logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇಸರಿ ದಿರಿಸಿನಲ್ಲಿ ಸ್ವರಾ ಭಾಸ್ಕರ್ ಪ್ರಗ್ನೆನ್ಸಿ ಫೋಟೋಶೂಟ್‌;‌ ಏಷಿಯನ್‌ ಪೇಂಟ್‌ಗೆ ಹೋಲಿಸಿ, ಬುರ್ಖಾ ಎಲ್ಲಿ ಎಂದ ನೆಟ್ಟಿಗರು

ಕೇಸರಿ ದಿರಿಸಿನಲ್ಲಿ ಸ್ವರಾ ಭಾಸ್ಕರ್ ಪ್ರಗ್ನೆನ್ಸಿ ಫೋಟೋಶೂಟ್‌;‌ ಏಷಿಯನ್‌ ಪೇಂಟ್‌ಗೆ ಹೋಲಿಸಿ, ಬುರ್ಖಾ ಎಲ್ಲಿ ಎಂದ ನೆಟ್ಟಿಗರು

Sep 16, 2023 03:11 PM IST

Swara Bhaskar: ಮದುವೆಯ ವಿಚಾರಕ್ಕೆ ಟ್ರೋಲ್‌ ಆಗಿದ್ದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌, ಮದುವೆ ಬಳಿಕ ಕೆಲವೇ ತಿಂಗಳಲ್ಲಿ ತಾಯಿ ಆಗುವ ಬಗ್ಗೆಯೂ ಹೇಳಿಕೊಂಡು ಟ್ರೋಲ್‌ಗೆ ತುಪ್ಪ ಸುರಿದಿದ್ದರು. ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌ ಮೂಲಕ ಎದುರಾಗಿದ್ದಾರೆ. ಕೇಸರಿ ದಿರಿಸಿನಲ್ಲಿ ಕಾಣಿಸಿಕೊಂಡು, ಖುಷಿಯ ಕ್ಷಣವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

  • Swara Bhaskar: ಮದುವೆಯ ವಿಚಾರಕ್ಕೆ ಟ್ರೋಲ್‌ ಆಗಿದ್ದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌, ಮದುವೆ ಬಳಿಕ ಕೆಲವೇ ತಿಂಗಳಲ್ಲಿ ತಾಯಿ ಆಗುವ ಬಗ್ಗೆಯೂ ಹೇಳಿಕೊಂಡು ಟ್ರೋಲ್‌ಗೆ ತುಪ್ಪ ಸುರಿದಿದ್ದರು. ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌ ಮೂಲಕ ಎದುರಾಗಿದ್ದಾರೆ. ಕೇಸರಿ ದಿರಿಸಿನಲ್ಲಿ ಕಾಣಿಸಿಕೊಂಡು, ಖುಷಿಯ ಕ್ಷಣವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌, ಸಿನಿಮಾಗಳಿಗಿಂತ ತಮ್ಮ ಹೇಳಿಕೆ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ವಿವಾದಾತ್ಮಕ ಮಾತುಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.  
(1 / 7)

ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಫಹಾದ್‌ ಅಹ್ಮದ್‌ ಮತ್ತು ಸ್ವರಾ ಭಾಸ್ಕರ್‌ ಜೋಡಿಯ ಅದ್ದೂರಿ ವಿವಾಹ ನೆರವೇರಿತ್ತು. ಮದುವೆ ವಿಚಾರವಾಗಿಯೂ ಸ್ವರಾ ಅವರನ್ನು ನೆಟ್ಟಿಗರ ಟ್ರೋಲ್‌ ಮಾಡಿದ್ದರು. 
(2 / 7)

ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳದ ಈ ಜೋಡಿ, ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಬಿಜಿಯಾಗಿದ್ದರು. ಜೂನ್‌ನಲ್ಲಿ ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದೂ ಹೇಳಿಕೊಂಡಿದ್ದರು. 
(3 / 7)

ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌ ಮೂಲಕ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಅಂಗಳಕ್ಕೆ ಆಗಮಿಸಿದ್ದಾರೆ ಸ್ವರಾ.‌ ಕೇಸರಿ ಬಣ್ಣದ ದಿರಿಸಿನಲ್ಲಿ, ಕೇಸರಿ ಬಣ್ಣದ ಬ್ಯಾಕ್‌ಗ್ರೌಂಡ್‌ನಲ್ಲಿನ ಫೋಟೋಶೂಟ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. 
(4 / 7)

ಅಚ್ಚರಿಯ ವಿಚಾರ ಏನೆಂದರೆ, ಹೀಗೆ ಕೇಸರಿ ಬಣ್ಣದ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. ಮೆಚ್ಚುಗೆ ಜತೆಗೆ ಕಾಲೆಳೆಯುವವರ ಸಂಖ್ಯೆಯೂ ಹೆಚ್ಚಾಗಿದೆ.
(5 / 7)

ನಟಿಯ ಈ ಫೋಟೋ ನೋಡಿದ ಕೆಲವರು, ಏಷಿಯನ್‌ ಪೇಂಟ್‌ನ ಜಾಹೀರಾತಾ? ಎಂದು ಪ್ರಶ್ನಿಸಿದರೆ, ಇನ್ನು ಕೆಲವರು "ನಿಮ್ಮ ಬುರ್ಖಾ ಎಲ್ಲಿ ಕಾಣುತ್ತಿಲ್ಲವಲ್ಲ?" ಎಂದಿದ್ದಾರೆ. "ಇದು ಸನಾತನ ಸಂಸ್ಕೃತಿಯಲ್ಲ, ನಾಚಿಕೆಗೇಡು" ಎಂದೂ ಟೀಕಿಸಿದ್ದಾರೆ.  
(6 / 7)

ಇನ್ನು ಕೆಲವರು ನಟಿ ಸ್ವರಾ ಅವರಿಗೆ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ. ಈ ಸಮಯದಲ್ಲಿ ಕೊಂಚ ಹುಷಾರಾಗಿರಿ ಎಂದು ಸಲಹೆಯನ್ನೂ ನೀಡಿದ್ದಾರೆ. 
(7 / 7)

    ಹಂಚಿಕೊಳ್ಳಲು ಲೇಖನಗಳು