logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Crocodiles: ತಾನೇ ಸಾಕಿದ 40 ಮೊಸಳೆಗಳಿಗೆ ಆಹಾರವಾದ ರೈತ; 72ರ ವೃದ್ಧನ ದುರಂತ ಅಂತ್ಯ

Crocodiles: ತಾನೇ ಸಾಕಿದ 40 ಮೊಸಳೆಗಳಿಗೆ ಆಹಾರವಾದ ರೈತ; 72ರ ವೃದ್ಧನ ದುರಂತ ಅಂತ್ಯ

May 26, 2023 04:30 PM IST

Crocodiles killed farmer: ಸಾಕಿದ ರೈತನನ್ನೇ ಬರೋಬ್ಬರಿ 40 ಮೊಸಳೆಗಳು ಸೇರಿ ಹರಿದು ತಿಂದು, ಕೊಂದಿರುವ ಘಟನೆ ಇಂದು ( ಮೇ 26, ಶುಕ್ರವಾರ) ಕಾಂಬೋಡಿಯಾದಲ್ಲಿ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಇಲ್ಲಿದೆ..

  • Crocodiles killed farmer: ಸಾಕಿದ ರೈತನನ್ನೇ ಬರೋಬ್ಬರಿ 40 ಮೊಸಳೆಗಳು ಸೇರಿ ಹರಿದು ತಿಂದು, ಕೊಂದಿರುವ ಘಟನೆ ಇಂದು ( ಮೇ 26, ಶುಕ್ರವಾರ) ಕಾಂಬೋಡಿಯಾದಲ್ಲಿ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಇಲ್ಲಿದೆ..
ಕಾಂಬೋಡಿಯಾದ 72ರ ಹರೆಯದ ಲುವಾನ್ ನಾಮ್ ಎಂಬವರು ಸ್ಥಳೀಯ ಮೊಸಳೆ ರೈತರ ಸಂಘದ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಅವರು ದುರಂತ ಅಂತ್ಯ ಕಂಡಿದ್ದಾರೆ.  
(1 / 5)

ಅವರು ಸಾಕಿದ್ದ ಮೊಸಳೆಗಳೆ ಲುವಾನ್ ನಾಮ್​​ರನ್ನು ರಕ್ತದಿಂದ ಮುಳುಗಿಸಿವೆ. 40 ಮೊಸಳೆಗಳ ಬಾಯಲ್ಲಿ ಸಿಲುಕಿದ ಲುವಾನ್ ಅಸುನೀಗಿದ್ದಾರೆ. 
(2 / 5)

ಕಾಂಬೋಡಿಯಾದ ಸೀಮ್ ರೀಪ್ ಪಟ್ಟಣದಲ್ಲಿ ಮೊಸಳೆಗಳ ಫಾರ್ಮ್ ನಡೆಸುತ್ತಿದ್ದ ಇವರು ಇಂದು ಸ್ಟಿಕ್​ ಬಳಸಿ ಮೊಸಳೆಯೊಂದನ್ನು ಮೊಟ್ಟೆ ಇಟ್ಟಿದ್ದ ಪಂಜರದಿಂದ ದೂರ ಸರಿಸಲು ಪ್ರಯತ್ನಿಸುತ್ತಿದ್ದರು.  
(3 / 5)

ಈ ವೇಳೆ ಮೊಸಳೆ ಸ್ಟಿಕ್​ ಅನ್ನು ಕಚ್ಚಿ ಎಳೆದಿದ್ದು ಲುವಾನ್ ನಾಮ್ ಮೊಸಳೆಗಳ ಗೂಡಿನೊಳಗೆ ಬಿದ್ದಿದ್ದಾರೆ. ನಂತರ ಇತರ ಮೊಸಳೆಗಳೂ ಅವರ ಮೇಲೆ ದಾಳಿ ನಡೆಸಿ ಅವರು ಸಾಯುವವರೆಗೂ ಕಚ್ಚಿ ಕಚ್ಚಿ ತಿಂದಿವೆ. 
(4 / 5)

ಲುವಾನ್ ನಾಮ್ ಅವರ ಒಂದು ಕೈಯನ್ನು ಪೂರ್ತಿಯಾಗಿ ಮೊಸಳೆಗಳು ಕಚ್ಚಿ ನುಂಗಿವೆ. ಈ ಘಟನೆಯನ್ನು ಸೀಮ್ ರೀಪ್ ಪಟ್ಟಣದ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.  
(5 / 5)

    ಹಂಚಿಕೊಳ್ಳಲು ಲೇಖನಗಳು