logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ

ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ

Oct 01, 2024 05:49 PM IST

ಬೆಂಗಳೂರಿಗರಿಗೊಂದು ಖುಷಿ ಸುದ್ದಿ. ಈ ಸಲ ದಸರಾ ರಜೆಗೆ ಇನ್ನೂ ಟೂರ್ ಪ್ಲಾನ್ ಮಾಡ್ಕೊಂಡಿಲ್ವ. ಹಾಗಾದ್ರೆ, ಈ ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ. ಟೂರ್ ಪ್ಯಾಕೇಜ್‌ನ ಡಿಟೇಲ್ಸ್ ಇಲ್ಲಿದೆ. 

ದಸರಾ ರಜೆಗೆ ಅನುಗುಣವಾಗಿ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಪ್ರಕಟಿಸಿದೆ. ಬೆಂಗಳೂರಿನಿಂದ ಎರಡು ರಾತ್ರಿ ಮೂರು ಹಗಲು ಪ್ರಯಾಣದ ವಿಸ್ಟಾಡೋಮ್ ಪ್ರವಾಸ ವಿಶೇಷ ಅನುಭವ ನೀಡುವಂಥದ್ದು. ಇದರಲ್ಲಿ ಯಶವಂತಪುರದಿಂದ ಅಕ್ಟೋಬರ್ 5 ರಂದು ಬೆಳಗ್ಗೆ 7 ಗಂಟೆಗೆ ಹೊರಟು ಅಕ್ಟೋಬರ್ 7 ರಂದು ಬೆಳಗ್ಗೆ 6.15ಕ್ಕೆ ಪುನಃ ಯಶವಂತಪುರ ತಲುಪುವ ವಿವರ ನೀಡಿದೆ. ಕಟೀಲು, ಧರ್ಮಸ್ಥಳ, ಕುಕ್ಕೆ ವಿಸ್ಟಾಡೋಮ್ ಟೂರ್ ಪ್ಯಾಕೇಜ್ ಎಂದು ಐಆರ್‌ಸಿಟಿಸಿ ಘೋಷಿಸಿದೆ.
(1 / 8)

ವಿಸ್ಟಾಡೋಮ್ ಒಂದು ಅತ್ಯಾಧುನಿಕ ಕೋಚ್ ಆಗಿದ್ದು, ಅತಿಥಿಗಳಿಗೆ ಪ್ರಯಾಣ ಸೌಕರ್ಯವನ್ನು ಒದಗಿಸಲು ಮತ್ತು ನೈಸರ್ಗಿಕ ಸುತ್ತಮುತ್ತಲಿನ ವರ್ಧಿತ ವೀಕ್ಷಣೆಗೆ ಅನುಕೂಲವಾಗುವಂಥೆ ರೈಲ್ವೇ ವಿನ್ಯಾಸಗೊಳಿಸಿದೆ
(2 / 8)

ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ವಿಸ್ಟಾಡೋಮ್ ಕೋಚ್‌ನ ಪ್ರಯಾಣವು ಹಸಿರು ಮತ್ತು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.
(3 / 8)

ರಮಣೀಯವಾದ ಸಕಲೇಶಪುರ - ಸುಬ್ರಹ್ಮಣ್ಯ ಘಾಟ್ ವಿಭಾಗವು ಪ್ರಯಾಣದ ಪ್ರಮುಖ ಆಕರ್ಷಣೆ.
(4 / 8)
ರಮಣೀಯವಾದ ಸಕಲೇಶಪುರ - ಸುಬ್ರಹ್ಮಣ್ಯ ಘಾಟ್ ವಿಭಾಗವು ಪ್ರಯಾಣದ ಪ್ರಮುಖ ಆಕರ್ಷಣೆ.
ವಿಸ್ಟಾಡೋಮ್ ಪ್ರವಾಸದಲ್ಲಿ ಮೊದಲ ದಿನ ಹಗಲು ಹೊತ್ತಿನ ರೈಲು ಪ್ರಯಾಣ ಇರಲಿದ್ದು, ಸಂಜೆ ವೇಳೆಗೆ ಬಂಟ್ವಾಳ ರೈಲು ನಿಲ್ಧಾಣದಲ್ಲಿ ಇಳಿಯಬೇಕು. ಅಲ್ಲಿಂದ ಐಆರ್‌ಸಿಟಿಸಿ ಒದಗಿಸಿದ ಕ್ಯಾಬ್‌ನಲ್ಲಿ ಸೋಮೇಶ್ವರ ಬೀಚ್‌ಗೆ ಹೋಗಿ ಸೂರ್ಯಾಸ್ತ ನೋಡಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಗೆ ಪ್ರಯಾಣ.
(5 / 8)

ಸುಂದರ ಪ್ರಕೃತಿಯ ನಡುವೆ, ನಂದಿನಿ ನದಿ ತಟದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸಂದರ್ಶಿಸಿ ಅಲ್ಲಿಂದ ಧರ್ಮಸ್ಥಳದ ಕಡೆಗೆ ಪ್ರಯಾಣ ಇರಲಿದೆ.
(6 / 8)

ಧರ್ಮಸ್ಥಳದಲ್ಲಿ ದೇವರ ದರ್ಶನ, ದೇವಸ್ಥಾನ ಮತ್ತು ಸುತ್ತಲಿನ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಪ್ರಯಾಣ.
(7 / 8)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ, ಆದಿ ಸುಬ್ರಹ್ಮಣ್ಯ ಭೇಟಿ ಬಳಿಕ ಸುಬ್ರಹ್ಮಣ್ಯ ರೋಡ್‌ಗೆ ಬಂದು ಅಲ್ಲಿಂದ ವಾಪಸ್ ರೈಲು ಪ್ರಯಾಣ. ಈ ಟೂರ್ ಪ್ಯಾಕೇಜ್‌ ((SBR035))ಗೆ 9080 ರೂಪಾಯಿ ಆರಂಭಿಕ ದರ ಎಂದು ನಮೂದಿಸಿದೆ. ವಿವರಕ್ಕೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬೆಂಗಳೂರಿನಿಂದ ಹೊರಡುವ ಟೂರ್‌ ಪ್ಯಾಕೇಜ್‌ನಲ್ಲಿ ಈ ಪ್ಯಾಕೇಜ್ ವಿವರ ಇದೆ.
(8 / 8)

    ಹಂಚಿಕೊಳ್ಳಲು ಲೇಖನಗಳು