logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫೆಂಗಲ್ ಚಂಡಮಾರುತ; ಹದಗೆಟ್ಟ ಬೆಂಗಳೂರು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ, ಪೊಲೀಸರು ನೀಡಿರುವ ಸಂಚಾರ ಸಲಹೆಗಳ ಸಚಿತ್ರ ನೋಟ

ಫೆಂಗಲ್ ಚಂಡಮಾರುತ; ಹದಗೆಟ್ಟ ಬೆಂಗಳೂರು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ, ಪೊಲೀಸರು ನೀಡಿರುವ ಸಂಚಾರ ಸಲಹೆಗಳ ಸಚಿತ್ರ ನೋಟ

Dec 03, 2024 02:55 PM IST

ಫೆಂಗಲ್ ಚಂಡಮಾರುತದ ಕಾರಣ ಕರ್ನಾಟಕದ ಉದ್ದಗಲಕ್ಕೂ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಭಾಗದಲ್ಲಿ ವಿಶೇಷವಾಗಿ ಬೆಂಗಳೂರು, ರಾಮನಗರ, ಮೈಸೂರು ಮಂಡ್ಯ, ಕರಾವಳಿ ಜಿಲ್ಲೆಗಳಲ್ಲಿ ತುಸು ಹೆಚ್ಚು ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ಪೊಲೀಸರು ಕೊಟ್ಟಿರುವ ಸಂಚಾರ ಸಲಹೆಗಳ ಚಿತ್ರನೋಟ ಇಲ್ಲಿದೆ.

ಫೆಂಗಲ್ ಚಂಡಮಾರುತದ ಕಾರಣ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಹದಗೆಟ್ಟಿವೆ. ವೈಟ್‌ಫೀಲ್ಡ್ ಭಾಗದಲ್ಲಿ ರಸ್ತೆಗಳಲ್ಲಿ ಭಾರಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು, ಅವುಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದೇ ರೀತಿ ಬೆಂಗಳೂರು ನಗರದ ವಿವಿಧೆಡೆ ರಸ್ತೆ ಗುಂಡಿಗಳಾಗಿದ್ದು ನಿಧಾನಗತಿಯ ಸಂಚಾರಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(1 / 11)

ಬೆಂಗಳೂರಿನಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಮಳೆಯಾಗುತ್ತಿದ್ದು, ವಿವಿಧೆಡೆ ರಸ್ತೆಗಳು ಹಾಳಾಗಿವೆ. ಇದರಿಂದಾಗಿ ನಿಧಾನಗತಿಯ ಸಂಚಾರ ಕಂಡುಬಂದಿದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಸಿಟಿ ಡಬಲ್‌ ರೋಡ್ ಜಂಕ್ಷನ್ ಹತ್ತಿರ 80 ಫೀಟ್ ರೋಡ್‌ನಲ್ಲಿ ದೊಡ್ಡ ದೊಡ್ಡ ರಸ್ತೆ ಗುಂಡಿಗಳು ಇರುವ ಕಾರಣ ನಿಧಾನಗತಿಯ ಟ್ರಾಫಿಕ್ ಇರುವುದಾಗಿ ಜೀವನ್ ಬಿಮಾ ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
(2 / 11)

ವರ್ತೂರು ಬ್ರಿಜ್ ಸಮೀಪ ರಸ್ತೆ ಸಂಪೂರ್ಣ ಹದಗೆಡ್ಡಿ ಭಾರಿ ದೊಡ್ಡ ಗಾತ್ರದ ರಸ್ತೆಗುಂಡಿಗಳಾದ ಕಾರಣ ನಿಧಾನಗತಿಯ ವಾಹನ ಸಂಚಾರ ಇದೆ. ಕೆಲವು ರಸ್ತೆಗುಂಡಿಗಳನ್ನು ಸಂಚಾರ ಪೊಲೀಸರು ಮುಚ್ಚಿಸುತ್ತಿರುವುದಾಗಿ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
(3 / 11)

ಹೆಬ್ಬಾಳ ವೃತ್ತದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ಮತ್ತು ಸಾರಕ್ಕಿ ಜಂಕ್ಷನ್‌ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಬನಶಂಕರಿ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(4 / 11)

ವರ್ತೂರು- ಮಾರತ್ತಹರ್ಳಳಿ ವಿಬ್‌ಗ್ಯೋರ್‌ ರಸ್ತೆಯಲ್ಲಿ ದೊಡ್ಡ ದೊಡ್ಡ ರಸ್ತೆಗುಂಡಿಗಳಾಗಿದ್ದು, ನಿಧಾನಗತಿಯ ಸಂಚಾರ ಇದೆ ಎಂದು ವೈಟ್‌ಫೀಲ್ಡ್‌ ಸಂಚಾರ ಪೊಲೀಸರು ತಿಳಿಸಿದ್ದಾರೆ.
(5 / 11)

ದೇವಿನಗರದ ಬಿಇಎಲ್ ವೃತ್ತದ ಬಳಿ ಕೆಪಿಟಿಸಿಎಲ್ ಕಾಮಗಾರಿ ನಡೆಯುತ್ತಿರುವುದರಿಂದ ಕುವೆಂಪು ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(6 / 11)

ಸಾಗರ್ ಆಸ್ಪತ್ರೆ ಬಳಿ ನೀರು ನಿಂತಿರುವುದರಿಂದ ಡೈರಿ ಸರ್ಕಲ್ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
(7 / 11)

ರಾಮಮೂರ್ತಿನಗರ ಸೇತುವೆ ಬಳಿ ನೀರು ನಿಂತಿರುವುದರಿಂದ ರಾಮಮೂರ್ತಿನಗರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(8 / 11)

ಬೆಂಗಳೂರಿನ ಸಕ್ರ ಆಸ್ಪತ್ರೆ ಬಳಿ ಬಿಬಿಎಂಪಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿ ನಾಲ್ಕು ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದಕ್ಕೆ ಪೊಲೀಸರು ವಾಹನ ಸವಾರರಿಗೆ ಸೂಚಿಸಿದ್ದಾರೆ.
(9 / 11)

ಬಿಳೇಕಳ್ಳಿ ಜಂಕ್ಷನ್‌ ಹತ್ತಿರ ನೀರು ನಿಂತಿರುವುದರಿಂದ ಜೆಡಿ ಮರ ಕಡೆಗೆ ನಿಧಾನಗತಿಯ ಸಂಚಾರ ಇದೆ. ಮಾರ್ಕೆಟ್ ರಸ್ತೆ ಹತ್ತಿರ ನೀರು ನಿಂತಿರುವುದರಿಂದ ಟೌನ್‌ಹಾಲ್ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
(10 / 11)

ಹಳೆ ಮೈಸೂರು ರಸ್ತೆ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
(11 / 11)

    ಹಂಚಿಕೊಳ್ಳಲು ಲೇಖನಗಳು