logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tania Sachdev: ಮೋಹಕ ಚೆಲುವೆಯಿಂದ ಹುಡುಗರ ಹೃದಯಕ್ಕೆ ಚೆಕ್ ಇಟ್ಟ ಚೆಸ್​ ಆಟಗಾರ್ತಿ; ಬ್ಯೂಟಿ ವಿತ್​ ಬ್ರೈನ್ ಕಂಡು ಹುಬ್ಬೆರಿಸಿದ ನೆಟಿಜನ್ಸ್

Tania Sachdev: ಮೋಹಕ ಚೆಲುವೆಯಿಂದ ಹುಡುಗರ ಹೃದಯಕ್ಕೆ ಚೆಕ್ ಇಟ್ಟ ಚೆಸ್​ ಆಟಗಾರ್ತಿ; ಬ್ಯೂಟಿ ವಿತ್​ ಬ್ರೈನ್ ಕಂಡು ಹುಬ್ಬೆರಿಸಿದ ನೆಟಿಜನ್ಸ್

Jun 24, 2023 10:02 AM IST

Tania Sachdev: ತಾನಿಯಾ ಸಚ್​ದೇವ್, ಈಕೆ ಕುರಿತು ಅಷ್ಟಾಗಿ ಪರಿಚಯ ಯಾರಿಗೂ ಇಲ್ಲ. ಅಂದ ಎಂಬ ಪದಕ್ಕೂ ಈಕೆ ಪೈಪೋಟಿ ನೀಡುತ್ತಾರೆ. ಸೌಂದರ್ಯದ ಜೊತೆಗೆ ಪ್ರತಿಭೆಯಲ್ಲೂ ಈಕೆಗಿಲ್ಲ ಯಾರೂ ಪೈಪೋಟಿ. ವಯಸ್ಸು 36 ಆಗಿದ್ದರೂ, 20ರ ಯುವತಿಯಂತೆ ಕಾಣುತ್ತಾರೆ. ಯಾರು ಈಕೆ ಬನ್ನಿ ನೋಡೋಣ.

  • Tania Sachdev: ತಾನಿಯಾ ಸಚ್​ದೇವ್, ಈಕೆ ಕುರಿತು ಅಷ್ಟಾಗಿ ಪರಿಚಯ ಯಾರಿಗೂ ಇಲ್ಲ. ಅಂದ ಎಂಬ ಪದಕ್ಕೂ ಈಕೆ ಪೈಪೋಟಿ ನೀಡುತ್ತಾರೆ. ಸೌಂದರ್ಯದ ಜೊತೆಗೆ ಪ್ರತಿಭೆಯಲ್ಲೂ ಈಕೆಗಿಲ್ಲ ಯಾರೂ ಪೈಪೋಟಿ. ವಯಸ್ಸು 36 ಆಗಿದ್ದರೂ, 20ರ ಯುವತಿಯಂತೆ ಕಾಣುತ್ತಾರೆ. ಯಾರು ಈಕೆ ಬನ್ನಿ ನೋಡೋಣ.
ತಾನಿಯಾ ಸಚ್‌ದೇವ್ ಭಾರತದ ಅತ್ಯುತ್ತಮ ಮಹಿಳಾ ಚೆಸ್ ಆಟಗಾರ್ತಿಯರಲ್ಲಿ ಒಬ್ಬರು. 36 ವರ್ಷದ ತಾನಿಯಾ 2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್ ಮತ್ತು 2008ರಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಕಾಮನ್​ವೆಲ್ತ್​ ಸೇರಿ ಹಲವು ಟೂರ್ನಿಗಳಲ್ಲಿ ಕಂಚು, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಷ್ಟೇ ಅಲ್ಲ ನೂರಾರು ಪ್ರಶಸ್ತಿಗಳನ್ನು ಜಯಿಸಿದ್ದಾರೆ.
(1 / 11)
ತಾನಿಯಾ ಸಚ್‌ದೇವ್ ಭಾರತದ ಅತ್ಯುತ್ತಮ ಮಹಿಳಾ ಚೆಸ್ ಆಟಗಾರ್ತಿಯರಲ್ಲಿ ಒಬ್ಬರು. 36 ವರ್ಷದ ತಾನಿಯಾ 2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್ ಮತ್ತು 2008ರಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಕಾಮನ್​ವೆಲ್ತ್​ ಸೇರಿ ಹಲವು ಟೂರ್ನಿಗಳಲ್ಲಿ ಕಂಚು, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಷ್ಟೇ ಅಲ್ಲ ನೂರಾರು ಪ್ರಶಸ್ತಿಗಳನ್ನು ಜಯಿಸಿದ್ದಾರೆ.(Tania Sachdev/Instagram)
ಬ್ಯೂಟಿ ವಿತ್​ ಬ್ರೈನ್ ಎಂಬಂತೆ ತಾನಿಯಾ ಸೌಂದರ್ಯ ಜೊತೆಗೆ ಆಟದಿಂದಲೂ ಹೆಚ್ಚು ಆಕರ್ಷಿಸುತ್ತಿದ್ದಾರೆ. ಯಾವ ಹೀರೋಯಿನ್​ಗೂ ಕಡಿಮೆ ಎಂಬಂತೆ ಮಿಂಚುತ್ತಿದ್ದಾರೆ. ಚೆಸ್​​ ಆಟವಷ್ಟೇ ಅಲ್ಲ, ಕೆಲವು ಚೆಸ್ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
(2 / 11)
ಬ್ಯೂಟಿ ವಿತ್​ ಬ್ರೈನ್ ಎಂಬಂತೆ ತಾನಿಯಾ ಸೌಂದರ್ಯ ಜೊತೆಗೆ ಆಟದಿಂದಲೂ ಹೆಚ್ಚು ಆಕರ್ಷಿಸುತ್ತಿದ್ದಾರೆ. ಯಾವ ಹೀರೋಯಿನ್​ಗೂ ಕಡಿಮೆ ಎಂಬಂತೆ ಮಿಂಚುತ್ತಿದ್ದಾರೆ. ಚೆಸ್​​ ಆಟವಷ್ಟೇ ಅಲ್ಲ, ಕೆಲವು ಚೆಸ್ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.(Tania Sachdev/Instagram)
ಯೂಟ್ಯೂಬ್‌ನಲ್ಲಿ ತಾನಿಯಾ ಸಚ್‌ದೇವ್ ವಿಶೇಷ ಚಾನೆಲ್​ ಕೂಡ ಹೊಂದಿದ್ದಾರೆ. ಸುಮಾರು ಒಂದು ಲಕ್ಷ ಸಬ್​​ಸ್ಕ್ರೈಬರ್ಸ್​ ಇದ್ದು, ಐದು ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ. ಇನ್​ಸ್ಟಾಗ್ರಾಂನಲ್ಲಿ ಅವರ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.
(3 / 11)
ಯೂಟ್ಯೂಬ್‌ನಲ್ಲಿ ತಾನಿಯಾ ಸಚ್‌ದೇವ್ ವಿಶೇಷ ಚಾನೆಲ್​ ಕೂಡ ಹೊಂದಿದ್ದಾರೆ. ಸುಮಾರು ಒಂದು ಲಕ್ಷ ಸಬ್​​ಸ್ಕ್ರೈಬರ್ಸ್​ ಇದ್ದು, ಐದು ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ. ಇನ್​ಸ್ಟಾಗ್ರಾಂನಲ್ಲಿ ಅವರ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.(Tania Sachdev/Instagram)
ವೃತ್ತಿ ಬದುಕಿನ ಆರಂಭದಲ್ಲಿ ತುಂಬಾ ಸಾಂಪ್ರದಾಯಿಕತೆಯಿಂದಿದ್ದ ತಾನಿಯಾ, ತಾನಿಯಾ ಸಚ್‌ದೇವ್, ನಂತರ ಟ್ರೆಂಡ್​​ಗೆ ತಕ್ಕಂತೆ ಬದಲಾಗಿ ಅಲ್ಟ್ರಾಮೋಡರ್ನ್ ಆದರು.
(4 / 11)
ವೃತ್ತಿ ಬದುಕಿನ ಆರಂಭದಲ್ಲಿ ತುಂಬಾ ಸಾಂಪ್ರದಾಯಿಕತೆಯಿಂದಿದ್ದ ತಾನಿಯಾ, ತಾನಿಯಾ ಸಚ್‌ದೇವ್, ನಂತರ ಟ್ರೆಂಡ್​​ಗೆ ತಕ್ಕಂತೆ ಬದಲಾಗಿ ಅಲ್ಟ್ರಾಮೋಡರ್ನ್ ಆದರು.(Tania Sachdev/Instagram)
ತನ್ನ 6ನೇ ವಯಸ್ಸಿನಿಂದಲೇ ಚೆಸ್ ಆಡುತ್ತಿದ್ದಳು. ಹೆತ್ತವರಿಂದಲೇ ಚೆಸ್‌ನಲ್ಲಿ ತರಬೇತಿ ಪಡೆದ ತಾನಿಯಾ,  8ನೇ ವಯಸ್ಸಿನಲ್ಲೇ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದಿದ್ದಳು. ಬಳಿಕ ಕೆಸಿ ಜೋಶಿ ಅವರು ತರಬೇತಿ ನೀಡಿದ್ದರು.
(5 / 11)
ತನ್ನ 6ನೇ ವಯಸ್ಸಿನಿಂದಲೇ ಚೆಸ್ ಆಡುತ್ತಿದ್ದಳು. ಹೆತ್ತವರಿಂದಲೇ ಚೆಸ್‌ನಲ್ಲಿ ತರಬೇತಿ ಪಡೆದ ತಾನಿಯಾ,  8ನೇ ವಯಸ್ಸಿನಲ್ಲೇ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದಿದ್ದಳು. ಬಳಿಕ ಕೆಸಿ ಜೋಶಿ ಅವರು ತರಬೇತಿ ನೀಡಿದ್ದರು.(Tania Sachdev/Instagram)
ತಾನಿಯಾ ಜನಿಸಿದ್ದು ಆಗಸ್ಟ್​ 20, 1986ರಲ್ಲಿ. ದೆಹಲಿ ಮೂಲದ ನಿವಾಸಿ. ತಂದೆ ಸಚ್‌ದೇವ್, ತಾಯಿ ಅಂಜು. 2008ರಲ್ಲಿ ಇಂಟರ್​ನ್ಯಾಚನಲ್​ ಮಾಸ್ಟರ್​, 2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್​​ ಪ್ರಶಸ್ತಿ ಗೆದ್ದಿದ್ದಾರೆ.
(6 / 11)
ತಾನಿಯಾ ಜನಿಸಿದ್ದು ಆಗಸ್ಟ್​ 20, 1986ರಲ್ಲಿ. ದೆಹಲಿ ಮೂಲದ ನಿವಾಸಿ. ತಂದೆ ಸಚ್‌ದೇವ್, ತಾಯಿ ಅಂಜು. 2008ರಲ್ಲಿ ಇಂಟರ್​ನ್ಯಾಚನಲ್​ ಮಾಸ್ಟರ್​, 2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್​​ ಪ್ರಶಸ್ತಿ ಗೆದ್ದಿದ್ದಾರೆ.(Tania Sachdev/Instagram)
2018 ಮತ್ತು 2019ರಲ್ಲಿ ತಾನಿಯಾ ಚೆಸ್ ನಿರೂಪಕಿಯಾಗಿ ಮತ್ತು ಕಾಮೆಂಟೇಟರ್ ಆಗಿಯೂ ಸೇವೆ ಸಲ್ಲಿಸಿದ್ದ ಆಕೆಗೆ ಮದುವೆಯಾಗಿದೆ. 2014ರ ನವೆಂಬರ್​​ನಲ್ಲಿ ದೆಹಲಿ ಮೂಲದ ವಾಸ್ತುಶಿಲ್ಪಿ ವಿರಾಜ್ ಕಟಾರಿಯಾ ಅವರನ್ನು ವಿವಾಹವಾದರು.
(7 / 11)
2018 ಮತ್ತು 2019ರಲ್ಲಿ ತಾನಿಯಾ ಚೆಸ್ ನಿರೂಪಕಿಯಾಗಿ ಮತ್ತು ಕಾಮೆಂಟೇಟರ್ ಆಗಿಯೂ ಸೇವೆ ಸಲ್ಲಿಸಿದ್ದ ಆಕೆಗೆ ಮದುವೆಯಾಗಿದೆ. 2014ರ ನವೆಂಬರ್​​ನಲ್ಲಿ ದೆಹಲಿ ಮೂಲದ ವಾಸ್ತುಶಿಲ್ಪಿ ವಿರಾಜ್ ಕಟಾರಿಯಾ ಅವರನ್ನು ವಿವಾಹವಾದರು.(Tania Sachdev/Instagram)
ತಾನಿಯಾ 2006 ಮತ್ತು 2007ರಲ್ಲಿ ಎರಡು ಬಾರಿ ಭಾರತೀಯ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ. 2007ರಲ್ಲಿ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್, ಒಟ್ಟು 3 ಬಾರಿ ಕಾಮನ್​ವೆಲ್ತ್​ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ (ಹಾಲಿ ಚಾಂಪಿಯನ್ 2016). 
(8 / 11)
ತಾನಿಯಾ 2006 ಮತ್ತು 2007ರಲ್ಲಿ ಎರಡು ಬಾರಿ ಭಾರತೀಯ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ. 2007ರಲ್ಲಿ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್, ಒಟ್ಟು 3 ಬಾರಿ ಕಾಮನ್​ವೆಲ್ತ್​ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ (ಹಾಲಿ ಚಾಂಪಿಯನ್ 2016). (Tania Sachdev/Instagram)
2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ 8ನೇ ಭಾರತೀಯ ಆಟಗಾರರು. 2006 ಮತ್ತು 2007ರಲ್ಲಿ ರಾಷ್ಟ್ರೀಯ ಮಹಿಳಾ ಪ್ರೀಮಿಯರ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. 2007ರಲ್ಲಿ ಟೆಹ್ರಾನ್‌ನಲ್ಲಿ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು.
(9 / 11)
2005ರಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ 8ನೇ ಭಾರತೀಯ ಆಟಗಾರರು. 2006 ಮತ್ತು 2007ರಲ್ಲಿ ರಾಷ್ಟ್ರೀಯ ಮಹಿಳಾ ಪ್ರೀಮಿಯರ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. 2007ರಲ್ಲಿ ಟೆಹ್ರಾನ್‌ನಲ್ಲಿ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು.(Tania Sachdev/Instagram)
ತಾನಿಯಾ ಸಚ್​ದೇವ್​​ಗೆ 2009ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು. 2009, 2011, 2012, 2014, 2015ರಲ್ಲಿ ವಿವಿಧ ಟೂರ್ನಿಗಳಲ್ಲಿ ಕಂಚು, ಬೆಳ್ಳಿ ಗೆದ್ದಿದ್ದಾರೆ. ವಿವಿಧ ಟೂರ್ನಿಗಳಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಗೆದ್ದಿರುವ ಹೆಗ್ಗಳಿಕೆ ಅವರದ್ದು.
(10 / 11)
ತಾನಿಯಾ ಸಚ್​ದೇವ್​​ಗೆ 2009ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು. 2009, 2011, 2012, 2014, 2015ರಲ್ಲಿ ವಿವಿಧ ಟೂರ್ನಿಗಳಲ್ಲಿ ಕಂಚು, ಬೆಳ್ಳಿ ಗೆದ್ದಿದ್ದಾರೆ. ವಿವಿಧ ಟೂರ್ನಿಗಳಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಗೆದ್ದಿರುವ ಹೆಗ್ಗಳಿಕೆ ಅವರದ್ದು.
2013ರಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವನಾಥನ್ ಆನಂದ್ ನಡುವಿನ ಪಂದ್ಯಕ್ಕೆ ಕಾಮೆಂಟರಿ ಮಾಡಿದ್ದರು. 2019ರ ಜುಲೈನಲ್ಲಿ ಕಾಮನ್‌ವೆಲ್ತ್ ಮಹಿಳಾ ಚಾಂಪಿಯನ್‌ಶಿಪ್ ಕೂಡ ಗೆದ್ದರು. ಹೀಗೆ ಹಲವು ಪ್ರಶಸ್ತಿ ಗೆದ್ದಿರುವ ತಾನಿಯಾ, ಅತ್ಯಂತ ಸೌಂದರ್ಯವತಿ.
(11 / 11)
2013ರಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವನಾಥನ್ ಆನಂದ್ ನಡುವಿನ ಪಂದ್ಯಕ್ಕೆ ಕಾಮೆಂಟರಿ ಮಾಡಿದ್ದರು. 2019ರ ಜುಲೈನಲ್ಲಿ ಕಾಮನ್‌ವೆಲ್ತ್ ಮಹಿಳಾ ಚಾಂಪಿಯನ್‌ಶಿಪ್ ಕೂಡ ಗೆದ್ದರು. ಹೀಗೆ ಹಲವು ಪ್ರಶಸ್ತಿ ಗೆದ್ದಿರುವ ತಾನಿಯಾ, ಅತ್ಯಂತ ಸೌಂದರ್ಯವತಿ.

    ಹಂಚಿಕೊಳ್ಳಲು ಲೇಖನಗಳು