logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Donald Trump: ಅಮೆರಿಕ ಚುನಾವಣೆಯಲ್ಲಿ ಗೆದ್ದು 132 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ ಡೊನಾಲ್ಡ್ ಟ್ರಂಪ್

Donald Trump: ಅಮೆರಿಕ ಚುನಾವಣೆಯಲ್ಲಿ ಗೆದ್ದು 132 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ ಡೊನಾಲ್ಡ್ ಟ್ರಂಪ್

Nov 06, 2024 07:53 PM IST

Donald Trump: 2020ರಲ್ಲಿ ಸೋತರೂ ಇದೀಗ ಪುಟಿದೆದ್ದ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತರೂ ಬಳಿಕ ಗೆದ್ದು ಶ್ವೇತಭವನ ಪ್ರವೇಶಿಸಿದ ಎರಡನೇ ಅಧ್ಯಕ್ಷರಾಗಿದ್ದಾರೆ.

  • Donald Trump: 2020ರಲ್ಲಿ ಸೋತರೂ ಇದೀಗ ಪುಟಿದೆದ್ದ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತರೂ ಬಳಿಕ ಗೆದ್ದು ಶ್ವೇತಭವನ ಪ್ರವೇಶಿಸಿದ ಎರಡನೇ ಅಧ್ಯಕ್ಷರಾಗಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ 132 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತರೂ ಮುಂದಿನ ಚುನಾವಣೆಯಲ್ಲಿ ಗೆದ್ದು ಗದ್ದುಗೆಗೇರಿದ 2ನೇ ಯುಎಸ್​ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1892ರಲ್ಲಿ ಗ್ರೋವರ್ ಕ್ಲೀವ್​ಲ್ಯಾಂಡ್ ಈ ಸಾಧನೆ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಸತತ 3 ಚುನಾವಣೆಗಳಲ್ಲಿ ಮೊದಲ ಮತ್ತು 3ನೇ ಅವಧಿಯಲ್ಲಿ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ. ಗ್ರೋವರ್ ಅವರು ಸಹ ಇದೇ ರೀತಿ ಗೆದ್ದಿದ್ದರು.
(1 / 5)

ಗ್ರೋವರ್ ಕ್ಲೀವ್​ಲ್ಯಾಂಡ್ ಅವರು 3 ಚುನಾವಣೆಗಳಲ್ಲಿ 2 ಅಧ್ಯಕ್ಷರಾಗಿದ್ದರು. 1885ರಲ್ಲಿ ಗೆಲುವು ಸಾಧಿಸಿದ್ದ ಅವರು 1888ರ ಚುನಾವಣೆಯಲ್ಲಿ ಸೋತಿದ್ದರು. ಆದರೆ, 1892ರಲ್ಲಿ ಗೆದ್ದು ಯುಎಸ್​ 24ನೇ ಅಧ್ಯಕ್ಷರಾಗಿದ್ದರು. ಕ್ಲೀವ್​ಲ್ಯಾಂಡ್ ಬಳಿಕ ಟ್ರಂಪ್​ ಈ ಸಾಧನೆ ಮಾಡಿದ್ದಾರೆ.
(2 / 5)

2016ರಲ್ಲಿ ಹಿಲರಿ ಕ್ಲಿಂಟನ್​​​​ ಅವರನ್ನು 3 ಲಕ್ಷಗಳ ಅಂತರದಿಂದ ಸೋತಿದ್ದರು. ಆದಾಗ್ಯೂ, ಅವರು 2020ರ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಸೋತರು. ಇದೀಗ ಮತ್ತೆ ಗೆಲುವು ಸಾಧಿಸಿದ್ದಾರೆ.
(3 / 5)

ರಾಜಕೀಯ ಪ್ರವೇಶಿಸುವುದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಉದ್ಯಮಿಯಾಗಿದ್ದರು. 2016ರಲ್ಲಿ ಸ್ಟಾರ್ಮಿ ಡೇನಿಯಲ್​​ಗೆ ಲಂಚ ನೀಡಿದ ಎಲ್ಲಾ 34 ಆರೋಪಗಳನ್ನು ಟ್ರಂಪ್ ಒಪ್ಪಿಕೊಂಡರು. ಮೊದಲ ಮಾಜಿ ಅಧ್ಯಕ್ಷ ಟ್ರಂಪ್ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು.
(4 / 5)

ಕ್ರಿಮಿನಲ್ ವಿಚಾರಣೆಯಲ್ಲಿ ಭಾಗಿಯಾಗಿದ್ದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರು ಇವರು. ಆ ಮೂಲಕ ಟ್ರಂಪ್ ಕೆಟ್ಟ ಇತಿಹಾಸ ನಿರ್ಮಿಸಿದರು. ಈಗ ಚುನಾವಣೆಯಲ್ಲಿ ಸೋತ ನಂತರ, ಟ್ರಂಪ್ ಮತ್ತೆ 132 ವರ್ಷಗಳ ಇತಿಹಾಸವನ್ನು ಮುಟ್ಟಿದ್ದಾರೆ.   
(5 / 5)

    ಹಂಚಿಕೊಳ್ಳಲು ಲೇಖನಗಳು