logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2 ದಿನಗಳಿಂದ ಊಟ ಮಾಡಿರಲಿಲ್ಲ; ಸೋಲಿನ ನಂತರ ಕಣ್ಣೀರಿಟ್ಟು ಭಾರತೀಯರಿಗೆ ಕ್ಷಮಿಸಿ ಎಂದ ನಿಖತ್ ಜರೀನ್

2 ದಿನಗಳಿಂದ ಊಟ ಮಾಡಿರಲಿಲ್ಲ; ಸೋಲಿನ ನಂತರ ಕಣ್ಣೀರಿಟ್ಟು ಭಾರತೀಯರಿಗೆ ಕ್ಷಮಿಸಿ ಎಂದ ನಿಖತ್ ಜರೀನ್

Aug 02, 2024 07:27 AM IST

Nikhat Zareen: ಪ್ಯಾರಿಸ್ ಒಲಿಂಪಿಕ್ಸ್​ 2024 ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ಚೀನಾದ ವೂ ಯು ವಿರುದ್ಧ 0-5 ಅಂತರದಲ್ಲಿ ಸೋಲು ಕಂಡ ನಂತರ ಭಾರತದ ಬಾಕ್ಸರ್​ ಕಣ್ಣೀರಿಟ್ಟಿದ್ದಾರೆ.

  • Nikhat Zareen: ಪ್ಯಾರಿಸ್ ಒಲಿಂಪಿಕ್ಸ್​ 2024 ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ಚೀನಾದ ವೂ ಯು ವಿರುದ್ಧ 0-5 ಅಂತರದಲ್ಲಿ ಸೋಲು ಕಂಡ ನಂತರ ಭಾರತದ ಬಾಕ್ಸರ್​ ಕಣ್ಣೀರಿಟ್ಟಿದ್ದಾರೆ.
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಚೀನಾದ ವೂ ಯು ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ ನಂತರ ಭಾರತದ ಬಾಕ್ಸರ್​ ನಿಖತ್ ಜರೀನ್ ಅವರು ತನ್ನ ಪ್ಯಾರಿಸ್ ಒಲಿಂಪಿಕ್ಸ್​ ಅಭಿಯಾನ ಕೊನೆಗೊಳಿಸಿದರು. ಚೀನಾದ ಅಸಾಧಾರಣ ಬಾಕ್ಸರ್​ಗೆ ಪ್ರತಿರೋಧ ತೋರಲು ವಿಫಲರಾದ ಕಾರಣ 2 ಬಾರಿಯ ವಿಶ್ವ ಚಾಂಪಿಯನ್‌ ಜರೀನ್ ಪ್ರಯಾಣವು ಹೃದಯ ವಿದ್ರಾವಕ ಅಂತ್ಯಗೊಂಡಿತು.
(1 / 5)

ನಿರಾಸೆಯಿಂದ ಕಂಗೆಟ್ಟಿದ್ದ ಜರೀನ್ ಪಂದ್ಯದ ನಂತರ ಕಣ್ಣೀರಿಟ್ಟರು. ಆಗಸ್ಟ್​ 1ರ ಗುರುವಾರ ನಡೆದ 50 ಕೆಜಿ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ವೂ ಯು ವಿರುದ್ಧ 0-5 ಅಂತರದಲ್ಲಿ ಸೋತರು. ಹೃದಯವಿದ್ರಾವಕ ಫಲಿತಾಂಶದ ಹೊರತಾಗಿಯೂ ಜರೀನ್ ಮುಂದಿನ ಒಲಿಂಪಿಕ್ಸ್​​​ನಲ್ಲಿ ಪುಟಿದೇಳುವ ಭರವಸೆ ನೀಡಿದ್ದಾರೆ. ಅಲ್ಲದೆ, ಇದೇ ವೇಳೆ ದೇಶದ ಜನತೆಗೆ ಕ್ಷಮೆಯಾಚಿಸಿ ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ.
(2 / 5)

ಸೋಲಿನ ನಂತರ ಮಾತನಾಡಿದ ಜರೀನ್, ನನಗಿದು ಕಲಿಕೆಯ ಅನುಭವವಾಗಿತ್ತು. ನನ್ನ ಎದುರಾಳಿಯೊಂದಿಗೆ ಈ ಹಿಂದೆ ಆಡಿರಲಿಲ್ಲ. ಆಕೆ ನಿಜವಾಗಿಯೂ ಚೆನ್ನಾಗಿ ಆಡಿದರು. ತವರಿಗೆ ಮರಳಿದ ಬಳಿಕ ಪಂದ್ಯವನ್ನು ವಿಶ್ಲೇಷಿಸುತ್ತೇನೆ. ಏನೆಲ್ಲಾ ತಪ್ಪುಗಳು ನಡೆದವು, ಎಲ್ಲಿ ಎಡವಿದೆ, ಎದುರಾಳಿ ಆಡಿದ್ದೇಗೆ? ಹೀಗೆ ಎಲ್ಲವನ್ನೂ ವಿಶ್ಲೇಷಿಸುತ್ತೇನೆ. ಆದರೆ ಇದು ನನಗೆ ಮೊದಲ ಪಂದ್ಯವಾಗಿರಲಿಲ್ಲ ಎಂದಿದ್ದಾರೆ.
(3 / 5)

ನಾನು ಈ ಒಲಿಂಪಿಕ್ಸ್‌ಗೆ ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದೆ. ದೈಹಿಕ ಮತ್ತು ಮಾನಸಿಕವಾಗಿ ನನ್ನನ್ನು ಸಿದ್ಧಪಡಿಸಿಕೊಂಡಿದ್ದೆ. ಇದೀಗ ಮುಂದಿನ ಒಲಿಂಪಿಕ್ಸ್​​ಗೆ ನಾನು ಬಲವಾಗಿ ಹಿಂತಿರುಗುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಗತ್ಯ ತೂಕದ ಮಿತಿಗಾಗಿ (50 ಕೆಜಿ) 2 ದಿನಗಳ ಕಾಲ ಊಟ ಬಿಟ್ಟಿದ್ದಾಗಿ ಹೇಳಿದ್ದಾರೆ. ಕಳೆದ 2 ದಿನಗಳಿಂದ ತೂಕ ಕಡಿತಕ್ಕಾಗಿ ಊಟ ಮಾಡಿರಲಿಲ್ಲ ಎಂದಿದ್ದಾರೆ.
(4 / 5)

ಈ ಸೋಲಿನ ಹೊರತಾಗಿಯೂ ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಮತ್ತು ಪ್ರತಿಷ್ಠಿತ ಸ್ಟ್ರಾಂಡ್ಜಾ ಟೂರ್ನಿಯಲ್ಲಿ ಬೆಳ್ಳಿಯ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್ ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಚಿನ್ನದ ಪದಕ ಗೆದ್ದಿರುವ ನಿಖತ್, ಅತ್ಯಂತ ಸ್ಥಿರವಾದ ಭಾರತೀಯ ಬಾಕ್ಸರ್‌ಗಳಲ್ಲಿ ಒಬ್ಬರಾಗಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು