logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Motorola Razr 50; ವಾವ್‌! ಮೊದಲ ನೋಟಕ್ಕೆ ಸಿಕ್ತು ಮೊಟೊರೊಲಾ ರೇಜರ್ 50 ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

Motorola Razr 50; ವಾವ್‌! ಮೊದಲ ನೋಟಕ್ಕೆ ಸಿಕ್ತು ಮೊಟೊರೊಲಾ ರೇಜರ್ 50 ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

Sep 14, 2024 09:15 PM IST

Motorola Razr 50 first impression: ಮೊಟೊರೊಲಾ ರೇಜರ್ 50 ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದ್ದು, ವಾವ್ ಎನ್ನುವಂತಹ ಮೊದಲ ನೋಟವನ್ನು ಹೊಂದಿದೆ. ಇದರಲ್ಲಿ ವಿಶೇಷ ಫೀಚರ್ಸ್ ಇದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣವಾಗಿರುವ ಎಚ್‌ಟಿ ಟೆಕ್‌ನ ಐಶ್ವರ್ಯ ಪಂಡಾ ಇದರ ಮೊದಲ ನೋಟ ಮತ್ತು ಅನುಭವವನ್ನು ಕಟ್ಟಿಕೊಟ್ಟಿರುವುದು ಹೀಗೆ.

Motorola Razr 50 first impression: ಮೊಟೊರೊಲಾ ರೇಜರ್ 50 ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದ್ದು, ವಾವ್ ಎನ್ನುವಂತಹ ಮೊದಲ ನೋಟವನ್ನು ಹೊಂದಿದೆ. ಇದರಲ್ಲಿ ವಿಶೇಷ ಫೀಚರ್ಸ್ ಇದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣವಾಗಿರುವ ಎಚ್‌ಟಿ ಟೆಕ್‌ನ ಐಶ್ವರ್ಯ ಪಂಡಾ ಇದರ ಮೊದಲ ನೋಟ ಮತ್ತು ಅನುಭವವನ್ನು ಕಟ್ಟಿಕೊಟ್ಟಿರುವುದು ಹೀಗೆ.
ಮೊಟೊರೊಲಾ ರೇಜರ್ 50 ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾಗೆ ಕಿರಿಯ ಸಹೋದರನಾಗಿ ಪದಾರ್ಪಣೆ ಮಾಡಿತು. ಈ ಹೊಸ ಆಕರ್ಷಕ ಸ್ಮಾರ್ಟ್‌ಫೋನ್‌ ಹಲವು ವಿಶೇಷ ಫೀಚರ್ಸ್ ಮತ್ತು ದೊಡ್ಡ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕೈಗಟಕುವ ಬೆಲೆಯಲ್ಲಿ ಲಭ್ಯವಿರುವ ಯೋಗ್ಯ ಮಡಚಬಹುದಾದ ಸ್ಮಾರ್ಟ್‌ಫೋನ್ ಇದಾಗಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣವಾಗಿರುವ ಎಚ್‌ಟಿ ಟೆಕ್‌ನ ಐಶ್ವರ್ಯ ಪಂಡಾ ಇದರ ಮೊದಲ ನೋಟ ಮತ್ತು ಅನುಭವವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. 
(1 / 5)
ಮೊಟೊರೊಲಾ ರೇಜರ್ 50 ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾಗೆ ಕಿರಿಯ ಸಹೋದರನಾಗಿ ಪದಾರ್ಪಣೆ ಮಾಡಿತು. ಈ ಹೊಸ ಆಕರ್ಷಕ ಸ್ಮಾರ್ಟ್‌ಫೋನ್‌ ಹಲವು ವಿಶೇಷ ಫೀಚರ್ಸ್ ಮತ್ತು ದೊಡ್ಡ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕೈಗಟಕುವ ಬೆಲೆಯಲ್ಲಿ ಲಭ್ಯವಿರುವ ಯೋಗ್ಯ ಮಡಚಬಹುದಾದ ಸ್ಮಾರ್ಟ್‌ಫೋನ್ ಇದಾಗಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣವಾಗಿರುವ ಎಚ್‌ಟಿ ಟೆಕ್‌ನ ಐಶ್ವರ್ಯ ಪಂಡಾ ಇದರ ಮೊದಲ ನೋಟ ಮತ್ತು ಅನುಭವವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. (Aishwarya Panda/ HT Tech)
ವಿನ್ಯಾಸದ ವಿಷಯದಲ್ಲಿ, ಮೊಟೊರೊಲಾ ರೇಜರ್‌ 50 "ಅಲ್ಟ್ರಾ" ರೂಪಾಂತರವನ್ನು ಹೋಲುತ್ತದೆ, ಆದಾಗ್ಯೂ, ಇದು ಅದರ ಹಿಂದಿನ ಮಾದರಿಗಿಂತ ಹೆಚ್ಚು ಅಪ್ಡೇಟ್ಸ್ ಹೊಂದಿದೆ. ವಿನ್ಯಾಸವು ಸಾಕಷ್ಟು ಸ್ಲಿಮ್ ಮತ್ತು ಕಡಿಮೆ ಭಾರದ್ದಾಗಿದೆ. ಮಡಚಿದ ಫೋನ್ ಬಿಡಿಸಿದಾಗ ದೊಡ್ಡ ಗಾತ್ರದ ಪರದೆ ತೆರೆದುಕೊಳ್ಳುತ್ತದೆ. ಇದು ಎಲ್ಲ ಬಳಕೆದಾರರಿಗೂ ಇಷ್ಟವಾಗುತ್ತದೆ ಎಂದೇನೂ ಇಲ್ಲ. ರೇಜರ್‌ 50 ರೊಂದಿಗೆ ಮೊಟೊರೊಲಾ, ಕೆಲವು ಪ್ರಭಾವಶಾಲಿ ಬಣ್ಣದ ಮಾದರಿಗಳನ್ನು ಪರಿಚಯಿಸಿದೆ ಮತ್ತು ವೇಗನ್‌ ಚರ್ಮದ ಫಲಕದಲ್ಲಿ ಸ್ಪ್ರಿಟ್ಜ್ ಆರೆಂಜ್ ಫಿನಿಶ್ ಇರುವ ಫೋನ್ ಇಷ್ಟವಾಯಿತು ಎಂದು ಅವರು ವಿವರಿಸಿದ್ದಾರೆ.
(2 / 5)
ವಿನ್ಯಾಸದ ವಿಷಯದಲ್ಲಿ, ಮೊಟೊರೊಲಾ ರೇಜರ್‌ 50 "ಅಲ್ಟ್ರಾ" ರೂಪಾಂತರವನ್ನು ಹೋಲುತ್ತದೆ, ಆದಾಗ್ಯೂ, ಇದು ಅದರ ಹಿಂದಿನ ಮಾದರಿಗಿಂತ ಹೆಚ್ಚು ಅಪ್ಡೇಟ್ಸ್ ಹೊಂದಿದೆ. ವಿನ್ಯಾಸವು ಸಾಕಷ್ಟು ಸ್ಲಿಮ್ ಮತ್ತು ಕಡಿಮೆ ಭಾರದ್ದಾಗಿದೆ. ಮಡಚಿದ ಫೋನ್ ಬಿಡಿಸಿದಾಗ ದೊಡ್ಡ ಗಾತ್ರದ ಪರದೆ ತೆರೆದುಕೊಳ್ಳುತ್ತದೆ. ಇದು ಎಲ್ಲ ಬಳಕೆದಾರರಿಗೂ ಇಷ್ಟವಾಗುತ್ತದೆ ಎಂದೇನೂ ಇಲ್ಲ. ರೇಜರ್‌ 50 ರೊಂದಿಗೆ ಮೊಟೊರೊಲಾ, ಕೆಲವು ಪ್ರಭಾವಶಾಲಿ ಬಣ್ಣದ ಮಾದರಿಗಳನ್ನು ಪರಿಚಯಿಸಿದೆ ಮತ್ತು ವೇಗನ್‌ ಚರ್ಮದ ಫಲಕದಲ್ಲಿ ಸ್ಪ್ರಿಟ್ಜ್ ಆರೆಂಜ್ ಫಿನಿಶ್ ಇರುವ ಫೋನ್ ಇಷ್ಟವಾಯಿತು ಎಂದು ಅವರು ವಿವರಿಸಿದ್ದಾರೆ.(Aishwarya Panda/ HT Tech)
ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್‌ನಲ್ಲಿ 3.6-ಇಂಚಿನ ಅಮೋಲ್ಡ್ ಕವರ್ ಡಿಸ್‌ಪ್ಲೇ ಮತ್ತು 6.9-ಇಂಚಿನ FHD AMOLED ಮುಖ್ಯ ಡಿಸ್‌ಪ್ಲೇ ಇದೆ. ಎರಡೂ ಪ್ರಭಾವಶಾಲಿ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಈ ಸರಣಿಯಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ ಜೆಮಿನಿ AI ಚಾಟ್‌ಬಾಟ್ ಹಾಗೂ ಕವರ್ ಡಿಸ್‌ಪ್ಲೇನಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಪ್ರವೇಶಿಸುವ ಸಾಮರ್ಥ್ಯ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫ್ಲಿಪ್‌ 6 ನಂತಹ ಪ್ರಮುಖ ಸ್ಮಾರ್ಟ್‌ಫೋನ್ ಈ ಫೀಚರ್ಸ್ ಅನ್ನು ನಿರ್ಬಂಧಿಸುತ್ತದೆ.
(3 / 5)
ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್‌ನಲ್ಲಿ 3.6-ಇಂಚಿನ ಅಮೋಲ್ಡ್ ಕವರ್ ಡಿಸ್‌ಪ್ಲೇ ಮತ್ತು 6.9-ಇಂಚಿನ FHD AMOLED ಮುಖ್ಯ ಡಿಸ್‌ಪ್ಲೇ ಇದೆ. ಎರಡೂ ಪ್ರಭಾವಶಾಲಿ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಈ ಸರಣಿಯಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ ಜೆಮಿನಿ AI ಚಾಟ್‌ಬಾಟ್ ಹಾಗೂ ಕವರ್ ಡಿಸ್‌ಪ್ಲೇನಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಪ್ರವೇಶಿಸುವ ಸಾಮರ್ಥ್ಯ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫ್ಲಿಪ್‌ 6 ನಂತಹ ಪ್ರಮುಖ ಸ್ಮಾರ್ಟ್‌ಫೋನ್ ಈ ಫೀಚರ್ಸ್ ಅನ್ನು ನಿರ್ಬಂಧಿಸುತ್ತದೆ.(Aishwarya Panda/ HT Tech)
ಕ್ಯಾಮೆರಾ ಕಾರ್ಯಕ್ಷಮತೆಗೆ ಸಂಬಂಧಿಸಿ ಹೇಳುವುದಾದರೆ, ಮೊಟೊರೊಲಾ ರೇಜರ್‌ 50 ಸ್ಮಾರ್ಟ್‌ಫೋನ್‌ OIS ಬೆಂಬಲದೊಂದಿಗೆ 0MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಮುಖ್ಯ ಕ್ಯಾಮೆರಾ ಯೋಗ್ಯವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಆದಾಗ್ಯೂ, 32MP ಸೆಲ್ಫಿ ಕ್ಯಾಮೆರಾವು ಚಿತ್ರಗಳಿಗೆ ಹೆಚ್ಚಿನ ಕ್ಲಾರಿಟಿಯನ್ನು ಕೊಡುತ್ತಿದೆ. ಇದು ಫಿಲ್ಟರ್‌ನಂತೆ ಕಾಣುವ ಚರ್ಮವನ್ನು ಸ್ವಲ್ಪ ಗುಲಾಬಿ ವರ್ಣದಲ್ಲಿ ಕಾಣುವಂತೆ ಮಾಡುತ್ತದೆ.
(4 / 5)
ಕ್ಯಾಮೆರಾ ಕಾರ್ಯಕ್ಷಮತೆಗೆ ಸಂಬಂಧಿಸಿ ಹೇಳುವುದಾದರೆ, ಮೊಟೊರೊಲಾ ರೇಜರ್‌ 50 ಸ್ಮಾರ್ಟ್‌ಫೋನ್‌ OIS ಬೆಂಬಲದೊಂದಿಗೆ 0MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಮುಖ್ಯ ಕ್ಯಾಮೆರಾ ಯೋಗ್ಯವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಆದಾಗ್ಯೂ, 32MP ಸೆಲ್ಫಿ ಕ್ಯಾಮೆರಾವು ಚಿತ್ರಗಳಿಗೆ ಹೆಚ್ಚಿನ ಕ್ಲಾರಿಟಿಯನ್ನು ಕೊಡುತ್ತಿದೆ. ಇದು ಫಿಲ್ಟರ್‌ನಂತೆ ಕಾಣುವ ಚರ್ಮವನ್ನು ಸ್ವಲ್ಪ ಗುಲಾಬಿ ವರ್ಣದಲ್ಲಿ ಕಾಣುವಂತೆ ಮಾಡುತ್ತದೆ.(Aishwarya Panda/ HT Tech)
ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್‌, ಮೀಡಿಯಾಟೆಕ್‌ ಡೆಮ್ನಿಸಿಟಿ 7300X ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು ನಿತ್ಯದ ಕಾರ್ಯಗಳನ್ನು ಕೂಲ್ ಆಗಿ ನಿರ್ವಹಿಸುತ್ತದೆ. ಈಗಿನಂತೆ, ಮೂಲ ಕಾರ್ಯಗಳಿಗಾಗಿ ಸ್ಮಾರ್ಟ್‌ಫೋನ್ ಬಳಸುವಾಗ ಯಾವುದೇ ಅಡಚಣೆ ಎದುರಾಗಿಲ್ಲ.ಡಿವೈಸ್‌ನ ಬ್ಯಾಟರಿ ಬಾಳಿಕೆ ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಆದರೆ ಅದರ ಫ್ಲಿಪ್ ಶೈಲಿಯ ಪಟ್ಟು ಪರಿಗಣಿಸಿದರೆ ಯೋಗ್ಯವಾಗಿದೆ.
(5 / 5)
ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್‌, ಮೀಡಿಯಾಟೆಕ್‌ ಡೆಮ್ನಿಸಿಟಿ 7300X ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು ನಿತ್ಯದ ಕಾರ್ಯಗಳನ್ನು ಕೂಲ್ ಆಗಿ ನಿರ್ವಹಿಸುತ್ತದೆ. ಈಗಿನಂತೆ, ಮೂಲ ಕಾರ್ಯಗಳಿಗಾಗಿ ಸ್ಮಾರ್ಟ್‌ಫೋನ್ ಬಳಸುವಾಗ ಯಾವುದೇ ಅಡಚಣೆ ಎದುರಾಗಿಲ್ಲ.ಡಿವೈಸ್‌ನ ಬ್ಯಾಟರಿ ಬಾಳಿಕೆ ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಆದರೆ ಅದರ ಫ್ಲಿಪ್ ಶೈಲಿಯ ಪಟ್ಟು ಪರಿಗಣಿಸಿದರೆ ಯೋಗ್ಯವಾಗಿದೆ.(Aishwarya Panda/ HT Tech)

    ಹಂಚಿಕೊಳ್ಳಲು ಲೇಖನಗಳು