logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕ್ರಿಸ್​ಗೇಲ್ ವಿಶ್ವದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್; ಆರೋನ್ ಫಿಂಚ್ ರೆಕಾರ್ಡ್​ ಕೂಡ ಬ್ರೇಕ್

ಕ್ರಿಸ್​ಗೇಲ್ ವಿಶ್ವದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್; ಆರೋನ್ ಫಿಂಚ್ ರೆಕಾರ್ಡ್​ ಕೂಡ ಬ್ರೇಕ್

Jun 06, 2024 09:39 PM IST

David Warner Record: ಟಿ20 ವಿಶ್ವಕಪ್​​ 2024ರ ಟೂರ್ನಿಯಲ್ಲಿ ಓಮನ್ ವಿರುದ್ಧ ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕ್ರಿಸ್​ಗೇಲ್ ದಾಖಲೆಯನ್ನು ಮುರಿದಿದ್ದಾರೆ.

  • David Warner Record: ಟಿ20 ವಿಶ್ವಕಪ್​​ 2024ರ ಟೂರ್ನಿಯಲ್ಲಿ ಓಮನ್ ವಿರುದ್ಧ ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕ್ರಿಸ್​ಗೇಲ್ ದಾಖಲೆಯನ್ನು ಮುರಿದಿದ್ದಾರೆ.
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಓಮನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇಷ್ಟು ದಿನಗಳ ಕಾಲ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್​ಗೇಲ್ ಹೆಸರಿನಲ್ಲಿದ್ದ ವರ್ಲ್ಡ್ ರೆಕಾರ್ಡ್ ಅಳಿಸಿ ಹಾಕಿದ್ದಾರೆ.
(1 / 5)

ಓಮನ್ ವಿರುದ್ಧ ಸೊಗಸಾದ ಆಟವಾಡಿದ ವಾರ್ನರ್​, ಆಕರ್ಷಕ ಅರ್ಧಶತಕ ಸಿಡಿಸಿ ಈ ಇತಿಹಾಸ ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಅತ್ಯಧಿಕ ಬಾರಿ 50 ಪ್ಲಸ್ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ.
(2 / 5)

ಕ್ರಿಸ್ ಗೇಲ್ ಅವರು 110 ಫಿಫ್ಟಿ ಪ್ಲಸ್ ಸ್ಕೋರ್‌ ಮಾಡಿದ್ದರು. ಇದೀಗ ವಾರ್ನರ್​ ಈ ದಾಖಲೆ ಮುರಿದು 111 ಸಲ 50 ಪ್ಲಸ್ ಸ್ಕೋರ್ ಮಾಡಿದ್ದಾರೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಓಮನ್ ವಿರುದ್ಧ ವಾರ್ನರ್ 51 ಎಸೆತಗಳಲ್ಲಿ 6 ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 56 ರನ್ ಗಳಿಸಿದರು.
(3 / 5)

ವೆಸ್ಟ್ ಇಂಡೀಸ್ ಮಾಜಿ ಓಪನರ್ ಗೇಲ್ 22 ಶತಕ, 88 ಅರ್ಧಶತಕ ಸಿಡಿಸಿದ್ದಾರೆ. ವಾರ್ನರ್ 103 ಅರ್ಧಶತಕ ಮತ್ತು 8 ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 105 ಫಿಫ್ಟಿ ಪ್ಲಸ್ ಸ್ಕೋರ್‌ಗಳೊಂದಿಗೆ 3ನೇ ಸ್ಥಾನ, ಬಾಬರ್ ಅಜಮ್ 101 ಫಿಫ್ಟಿ + ಸ್ಕೋರ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
(4 / 5)

ಇದೇ ಮಾಜಿ ನಾಯಕ ಆರೋನ್ ಫಿಂಚ್ ದಾಖಲೆಯನ್ನೂ ಮುರಿದ ಡೇವಿಡ್ ವಾರ್ನರ್, ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಫಿಂಚ್ 3120 ರನ್‌ ಗಳಿಸಿದರೆ, ವಾರ್ನರ್​ 104 ಟಿ20 ಪಂದ್ಯಗಳಲ್ಲಿ 3155 ರನ್ ಗಳಿಸಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು