರಾಜ್ಯ ಹಿಂದುಳಿಯಲು ಕಾಂಗ್ರೆಸ್‌ ಹಾಗೂ ಕಮ್ಯೂನಿಸ್ಟರ ದುರಾಡಳಿತ ಕಾರಣ ಎಂದು ಹರಿಹಾಯಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

  • ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತ್ರಿಪುರಾ ರಾಜ್ಯ ಹಿಂದುಳಿಯಲು ಕಾಂಗ್ರೆಸ್‌ ಹಾಗೂ ಕಮ್ಯೂನಿಸ್ಟರ ದುರಾಡಳಿತ ಕಾರಣ ಎಂದು ಹರಿಹಾಯಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ತ್ರಿಪುರಾ ಮಾತಾ ತ್ರಿಪುರ ಸುಂದರಿಯಿಂದ ಆಶೀರ್ವಾದ ಪಡೆದಿದೆ. ಇಲ್ಲಿನ ಪ್ರಸ್ತುತ ಬಿಜೆಪಿ ಸರ್ಕಾರವು ಮತ್ತೊಂದು 'ತ್ರಿ ಶಕ್ತಿ'ಯೊಂದಿಗೆ ರಾಜ್ಯದ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಮೊದಲ ಶಕ್ತಿ ಅಧಿಕಾರ, ಎರಡನೇ ಶಕ್ತಿ  'ಆವಾಸ್' (ವಸತಿ) ಹಾಗೂ ಆರೋಗ್ಯ ಮತ್ತು ಮೂರನೇ ಶಕ್ತಿ  'ಆಯ್' (ಆದಾಯ). ಇಂದು 'ವಸತಿ-ಆರೋಗ್ಯ-ಆದಾಯ' ಎಂಬ ತ್ರಿಮೂರ್ತಿಗಳು ತ್ರಿಪುರವನ್ನು ಸಶಕ್ತಗೊಳಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
(1 / 5)
ತ್ರಿಪುರಾ ಮಾತಾ ತ್ರಿಪುರ ಸುಂದರಿಯಿಂದ ಆಶೀರ್ವಾದ ಪಡೆದಿದೆ. ಇಲ್ಲಿನ ಪ್ರಸ್ತುತ ಬಿಜೆಪಿ ಸರ್ಕಾರವು ಮತ್ತೊಂದು 'ತ್ರಿ ಶಕ್ತಿ'ಯೊಂದಿಗೆ ರಾಜ್ಯದ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಮೊದಲ ಶಕ್ತಿ ಅಧಿಕಾರ, ಎರಡನೇ ಶಕ್ತಿ  'ಆವಾಸ್' (ವಸತಿ) ಹಾಗೂ ಆರೋಗ್ಯ ಮತ್ತು ಮೂರನೇ ಶಕ್ತಿ  'ಆಯ್' (ಆದಾಯ). ಇಂದು 'ವಸತಿ-ಆರೋಗ್ಯ-ಆದಾಯ' ಎಂಬ ತ್ರಿಮೂರ್ತಿಗಳು ತ್ರಿಪುರವನ್ನು ಸಶಕ್ತಗೊಳಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.(Verified Twitter)
ಪ್ರಧಾನಮಂತ್ರಿ ಆವಾಸ್ ಯೋಜನೆ ಇಲ್ಲಿನ ಬಡವರ ಬದುಕನ್ನೇ ಬದಲಿಸಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಿದ್ದೇವೆ. ಹಿಂಸಾಚಾರ ಮತ್ತು ಹಿಂದುಳಿದಿರುವಿಕೆ ಈಗ ತ್ರಿಪುರದ ಗುರುತಾಗಿ ಉಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
(2 / 5)
ಪ್ರಧಾನಮಂತ್ರಿ ಆವಾಸ್ ಯೋಜನೆ ಇಲ್ಲಿನ ಬಡವರ ಬದುಕನ್ನೇ ಬದಲಿಸಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಿದ್ದೇವೆ. ಹಿಂಸಾಚಾರ ಮತ್ತು ಹಿಂದುಳಿದಿರುವಿಕೆ ಈಗ ತ್ರಿಪುರದ ಗುರುತಾಗಿ ಉಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.(Verified Twitter)
ಮೊದಲು ತ್ರಿಪುರಾದಲ್ಲಿ ಒಂದು ಪಕ್ಷಕ್ಕೆ ಮಾತ್ರ ಧ್ವಜಾರೋಹಣ ಮಾಡಲು ಅವಕಾಶವಿತ್ತು, ಆದರೆ ಇಂದು ಬಿಜೆಪಿ ಸರ್ಕಾರವು ತ್ರಿಪುರಾವನ್ನು ಭಯ, ಬೆದರಿಕೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ ಎಂದು ಪ್ರಧಾನಿ ಮೋದಿ ಘರ್ಜಿಸಿದರು.
(3 / 5)
ಮೊದಲು ತ್ರಿಪುರಾದಲ್ಲಿ ಒಂದು ಪಕ್ಷಕ್ಕೆ ಮಾತ್ರ ಧ್ವಜಾರೋಹಣ ಮಾಡಲು ಅವಕಾಶವಿತ್ತು, ಆದರೆ ಇಂದು ಬಿಜೆಪಿ ಸರ್ಕಾರವು ತ್ರಿಪುರಾವನ್ನು ಭಯ, ಬೆದರಿಕೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ ಎಂದು ಪ್ರಧಾನಿ ಮೋದಿ ಘರ್ಜಿಸಿದರು.(Verified Twitter)
ತ್ರಿಪುರಾ ಚುನಾವಣೆಗೆ ಇದು ನನ್ನ ಮೊದಲ ಸಾರ್ವಜನಿಕ ಸಭೆಯಾಗಿದೆ. ನಾನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿರುವುದನ್ನು ನೋಡುತ್ತಿದ್ದೇನೆ. ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ನುಡಿದರು.
(4 / 5)
ತ್ರಿಪುರಾ ಚುನಾವಣೆಗೆ ಇದು ನನ್ನ ಮೊದಲ ಸಾರ್ವಜನಿಕ ಸಭೆಯಾಗಿದೆ. ನಾನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿರುವುದನ್ನು ನೋಡುತ್ತಿದ್ದೇನೆ. ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ನುಡಿದರು.(Verified Twitter)
ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ತ್ರಿಪುರಾದಲ್ಲಿ ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದು, ಮೋದಿ ಮೋಡಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.
(5 / 5)
ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ತ್ರಿಪುರಾದಲ್ಲಿ ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದು, ಮೋದಿ ಮೋಡಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.(PTI)

    ಹಂಚಿಕೊಳ್ಳಲು ಲೇಖನಗಳು