logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಾಗ್ವಾರ್‌, ಸ್ಟಾರ್ ಬಕ್ಸ್‌ನಿಂದ ಹಿಡಿದು ಏರ್ ಇಂಡಿಯಾವರೆಗೆ; ರತನ್ ಟಾಟಾ ಗ್ರೂಪ್‌ನಲ್ಲಿರುವ 7 ಜನಪ್ರಿಯ ಬ್ರ್ಯಾಂಡ್‌ಗಳಿವು

ಜಾಗ್ವಾರ್‌, ಸ್ಟಾರ್ ಬಕ್ಸ್‌ನಿಂದ ಹಿಡಿದು ಏರ್ ಇಂಡಿಯಾವರೆಗೆ; ರತನ್ ಟಾಟಾ ಗ್ರೂಪ್‌ನಲ್ಲಿರುವ 7 ಜನಪ್ರಿಯ ಬ್ರ್ಯಾಂಡ್‌ಗಳಿವು

Oct 10, 2024 01:28 PM IST

ಟಾಟಾ ಗ್ರೂಪ್‌ ಅನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿದ ರತನ್ ಟಾಟಾ ಅವರು ನಿನ್ನೆ (ಅಕ್ಟೋಬರ್ 9) ವಿಧಿವಶರಾದರು. ಟಾಟಾ ಗ್ರೂಪ್‌ನಲ್ಲಿರುವ ಕಂಪನಿಗಳನ್ನು ಗಮನಿಸಿದರೆ ಜನಪ್ರಿಯವಾಗಿರುವ 7 ಕಂಪನಿಗಳು ಗಮನಸೆಳೆಯುತ್ತವೆ. ಅವುಗಳ ಕಡೆಗೊಂದು ಕಿರುನೋಟ ಹರಿಸೋಣ.

ರತನ್ ಟಾಟಾ ಅವರು ಕಟ್ಟಿ ಬೆಳೆಸಿದ ಟಾಟಾ ಗ್ರೂಪ್‌ ಈಗ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವಹಿವಾಟು ನಡೆಸುತ್ತಿದೆ. ಹಲವು ದೇಶಗಳ ಪ್ರಮುಖ ಬ್ರ್ಯಾಂಡ್‌ಗಳನ್ನು ಖರೀದಿಸಿ ಸ್ವಾಧೀನ ಪಡಿಸಿಕೊಂಡಿರುವ ಟಾಟಾ ಗ್ರೂಪ್‌, ಭಾರತದ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪನ್ನೊತ್ತಿದೆ. ಈ ಗ್ರೂಪ್‌ನಲ್ಲಿ ಜಾಗ್ವಾರ್‌, ಸ್ಟಾರ್ ಬಕ್ಸ್‌ನಿಂದ ಹಿಡಿದು ಏರ್ ಇಂಡಿಯಾವರೆಗೆ 7 ಜನಪ್ರಿಯ ಬ್ರ್ಯಾಂಡ್‌ಗಳಿವೆ.
(1 / 8)

ಏರ್ ಇಂಡಿಯಾ - ಟಾಟಾ ಗ್ರೂಪ್ ಆರಂಭಿಸಿದ ವಿಮಾನ ಯಾನ ಸಂಸ್ಥೆ 2021ರಲ್ಲಿ ಮತ್ತೆ ಅದರ ತೆಕ್ಕೆ ಸೇರಿತು. ಇದು ಏರ್‌ ಇಂಡಿಯಾ ಲಿಮಿಟೆಡ್‌ ಅಧೀನದಲ್ಲಿದೆ. ಟಾಟಾ ಗ್ರೂಪ್‌ನ ಭಾಗವಾಗಿದೆ. ಇದರಲ್ಲಿ ಏರ್‌ಬಸ್, ಬೋಯಿಂಗ್‌ ಸೇರಿ 102 ದೇಶೀಯ ಮತ್ತು ಅಂತಾರಾಷ್ಟ್ರೀಯ ಹಾರಾಟದ ವಿಮಾನಗಳಿವೆ. ಇದರ ಕೇಂದ್ರ ಕಚೇರಿ ಗುರುಗ್ರಾಮದಲ್ಲಿದೆ.
(2 / 8)

ಬ್ರಿಟನ್‌ನ ಐಷಾರಾಮಿ ಕಾರು ಉತ್ಪಾದಕ ಕಂಪನಿ ಜಾಗ್ವಾರ್‌ ಲ್ಯಾಂಡ್ ರೋವರ್ 2008ರಿಂದ ಟಾಟಾ ಗ್ರೂಪ್‌ನ ಭಾಗವಾಗಿದೆ. 2.3 ಶತಕೋಟಿ ಪೌಂಡ್‌ಗೆ ಫೋರ್ಡ್‌ ಕಂಪನಿಯಿಂದ ಇದನ್ನು ಟಾಟಾ ಗ್ರೂಪ್ ಖರೀದಿಸಿತು.
(3 / 8)

ಟೈಟಾನ್ ಕಂಪನಿ - ಇದು ಗ್ರಾಹಕ ವಸ್ತುಗಳ ಬ್ರ್ಯಾಂಡ್‌. ಟೈಟಾನ್‌, ಸೊನಾಟ ವಾಚುಗಳು, ಫಾಸ್ಟ್ರ್ಯಾಕ್ ವಾಚ್‌ ಮತ್ತು ಬಿಡಿಭಾಗಗಳು, ತನಿಷ್ಕ್, ಝೋಯಾ ಜುವೆಲ್ಲರಿ, ಸ್ಕಿನ್‌ ಸುಗಂಧ ದ್ರವ್ಯ, ತನೀರಾ ಸೀರೆಗಳು ಇದರ ವ್ಯಾಪ್ತಿಯಲ್ಲಿವೆ. 
(4 / 8)

ಝುಡಿಯೋ - ಇದು ಬಜೆಟ್ ಫ್ರೆಂಡ್ಲಿ ಉಡುಪು ಮತ್ತು ಮನೆ ಅಗತ್ಯದ ವಸ್ತುಗಳ ಮಾರಾಟದ ಬ್ರ್ಯಾಂಡ್‌. ಟ್ರೆಂಟ್‌ ಲಿಮಿಟೆಡ್‌ನ ಬ್ರ್ಯಾಂಡ್ ಇದಾಗಿದ್ದು, ಟಾಟಾ ಗ್ರೂಪ್‌ನ ಒಂದು ಅಂಗ ಸಂಸ್ಥೆಯಾಗಿದೆ. 16 ವರ್ಷದಿಂದ 35 ವರ್ಷದೊಳಗಿನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಕಡೆಗೆ ಇದು ಗಮನಹರಿಸುತ್ತದೆ.
(5 / 8)

ಟಾಟಾ ಸ್ಟೀಲ್ ಲಿಮಿಟಿಡ್ - ಈ ಹಿಂದೆ ಇದು ಟಾಟಾ ಐರನ್‌ ಅಂಡ್ ಸ್ಟೀಲ್‌ ಕಂಪನಿ ಲಿಮಿಟೆಡ್ ಆಗಿತ್ತು. ಇದು ಭಾರತದ ಬಹುರಾಷ್ಟ್ರೀಯ ಉಕ್ಕು ತಯಾರಿಕಾ ಕಂಪನಿ. ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಈ ಕಂಪನಿ ಇದ್ದು, ಮುಂಬಯಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ವರ್ಷಕ್ಕೆ 35 ದಶಲಕ್ಷ ಟನ್‌ ಕಚ್ಚಾ ಉಕ್ಕನ್ನು ಇದು ಉತ್ಪಾದಿಸುತ್ತದೆ.
(6 / 8)

ವೆಸ್ಟ್‌ಸೈಡ್‌ - ಟ್ರೆಂಟ್‌ ಲಿಮಿಟೆಡ್‌ ಕಂಪನಿಯ ಮಹತ್ವಾಕಾಂಕ್ಷೆಯ ರಿಟೇಲ್‌ ಸ್ಟೋರ್ ಇದಾಗಿದ್ದು, ಇಲ್ಲಿ ಫ್ಯಾಷನ್‌ ಮತ್ತು ಲೈಫ್‌ಸ್ಟೈಲ್‌ ಉತ್ಪನ್ನಗಳ ಮಾರಾಟ ನಡೆಯುತ್ತದೆ. ವೆಸ್ಟ್‌ಸೈಡ್‌, ಝುಡಿಯೋ, ಉಟ್ಸಾಮ ಮುಂತಾದ ಬ್ರ್ಯಾಂಡ್‌ಗಳನ್ನು ಇಲ್ಲಿ ಪ್ರಮೋಟ್ ಮಾಡಲಾಗುತ್ತದೆ. ಸ್ಟಾರ್ ಬಜಾರ್‌, ಝರಾ ಮುಂತಾದ ಜಂಟಿ ಉದ್ಯಮಗಳನ್ನೂ ಇದು ನಡೆಸುತ್ತದೆ.
(7 / 8)

ಟಾಟಾ ಸ್ಟಾರ್‌ಬಕ್ಸ್‌ ಪ್ರೈವೇಟ್‌ ಲಿಮಿಟೆಡ್‌, ಇದು ಈ ಹಿಂದೆ ಟಾಟಾ ಸ್ಟಾರ್‌ಬಕ್ಸ್‌ ಲಿಮಿಟೆಡ್ ಎಂದು ಗುರುತಿಸಲ್ಪಟ್ಟಿತ್ತು. ಇದು ಟಾಟಾ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ ಮತ್ತು ಸ್ಟಾರ್‌ಬಕ್ಸ್‌ ಕಾರ್ಪೊರೇಷನ್‌ 50:50 ಪಾಲುದಾರಿಕೆಯಲ್ಲಿ ನಡೆಯುತ್ತಿದೆ.  ಭಾರತದಲ್ಲಿ ಮುಂಬಯಿಯಲ್ಲೆ ಮೊದಲ ಔಟ್‌ಲೆಟ್ 2012ರ ಅಕ್ಟೋಬರ್‌ನಲ್ಲಿ ಶುರುವಾಯಿತು.
(8 / 8)

    ಹಂಚಿಕೊಳ್ಳಲು ಲೇಖನಗಳು