logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tulasi Vivah 2024: ತುಳಸಿ ಬೃಂದಾವನ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಬೇಕಾ? ಇಲ್ಲಿವೆ ಆಕರ್ಷಕ ರಂಗೋಲಿ ಐಡಿಯಾಗಳು

Tulasi Vivah 2024: ತುಳಸಿ ಬೃಂದಾವನ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಬೇಕಾ? ಇಲ್ಲಿವೆ ಆಕರ್ಷಕ ರಂಗೋಲಿ ಐಡಿಯಾಗಳು

Nov 12, 2024 06:20 PM IST

Tulasi Vivah 2024: ಹಿಂದೂ ಧರ್ಮದಲ್ಲಿ ತುಳಸಿ ವಿವಾಹವನ್ನು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಈ ಮಂಗಳಕರ ದಿನದಂದು ತುಳಸಿ ಬೃಂದಾವನದ ಮುಂದೆ ಚೆಂದದ ರಂಗೋಲಿ ಬರೆಯಲು ವಿನ್ಯಾಸಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಚೆಂದದ ಮತ್ತು ಅಷ್ಟೇ ಸುಲಭದ ರಂಗೋಲಿ ಐಡಿಯಾಗಳು.

  • Tulasi Vivah 2024: ಹಿಂದೂ ಧರ್ಮದಲ್ಲಿ ತುಳಸಿ ವಿವಾಹವನ್ನು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಈ ಮಂಗಳಕರ ದಿನದಂದು ತುಳಸಿ ಬೃಂದಾವನದ ಮುಂದೆ ಚೆಂದದ ರಂಗೋಲಿ ಬರೆಯಲು ವಿನ್ಯಾಸಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಚೆಂದದ ಮತ್ತು ಅಷ್ಟೇ ಸುಲಭದ ರಂಗೋಲಿ ಐಡಿಯಾಗಳು.
ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಇದು ತುಳಸಿ ಮಾತೆ ಮತ್ತು ಶಾಲಿಗ್ರಾಮರ ಮದುವೆ ಎಂದು ಹೇಳಲಾಗಿದೆ. ಆದ್ದರಿಂದ ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಕಬ್ಬು, ಬಾಳೆಗಿಡ ಮತ್ತು ಹೂವುಗಳಿಂದ ತುಳಸಿ ಕಟ್ಟೆಯನ್ನು ಶೃಂಗಾರ ಮಾಡುತ್ತಾರೆ. ತುಳಸಿ ಬೃಂದಾವನಕ್ಕೆ ದೀಪಾಲಂಕಾರವನ್ನು ಮಾಡಲಾಗುತ್ತದೆ, ನಾಲ್ಕು ಬದಿಗಳಲ್ಲಿ ಹಣತೆಯನ್ನಿಡುತ್ತಾರೆ. ತುಳಸಿ ಕಟ್ಟೆಯ ಮುಂದೆ ಚೆಂದದ ರಂಗೋಲಿ ಬರೆಯಲಾಗುತ್ತದೆ. ರಂಗೋಲಿ ಮಂಗಳಕರವಾದದ್ದು. ಹಾಗಾಗಿ ಹಬ್ಬ, ಶುಭಕಾರ್ಯಗಳಲ್ಲಿ ರಂಗೋಲಿ ಹಾಕುತ್ತಾರೆ. 
(1 / 6)
ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಇದು ತುಳಸಿ ಮಾತೆ ಮತ್ತು ಶಾಲಿಗ್ರಾಮರ ಮದುವೆ ಎಂದು ಹೇಳಲಾಗಿದೆ. ಆದ್ದರಿಂದ ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಕಬ್ಬು, ಬಾಳೆಗಿಡ ಮತ್ತು ಹೂವುಗಳಿಂದ ತುಳಸಿ ಕಟ್ಟೆಯನ್ನು ಶೃಂಗಾರ ಮಾಡುತ್ತಾರೆ. ತುಳಸಿ ಬೃಂದಾವನಕ್ಕೆ ದೀಪಾಲಂಕಾರವನ್ನು ಮಾಡಲಾಗುತ್ತದೆ, ನಾಲ್ಕು ಬದಿಗಳಲ್ಲಿ ಹಣತೆಯನ್ನಿಡುತ್ತಾರೆ. ತುಳಸಿ ಕಟ್ಟೆಯ ಮುಂದೆ ಚೆಂದದ ರಂಗೋಲಿ ಬರೆಯಲಾಗುತ್ತದೆ. ರಂಗೋಲಿ ಮಂಗಳಕರವಾದದ್ದು. ಹಾಗಾಗಿ ಹಬ್ಬ, ಶುಭಕಾರ್ಯಗಳಲ್ಲಿ ರಂಗೋಲಿ ಹಾಕುತ್ತಾರೆ. (PC: Pinterest)
ತುಳಸಿ ಬೃಂದಾವನದ ಮುಂದೆ ಸುಲಭವಾಗಿ ರಂಗೋಲಿ ಬರೆಯಬೇಕೆಂದರೆ ಚುಕ್ಕಿ ರಂಗೋಲಿ ಅಥವಾ ಕೋಲಮ್‌ ರಂಗೋಲಿ ಆಯ್ದುಕೊಳ್ಳಬಹುದು. ಇಲ್ಲವೇ ಫ್ರೀ ಹ್ಯಾಂಡ್‌ ರಂಗೋಲಿಯನ್ನು ಸಹ ಆಯ್ದುಕೊಳ್ಳಬಹುದು. 
(2 / 6)
ತುಳಸಿ ಬೃಂದಾವನದ ಮುಂದೆ ಸುಲಭವಾಗಿ ರಂಗೋಲಿ ಬರೆಯಬೇಕೆಂದರೆ ಚುಕ್ಕಿ ರಂಗೋಲಿ ಅಥವಾ ಕೋಲಮ್‌ ರಂಗೋಲಿ ಆಯ್ದುಕೊಳ್ಳಬಹುದು. ಇಲ್ಲವೇ ಫ್ರೀ ಹ್ಯಾಂಡ್‌ ರಂಗೋಲಿಯನ್ನು ಸಹ ಆಯ್ದುಕೊಳ್ಳಬಹುದು. (PC: Pinterest)
ತುಳಸಿ ವಿವಾಹಕ್ಕೆ ನೀವು ಸಿಂಪಲ್‌ ಆಗಿ ತುಳಸಿ ಬೃಂದಾವನದ ಚಿತ್ರವನ್ನೇ ಬರೆಯಬಹುದು. ಅದರ ಸುತ್ತ ಹಣತೆಯ ದೀಪಗಳನ್ನು ಅಲಂಕರಿಸಬಹುದು. ಅಥವಾ ಬಣ್ಣ ಬಣ್ಣದ ರಂಗೋಲಿ ಪುಡಿಗಳಿಂದ ತುಳಸಿ ಬೃಂದಾವನದ ಚಿತ್ರವನ್ನೇ ಬರೆದು ಅದರ ಮಧ್ಯದಲ್ಲಿ ಒಂದು ದೀಪದ ಕಂಬ ಅಥವಾ ಹಣತೆ ಇಡಬಹುದು.
(3 / 6)
ತುಳಸಿ ವಿವಾಹಕ್ಕೆ ನೀವು ಸಿಂಪಲ್‌ ಆಗಿ ತುಳಸಿ ಬೃಂದಾವನದ ಚಿತ್ರವನ್ನೇ ಬರೆಯಬಹುದು. ಅದರ ಸುತ್ತ ಹಣತೆಯ ದೀಪಗಳನ್ನು ಅಲಂಕರಿಸಬಹುದು. ಅಥವಾ ಬಣ್ಣ ಬಣ್ಣದ ರಂಗೋಲಿ ಪುಡಿಗಳಿಂದ ತುಳಸಿ ಬೃಂದಾವನದ ಚಿತ್ರವನ್ನೇ ಬರೆದು ಅದರ ಮಧ್ಯದಲ್ಲಿ ಒಂದು ದೀಪದ ಕಂಬ ಅಥವಾ ಹಣತೆ ಇಡಬಹುದು.(PC: Pinterest)
ಇದು ತುಳಸಿ ವಿವಾಹದ ಶುಭ ಸಂದರ್ಭವಾದ್ದರಿಂದ ವಿವಾಹವನ್ನು ಸಂಕೇತಿಸುವ ಚಿತ್ರವನ್ನು ಸಹ ಬರೆಯಬಹುದು. ಸುತ್ತಲೂ ದೀಪಗಳಿಂದ ಅಲಂಕರಿಸಬಹುದು.
(4 / 6)
ಇದು ತುಳಸಿ ವಿವಾಹದ ಶುಭ ಸಂದರ್ಭವಾದ್ದರಿಂದ ವಿವಾಹವನ್ನು ಸಂಕೇತಿಸುವ ಚಿತ್ರವನ್ನು ಸಹ ಬರೆಯಬಹುದು. ಸುತ್ತಲೂ ದೀಪಗಳಿಂದ ಅಲಂಕರಿಸಬಹುದು.(PC: Pinterest)
ತುಳಸಿ ಬೃಂದಾವನದ ಮುಂದೆ ಬರೆಯುವ ರಂಗೋಲಿಯನ್ನು ಹೂವುಗಳಿಂದ ಚಿತ್ರಿಸಬೇಕೆಂದಿದ್ದರೆ ಅದಕ್ಕೆ ವಿವಿಧ ಬಣ್ಣದ ಹೂವು ಆಯ್ದುಕೊಳ್ಳಿ. ಮೊದಲು ನಿಮ್ಮಿಷ್ಟದ ಡಿಸೈನ್‌ ಅನ್ನು ಚಾಕ್‌ ಪೀಸ್‌ನಲ್ಲಿ ಮಾರ್ಕ್‌ ಮಾಡಿಕೊಂಡರೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ರಂಗೋಲಿ ಬರೆಯಬಹುದು. ಗೋಲಾಕಾರ ಅಥವಾ ಚೌಕಾರದ ರಂಗೋಲಿ ವಿನ್ಯಾಸದಲ್ಲಿ ಹೂವುಗಳನ್ನು ಚಂದವಾಗಿ ಜೋಡಿಸಬಹುದು.
(5 / 6)
ತುಳಸಿ ಬೃಂದಾವನದ ಮುಂದೆ ಬರೆಯುವ ರಂಗೋಲಿಯನ್ನು ಹೂವುಗಳಿಂದ ಚಿತ್ರಿಸಬೇಕೆಂದಿದ್ದರೆ ಅದಕ್ಕೆ ವಿವಿಧ ಬಣ್ಣದ ಹೂವು ಆಯ್ದುಕೊಳ್ಳಿ. ಮೊದಲು ನಿಮ್ಮಿಷ್ಟದ ಡಿಸೈನ್‌ ಅನ್ನು ಚಾಕ್‌ ಪೀಸ್‌ನಲ್ಲಿ ಮಾರ್ಕ್‌ ಮಾಡಿಕೊಂಡರೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ರಂಗೋಲಿ ಬರೆಯಬಹುದು. ಗೋಲಾಕಾರ ಅಥವಾ ಚೌಕಾರದ ರಂಗೋಲಿ ವಿನ್ಯಾಸದಲ್ಲಿ ಹೂವುಗಳನ್ನು ಚಂದವಾಗಿ ಜೋಡಿಸಬಹುದು.(PC: Pinterest)
ನೀವು ಲಾಸ್ಟ್‌ ಮಿನಟ್‌ನಲ್ಲಿ ರಂಗೋಲಿ ಬರೆಯುವ ಅವಸರದಲ್ಲಿದ್ದರೆ ಚೆಂಡು ಹೂವು, ಸೇವಂತಿಗೆ ಮತ್ತು ಗುಲಾಬಿ ದಳಗಳಿಂದ ಆಕರ್ಷಕವಾಗಿ ಚಿತ್ರಿಸಬಹುದು. ಅಥವಾ ಚುಕ್ಕಿ ರಂಗೋಲಿಯಲ್ಲಿ ತುಳಸಿ ಕಟ್ಟೆ ಬರೆದು ಸುತ್ತಲೂ ಹೂವು ಮತ್ತು ದೀಪದ ಚಿತ್ರವನ್ನು ಸಹ ಬರೆಯಬಹುದು.
(6 / 6)
ನೀವು ಲಾಸ್ಟ್‌ ಮಿನಟ್‌ನಲ್ಲಿ ರಂಗೋಲಿ ಬರೆಯುವ ಅವಸರದಲ್ಲಿದ್ದರೆ ಚೆಂಡು ಹೂವು, ಸೇವಂತಿಗೆ ಮತ್ತು ಗುಲಾಬಿ ದಳಗಳಿಂದ ಆಕರ್ಷಕವಾಗಿ ಚಿತ್ರಿಸಬಹುದು. ಅಥವಾ ಚುಕ್ಕಿ ರಂಗೋಲಿಯಲ್ಲಿ ತುಳಸಿ ಕಟ್ಟೆ ಬರೆದು ಸುತ್ತಲೂ ಹೂವು ಮತ್ತು ದೀಪದ ಚಿತ್ರವನ್ನು ಸಹ ಬರೆಯಬಹುದು.(PC: Pinterest)

    ಹಂಚಿಕೊಳ್ಳಲು ಲೇಖನಗಳು