logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿಗೆ ರಂಗೋಲಿ ಪುಡಿ ತರೋದೇ ಮರೆತ್ರಾ; ಮನೆಯಲ್ಲೇ ಇರೋ ವಸ್ತುಗಳನ್ನೇ ಬಳಸಿ ಸುಂದರ ರಂಗೋಲಿ ಬಿಡಿಸಬಹುದು

ದೀಪಾವಳಿಗೆ ರಂಗೋಲಿ ಪುಡಿ ತರೋದೇ ಮರೆತ್ರಾ; ಮನೆಯಲ್ಲೇ ಇರೋ ವಸ್ತುಗಳನ್ನೇ ಬಳಸಿ ಸುಂದರ ರಂಗೋಲಿ ಬಿಡಿಸಬಹುದು

Oct 29, 2024 12:33 PM IST

Rangoli Designs: ದೀಪಾವಳಿ ಹಬ್ಬಕ್ಕೆ ರಂಗೋಲಿ ಬಿಡಿಸುವ ಪ್ಲಾನ್‌ ನಿಮಗೂ ಇರಬಹುದು. ರಂಗೋಲಿ ಹಾಕೋಕೆ ಅದರದ್ದೇ ಪುಡಿ ಬೇಕು. ಒಂದು ವೇಳೆ ಕೊನೆಯ ಘಳಿಗೆಯಲ್ಲಿ ರಂಗೋಲಿ ಪುಡಿ ತರೋದು ಮರೆತರೆ ಚಿಂತೆ ಮಾಡಬೇಕಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವೊಂದು ವಸ್ತುಗಳನ್ನು ಬಳಸಿಯೂ ಅಂದ-ಚೆಂದದ ರಂಗೋಲಿ ಹಾಕಬಹುದು.

  • Rangoli Designs: ದೀಪಾವಳಿ ಹಬ್ಬಕ್ಕೆ ರಂಗೋಲಿ ಬಿಡಿಸುವ ಪ್ಲಾನ್‌ ನಿಮಗೂ ಇರಬಹುದು. ರಂಗೋಲಿ ಹಾಕೋಕೆ ಅದರದ್ದೇ ಪುಡಿ ಬೇಕು. ಒಂದು ವೇಳೆ ಕೊನೆಯ ಘಳಿಗೆಯಲ್ಲಿ ರಂಗೋಲಿ ಪುಡಿ ತರೋದು ಮರೆತರೆ ಚಿಂತೆ ಮಾಡಬೇಕಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವೊಂದು ವಸ್ತುಗಳನ್ನು ಬಳಸಿಯೂ ಅಂದ-ಚೆಂದದ ರಂಗೋಲಿ ಹಾಕಬಹುದು.
ದೀಪಾವಳಿ ಹಬ್ಬಕ್ಕೆ ಹಾಕುವ ರಂಗೋಲಿ ಧಾರ್ಮಿಕವಾಗಿಯೂ ಮಹತ್ವ ಪಡೆಯುತ್ತದೆ. ಹೀಗಾಗಿ ರಂಗೋಲು ಪುಡಿ ಬದಲಿಗೆ ಮಂಗಳಕರ ವಸ್ತುಗಳಿಂದ ರಂಗೋಲಿ ಬಿಡಿಸಬಹುದು.
(1 / 7)
ದೀಪಾವಳಿ ಹಬ್ಬಕ್ಕೆ ಹಾಕುವ ರಂಗೋಲಿ ಧಾರ್ಮಿಕವಾಗಿಯೂ ಮಹತ್ವ ಪಡೆಯುತ್ತದೆ. ಹೀಗಾಗಿ ರಂಗೋಲು ಪುಡಿ ಬದಲಿಗೆ ಮಂಗಳಕರ ವಸ್ತುಗಳಿಂದ ರಂಗೋಲಿ ಬಿಡಿಸಬಹುದು.
ರಂಗೋಲಿ ಪುಡಿ ಇಲ್ಲದೆ ರಂಗೋಲಿ ಬಿಡಿಸುವುದು  ನಿಮಗೆ ವಿಚಿತ್ರವೆನಿಸಬಹುದು. ಆದರೆ ನಮ್ಮ ಪೂರ್ವಜರು ಪುಡಿ ಇಲ್ಲದೆ ಸುಂದರ ಚಿತ್ರ ಹಾಗೂ ರಂಗೋಲಿ ಹಾಕುತ್ತಿದ್ದರು. ಧಾರ್ಮಿಕ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ವಸ್ತುಗಳು ಬಳಕೆಯಾಗುತ್ತಿದ್ದವು.
(2 / 7)
ರಂಗೋಲಿ ಪುಡಿ ಇಲ್ಲದೆ ರಂಗೋಲಿ ಬಿಡಿಸುವುದು  ನಿಮಗೆ ವಿಚಿತ್ರವೆನಿಸಬಹುದು. ಆದರೆ ನಮ್ಮ ಪೂರ್ವಜರು ಪುಡಿ ಇಲ್ಲದೆ ಸುಂದರ ಚಿತ್ರ ಹಾಗೂ ರಂಗೋಲಿ ಹಾಕುತ್ತಿದ್ದರು. ಧಾರ್ಮಿಕ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ವಸ್ತುಗಳು ಬಳಕೆಯಾಗುತ್ತಿದ್ದವು.(Shutterstock)
ಹೂವುಗಳನ್ನು ಬಳಸಿ ಸುಂದರವಾದ ರಂಗೋಲಿ ಬಿಡಿಸಬಹುದು. ಇದು ನೋಡಲು ಕೂಡಾ ತುಂಬಾ ಸುಂದರವಾಗಿ ಕಾಣುತ್ತದೆ. ಈ ರಂಗೋಲಿ ಬಿಡಿಸುವುದು ಕೂಡಾ ಸುಲಭ. ಹೂವಿನ ರಂಗೋಲಿ ಮಾಡಲು ಬಣ್ಣಬಣ್ಣದ ಹೂವುಗಳನ್ನು ಬಳಸಬಹುದು. ಇದರ ಜೊತೆಗೆ ಎಲೆಗಳನ್ನು ಬಳಸಬಹುದು.
(3 / 7)
ಹೂವುಗಳನ್ನು ಬಳಸಿ ಸುಂದರವಾದ ರಂಗೋಲಿ ಬಿಡಿಸಬಹುದು. ಇದು ನೋಡಲು ಕೂಡಾ ತುಂಬಾ ಸುಂದರವಾಗಿ ಕಾಣುತ್ತದೆ. ಈ ರಂಗೋಲಿ ಬಿಡಿಸುವುದು ಕೂಡಾ ಸುಲಭ. ಹೂವಿನ ರಂಗೋಲಿ ಮಾಡಲು ಬಣ್ಣಬಣ್ಣದ ಹೂವುಗಳನ್ನು ಬಳಸಬಹುದು. ಇದರ ಜೊತೆಗೆ ಎಲೆಗಳನ್ನು ಬಳಸಬಹುದು.(Shutterstock)
ನೈಸರ್ಗಿಕ ಬಣ್ಣಗಳನ್ನು ಬಳಸಿ ರಂಗೋಲಿ ಹಾಕಲು ಬಯಸಿದರೆ, ನೀವು ಮನೆಯಲ್ಲಿ ಹಿಟ್ಟಿನ ಸಹಾಯದಿಂದ ಸುಂದರವಾದ ರಂಗೋಲಿಯನ್ನು ತಯಾರಿಸಬಹುದು. ಹಿಟ್ಟಿನಿಂದ ಬಿಳಿ ಬಣ್ಣ ಸುಲಭವಾಗಿ ಸಿಗುತ್ತದೆ. ಅದಕ್ಕೆ ಅರಶಿನವನ್ನು ಬೆರೆಸಿ ಹಳದಿ, ಕುಂಕುಮವನ್ನು ಬೆರೆಸಿ ಕೆಂಪು ಮತ್ತು ಗುಲಾಬಿ ಬಣ್ಣ ಮಾಡಬಹುದು. ಬೀಟ್ರೂಟ್ ಪುಡಿಯನ್ನು ಬೆರೆಸಿದರೆ ಮತ್ತೊಂದು ಬಣ್‌ಣ ಸಿಗುತ್ತದೆ. ಹೀಗೆ ಕೆಲವೊಂದು ಸೀಮಿತ ಬಣ್ಣಗಳನ್ನು ನೀವೇ ತಯಾರಿಸಬಹುದು.
(4 / 7)
ನೈಸರ್ಗಿಕ ಬಣ್ಣಗಳನ್ನು ಬಳಸಿ ರಂಗೋಲಿ ಹಾಕಲು ಬಯಸಿದರೆ, ನೀವು ಮನೆಯಲ್ಲಿ ಹಿಟ್ಟಿನ ಸಹಾಯದಿಂದ ಸುಂದರವಾದ ರಂಗೋಲಿಯನ್ನು ತಯಾರಿಸಬಹುದು. ಹಿಟ್ಟಿನಿಂದ ಬಿಳಿ ಬಣ್ಣ ಸುಲಭವಾಗಿ ಸಿಗುತ್ತದೆ. ಅದಕ್ಕೆ ಅರಶಿನವನ್ನು ಬೆರೆಸಿ ಹಳದಿ, ಕುಂಕುಮವನ್ನು ಬೆರೆಸಿ ಕೆಂಪು ಮತ್ತು ಗುಲಾಬಿ ಬಣ್ಣ ಮಾಡಬಹುದು. ಬೀಟ್ರೂಟ್ ಪುಡಿಯನ್ನು ಬೆರೆಸಿದರೆ ಮತ್ತೊಂದು ಬಣ್‌ಣ ಸಿಗುತ್ತದೆ. ಹೀಗೆ ಕೆಲವೊಂದು ಸೀಮಿತ ಬಣ್ಣಗಳನ್ನು ನೀವೇ ತಯಾರಿಸಬಹುದು.(Shutterstock)
ಅಕ್ಕಿಯಿಂದ ರಂಗೋಲಿ ಬಿಡಿಸುವುದು ಕೂಡಾ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ಕಿಯಿಂದ ಸುಂದರವಾದ ವಿನ್ಯಾಸಗಳನ್ನು ಸುಲಭವಾಗಿ ರಚಿಸಬಹುದು. ಅಕ್ಕಿಗೆ ಬಣ್ಣವನ್ನು ಮಿಶ್ರಣ ಮಾಡಲು ನೀವು ಅರಿಶಿನ, ಕುಂಕುಮ ಸೇರಿದಂತೆ ಇತ್ಯಾದಿ ಬಣ್ಣ ಬಳಸಬಹುದು. ನಿಮಗೆ ಅಗತ್ಯಕ್ಕೆ ತಕ್ಕಂತೆ ಅಕ್ಕಿಗೆ ಬಣ್ಣ ಮಿಶ್ರಣ ಮಾಡಿ ರಂಗೋಲಿ ಹಾಕಬಹುದು. ಹಬ್ಬ ಮುಗಿದ ನಂತರ ಅಕ್ಕಿ ಕಾಳನ್ನು ತೊಳೆದು ಹಕ್ಕಿಗಳಿಗೆ ಹಾಕಬಹುದು.
(5 / 7)
ಅಕ್ಕಿಯಿಂದ ರಂಗೋಲಿ ಬಿಡಿಸುವುದು ಕೂಡಾ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ಕಿಯಿಂದ ಸುಂದರವಾದ ವಿನ್ಯಾಸಗಳನ್ನು ಸುಲಭವಾಗಿ ರಚಿಸಬಹುದು. ಅಕ್ಕಿಗೆ ಬಣ್ಣವನ್ನು ಮಿಶ್ರಣ ಮಾಡಲು ನೀವು ಅರಿಶಿನ, ಕುಂಕುಮ ಸೇರಿದಂತೆ ಇತ್ಯಾದಿ ಬಣ್ಣ ಬಳಸಬಹುದು. ನಿಮಗೆ ಅಗತ್ಯಕ್ಕೆ ತಕ್ಕಂತೆ ಅಕ್ಕಿಗೆ ಬಣ್ಣ ಮಿಶ್ರಣ ಮಾಡಿ ರಂಗೋಲಿ ಹಾಕಬಹುದು. ಹಬ್ಬ ಮುಗಿದ ನಂತರ ಅಕ್ಕಿ ಕಾಳನ್ನು ತೊಳೆದು ಹಕ್ಕಿಗಳಿಗೆ ಹಾಕಬಹುದು.(Shuttestock)
ಸಾಂಪ್ರದಾಯಿಕವಾಗಿ ಓಚರ್ ಅಥವಾ ಗೇರು ಪುಡಿ ಬಳಸಿಯೂ ರಂಗೋಲಿ ಹಾಕಬಹುದು. ಪ್ರವೇಶದ್ವಾರವನ್ನು ಅಲಂಕರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಒಂದೇ ಬಣ್ಣವಾದರೂ ಸುಂದರ ಡಿಸೈನ್‌ ಬಿಡಿಸಬಹುದು.
(6 / 7)
ಸಾಂಪ್ರದಾಯಿಕವಾಗಿ ಓಚರ್ ಅಥವಾ ಗೇರು ಪುಡಿ ಬಳಸಿಯೂ ರಂಗೋಲಿ ಹಾಕಬಹುದು. ಪ್ರವೇಶದ್ವಾರವನ್ನು ಅಲಂಕರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಒಂದೇ ಬಣ್ಣವಾದರೂ ಸುಂದರ ಡಿಸೈನ್‌ ಬಿಡಿಸಬಹುದು.(Shutterstock)
ದೀಪಾವಳಿಯಂದು ರಂಗೋಲಿ ಬಿಡಿಸಲು ನಿಮಗೆ ಸಮಯ ಸಿಗದಿದ್ದರೆ, ನೀವು ಹಣತೆ ಅಥವಾ ದೀಪಗಳ ಸಹಾಯದಿಂದ ಸುಂದರವಾದ ರಂಗೋಲಿಯನ್ನು ಮಾಡಬಹುದು. ಹಣತೆಗಳನ್ನು ರಂಗೋಲಿಯ ಆಕಾರದಲ್ಲಿ ಇಡಬೇಕು. ಇದರೊಂದಿಗೆ ಹೂವು, ಬಳೆ ಸೇರಿದಂತೆ ಕೆಲವೊಂದು ವಸ್ತುಗಳನ್ನು ಬಳಸಬಹುದು. ಹೆಚ್ಚು ಸಮಯ ಇಲ್ಲದಿದ್ದರೆ, ಇಂಥಾ ಡಿಸೈನ್‌ಗಳು ಸುಲಭ.
(7 / 7)
ದೀಪಾವಳಿಯಂದು ರಂಗೋಲಿ ಬಿಡಿಸಲು ನಿಮಗೆ ಸಮಯ ಸಿಗದಿದ್ದರೆ, ನೀವು ಹಣತೆ ಅಥವಾ ದೀಪಗಳ ಸಹಾಯದಿಂದ ಸುಂದರವಾದ ರಂಗೋಲಿಯನ್ನು ಮಾಡಬಹುದು. ಹಣತೆಗಳನ್ನು ರಂಗೋಲಿಯ ಆಕಾರದಲ್ಲಿ ಇಡಬೇಕು. ಇದರೊಂದಿಗೆ ಹೂವು, ಬಳೆ ಸೇರಿದಂತೆ ಕೆಲವೊಂದು ವಸ್ತುಗಳನ್ನು ಬಳಸಬಹುದು. ಹೆಚ್ಚು ಸಮಯ ಇಲ್ಲದಿದ್ದರೆ, ಇಂಥಾ ಡಿಸೈನ್‌ಗಳು ಸುಲಭ.(Shutterstock)

    ಹಂಚಿಕೊಳ್ಳಲು ಲೇಖನಗಳು